For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡಿದರೆ, ನಿಮ್ಮ ಅದೃಷ್ಟವೇ ಬದಲಾಗುತ್ತದೆ

|

ನಮ್ಮಲ್ಲಿ ಹೆಚ್ಚಿನವರಿಗೆ ಅವರ ಅಜ್ಜ ಅಥವಾ ತಾತಂದಿರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸೂರ್ಯನಿಗೆ ನಿತ್ಯವೂ ನೀರನ್ನು ಅರ್ಪಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದುದು ನೆನಪಿರಬಹುದು. ಈ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಮುಂಜಾನೆ ವಂದಿಸುವುದನ್ನು ಪವಿತ್ರ ಎಂದು ಭಾವಿಸಲಾಗುತ್ತದೆ ಹಾಗೂ ಪ್ರಥಮ ಕಿರಣಗಳು ಆಗಮಿಸುವ ಸಯಮದಲ್ಲಿ ನೀರನ್ನು ಅರ್ಪಿಸುವ ಮೂಲಕ ದೇಹದಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ ಹಾಗೂ ಇದು ದಿನವನ್ನು ಉತ್ತಮವಾಗಿಸುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ಸೂರ್ಯ ನಮಸ್ಕಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.

ಅಷ್ಟಕ್ಕೂ ಸೂರ್ಯನಿಗೆ ನೀರನ್ನೇ ಏಕೆ ಅರ್ಪಿಸಬೇಕು?

ಅಷ್ಟಕ್ಕೂ ಸೂರ್ಯನಿಗೆ ನೀರನ್ನೇ ಏಕೆ ಅರ್ಪಿಸಬೇಕು?

ಹಿಂದೊಮ್ಮೆ ಈ ಭೂಮಿಯ ಮೇಲಿನ ಜನರಿಗೆಲ್ಲಾ ಅಪಾರ ತೊಂದರೆಗಳು ಎದುರಾದವು. ಮಂದೇಹ ರಾಕ್ಷಸರು ಸೂರ್ಯನನ್ನು ಸೆರೆಹಿಡಿದು ಬಂದಿಯಾಗಿಸಿದ್ದರು. ಹಾಗಾಗಿ ಪೂರ್ವದಿಂದ ಮೂಡಲು ಸೂರ್ಯದೇವನಿಗೆ ಸಾಧ್ಯವಾಗಲೇ ಇಲ್ಲ. ಭೂಮಿಯ ಪ್ರತಿ ಜೀವಿಗೂ ಸೂರ್ಯನ ಬೆಳಕು ಅತ್ಯಗತ್ಯವಾಗಿದ್ದು ಈಗ ಸೂರ್ಯನ ಬೆಳಕಿಲ್ಲದೇ ಏನೂ ಮಾಡುವಂತಿಲ್ಲ. ಆಗ ಜನರ ಕಷ್ಟಗಳಿಗೆ ನೆರವಾಗಲು ಆಗಮಿಸಿದ ಬ್ರಹ್ಮದೇಹ 'ಆರ್ಗ್ಯ' ಎಂಬ ಮಂತ್ರವನ್ನು ನೀಡಿದ. ಈ ಸಮಯದಲ್ಲಿ ಬ್ರಾಹ್ಮಣರು ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಸೂರ್ಯನಿಗೆ ನೀರನ್ನು ಅರ್ಪಿಸುವಂತೆ ಬ್ರಹ್ಮದೇವ ಸೂಚಿಸಿದ. ಗಾಯತ್ರಿ ಮಂತ್ರದ ಪ್ರಭಾವ ಪಡೆದ ನೀರು ಈ ರಾಕ್ಷಸರ ವಿರುದ್ದ ಹೋರಾಡುವ ಶಕ್ತಿ ಪಡೆದಿತ್ತು ಹಾಗೂ ಸೂರ್ಯನನ್ನು ಉದಯಿಸದಂತೆ ತಡೆಹಿಡಿದಿದ್ದ ರಾಕ್ಷಸರ ವಿರುದ್ದ ಹೋರಾಡಿತು. ಈ ಹೋರಾಟದಲ್ಲಿ ಜಯಿಸಿದ ಪರಿಣಾಮವಾಗಿ ಸೂರ್ಯದೇವ ಬಂಧನದಿಂದ ಬಿಡುಗಡೆಗೊಂಡು ಭೂಮಿಗೆ ಬೆಳಕು ನೀಡಲು ಉದಯಿಸುತ್ತಾನೆ. ಆದರೆ ಪ್ರತಿ ಬಾರಿಯೂ ಈ ಮಂದೇಹ ರಾಕ್ಷಸರು ಸೂರ್ಯನನ್ನು ಕಟ್ಟಿಹಾಕಲು ಯತ್ನಿಸುತ್ತಲೇ ಇರುತ್ತಾರೆ. ಹಾಗಾಗಿ ಈ ಸಮಯದಲ್ಲಿ ನೀರನ್ನು ಅರ್ಪಿಸುವ ಮೂಲಕ ಸೂರ್ಯದೇವವನ್ನು ಈ ಬಂಧನದಿಂದ ಬಿಡುಗಡೆಗೊಳಿಸಬಹುದು ಎಂದು ಪುರಾಣಗಳು ವಿವರಿಸುತ್ತವೆ.

ಸೂರ್ಯನಿಗೆ ನೀರನ್ನು ಅರ್ಪಿಸುವುದರ ಪ್ರಯೋಜನಗಳು

ಸೂರ್ಯನಿಗೆ ನೀರನ್ನು ಅರ್ಪಿಸುವುದರ ಪ್ರಯೋಜನಗಳು

ಸೂರ್ಯನಿಗೆ ನೀರು ಅಥವಾ ಅರ್ಗ್ಯವನ್ನು ಅರ್ಪಿಸುವ ಮೂಲಕ ಮಾನಸಿಕ ಶಾಂತಿ, ದೈಹಿಕ ಶಕ್ತಿ ಹಾಗೂ ದಿನದ ಕೆಲಸಗಳಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಎದುರಿಸಲು ಪ್ರಾಯೋಗಿಕ ಸಹಿಷ್ಣುತೆ ಲಭಿಸುತ್ತದೆ. ಅಷ್ಟೇ ಅಲ್ಲ, ಸೂರ್ಯದೇವನ ರಕ್ಷಣೆ ಇರುವ ಭಾವನೆಯೊಂದೇ ವ್ಯಕ್ತಿಗೆ ಅಪಾರವಾದ ಆತ್ಮವಿಶ್ವಾಸವನ್ನೂ ನಿರ್ಭಿಡತೆಯನ್ನೂ ನೀಡುತ್ತದೆ. ಸೂರ್ಯನ ಆರಾಧನೆಯನ್ನು ನಿತ್ಯದ ಅಭ್ಯಾಸವಾಗಿಸುವವರಿಗೆ ಅಪಾರ ಸ್ಥೈರ್ಯ, ತಮ್ಮ ಮಾತಿನ ಮೇಲೆ ಹಿಡಿತ ಹಾಗೂ ಬುದ್ದಿವಂತಿಕೆಗಳು ಲಭಿಸುತ್ತವೆ. ಒಂದು ವೇಳೆ ನೀವು ನಿತ್ಯವೂ ಸೂರ್ಯನನ್ನು ಆರಾಧಿಸುವವರಾದರೆ ಇದರಿಂದ ನಿಮ್ಮ ಮನದಿಂದ ಸ್ವಾರ್ಥ, ಕ್ರೋಧ, ಲಾಲಸೆ, ದುರಾಸೆ ಮೊದಲಾದ ಋಣಾತ್ಮಕ ಚಿಂತನೆಗಳು ಇಲ್ಲವಾಗುತ್ತವೆ ಹಾಗೂ ಈ ಸ್ಥಾನದಲ್ಲಿ ಮಾನಸಿಕ ಶಾಂತಿ ತುಂಬುತ್ತದೆ.

Most Read:ಪ್ರತಿ ದಿನ ಮುಂಜಾನೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವ ವಿಧಾನ

ಆದರೆ ’ಅರ್ಗ್ಯ’ವನ್ನು ಕೇವಲ ಮುಂಜಾನೆಯ ಹೊತ್ತಿನಲ್ಲಿ ಮಾತ್ರವೇ ಏಕೆ ಅರ್ಪಿಸಬೇಕು?

ಆದರೆ ’ಅರ್ಗ್ಯ’ವನ್ನು ಕೇವಲ ಮುಂಜಾನೆಯ ಹೊತ್ತಿನಲ್ಲಿ ಮಾತ್ರವೇ ಏಕೆ ಅರ್ಪಿಸಬೇಕು?

ಸೂರ್ಯನ ಕಿರಣಗಳು ಸೂರ್ಯೋದಯದ ಸಮಯದಲ್ಲಿ ಅತ್ಯಂತ ಕಡಿಮೆ ತೀಕ್ಷ್ಣವಾಗಿರುತ್ತವೆ ಹಾಗೂ ಭಕ್ತರಿಗೆ ಸೂರ್ಯನನ್ನು ಪೂಜಿಸಲು ಮತ್ತು ಅರ್ಗ್ಯವನ್ನು ಅರ್ಪಿಸಲು ಈ ಸಮಯ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಸೂಯನ ಪ್ರಥಮ ಕಿರಣಗಳು ತಾಕುವ ಸಮಯವೇ ಅರ್ಗ್ಯ ಅರ್ಪಿಸಲು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.

ಈ ಕಾರ್ಯಕ್ಕೆ ತಾಮ್ರದ ಪಾತ್ರೆಯನ್ನೇ ಉಪಯೋಗಿಸುವ ಮಹತ್ವವೇನು?

ಈ ಕಾರ್ಯಕ್ಕೆ ತಾಮ್ರದ ಪಾತ್ರೆಯನ್ನೇ ಉಪಯೋಗಿಸುವ ಮಹತ್ವವೇನು?

ತಾಮ್ರ ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿರುವ ಲೋಹವಾಗಿದೆ. ತಿಳಿದುಬಂದಿರುವ ಇತಿಹಾಸದ ಪ್ರಕಾರ ಕ್ರಿ. ಪೂ 9000 ನೇ ಇಸವಿಯಿಂದಲೂ ತಾಮ್ರ ಬಳಕೆಯಲ್ಲಿದೆ. ವೇದಕಾಲದಲ್ಲಿಯೂ ತಾಮ್ರದ ಬಳಕೆ ಪ್ರಮುಖವಾಗಿತ್ತು. ಆಯುರ್ವೇದದ ಪ್ರಕಾರವೂ ನೀರನ್ನು ಸಂಗ್ರಹಿಸಿಡಲು ತಾಮ್ರದ ಪಾತ್ರೆಯೇ ಅತ್ಯುತ್ತಮವಾಗಿದೆ. ಅಲ್ಲದೇ ಸನಾತನ ಧರ್ಮದಲ್ಲಿ ಕಳಸದ ರೂಪದಲ್ಲಿ ತಾಮ್ರದ ಪಾತ್ರೆಯನ್ನೇ ಬಳಸಲಾಗುತ್ತಿತ್ತು ಹಾಗೂ ತಾಮ್ರವನ್ನು ಸಮೃದ್ದಿಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಅರ್ಗ್ಯ ಅರ್ಪಿಸಲು ತಾಮ್ರದ ಪಾತ್ರೆಯೇ ಶ್ರೇಷ್ಠವಾಗಿದೆ.

English summary

Offering water to Sun every morning can change your luck

People on Earth started facing the problem. Surya was imprisoned by Mandehas and he was not allowed to rise. Survival without the sun was difficult. Then Brahma came to everyone’s rescue and gave the concept of Arghya. He told Brahmins to recite the Gayatri Mantra and offer water to Surya. The water powered with the Gayatri became a weapon and fought the demons who were trying to stop the Sun from rising. It is believed that since Mandehas comes back again and again to stop the Sun from rising, we need to keep offering water to the Sun.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more