For Quick Alerts
ALLOW NOTIFICATIONS  
For Daily Alerts

ಓಶೋ ಹೇಳಿದ ಝೆನ್ ಗುರು ರಿನ್ಜೈ ನ ಸುಂದರ ಕಥೆ!

|
Kannada Zen story
ರಿನ್ಜೈ ತನ್ನ ಗುರುವಿನೊಂದಿಗೆ 20 ವರುಷ ಕಳೆದನು. ಒಂದು ದಿನ ಗುರುವಿಲ್ಲದ ಹೊತ್ತಿನಲ್ಲಿ ರಿನ್ಜೈ ಇದ್ದಕ್ಕಿದ್ದಂತೆ ತನ್ನ ಗುರುವಿನ ಕುರ್ಚಿಯಲ್ಲಿ ಹೋಗಿ ಕುಳಿತುಬಿಟ್ಟ! ಅವನು ಹೀಗೆ ಕೂತಿರುವಾಗ ಹೊರಗಡೆ ಹೋಗಿದ್ದ ಗುರು ಒಳಬಂದರು.

ತನ್ನ ಕುರ್ಚಿಯಲ್ಲಿ ಕುಳಿತ ರಿನ್ಜೈ ನನ್ನು ನೋಡಿ ಮರುಮಾತಾಡದೆ ಹೋಗಿ ರಿನ್ಜೈ ನ ಕುರ್ಚಿಯಲ್ಲಿ ಕುಳಿತರು. ಈ ಸಮಯದಲ್ಲಿ ರಿನ್ಜೈಗೆ ಏನು ಮಾಡಬೇಕೆಂದು ತೋಚಲಿಲ್ಲ, ಗುರು ಮತ್ತು ಶಿಷ್ಯನ ನಡುವೆ ಯಾವುದೇ ಸಂವಹನ ನಡೆಯಲಿಲ್ಲ, ಅದರೂ ಸಂವಹನ ನಡೆದಿತ್ತು!

ರಿನ್ಜೈ ಮನಸ್ಸಿನಲ್ಲಿಯೇ "ನಿಮಗೆ ನೋವಾಗಲಿಲ್ಲವೇ? ನಿಮಗೆ ಅವಮಾನವೆನಿಸಲಿಲ್ಲವೇ? ನಾನು ನಿಮಗೆ ಕೃತಘ್ನನೆ?" ಎಂದು ಪಶ್ಚಾತಾಪದಿಂದ ಕೇಳಿದ. ಅದಕ್ಕೆ ಗುರು ನಗುತ್ತಾ ನುಡಿಯುತ್ತಾನೆ. "ನೀನು ನನ್ನ ಶಿಷ್ಯನಿಂದ ಅನುಯಾಯಿಯಾದೆ, ಈಗ ಅನುಯಾಯಿಯಿಂದ ಗುರುವಾದೆ. ಈಗ ನನ್ನ ಕೆಲಸ ನೀನು ಹಂಚಿಕೊಳ್ಳುವದರಿಂದ ನನಗೆ ಸಂತೋಷವೇ ಆಯಿತು. ನಾನಿನ್ನು ದಿನವೂ ಬರುವ ಅವಶ್ಯಕತೆಯೇ ಇಲ್ಲ. ನನ್ನ ಕೆಲಸ ಮಾಡಲು ಯಾರೋ ಒಬ್ಬರಿದ್ದಾರೆ ಅನ್ನೋ ಸಮಾಧಾನ ನನಗೆ" ಎಂದು ಶಿಷ್ಯನನ್ನು ಸಮಧಾನಿಸಿದರು.

ಪ್ರಬುದ್ದ ಜೀವಿಗಳ ವರ್ತನೆ ಹೇಗಿರುತ್ತದೆ ಅನ್ನುವುದಕ್ಕೆ ಇದೊಂದು ಉದಾಹರಣೆ !

English summary

Kannada Zen story | Useless life | Inspirational short stories | ಝೆನ್ ಕಥೆ : ಗುರುವಿನ ಕುರ್ಚಿಯಲ್ಲಿ ಶಿಷ್ಯ ಕುಳಿತಾಗ...

Rinzai lived withhis master for almost twenty years. One day Rinzai went and occupied his master's seat. The master who walked into the room, seeing Rinzai on his sit, quietly occupied Rinzai;s seat.
X
Desktop Bottom Promotion