For Quick Alerts
ALLOW NOTIFICATIONS  
For Daily Alerts

ಓಂ ಉಚ್ಛಾರಣೆಯಿಂದ ಸಿಗುವ ಪ್ರಯೋಜನಗಳೇನು ಗೊತ್ತೇ?

|

ಓಂ.... ಎಂಬುವುದು ಬರೀ ಒಂದು ಅಕ್ಷರ ಅಥವಾ ಶಬ್ದವಲ್ಲ. ಅದರ ಹಿಂದಿರುವ ಶಕ್ತಿ ಏನೆಂಬುವುದು ಅದನ್ನು ಪ್ರತಿನಿತ್ಯ ಪಠಿಸುವವರಿಗೆ ತಿಳಿದಿರುತ್ತದೆ. ಓಂ ಎಂಬುವುದು ಅ, ಉ, ಮ ಅಕ್ಷರದ ಸಂಗಮವಾಗಿದೆ.

ಯೋಗದ ಪ್ರಕಾರ ಅ ಎಂದರೆ ತಮಸ ಉ ಎಂದರೆ ತಾಳ್ಮೆ, ಮ ಎಂದರೆ ಸತ್ವ ಎಂಬ ಅರ್ಥವನ್ನು ನೀಡುತ್ತದೆ. ಓಂಕಾರ ಹೇಳುವುದರಿಂದ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಹೆಚ್ಚುವುದು. ಹಿಂದೂ ಧರ್ಮದಲ್ಲಿ ಪ್ರತಿಯೊಂದು ವೇದ ಮಂತ್ರ ಓಂಕಾರದಿಂದಲೇ ಪ್ರಾರಂಭವಾಗುತ್ತದೆ.

ಓಂಕಾರದ ಮೂಲಕ ಪ್ರಾರಂಭ ಮಾಡುವ ದೇವರ ಜಪ ತುಂಬಾನೇ ಪರಿಣಾಮಕಾರಿ. ಹಿಂದಿನ ಕಾಲದಲ್ಲಿ ಋಷಿಗಳು ತಪಸ್ಸು ಮಾಡುತ್ತಿರುವವರು ಓಂಕಾರ ಹೇಳುತ್ತಿದ್ದರು. ಯೋಗಸಿದ್ಧಿಯಲ್ಲೂ ಓಂಕಾರದ ಬಳಕೆಯಿದೆ. ಓಂ ಎಂಬುವುದು ಎಂದು ಪ್ರಣವ ಸ್ವರೂಪ.

ಓಂ ಉಚ್ಛಾರಣೆಯಿಂದ ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚುವುದು

ಓಂ ಉಚ್ಛಾರಣೆಯಿಂದ ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚುವುದು

ಓಂ ಉಚ್ಛಾರಣೆ ಮಾಡುವುದರಿಂದ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಾದರೆ, ದೈಹಿಕವಾಗಿಯೂ ಅನೇಕ ಪ್ರಯೋಜನಗಳಿವೆ, ಇದು ಉದ್ವೇಗ ಕಡಿಮೆ ಮಾಡುತ್ತೆ, ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತೆ, ಅತ್ಯಧಿಕ ರಕ್ತದೊತ್ತಡ ಕಡಿಮೆ ಮಾಡುತ್ತೆ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ಜೀವನೋತ್ಸಹ ತುಂಬುವ ಓಂ

ಜೀವನೋತ್ಸಹ ತುಂಬುವ ಓಂ

ಓಂ ಎಂಬ ಪದವೇ ಜೀವನೋತ್ಸಹವನ್ನು ತುಂಬುವಂಥ ಪದವಾಗಿದೆ. ಯಾರು ಪ್ರತಿದಿನ ಓಂ ಉಚ್ಛಾರಣೆ ಮಾಡುತ್ತಾರೋ ಅವರಿಗೆ ಖಿನ್ನತೆ ಕಾಡಲ್ಲ, ಹೊಸದೊಂದು ಲವಲವಿಕೆ ಅವರಲ್ಲಿರುತ್ತದೆ, ಮನಸ್ಸಿನಲ್ಲಿ ಸದಾ ಧನಾತ್ಮಕವಾಗಿ ಚಿಂತಿಸುತ್ತಿರುತ್ತದೆ.

ಮನಸ್ಸನ್ನು ವಿಚಲಿತವಾಗದಂತೆ ತಡೆಗಟ್ಟಿ, ಗೊಂದಲವನ್ನು ನಿವಾರಿಸಿ ಒಂದು ದೃಢ ನಿರ್ಧಾರ ತೆಗೆದುಕೊಳ್ಳಲು, ಆತ್ಮವಿಶ್ವಾಸ ಹೆಚ್ಚಿಸಲು ಓಂ ಸಹಕಾರವಾಗಿದೆ. ಮನೋನಿಗ್ರಹಕ್ಕೆ ಓಂ ತುಂಬಾನೇ ಸಹಕಾರಿಯಾಗಿದೆ.

ಓಂಕಾರ ಉಚ್ಚಾರಣೆ ಮಾಡುವುದು ಹೇಗೆ?

ಓಂಕಾರ ಉಚ್ಚಾರಣೆ ಮಾಡುವುದು ಹೇಗೆ?

ಸುಖಾಸನದಲ್ಲಿ ಕುಳಿತು ಬೆನ್ನು, ತಲೆ ನೇರವಾಗಿರುವಂತೆ ಕೂತುಕೊಳ್ಳಿ. ಈಗ ಕಣ್ಣನ್ನು ಮುಚ್ಚಿ ನಿಧಾನಕ್ಕೆ ಉಸಿರನ್ನು ತೆಗೆಯುವುದು, ಬಿಡುವುದು ಮಾಡಿ. ನಂತರ ಮುನಃ ನಿಧಾನಕ್ಕೆ ಉಸಿರನ್ನು ತೆಗೆದು ಓಂ.. ಅಂತ ಉಚ್ಛಾರಣೆ ಮಾಡಿ. ಈ ರೀತಿ ಮೂರು ಬಾರಿ ಬಾಡಿ... ಈ ರೀತಿ ಉಚ್ಛಾರಣೆ ಮಾಡುವಾಗ ಉಂಟಾಗುವ ವೈಬ್ರೇಷನ್‌ ಅನುಭವ ಉಂಟಾಗುವುದು.

ಓಂ ಉಚ್ಛಾರಣೆಯಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳು

ಓಂ ಉಚ್ಛಾರಣೆಯಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳು

* ಓಂ ಉಚ್ಛಾರಣೆ ಮಾಡುವುದರಿಂದ ದೇಹದ ಹಾಗೂ ಮನಸ್ಸಿನ ಕಶ್ಮಲ ಹೊರ ಹಾಕಲು ಸಹಕಾರಿ. ಇದು ನಿಮ್ಮ ಯೌವನದ ಕಳೆ ಮಾಸದಂತೆ ತಡೆಯುವುದರ ಜೊತೆಗೆ ಉತ್ಸಾಹದಿಂದ ಇರುವಿರಿ.

* ನಿಮ್ಮಲ್ಲಿ ಒಂದು ಧನಾತ್ಮಕ ಆಲೋಚನೆ ಉಂಟು ಮಾಡುತ್ತದೆ.

* ನಿಮ್ಮ ಏಕಾಗ್ರತೆ ಹೆಚ್ಚುವುದು.

* ಓ ಉಚ್ಚಾರಣೆಯಿಂದ ಮಾಡಿದ ಪಾಪ ದೂರವಾಗುವುದು.

* ಭಾವನೆಗಳನ್ನು ನಿಯಂತ್ರಿಸಲು, ಆತ್ಮವಿಶ್ವಾಸ ಹೆಚ್ಚಲು ಸಹಕಾರಿ.

* ಹಾರ್ಮೋನ್‌ಗಳನ್ನು ಸಮತೋಲನದಲ್ಲಿರುತ್ತದೆ.

* ಪ್ರತಿದಿನ ಉಚ್ಛಾರಣೆ ಮಾಡುವುದರಿಂದ ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಮತ್ತಷ್ಟು ಪ್ರಗತಿ ಹೊಂದಲು ಸಹಕಾರಿ.

* ಅಧ್ಯಯನಗಳ ಪ್ರಕಾರ ಓಂ ಅಥವಾ ಔಮ್ ಉಚ್ಛಾರಣೆಯಿಂದ ಬೆನ್ನು ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು.

English summary

Om Chanting: What Are The Benefits Of Chanting Om In Kannada

Om Chanting: What are the benefits of chanting Om in Kannada, read on...
Story first published: Thursday, June 24, 2021, 10:46 [IST]
X
Desktop Bottom Promotion