For Quick Alerts
ALLOW NOTIFICATIONS  
For Daily Alerts

ನವರಾತ್ರಿ 5ನೇ ದಿನ: 'ಸ್ಕಂದ ಮಾತೆ'ಯನ್ನು ಆರಾಧಿಸುವಾಗ ಈ ಮಂತ್ರ ಪಠಿಸಿ

|

ನವರಾತ್ರಿ ವ್ರತಾಚರಣೆ/ಹಬ್ಬದಲ್ಲಿ ದುರ್ಗಾದೇವಿಯ ಒಂಬತ್ತು ಅವತಾರಗಳಿಗೆ ಆರಾಧನೆ ಮಾಡಲಾಗುವುದು. ಪುರಾಣ ಕಥೆಗೆ ಅನುಸಾರವಾಗಿ ದೇವಿ ಹೇಗೆ ದುಷ್ಟ ಮಹಿಷಾಸುರನ ಸಂಹಾರಕ್ಕಾಗಿ ಅವತರಿಸಿ ಬಂದಳೋ ಅದೇ ಅನುಕ್ರಮದಲ್ಲಿ ದೇವಿಗೆ ಆರಾಧನೆ ಮಾಡಲಾಗುತ್ತದೆ.

ಈ ವರ್ಷ ಸೆಪ್ಟೆಂಬರ್ 26ರಿಂದ ನವರಾತ್ರಿ ಆಚರಣೆ ಮಾಡಲಾಗುತ್ತಿದೆ, ಸೆಪ್ಟೆಂಬರ್ 30ರಂದು ಸ್ಕಂದಾ ಮಾತೆಯನ್ನು ಪೂಜಿಸುತ್ತಿದ್ದೇವೆ.

ಸ್ಕಂದ ಮಾತೆಯ ಅವತಾರವು ದೇವಿಯ 5ನೇ ಅವತಾರ. ಇದನ್ನು ನವರಾತ್ರಿಯ 5ನೇ ದಿನದಂದು ಆರಾಧಿಸಲಾಗುವುದು. ಪಂಚಮಿ ತಿಥಿಯಲ್ಲಿ ಬರುವುದು. ಕಾರ್ತಿಕೇಯ ಅಥವಾ ಸ್ಕಂದ ಮಾತೆ ಎಂದು ಸಹ ಪರಿಗಣಿಸಲಾಗುವುದು. ಈ ಅವತಾರದಲ್ಲಿ ದೇವಿಯು ಸಿಂಹದ ಮೇಲೆ ಕುಳಿತು ತನ್ನ ಆರು ಮುಖದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವುದಾಗಿದೆ. ತಾಯಿಯ ಈ ಅವತಾರವು ಹೆಚ್ಚು ಶಕ್ತಿಯುತವಾದದ್ದು ಎನ್ನಲಾಗುವುದು.

worship goddess Devi Skandamata on 5th Day of Navratri Puja

ನವರಾತ್ರಿಯ 5ನೇ ದಿನ ಭಕ್ತರು ಕೆಲವು ವಿಶೇಷ ಮಂತ್ರಗಳನ್ನು ಹೇಳುವುದರ ಮೂಲಕ ದೇವಿಯನ್ನು ಆರಾಧಿಸಬೇಕು. ಆರಾಧನೆಯಿಂದ ದೇವಿಯು ಸಂತುಷ್ಟಳಾದರೆ ಭಕ್ತರಿಗೆ ಸಕಲ ಅಭಿವೃದ್ಧಿಯನ್ನು ಅನುಗ್ರಹಿಸುವಳು ಎನ್ನುವ ನಂಬಿಕೆಯಿದೆ. ನವರಾತ್ರಿಯ ಐದನೇ ದಿನ ಅಥವಾ ಸ್ಕಂದಮಾತೆಯ ಆರಾಧನೆಗೆ ಯಾವ ಮಂತ್ರಗಳನ್ನು ಹೇಳಬೇಕು ಹಾಗೂ ಆ ದಿನದ ಪೂಜಾವಿಧಾನ ಏನು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಸ್ಕಂದ ಮಾತೆಯ ಆರಾಧನೆ

ಸ್ಕಂದ ಮಾತೆಯ ಆರಾಧನೆ

ತನ್ನ ಮಗ ಕಾರ್ತಿಕೇಯ ಅಥವಾ ಸ್ಕಂದನನ್ನು ಹೊತ್ತಿರುವ ದುರ್ಗಾ ದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುವುದು. ಈ ಅವತಾರದಲ್ಲಿ ದೇವಿಯು ತುಂಬಾ ಸಂತೋಷದಿಂದ ಮತ್ತು ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಂಡಿದ್ದಾಳೆ. ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ಎರಡು ಆಶೀರ್ವಾದವನ್ನು ಪಡೆದುಕೊಳ್ಳಬಹುದು ಒಂದು ದೇವಿಯ ಆಶೀರ್ವಾದ ಹಾಗೂ ಸ್ಕಂದ ಪುತ್ರನ ಆಶೀರ್ವಾದ. ಈ ಅವತಾರಕ್ಕೆ ಪೂಜೆ ಸಲ್ಲಿಸುವುದರಿಂದ ಭಕ್ತರು ಜೀವನದ ಸಮಸ್ಯೆಯಿಂದ ಮುಕ್ತರಾಗಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುವರು.

Most Read: ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...

ಸ್ಕಂದ ಮಾತೆಯ ಪ್ರಾಮುಖ್ಯತೆ

ಸ್ಕಂದ ಮಾತೆಯ ಪ್ರಾಮುಖ್ಯತೆ

ತಾಯಿ ಸ್ಕಂದ ಮಾತೆಯು ಬುಧ ಗ್ರಹದ ಆಡಳಿತವನ್ನು ಒಳಗೊಂಡಿರುತ್ತದೆ. ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ಯಾರು ಆರಾಧನೆ ಗೈಯುತ್ತಾರೋ ಅಂತಹವರಿಗೆ ದೇವಿ ಖ್ಯಾತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ತನ್ನ ಭಕ್ತರಿಗಾಗಿ ದೇವಿ ಸಹಾನುಭೂತಿ ತೋರುವಳು. ಕುಂಡಲಿಯಲ್ಲಿ ಬುಧನು ಪ್ರತಿಕೂಲದ ಸ್ಥಾನದಲ್ಲಿದ್ದರೆ ಉಂಟಾಗುವ ಎಲ್ಲಾ ತೊಂದರೆಗಳನ್ನು ನಿವಾರಿಸುವಳು.

ನವರಾತ್ರಿಯ 5ನೇ ದಿನದ ಸ್ಕಂದ ಮಾತೆಯ ಪೂಜೆ

ನವರಾತ್ರಿಯ 5ನೇ ದಿನದ ಸ್ಕಂದ ಮಾತೆಯ ಪೂಜೆ

ಸ್ಕಂದ ಮಾತೆಯು ಕೆಂಪು ಬಣ್ಣದ ಹೂವು, ವಿಶೇಷವಾಗಿ ಗುಲಾಬಿ ಹೂವನ್ನು ಪ್ರೀತಿಸುತ್ತಾಳೆ. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದನ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ನವರಾತ್ರಿಯ ಐದನೇ ದಿನ ದೇವಿಗೆ ಷೋಡೋಸೋಪಚಾರವನ್ನು ಅರ್ಪಿಸಿ, ಆರತಿ ಬೆಳಗುವುದರ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸುತ್ತಾರೆ. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.

ನವರಾತ್ರಿಯ 5ನೇ ದಿನಕ್ಕೆ ಸ್ಕಂದ ಮಾತೆಗೆ ಹೇಳುವ ಮಂತ್ರಗಳು

ನವರಾತ್ರಿಯ 5ನೇ ದಿನಕ್ಕೆ ಸ್ಕಂದ ಮಾತೆಗೆ ಹೇಳುವ ಮಂತ್ರಗಳು

"ಓಂ ದೇವಿ ಸ್ಕಂದಮಾತಾಯ ನಮಃ

ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ

ಶುಭದಾಸ್ತು ಸದಾದೇವಿ ಸ್ಕಂದ ಮಾತಾ ಯಶಸ್ವಿನಿ."

Most Read: ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು

ಸ್ಕಂದ ಮಾತೆಗೆ ಹೇಳುವ ಪ್ರಾರ್ಥನೆ

ಸ್ಕಂದ ಮಾತೆಗೆ ಹೇಳುವ ಪ್ರಾರ್ಥನೆ

"ಸಿಂಹಸಂಗತ ನಿತ್ಯಂ ಪದ್ಮಾನ್ಚಿತ ಕರದ್ವಯ

ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ."

ಸ್ಕಂದ ಮಾತೆಯ ಸ್ತುತಿ

ಸ್ಕಂದ ಮಾತೆಯ ಸ್ತುತಿ

"ಯಾ ದೇವಿ ಸರ್ವಭಯತೇಶು ಮಾ ಸ್ಕಂದಮಾತಾ ರೂಪೇಣ ಸಮಷಿತಃ

ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ."

ಸ್ಕಂದ ಮಾತೆಯ ಧ್ಯಾನ

ಸ್ಕಂದ ಮಾತೆಯ ಧ್ಯಾನ

"ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ

ಸಿಂಹರುಧ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ

ಧವಲವರ್ಣ ವಿಶುದ್ಧ ಚಕ್ರಸ್ಥಿತೋಮ್ ಪಂಚಮ ದುರ್ಗಾ ತ್ರಿನೇತ್ರಮ್

ಅಭಯ ಪದ್ಮ ಯುಗ್ಮ ಕರಮ್ ದಕ್ಷಿಣ ಉರು ಪುತ್ರಧರಂ ಭಜೆಮ್

ಪತಂಬರಾ ಪರಿಧನಮ್ ಮೃದುಹಾಸ್ಯ ನಾನಾಲಂಕಾರ ಭೂಷಿತಂ

ಮಂಜಿರಾ, ಹರಾ, ಕೀರುರಾ, ಕಿಂಕಿನಿ, ರತ್ನಕುಂಡಲ ಧಾರಿಣಿಂ

ಪ್ರಫುಲ್ಲ ವಂದನಾ ಪಲ್ಲವಧಾರಣಂ ಕಾಂತಾ ಕಪೋಲಮ್ ಪಿನಾ ಪಯೋಧರಂ

ಕಾಮನಿಯಮ್ ಲಾವಣ್ಯಂ ಚಾರು ತ್ರೈವಲಿ ನಿತಾಂಬನಿಮ್."

ಸ್ಕಂದ ಮಾತೆಯ ಸ್ತೋತ್ರ

ಸ್ಕಂದ ಮಾತೆಯ ಸ್ತೋತ್ರ

"ನಮಾಮಿ ಸ್ಕಂದ ಮಾತಾ ಸ್ಕಂದಾಧಾರಿಣಿಂ

ಸಮಗ್ರತಾಸ್ವಾಸಗರಂ ಪರಪರಗಹರಾಮ್

ಶಿವಪ್ರಭ ಸಮುಜ್ವಲಾಂ ಸ್ಪೂಚ್ಚಾಶಾಶಶೇಖರಂ

ಲಲತಾರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ

ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ

ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾದ್ಭುತಂ

ಅಟಾರ್ಕಿರೋಚಿರುವಿಜಂ ವಿಕಾರ ದೋಷವಾರ್ಜಿತಂ

ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ

ನಾನಾಲಂಕಾರ ಭೂಷಿತಂ ಮೃಗೇಂದ್ರವಾಹನಗೃಜಂ

ಸುಶುದ್ಧಾತತ್ವೊಶನಮ್ ತ್ರಿವೇಂದಮರ ಭೂಷಣಂ

ಸುಧಾರ್ಮಿಕಾಪುಕಾರಿನಿ ಸುರೇಂದ್ರ ವೈರಿಗ್ರತಿನಿಮ್

ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಮ್

ಸಹಸ್ರಸೂರ್ಯರಂಜಿಕಮ್ ಧನಜ್ಜೋಗಕಾರಿಕಮ್

ಸಿಶುದ್ಧಾ ಕಾಲ ಕುಂಡಲಾ ಸುಭ್ರಿದವೃಂದಮಾಜ್ಜುಲಮ್

ಪ್ರಜಾಯಿಣಿ ಪ್ರಜಾವತಿ ನಮಾಮಿ ಮಾತರಂ ಸತೀಂ

ಸ್ವಕರ್ಮಕಾರಣೇ ಗತಿಂ ಹರಿಪ್ರಯಾಚ ಪಾರ್ವತಿಂ

ಅನಂತಶಕ್ತಿ ಕಾಂತಿದಾಮ್ ಯಶೋರ್ಥಭಕ್ತಿಮುಕ್ತಿದಾಮ್

ಪುನಃ ಪುನಾರ್ಜಗದ್ದಿತಮ್ ನಮಾಮ್ಯಮ್ ಸುರಾರ್ಚಿತಮ್

ಜಯೇಶ್ವರಿ ತ್ರಿಲೋಚನೆ ಪ್ರಸಿದ್ ದೇವಿ ಪಾಹಿಮಾಮ್."

ಸ್ಕಂದ ಮಾತೆಯ ಕವಾಚ್

ಸ್ಕಂದ ಮಾತೆಯ ಕವಾಚ್

"ಏಮ್ ಬಿಜಾಲಿಂಕಾ ದೇವಿ ಪದ್ಯುಗ್ಮಧರಾಪರ

ಹರಿದಯಾಮ್ ಪಾತು ಸ ದೇವಿ ಕಾರ್ತಿಕೇಯಾಯುತ

ಶ್ರೀ ಹ್ರಿಮ್ ಹುಮ್ ಏಮ್ ದೇವಿ ಪರ್ವಸ್ಯಾ ಪತು ಸರ್ವದಾ

ಸರ್ವಾಂಗ ಮೇ ಸದಾ ಪಾತು ಸ್ಕಂದಮಾತಾ ಪುತ್ರಪ್ರದಾ

ವನವನಾಮೃತೇಂ ಹಮ್ ಫತ್ ಬಿಜಾ ಸಮಾನ್ವಿತ

ಉತ್ತರಸ್ಯಾ ತಥಗ್ನೇ ಚಾ ವಾರುಣೆ ನೈರಿತೈವತು

ಇಂದ್ರಾಣಿ ಭೈರವಿ ಚೈವಾಸಿತಂಗಿ ಚಾ ಸಂಹಾರಿಣಿ

ಸರ್ವದಾ ಪತು ಮಮ್ ದೇವಿ ಚನ್ಯಾನ್ಯಸು ಹಿ ದೀಕ್ಷು ವೈ."

ಐದನೇ ದಿನದ ಪ್ರಾಮುಖ್ಯತೆ

ಐದನೇ ದಿನದ ಪ್ರಾಮುಖ್ಯತೆ

ನವರಾತ್ರಿಯ ಐದನೇ ದಿನ ಮಾಡಿದ ಮಾತೆಯ ಪೂಜೆಯಿಂದಾಗಿ ಭಕ್ತರ ಹೃದಯವು ಶುದ್ಧವಾಗುವುದು. ಅಲ್ಲದೆ ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುವಳು. ದೇವಿಯ ಆರಾಧನೆಯಿಂದ ಭಕ್ತರು ಪ್ರಖ್ಯಾತಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಅಲ್ಲದೆ ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುವರು.

ನವರಾತ್ರಿಯ ಐದನೇ ದಿನದ ಪೂಜೆಯ ದಿನವು ಮಹಾಲಕ್ಷ್ಮಿಯ ಎರಡನೇ ಪೂಜೆಯಾಗಿರುತ್ತದೆ. ಆದ್ದರಿಂದ ನವರಾತ್ರಿಯ ಐದನೇ ದಿನ ಸಂಪತ್ತು ಮತ್ತು ಖ್ಯಾತಿಗಾಗಿ ದೇವಿಯನ್ನು ಆರಾಧಿüಸಬಹುದು.

English summary

Navratri 2022 Day 5, Colour, Skanda Mata Puja Vidhi, Timings, Mantra, Muhurat, Vrat Katha, significance in kannada

Devi Skandamata is worshipped on the fifth day of Navratri puja. The term signifies that she is the Mother of Lord Karthikeya or Skanda. Mata Skandamata is mounted on a lion and she carried the small baby Skanda with six faces on her laps.
X
Desktop Bottom Promotion