For Quick Alerts
ALLOW NOTIFICATIONS  
For Daily Alerts

ಆರೋಗ್ಯ, ಸಂಪತ್ತಿಗಾಗಿ ಗಣಪನಿಗೆ 6 ವಸ್ತುಗಳನ್ನು ಸಮರ್ಪಿಸಿ

|

ಸೆಪ್ಟೆಂಬರ್ 10ಕ್ಕೆ ಗಣೇಶ ಚತುರ್ಥಿ ಸಂಭ್ರಮ. ಗಣೇಶನಿಗೆ ಪೂಜೆ ಸಲ್ಲಿಸಲು ಕಟ್ಟು ನಿಟ್ಟಿನ ನಿಯಮಗಳೇನು ಇಲ್ಲ. ಗಣೇಶನಿಗೆ ಭಕ್ತಿಯಿಂದ ಗರಿಕೆ ಸಮರ್ಪಿಸಿದರೆ ಸಾಕು ತೃಪ್ತನಾಗುತ್ತಾನೆ.

ತನ್ನ ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಗಣಪ. ಶಕ್ತಿ, ಬುದ್ಧಿವಂತಿಕೆ, ಜ್ಞಾನ, ಸಂಪತ್ತು, ಆರೋಗ್ಯವನ್ನು ನೀಡು ಎಂದು ಭಕ್ತರು ಗಣಪನಲ್ಲಿ ಬೇಡಿಕೊಳ್ಳುತ್ತಾರೆ.

Ganesh chaturthi

ಗಜಮುಖನಿಗೆ ಪೂಜೆ ಸಲ್ಲಿಸುವಾಗ ಕೆಲವೊಂದು ವಿಧಿ ವಿಧಾನಗಳಿವೆ, ಅವುಗಳಂತೆ ಪೂಜೆ ಸಲ್ಲಿಸಿದರೆ ತುಂಬಾ ತೃಪ್ತನಾಗುತ್ತಾನೆ. ಇಲ್ಲಿ ನಾವು ನೀವು ಗಣಪತಿಗೆ ಪೂಜೆ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಹೇಳಿದ್ದೇವೆ ನೋಡಿ:

 ಗರಿಕೆ

ಗರಿಕೆ

ಗಣಪ ತೃಪ್ತಿಗೊಳ್ಳಲು ನೀವೇನು ಆಡಂಭರದ ವಸ್ತುಗಳನ್ನು ಅರ್ಪಿಸಬೇಕಾಗಿಲ್ಲ. ಭಕ್ತಿಯಿಂದ ಗರಿಕೆಯನ್ನು ಸಮರ್ಪಿಸಿದರೆ ಸಾಕು, ಗಣಪ ತೃಪ್ತನಾಗುತ್ತಾನೆ. ಅಲ್ಲದೆ ಗಣೇಶನ ಪೂಜೆಯಲ್ಲಿ ಗರಿಕೆ ಇಲ್ಲದಿದ್ದರೆ ಆ ಪೂಜೆ ಪೂರ್ಣವಾಗುವುದಿಲ್ಲ. ಗಣೇಶನ ಪೂಜಿಸುವಾಗ 21 ಗರಿಕೆಯನ್ನು ಸಮರ್ಪಿಸುವುದರಿಂದ ಶ್ರೇಯಸ್ಸು ಉಂಟಾಗುವುದು.

 ಎಕ್ಕೆಯ ಹೂ

ಎಕ್ಕೆಯ ಹೂ

ಗಣಪನಿಗೆ ಎಕ್ಕೆಯ ಹೂ ಸಮರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಎಕ್ಕೆಯ 21 ಹೂಗಳಿಂದ ಹಾರ ಮಾಡಿ ಗಣೇಶನ ಕೊರಳಿಗೆ ಹಾಕಬೇಕು. ಜೊತೆಗೆ ಗಣೇಶನಿಗೆ ಹಳದಿ ಹೂಗಳಿಂದ ಅಲಂಕಾರ ಮಾಡಿದರೆ ಬೇಗ ಒಲಿಯುತ್ತಾನೆ ಎಂದು ಹೇಳಲಾಗುತ್ತದೆ.

 ಮೋದಕ

ಮೋದಕ

ಗಣೇಶನ ಪೂಜೆಯಲ್ಲಿ ಮೋದಕ ಇರಲೇಬೇಕು. ಎಷ್ಟೇ ಬಗೆಯ ತಿಂಡಿ ಮಾಡಿ ಆದರೆ ಮೋದಕ ಇಲ್ಲ ಎಂದರೆ ಪೂಜೆ ಸಂಪೂರ್ಣವಾಗುವುದಿಲ್ಲ. ಗಣೇಶನಿಗೆ ತೃಪ್ತಿ ಆಗಬೇಕು ಎಂದರೆ ಮೋದಕ ಇಡಲೇಬೇಕು, ಅದರಲ್ಲೂ 21 ಮೋದಕಗಳನ್ನು ಇಡಬೇಕು. ಮೋದಕ ಜೊತೆಗೆ ಲಡ್ಡು, ಪುರಿ ಉಂಡೆ ಇವುಗಳನ್ನು ಸಮರ್ಪಿಸುತ್ತಾರೆ. ಆದರೆ ಮೋದಕ ಮಾತ್ರ ಇರಲೇಬೇಕು.

ಬಾಳೆಹಣ್ಣು

ಬಾಳೆಹಣ್ಣು

ಗಣೇಶನ ಪೂಜಿಸುವಾಗ ಎಲ್ಲಾ ಬಗೆಯ ಫಲಗಳನ್ನು ಇಡುತ್ತಾರೆ, ಆದರೆ ಬಾಳೆಹಣ್ಣು ಕಡ್ಡಾಯವಾಗಿ ಇಡಲೇಬೇಕು. ಗಣೇಶನಿಗೆ ಬಾಳೆಹಣ್ಣು ಇಡುವಾಗಲೂ 21 ಬಾಳೆ ಹಣ್ಣು ಇಟ್ಟರೆ ಒಳ್ಳೆಯದು. ಕೆಲವರು 21 ಬಾಳೆ ಹಣ್ಣಿನಿಂದ ಹಾರ ಮಾಡಿ ಗಣಪನಿಗೆ ಹಾಕುತ್ತಾರೆ.

ಶಂಖ

ಶಂಖ

ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಶಂಖ ಬಳಸುವುದು ಸಹಜ. ಆದರೆ ಗಣೇಶನ ಪೂಜೆಯಲ್ಲಿ ಕಡ್ಡಾಯವಾಗಿ ಶಂಖ ಇರಬೇಕು. ಗಣೇಶನ ಒಂದು ಕೈಯಲ್ಲಿ ಶಂಖ ಇದ್ದೇ ಇರುತ್ತದೆ. ಶಂಖನಾದ ಮೊಳಗಿದರೆ ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಪೂಜೆ ಮಂಗಳಕರವಾಗಿರುತ್ತದೆ. ಆದ್ದರಿಂದ ಗಣೇಶ ಪೂಜಿಸುವಾಗ ಶಂಖನಾದ ಮೊಳಗಿಸಲಾಗುವುದು.

ಸಿಂಧೂರ

ಸಿಂಧೂರ

ಸಿಂಧೂರ ಅರ್ಪಿಸಿದರೆ ಗಣೇಶನಿಗೆ ತುಂಬಾ ಇಷ್ಟವಾಗುವುದು. ಚಿಂತೆ, ದುಃಖ, ಆರೋಗ್ಯ ಸಮಸ್ಯೆ ಇವೆಲ್ಲಾ ಸಿಂಧೂರ ಅರ್ಪಿಸುವುದರಿಂದ ದೂರವಾಗುವುದು. ಸಿಂಧೂರ ಶೋಭನಮ್ ರಕ್ತಮ್ ಸೌಭಾಗ್ಯಂ ಸುಖವರ್ಧನಮ್, ಶುಭದಂ ಕಾಮದಮ್ ಚೌವ ಸಿಂಧೂರಮ್ ಪ್ರತಿಗ್ಯತಮ್ ಎಂಬ ಮಂತ್ರದೊಂದಿಗೆ ಸಿಂಧೂರ ಅರ್ಪಿಸಬೇಕು. ಈ ರೀತಿ ಸಿಂಧೂರ ಅರ್ಪಿಸುವುದರಿಂದ ಉದ್ಯೋಗ, ವ್ಯಾಪರದಲ್ಲಿ ಶ್ರೇಯಸ್ಸು ಉಂಟಾಗುವುದು.

English summary

Ganesh chaturthi : Offer These Things To Lord Ganesh to Attract Health And Wealth

During Ganesh Pooja time offer these things to attract health and wealth, have a look
X
Desktop Bottom Promotion