For Quick Alerts
ALLOW NOTIFICATIONS  
For Daily Alerts

ಜೂನ್‌2ರ ನಿರ್ಜಲ ಏಕಾದಶಿ ತುಂಬಾ ಮಹತ್ವವಾದ ದಿನ

|

ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿಯೆಂದು ಆಚರಿಸಲಾಗುವುದು. ಈ ದಿನ ಉಪವಾಸ ಮಾಡುವ ಸಂಪ್ರದಾಯವಿದೆ. ಈ ಬಾರಿ ನಿರ್ಜಲ ಏಕಾದಶಿ ಬಂದಿದೆ.

Nirjala Ekadashi 2020: Date, timings and significance

ಚಾಂದ್ರಮಾನದ ಜೇಷ್ಠ ಮಾಸದ ಶುಕ್ಲಪಕ್ಷದ ಮೊದಲ ದಿನ ಬರುವುದೇ ನಿರ್ಜಲ ಏಕಾದಶಿ. ಮಹಾವಿಷ್ಣುವಿನ ಕೃಪೆಗಾಗಿ ಪ್ರಾರ್ಥಿಸಿ ಈ ಏಕಾದಶಿಯನ್ನು ಮಾಡಲಾಗುವುದು. ನಿರ್ಜಲ ಏಕಾದಶಿಯನ್ನುಜ್ಯೇಷ್ಠ ಶುಕ್ಲ ಏಕಾದಶಿ ಎಂದೂ ಕೂಡ ಕರೆಯುತ್ತಾರೆ.

ಗಂಗಾದಸರಾದ ಬಳಿಕ ಈ ನಿರ್ಜಲ ಏಕಾದಶಿ ಬರುತ್ತದೆ, ಕೆಲವೊಂದು ವರ್ಷಗಳಲ್ಲಿ ಒಂದೇ ದಿನವೂ ಬರಬಹುದು. ಈ ವರ್ಷ ಗಂಗಾ ದಸರಾ ಬಳಿಕ ನಿರ್ಜಲ ಏಕಾದಶಿ ಬಂದಿದೆ. ಜೂನ್‌ 2ರಂದು ನಿರ್ಜಲ ಏಕಾದಶಿಯನ್ನು ಆಚರಿಸಲಾಗುವುದು.

ನಿರ್ಜಲ ಏಕಾದಶಿಯಂದು ನೀರು ಸಹ ಮುಟ್ಟದೆ ಉಪವಾಸವಿರುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ಮನುಷ್ಯ ಮಾಡಿದ ಪಾಪವೆಲ್ಲಾ ಕಳೆದು ಹೋಗಿ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ ತೋರುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ.

ಸಮಯ ಮತ್ತು ದಿನಾಂಕ

ಸಮಯ ಮತ್ತು ದಿನಾಂಕ

ನಿರ್ಜಲ ಏಕಾದಶಿ ತಿಥಿ ಜೂನ್‌ 1 ಮಧ್ಯಾಹ್ನ 2.57ಕ್ಕೆ ಪ್ರಾರಂಭವಾಗಿ ಜೂನ್ 2, 12.04ಕ್ಕೆ ಮುಕ್ತಾಯವಾಗುತ್ತದೆ.

ಪಾಲನೆ ವಿಧಾನ

ಪಾಲನೆ ವಿಧಾನ

ನಿರ್ಜಲ ಏಕಾದಶಿಯಂದು ಭಕ್ತರು ಮಹಾವಿಷ್ಣುವನ್ನು ಆರಾಧಿಸುತ್ತಾರೆ. ಮಹಾವಿಷ್ಣುವಿಗೆ ತುಳಸಿ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಮಹಾವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ಏಕಾದಶಿ ಪಾಲಿಸುವವರು ರಾತ್ರಿವಿಡೀ ಎಚ್ಚರವಿದ್ದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಪೂಜೆ ಸಮಯದಲ್ಲಿ ವೇದ, ಮಂತ್ರಗಳು, ವಿಷ್ಣು ಸಹಸ್ರನಾಮ ಹೇಳಲಾಗುವುದು. ಈ ದಿನ ಯಾವುದೇ ಕಾರಣಕ್ಕೆ ಅನ್ನ ಹಾಗೂ ಅಕ್ಕಿಯಿಂದ ಮಾಡಿದ ಆಹಾರ ಸೇವಿಸುವುದಿಲ್ಲ. ಕೆಲವರು ನೀರನ್ನೂ ಕೂಡ ಮುಟ್ಟದೆ ಏಕಾದಶಿ ಆಚರಿಸುತ್ತಾರೆ. ಅನಾರೋಗ್ಯ ಕಾರಣಗಳಿಂದ ಅದು ಸಾಧ್ಯವಾಗದೇ ಇರುವವರು ಬರೀ ಹಣ್ಣುಗಳನ್ನಷ್ಟೇ ತಿನ್ನುತ್ತಾರೆ.

ನಿರ್ಜಲ ಏಕಾದಶಿಯ ಮಹತ್ವ

ನಿರ್ಜಲ ಏಕಾದಶಿಯ ಮಹತ್ವ

ಇದನ್ನು ಅತ್ಯಂತ ಫಲ ನೀಡುವ ಏಕಾದಶಿ ಎಂದು ಹೇಳಲಾಗುವುದು. ಈ ಏಕಾದಶಿ ಮಾಡಿದರೆ ಇತರ ಏಕಾದಶಿಗಳ ಫಲ ಕೂಡ ಲಭಿಸುವುದು ಎಂದು ಹೇಳಲಾಗುವುದು. ಇದರಿಂದ ಅಭಿವೃದ್ಧಿ ಉಂಟಾಗುತ್ತದೆ, ಆರೋಗ್ಯ ಉತ್ತಮವಾಗುವುದು, ಆಯುಸ್ಸು ಹೆಚ್ಚುವುದು, 23 ಏಕಾದಶಿಗಳನ್ನು ಆಚರಿಸಲು ಕಷ್ಟವಾಗುವವರು ಇದೊಂದು ಏಕಾದಶಿ ಆಚರಿಸಿದರೆ ಎಲ್ಲಾಏಕಾದಶಿಗಳ ಫಲ ಇದರಿಂದ ದೊರೆಯುವುದು ಎಂದು ಹೇಳುತ್ತಾರೆ.

 ಇದರ ಹಿಂದೆ ಒಂದು ಪೌರಾಣಿಕ ಕತೆಯೂ ಇದೆ

ಇದರ ಹಿಂದೆ ಒಂದು ಪೌರಾಣಿಕ ಕತೆಯೂ ಇದೆ

ನಿರ್ಜಲ ಏಕಾದಶಿಯನ್ನು ಭೀಮಾಸೇನಾ ಏಕಾದಶಿಯೆಂದು ಕೂಡ ಆಚರಿಸುತ್ತಾರೆ. ಭೀಮನಿಗೆ ಆಹಾರವೆಂದರೆ ತುಂಬಾ ಪ್ರಿಯ, ಸದಾ ತಿನ್ನುತ್ತಲೇ ಇರುತ್ತಿದ್ದ. ಅವನಿಗೆ ತನ್ನ ಹಸಿವು ತಡೆದು ಉಪವಾಸ ಇರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಹಾವಿಷ್ಣುವಿಗೆ ಅವಮಾನ ಮಾಡಿದಂತೆ ಎಂದು ತಿಳಿದ ಭೀಮ ವ್ಯಾಸ ಮಹರ್ಷಿ ಭೇಟಿಯಾಗಿ ಏನು ಮಾಡಬೇಕೆಂದು ಕೇಳುತ್ತಾನೆ. ಆಗ ಅವರು ನಿರ್ಜಲ ಏಕಾದಶಿಯಂದು ಉಪವಾಸವಿದ್ದರೆ ಎಲ್ಲಾ ಏಕಾದಶಿಯ ಫಲ ಸಿಗುವುದು ಎಂದು ಹೇಳುತ್ತಾರೆ. ಅದರಂತೆ ಭೀಮು ಉಪವಾಸವಿದ್ದು ಏಕಾದಶಿ ಫಲವನ್ನು ಪಡೆಯುತ್ತಾನೆ.

ದಾನ-ಧರ್ಮ

ದಾನ-ಧರ್ಮ

ನಿರ್ಜಲ ಏಕಾದಶಿಯಂದು ದಾನಧರ್ಮ ಮಾಡುವುದರಿಂದ ಕೂಡ ಪುಣ್ಯ ದೊರೆಯುವುದು. ಈ ದಿನ ಬಟ್ಟೆ, ಆಹಾರ, ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಬಡವರಿಗೆ ಹಾಗೂ ಅಪೇಕ್ಷಿತರಿಗೆ ದಾನ ಮಾಡುವುದರಿಂದ ಸತ್ಫಲ ದೊರೆಯುತ್ತದೆ.

English summary

Nirjala Ekadashi 2020: Date, timings and significance

Here are Nirjala Ekadashi 2020 date, timing and significance, Read on,
X
Desktop Bottom Promotion