For Quick Alerts
ALLOW NOTIFICATIONS  
For Daily Alerts

ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲರೂ ನಿತ್ಯ ಪಠಿಸಲೇಬೇಕಾದ ಶ್ಲೋಕಗಳು

|

ನಮ್ಮ ಹಿಂದೂ ಸಂಪ್ರದಾಯಕ್ಕೆ ಆಳವಾದ ಬೇರು ಸಾವಿರಾರು ವರ್ಷಗಳ ಹಿಂದಿನಿಂದ ಭದ್ರ ಬುನಾದಿ ಹಾಕಿದೆ. ಇದಕ್ಕೆ ಸಾಕಷ್ಟು ಮಹತ್ವವೂ ಇದೆ. ಇದರ ತಳಹದಿಯಲ್ಲಿ ಬರುವುದೇ ಸ್ತ್ರೋತ್ರ, ಮಂತ್ರ ಪಠಣ, ಪಾರಾಯಣಗಳು.

Nitya Prarthana Shlokas for daily prayers In Kannada

ಪ್ರತಿನಿತ್ಯ ಬೆಳಗಿನಿಂದ ರಾತ್ರಿ ಮಲಗುವವರೆಗೂ ನಮ್ಮಲ್ಲಿ ಹೊಸ ಶಕ್ತಿ ಚೈತನ್ಯ ತುಂಬಲು, ಮನಸ್ಸು ನಿರಾಳವಾಗಲು, ಆರೋಗ್ಯ ಸುಧಾರಿಸಲು ಹಾಗೂ ಯಾವುದೇ ಅಡೆತಡೆ ಇಲ್ಲದೆ ಕೆಲಸ ಮುಂದೆ ಸಾಗಲು ಹೇಳುವ ಸಾವಿರಾರು ಶ್ಲೋಕಗಳಿವೆ.

ಆದರೆ ನಾವಿಂದು ವಿಶೇಷವಾಗಿ ಪ್ರತಿನಿತ್ಯ ಪಠಿಸಲೇಬೇಕಾದ ಹಾಗೂ ಸಂದರ್ಭಾನುಸಾರ ಪಠಿಸಬೇಕಾದ ಶ್ಲೋಕಗಳನ್ನು ನಿಮಗೆ ಹೇಳಲಿದ್ದೇವೆ ಮುಂದೆ ನೋಡಿ:

ನಿತ್ಯ ಶ್ಲೋಕ ಪಠಣದಿಂದ ಆಗುವ ಪ್ರಯೋಜನಗಳು

* ಪ್ರತಿನಿತ್ಯ ವೇದ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

* ಮನಸ್ಸು ನಿರಾಳವಾಗುತ್ತದೆ - ಮನಸ್ಸು ಉದ್ವೇಗಗೊಂಡಿದ್ದಾಗ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.

* ದೇಹದಲ್ಲಿ ಹಲವು ಶಕ್ತಿಕೇಂದ್ರಗಳು ಅಥವಾ ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.

* ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ.

* ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ.

* ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ.

* ಖಿನ್ನತೆಯನ್ನು ನಿವಾರಿಸುತ್ತದೆ, ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವುಗಳನ್ನು ಮಂತ್ರ ಪಠಿಸುವ ಮೂಲಕ ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.

* ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ.

* ತೇಜಸ್ಸನ್ನು ಹೆಚ್ಚಿಸುತ್ತದೆ- ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸುವಾಗ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ.

* ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ.

* ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ

1. ಪ್ರಭಾತ ಶ್ಲೋಕಂ

1. ಪ್ರಭಾತ ಶ್ಲೋಕಂ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

2. ಪ್ರಭಾತ ಭೂಮಿ ಶ್ಲೋಕಂ

2. ಪ್ರಭಾತ ಭೂಮಿ ಶ್ಲೋಕಂ

ಸಮುದ್ರ ವಸನೇ ದೇವೀ ಪರ್ವತ ಸ್ತನ ಮಂಡಲೇ |

ವಿಷ್ಣುಪತ್ನಿ ನಮಸ್ತುಭ್ಯಂ, ಪಾದಸ್ಪರ್ಶಂ ಕ್ಷಮಸ್ವಮೇ ||

3. ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ

3. ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ

ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl

ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

4. ಸೂರ್ಯೋದಯ ಶ್ಲೋಕಂ

4. ಸೂರ್ಯೋದಯ ಶ್ಲೋಕಂ

ಬ್ರಹ್ಮಸ್ವರೂಪ ಮುದಯೇ ಮಧ್ಯಾಹ್ನೇತು ಮಹೇಶ್ವರಮ್ |

ಸಾಹಂ ಧ್ಯಾಯೇತ್ಸದಾ ವಿಷ್ಣುಂ ತ್ರಿಮೂರ್ತಿಂಚ ದಿವಾಕರಮ್ ||

5. ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ

5. ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

6. ಮಂತ್ರ ಸ್ನಾನ

6. ಮಂತ್ರ ಸ್ನಾನ

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl

ಅಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

7. ಭಸ್ಮ ಧಾರಣ ಶ್ಲೋಕಂ

7. ಭಸ್ಮ ಧಾರಣ ಶ್ಲೋಕಂ

ಶ್ರೀಕರಂ ಚ ಪವಿತ್ರಂ ಚ ಶೋಕ ನಿವಾರಣಮ್ |

ಲೋಕೇ ವಶೀಕರಂ ಪುಂಸಾಂ ಭಸ್ಮಂ ತ್ರ್ಯೈಲೋಕ್ಯ ಪಾವನಮ್ ||

8. ಭೋಜನ ಪೂರ್ವ ಶ್ಲೋಕಂ

8. ಭೋಜನ ಪೂರ್ವ ಶ್ಲೋಕಂ

ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ |

ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಃ ||

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹ-ಮಾಶ್ರಿತಃ |

ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ||

ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ |

ಗೃಹಾಣ ಸುಮುಖೋ ಭೂತ್ವಾ ಪ್ರಸೀದ ಪರಮೇಶ್ವರ ||

9. ಭೋಜನಾನಂತರ ಶ್ಲೋಕಂ

9. ಭೋಜನಾನಂತರ ಶ್ಲೋಕಂ

ಅಗಸ್ತ್ಯಂ ವೈನತೇಯಂ ಚ ಶಮೀಂ ಚ ಬಡಬಾಲನಮ್ |

ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಮ್ ||

10. ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ

10. ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl

ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll

ತ್ವಮೇವ ಮಾತಾಚl ಪಿತಾ ತ್ವಮೇವl

ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl

ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll

11. ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ

11. ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl

ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl

ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

12. ಸಂಧ್ಯಾ ದೀಪ ದರ್ಶನ ಶ್ಲೋಕಂ

12. ಸಂಧ್ಯಾ ದೀಪ ದರ್ಶನ ಶ್ಲೋಕಂ

ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಸರ್ವತಮೋಪಹಮ್ |

ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪಂ ನಮೋ‌ಃಸ್ತುತೇ ||

13. ನಿದ್ರಾ ಶ್ಲೋಕಂ

13. ನಿದ್ರಾ ಶ್ಲೋಕಂ

ರಾಮಂ ಸ್ಕಂಧಂ ಹನುಮಂತಂ ವೈನತೇಯಂ ವೃಕೋದರಮ್ |

ಶಯನೇ ಯಃ ಸ್ಮರೇನ್ನಿತ್ಯಮ್ ದುಸ್ವಪ್ನ-ಸ್ತಸ್ಯನಶ್ಯತಿ ||

14. ಲವಲವಿಕೆಯ ಜೀವನಶೈಲಿಗೆ

14. ಲವಲವಿಕೆಯ ಜೀವನಶೈಲಿಗೆ

'ಓಂಕಾರ ಮಂತ್ರ ಪಠಿಸಿ'

15. ಕಾರ್ಯ ಪ್ರಾರಂಭ ಶ್ಲೋಕಂ

15. ಕಾರ್ಯ ಪ್ರಾರಂಭ ಶ್ಲೋಕಂ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |

ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||

16. ಗಾಯತ್ರಿ ಮಂತ್ರಂ

16. ಗಾಯತ್ರಿ ಮಂತ್ರಂ

ಓಂ ಭೂರ್ಭುವಸ್ಸುವಃ ತಥ್ಸ'ವಿತುರ್ವರೇ"ಣ್ಯಂ |

ಭರ್ಗೋ' ದೇವಸ್ಯ' ಧೀಮಹಿ

ಧಿಯೋ ಯೋ ನಃ' ಪ್ರಚೋದಯಾ"ತ್ ||

17. ಹನುಮ ಸ್ತೋತ್ರಂ

17. ಹನುಮ ಸ್ತೋತ್ರಂ

ಮನೋಜವಂಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ |

ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||

ಬುದ್ಧಿರ್ಬಲಂ ಯಶೊಧೈರ್ಯಂ ನಿರ್ಭಯತ್ವ-ಮರೋಗತಾ |

ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್-ಸ್ಮರಣಾದ್-ಭವೇತ್ ||

18. ಶ್ರೀರಾಮ ಸ್ತೋತ್ರಂ

18. ಶ್ರೀರಾಮ ಸ್ತೋತ್ರಂ

ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ

ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

19. ಗಣೇಶ ಸ್ತೋತ್ರಂ

19. ಗಣೇಶ ಸ್ತೋತ್ರಂ

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಮ್ ಚತುರ್ಭುಜಮ್

ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್

ಅನೇಕದಂತಂ ಭಕ್ತಾನಾ-ಮೇಕದಂತ-ಮುಪಾಸ್ಮಹೇ ||

20. ಶಿವ ಸ್ತೋತ್ರಂ

20. ಶಿವ ಸ್ತೋತ್ರಂ

ತ್ರ್ಯಂ'ಬಕಂ ಯಜಾಮಹೇ ಸುಗಂಧಿಂ ಪು'ಷ್ಟಿವರ್ಧ'ನಮ್ |

ಉರ್ವಾರುಕಮಿ'ವ ಬಂಧ'ನಾನ್-ಮೃತ್ಯೋ'ರ್-ಮುಕ್ಷೀಯ ಮಾಮೃತಾ"ತ್ ||

21. ಗುರು ಶ್ಲೋಕಂ

21. ಗುರು ಶ್ಲೋಕಂ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ

ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||

22.ಸರಸ್ವತೀ ಶ್ಲೋಕಂ

22.ಸರಸ್ವತೀ ಶ್ಲೋಕಂ

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ

ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ

ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ

ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ||

23. ಲಕ್ಷ್ಮೀ ಶ್ಲೋಕಂ

23. ಲಕ್ಷ್ಮೀ ಶ್ಲೋಕಂ

ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಮ್

ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್

ಶ್ರೀಮನ್ಮಂಧ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಮ್

ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ ||

24. ವೆಂಕಟೇಶ್ವರ ಶ್ಲೋಕಂ

24. ವೆಂಕಟೇಶ್ವರ ಶ್ಲೋಕಂ

ಶ್ರಿಯಃ ಕಾಂತಾಯ ಕಳ್ಯಾಣನಿಧಯೇ ನಿಧಯೇ ರ್ಥಿನಾಮ್ |

ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ||

25. ದೇವೀ ಶ್ಲೋಕಂ

25. ದೇವೀ ಶ್ಲೋಕಂ

ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ||

26. ದಕ್ಷಿಣಾಮೂರ್ತಿ ಶ್ಲೋಕಂ

26. ದಕ್ಷಿಣಾಮೂರ್ತಿ ಶ್ಲೋಕಂ

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |

ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||

27. ಅಪರಾಧ ಕ್ಷಮಾಪಣ ಸ್ತೋತ್ರಂ

27. ಅಪರಾಧ ಕ್ಷಮಾಪಣ ಸ್ತೋತ್ರಂ

ಅಪರಾಧ ಸಹಸ್ರಾಣಿ, ಕ್ರಿಯಂತೇ ಹರ್ನಿಶಂ ಮಯಾ |

ದಾಸೋ‌ಯ ಮಿತಿ ಮಾಂ ಮತ್ವಾ, ಕ್ಷಮಸ್ವ ಪರಮೇಶ್ವರ ||

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl

ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl

ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

ಕರಚರಣ ಕೃತಂ ವಾ ಕರ್ಮ ವಾಕ್ಕಾಯಜಂ ವಾ

ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್ |

ವಿಹಿತ ಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ

ಶಿವ ಶಿವ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |

ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

28. ಶಾಂತಿ ಮಂತ್ರಂ

28. ಶಾಂತಿ ಮಂತ್ರಂ

ಅಸತೋಮಾ ಸದ್ಗಮಯಾ

ತಮಸೋಮಾ ಜ್ಯೋತಿರ್ಗಮಯಾ

ಮೃತ್ಯೋರ್ಮಾ ಅಮೃತಂಗಮಯಾ

ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ಭವೇತ್ ||

ಓಂ ಸಹ ನಾ'ವವತು | ಸ ನೌ' ಭುನಕ್ತು

ಸಹ ವೀರ್ಯಂ' ಕರವಾವಹೈ | ತೇಜಸ್ವಿನಾವಧೀ'ತಮಸ್ತು ಮಾ ವಿ'ದ್ವಿಷಾವಹೈ" ||

ಓಂ ಶಾಂತಿಃ ಶಾಂತಿಃ ಶಾಂತಿಃ' ||

29. ವಿಶೇಷ ಮಂತ್ರಾಃ ಪಂಚಾಕ್ಷರಿ

29. ವಿಶೇಷ ಮಂತ್ರಾಃ ಪಂಚಾಕ್ಷರಿ

ಓಂ ನಮಶ್ಶಿವಾಯ ಅಷ್ಟಾಕ್ಷರಿ

ಓಂ ನಮೋ ನಾರಾಯಣಾಯ ದ್ವಾದಶಾಕ್ಷರಿ

ಓಂ ನಮೋ ಭಗವತೇ ವಾಸುದೇವಾಯ

30. ಆಪತ್ತಿನಲ್ಲಿ ಸಿಲುಕಿದಾಗ, ಪ್ರಭಾವ ಶಾಲಿ ಮಂತ್ರ

30. ಆಪತ್ತಿನಲ್ಲಿ ಸಿಲುಕಿದಾಗ, ಪ್ರಭಾವ ಶಾಲಿ ಮಂತ್ರ

ಉಗ್ರಂ , ವೀರಂ, ಮಹಾವಿಷ್ಣುಂ ,ಜ್ವಲಂತಂ ಸರ್ವತೋಮುಖಂ l

ನೃಸಿಂಹಂ, ಭೀಷಣಂ ,ಭದ್ರಂ ,ಮೃತ್ಯು , ಮೃತ್ಯುಂ ನಮಾಮ್ಯಹಮ್ ll

English summary

Nitya Prarthana Shlokas for daily prayers In Kannada

Here we are discussing about Nitya Prarthana Shlokas for daily prayers In Kannada. Read more.
X
Desktop Bottom Promotion