For Quick Alerts
ALLOW NOTIFICATIONS  
For Daily Alerts

ನವರಾತ್ರಿ 9ನೇ ದಿನ: ತನ್ನ ಉಪಾಸನೆ ಮಾಡುವವರಿಗೆ ಸಕಲ ಸಿದ್ಧಿ ನೀಡುವ ಸಿದ್ಧಿದಾತ್ರಿ

|

ನವರಾತ್ರಿ ಒಂಭತ್ತನೇ ದಿನ ಅಂದರೆ ನವಮಿಯೆಂದು ದುರ್ಗಾದೇವಿಯ ಸಿದ್ಧಿದಾತ್ರಿ ರೂಪವನ್ನು ಆರಾಧಿಸಲಾಗುವುದು. ಸಿದ್ಧಿ ದೇವತೆ ಭಕ್ತರಿಗೆ ಎಲ್ಲಾ ಪ್ರಕಾರದ ಸಿದ್ಧಿಗಳನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. ಮಾರ್ಕಡೇಯ ಪುರಾಣದ ಪ್ರಕಾರ ಅಣಿಮಾ, ಮಾಹಿಮಾ, ಗರಿಮಾ, ಲಘಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಮತ್ತು ವಶಿತ್ವ ಹೀಗೆ ಎಂಟು ಸಿದ್ಧಿಗಳು ಇವೆ. ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಎಲ್ಲಾ ಸಿದ್ಧಿಯು ದೊರೆಯುವುದು.

ಆಶ್ವಯುಜ ಮಾಸದ ಮಹಾನವಮಿಯ ಈ ದಿನದಂದು ಆಯುಧಗಳು, ಯಂತ್ರಗಳು, ವಾಹನಗಳು, ಕೃಷಿ ಉಪಕರಣಗಳಿಗೆ ಪೂಜೆ ಮಾಡಬೇಕೆಂಬ ಸಂಪ್ರದಾಯವಿದೆ. ದೇವಿಯು ಮಹಿಷಾಸುರನ್ನು ಸಂಹರಿಸಿದ ಆಯುಧಗಳನ್ನು ಭೂಮಿಯಲ್ಲಿಯೇ ಎಸೆದು ಹೋಗುತ್ತಾಳೆ, ಈ ಆಯುಧಗಳನ್ನು ತಂದು ಪೂಜಿಸಲಾಗಿತ್ತು, ಹೀಗೆ ಆಯುಧ ಪೂಜೆ ಸಂಪ್ರದಾಯ ಪಾಲಿಸಿಕೊಂಡು ಬರಲಾಗಿದೆ ಎಂಬ ಪೌರಾಣಿಕ ಕತೆಯ ಹಿನ್ನೆಲೆಯಿದೆ. ಅಕ್ಟೋಬರ್‌ 23ರಂದು ಆಯುಧ ಪೂಜೆಯನ್ನು ಆಚರಿಸಲಾಗುವುದು.

 ಸಿದ್ಧಿದಾತ್ರಿ ಉಪಾಸನೆ

ಸಿದ್ಧಿದಾತ್ರಿ ಉಪಾಸನೆ

ನವಮಿಯೆಂದು ಸಿದ್ಧಿದಾತ್ರಿಯ ಉಪಾಸನೆ ಮಾಡಲಾಗುತ್ತದೆ. ಎಂಟು ದೇವಿಯ ಪೂಜೆಯನ್ನು ಮಾಡಿ, ಒಂಭತ್ತನೇ ದಿನ ಇವಳ ಪೂಜೆಯನ್ನು ಮಾಡಲಾಗುವುದು. ಈ ದಿನ ಯಾರು ಶ್ರಾಸ್ತ್ರೀಯ ವಿಧಿ-ವಿಧಾನಗಳನ್ನು ಪಾಲಿಸಿ, ಪೂರ್ಣ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿದರೆ ಸಿದ್ಧಿ ಲಭಿಸುವುದು. ಮಾಡುವ ಕಾರ್ಯದಲ್ಲಿ ವಿಜಯ ಸಿಗುವುದು. ವಿಶ್ವವನ್ನೇ ಗೆಲ್ಲುವ ಸಾಮಾರ್ಥ್ಯ ಲಭಿಸುವುದು. ಈಕೆಯ ಕೃಪೆಯಿದ್ದರೆ ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವುದು.

ಸಿದ್ಧಿದಾತ್ರಿ ಕೃಪೆಯಿಂದ ಸಿದ್ಧಿ ಪಡೆದ ಶಿವ

ಸಿದ್ಧಿದಾತ್ರಿ ಕೃಪೆಯಿಂದ ಸಿದ್ಧಿ ಪಡೆದ ಶಿವ

ಪೌರಾಣಿಕ ಕತೆಯ ಪ್ರಕಾರ ಭಗವಾನ್ ಶಿವನು ಇವಳ ಕೃಪೆಯಿಂದ ಇವೆಲ್ಲ ಸಿದ್ಧಿಗಳನ್ನು ಪಡೆದುಕೊಂಡಿದ್ದನು. ಇವಳ ಅನುಕಂಪದಿಂದಲೇ ಭಗವಾನ್ ಶಿವನ ಅರ್ಧ ಶರೀರವು ದೇವಿಯಾಗಿದೆ. ಇದೇ ಕಾರಣದಿಂದಲೇ ಶಿವನು ‘ಅರ್ಧನಾರೀಶ್ವರ' ಹೆಸರಿನಿಂದ ಪ್ರಸಿದ್ಧನಾದನು.

ಸಿದ್ಧಿದಾತ್ರಿ ರೂಪ

ಸಿದ್ಧಿದಾತ್ರಿ ರೂಪ

ಸಿದ್ಧಿದಾತ್ರಿ ದೇವಿ ನಾಲ್ಕು ಭುಜಗಳನ್ನು ಹೊಂದಿದ್ದಾಳೆ, ಇವಳ ಚಿತ್ರವನ್ನು ನೋಡಿದಾಗ ಫಲಪುಷ್ಪದ ಮೇಲೆ ವಿರಾಜಮಾನವಾಗಿ ಕುಳಿತುಕೊಂಡಿರುವುದನ್ನು ನೋಡಬಹುದುದು. ಇವಳ ವಾಹನ ಸಿಂಹವಾಗಿದೆ. ಇಇವಳ ಕೆಳಗಿನ ಬಲಕೈಯಲ್ಲಿ ಚಕ್ರ, ಮೇಲಿನ ಕೈಯಲ್ಲಿ ಗದೆ ಇದೆ. ಎಡಗಡೆ ಕೆಳಗಿನ ಕೈಯಲ್ಲಿ ಶಂಖ ಮತ್ತು ಮೇಲಿನ ಕೈಯಲ್ಲಿ ಕಮಲವಿದೆ.

ಕರ್ನಾಟಕದಲ್ಲಿ ಆಯುಧ ಪೂಜೆಯ ವಿಜೃಂಭಣೆಯ ಆಚರಣೆ

ಕರ್ನಾಟಕದಲ್ಲಿ ಆಯುಧ ಪೂಜೆಯ ವಿಜೃಂಭಣೆಯ ಆಚರಣೆ

ಅಕ್ಟೋಬರ್‌ 25ರಂದು ಭಾನುವಾರ ಸಿದ್ಧಿಧಾತ್ರಿಯನ್ನು ಪೂಜಿಸಲಾಗುತ್ತದೆ. ಆಯುಧ ಪೂಜಾ ಕೂಡ ಈ ದಿನವೇ ಇರುವುದರಿಂದ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪಾಂಡವರು ತಮ್ಮ ವನವಾಸದ ಸಂದರ್ಭ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟ ನಂತರ ಆಶ್ವಯುಜ ನವಮಿಯಂದು ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜಿಸಿ, ವಿಜಯ ದಶಮಿಯಂದು ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂದು ಮಹಾಭಾರತ ಕತೆ ಹೇಳುತ್ತದೆ.

ನಮ್ಮೆಲ್ಲಾ ಓದುಗರಿಗೆ ಆಯುಧ ಪೂಜೆಯ ಶುಭಾಶಯಗಳು

English summary

Navratri 2023 Day 9 : Colour, Maa Siddhidatri Puja Vidhi, Mantra And Significance

Here are Navratri Day 9 colour Siddhidatri Devi mantra puja vidhiand significance, Read on,
X
Desktop Bottom Promotion