For Quick Alerts
ALLOW NOTIFICATIONS  
For Daily Alerts

ಎಲ್ಲಾ ಏಕಾದಶಿಗಳ ಫಲ ನೀಡುವ ನಿರ್ಜಲ ಏಕಾದಶಿ ಯಾವಾಗ? ಇದರ ಪೂಜಾ ವಿಧಿ ಹಾಗೂ ಮಹತ್ವವೇನು?

|

ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿಯೆಂದು ಆಚರಿಸಲಾಗುವುದು. ಈ ದಿನ ಉಪವಾಸ ಮಾಡುವ ಸಂಪ್ರದಾಯವಿದೆ. ಈ ಬಾರಿ ನಿರ್ಜಲ ಏಕಾದಶಿ ಜೂನ್‌ 21ರಂದು ಬಂದಿದೆ.

ಧರ್ಮ ಗ್ರಂಥಗಳ ಪ್ರಕಾರ ಜ್ಯೇಷ್ಠ ಮಾಸವು ಅನೇಕ ಧಾರ್ಮಿಕ ಮಹತ್ವವನ್ನು ಹೊಂದಿರುವ ತಿಂಗಳಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಜ್ಯೇಷ್ಠ ಮಾಸವನ್ನು ಮೂರನೇ ತಿಂಗಳಾಗಿದೆ. ಈ ತಿಂಗಳಿನಲ್ಲಿಹಗಲು ಹೆಚ್ಚಿರುತ್ತದೆ, ಇರುಳು ಕಡಿಮೆ ಇರುತ್ತದೆ . ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಆಚರಿಸುವ ಏಕಾದಶಿಯನ್ನು ನಿರ್ಜಲ ಏಕಾದಶಿ ಎಂದು ಕರೆಯಲಾಗುತ್ತದೆ. ಮಹಾವಿಷ್ಣುವಿನ ಕೃಪೆಗಾಗಿ ಪ್ರಾರ್ಥಿಸಿ ಈ ಏಕಾದಶಿಯನ್ನು ಮಾಡಲಾಗುವುದು. ನಿರ್ಜಲ ಏಕಾದಶಿಯನ್ನುಜ್ಯೇಷ್ಠ ಶುಕ್ಲ ಏಕಾದಶಿ ಎಂದೂ ಕೂಡ ಕರೆಯುತ್ತಾರೆ.

ಸಾಮಾನ್ಯವಾಗಿ ಗಂಗಾದಸರಾದ ಬಳಿಕ ಈ ನಿರ್ಜಲ ಏಕಾದಶಿ ಬರುತ್ತದೆ, ಕೆಲವೊಂದು ವರ್ಷಗಳಲ್ಲಿ ಒಂದೇ ದಿನವೂ ಬರಬಹುದು. ಈ ವರ್ಷ ಗಂಗಾ ದಸರಾ ಬಳಿಕ ನಿರ್ಜಲ ಏಕಾದಶಿ ಬಂದಿದೆ. ಜೂನ್‌ 20ಕ್ಕೆ ಗಂಗಾ ದಸರಾ 21ರಂದು ನಿರ್ಜಲ ಏಕಾದಶಿಯನ್ನು ಆಚರಿಸಲಾಗುವುದು. ನಿರ್ಜಲ ಏಕಾದಶಿಯಂದು ನೀರು ಸಹ ಮುಟ್ಟದೆ ಉಪವಾಸವಿರುವ ಸಂಪ್ರದಾಯವಿದೆ. ಈ ಏಕಾದಶಿ ಆಚರನೆ ಮಾಡುವುದರಿಂದ ಮಾಡಿದ ಪಾಪವೆಲ್ಲಾ ಕಳೆದು ಹೋಗಿ ಭಗವಂತನ ಸಾಕ್ಷಾತ್ಕಾರ ದೊರೆಯುವುದು ಎಂಬ ನಂಬಿಕೆ ಇದೆ.

23 ಏಕಾದಶಿಗಳ ಆಚರಣೆ ಫಲ ನಿರ್ಜಲ ಏಕಾದಶಿ ಆಚರಣೆಯಿಂದ ಸಿಗುವುದು

23 ಏಕಾದಶಿಗಳ ಆಚರಣೆ ಫಲ ನಿರ್ಜಲ ಏಕಾದಶಿ ಆಚರಣೆಯಿಂದ ಸಿಗುವುದು

ಪ್ರತಿಯೊಂದು ಏಕಾದಶಿ ಮಹತ್ವವನ್ನು ಹೊಂದಿದೆ. ಅವುಗಳಲ್ಲಿ ಅತ್ಯಂತ ಫಲ ನೀಡುವ ಏಕಾದಶಿ ಅಂದ್ರೆ ಅದು ನಿರ್ಜಲ ಏಕಾದಶಿ ಎಂದು ಹೇಳಲಾಗುವುದು. ಈ ಏಕಾದಶಿ ಮಾಡಿದರೆ ಇತರ 23 ಏಕಾದಶಿಗಳ ಫಲ ಕೂಡ ಲಭಿಸುವುದು ಎಂದು ಹೇಳಲಾಗುವುದು. ಇದರಿಂದ ಅಭಿವೃದ್ಧಿ ಉಂಟಾಗುತ್ತದೆ, ಆರೋಗ್ಯ ಉತ್ತಮವಾಗುವುದು, ಆಯುಸ್ಸು ವೃದ್ಧಿಸುವುದು. ಯಾರು ಈ ಏಕಾದಶಿಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೋ ಅವರ ಬದುಕಿನಲ್ಲಿ ಯಾವಾಗಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ತುಂಬಿರಲಿದೆ.

ನಿರ್ಜಲ ಏಕಾದಶಿ ಉಪವಾಸಕ್ಕೆ ಶುಭ ಸಮಯ

ನಿರ್ಜಲ ಏಕಾದಶಿ ಉಪವಾಸಕ್ಕೆ ಶುಭ ಸಮಯ

ನಿರ್ಜಲ ಏಕಾದಶಿ ತಿಥಿ ಪ್ರಾರಂಭ: ಜೂನ್ 20, ಭಾನುವಾರ ಸಂಜೆ 4:21 ರಿಂದ ಪ್ರಾರಂಭವಾಗುತ್ತದೆ

ಏಕಾದಶಿ ತಿಥಿ ಮುಕ್ತಾಯ: ಜೂನ್ 21, ಸೋಮವಾರ ಮಧ್ಯಾಹ್ನ 1.31 ರವರೆಗೆ

ಏಕಾದಶಿ ಪಾರಣ ಸಮಯ: ಜೂನ್ 22, ಸೋಮವಾರ ಬೆಳಗ್ಗೆ 5:13 ರಿಂದ ಬೆಳಿಗ್ಗೆ 8.01 ರವರೆಗೆ

ನಿರ್ಜಲ ಏಕಾದಶಿಯ ಆರಾಧನಾ ವಿಧಾನ

ನಿರ್ಜಲ ಏಕಾದಶಿಯ ಆರಾಧನಾ ವಿಧಾನ

ಏಕಾದಶಿ ಉಪವಾಸದಲ್ಲಿ ವಿಶೇಷ ನಿಯಮಗಳನ್ನು ಪಾಲಿಸಬೇಕು. ನಿರ್ಜಲ ಏಕಾದಶಿ ದಿನದಂದು, ಸ್ನಾನ ಮಾಡಿದ ನಂತರ, ಪೂಜಾ ಸ್ಥಳದಲ್ಲಿ ಕುಳಿತು, ಉಪವಾಸದ ಸಂಕಲ್ಪ ತೆಗೆದುಕೊಂಡು, ಪೂಜೆಯನ್ನು ಪ್ರಾರಂಭಿಸಬೇಕು. ಈ ದಿನ ವಿಷ್ಣುವಿಗೆ ಹಳದಿ ಬಟ್ಟೆಗಳನ್ನು ಧರಿಸಿ. ಪೂಜೆಯಲ್ಲಿ ಹಳದಿ ಹೂಗಳನ್ನು ಬಳಸಿ. ಈ ದಿನ ಹಳದಿ ವಸ್ತುಗಳನ್ನು ಬಳಸಲಾಗುತ್ತದೆ. ವಿಷ್ಣುವಿಗೆ ಹಳದಿ ಬಣ್ಣ ಹೆಚ್ಚು ಪ್ರಿಯವಾಗಿದೆ.

ಈ ದಿನ ಈ ಮಂತ್ರವನ್ನು ಜಪಿಸಬೇಕು-

"ಓಂ ನಮೋ ಭಾಗವತ ವಾಸುದೇವ"

ಇದರ ಬಗ್ಗೆ ಇರುವ ಪೌರಾಣಿಕ ಕತೆ

ಇದರ ಬಗ್ಗೆ ಇರುವ ಪೌರಾಣಿಕ ಕತೆ

ನಿರ್ಜಲ ಏಕಾದಶಿಯನ್ನು ಭೀಮಾಸೇನಾ ಏಕಾದಶಿಯೆಂದು ಕೂಡ ಆಚರಿಸುತ್ತಾರೆ. ಭೀಮನಿಗೆ ಆಹಾರವೆಂದರೆ ತುಂಬಾ ಪ್ರಿಯ, ಸದಾ ತಿನ್ನುತ್ತಲೇ ಇರುತ್ತಿದ್ದ. ಅವನಿಗೆ ತನ್ನ ಹಸಿವು ತಡೆದು ಏಕಾದಶಿ ಉಪವಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಹಾವಿಷ್ಣುವಿಗೆ ಅವಮಾನ ಮಾಡಿದಂತೆ ಎಂದು ತಿಳಿದ ಭೀಮ ವ್ಯಾಸ ಮಹರ್ಷಿ ಭೇಟಿಯಾಗಿ ಏನು ಮಾಡಬೇಕೆಂದು ಕೇಳುತ್ತಾನೆ. ಆಗ ಅವರು ನಿರ್ಜಲ ಏಕಾದಶಿಯಂದು ಉಪವಾಸವಿದ್ದರೆ ಎಲ್ಲಾ ಏಕಾದಶಿಯ ಫಲ ಸಿಗುವುದು ಎಂದು ಹೇಳುತ್ತಾರೆ. ಅದರಂತೆ ಭೀಮ ನಿರ್ಜಲ ಏಕಾದಶಿ ಆಚರಿಸುತ್ತಿದ್ದ ಎಂಬ ಕತೆಯಿದೆ.

English summary

Nirjala Ekadashi 2021 Date, Muhurta Timings, Vrat Puja Vidhi and Significance in Kannada

Nirjala Ekadashi 2021 Date, Muhurta Timings, Vrat Puja Vidhi and Significance in Kannada, read on...
X
Desktop Bottom Promotion