For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021: ನವರಾತ್ರಿ ಮಹತ್ವ, ಹಿನ್ನೆಲೆ ಹಾಗೂ ಒಂಬತ್ತು ಬಣ್ಣಗಳ ಪ್ರಾಮುಖ್ಯತೆ

|

ಹಬ್ಬಗಳ ತವರೂರಾದ ಭಾರತದಲ್ಲಿ ನವರಾತ್ರಿ ಒಂಬತ್ತು ದಿನಗಳ ಸುದೀರ್ಘ, ಹಿಂದೂಗಳಿಗೆ ಅತ್ಯಂತ ಶುಭಕರ ದಿನಗಳು ಇದಾಗಿದೆ. ಶುಭ ಕಾರ್ಯಗಳಿಗೆ ನಾಂದಿಹಾಡಲು ಇದು ಸುಸಮಯ. ಈ ಹಬ್ಬದಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಅಭಿವ್ಯಕ್ತಿಯ ವಿಶಿಷ್ಟವಾದ ಸದ್ಗುಣವನ್ನು ತೋರಿಸುತ್ತದೆ ಮತ್ತು ಆಧ್ಯಾತ್ಮಿಕ ಮತ್ತು ಲೌಕಿಕ ನೆರವೇರಿಕೆಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಅವಳ 9 ಅವತಾರಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ. ಒಂದು ವರ್ಷದಲ್ಲಿ ಬರುವ ಎಲ್ಲಾ ಐದು ನವರಾತ್ರಿಗಳಲ್ಲಿ (ಚೈತ್ರ, ಆಶಾಢ, ಅಶ್ವಿನಿ, ಪೌಶ್ ಮತ್ತು ಮಾಘ) ಶರದ್ ನವರಾತ್ರಿ ಅತ್ಯಂತ ಫಲಫ್ರದ, ಶುಭ ಎಂದು ಹೇಳಲಾಗುತ್ತದೆ.

Navratri Colors: Importance and Significance of Nine Colors of Navratri in Kannada

ಶರದ್ ನವರಾತ್ರಿ ಸಾಮಾನ್ಯ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. 2021ನೇ ಸಾಲಿನಲ್ಲಿ ಅಕ್ಟೋಬರ್‌ 7ರಂದು ಆರಂಭವಾಗುವ ನವರಾತ್ರಿ ಅಕ್ಟೋಬರ್‌ 14ಕ್ಕೆ ಅಂತ್ಯವಾಗಿ 15ರಂದು ವಿಜಯ ದಶಮಿ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ನಮ್ಮ ಸಂಪ್ರದಾಯ

ನಮ್ಮ ಸಂಪ್ರದಾಯ

ಶರದ್ ನವರಾತ್ರಿ ಅಶ್ವಿನಿ ಮಾದ ಪ್ರತಿಪಾದದಂದು ಪ್ರಾರಂಭವಾಗಿ ಪ್ರಕಾಶಮಾನವಾದ ಅರ್ಧ ಚಂದ್ರ ಮೂಡುವ ಹತ್ತನೇ ದಿನ ಕೊನೆಗೊಳ್ಳುತ್ತದೆ. ಹತ್ತನೇ ದಿನವನ್ನು ‘ವಿಜಯದಶಮಿ' ಅಥವಾ ‘ದಸರಾ' ಎಂದು ಕರೆಯಲಾಗುತ್ತದೆ. ಶರದ್ ನವರಾತ್ರಿಯನ್ನು ಅಶ್ವಿನಿ ತಿಂಗಳು ಅಥವಾ ಶರದ್ ತಿಂಗಳಲ್ಲಿ ಆಚರಿಸಲಾಗುತ್ತದೆ, ಇದು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ.

ನವರಾತ್ರಿ ಹಬ್ಬದ ಸಮಯದಲ್ಲಿ ಕುಟುಂಬಗಳು ಕೂಡು ಕುಟುಂಬಗಳಾಗುತ್ತದೆ, ಹಳ್ಳಿಗಳ ಜನರು ತಮ್ಮ ಮನೆಯಲ್ಲಿ ದುರ್ಗಾ ದೇವಿಯನ್ನು ಪೂಜಿಸಲು ಒಗ್ಗೂಡುತ್ತಾರೆ. ಈ ಒಂಬತ್ತು ದಿನಗಳ ಉತ್ಸವದ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದು, ಭಜನೆಗಳು ಅಥವಾ ಪವಿತ್ರ ಗೀತೆಗಳ ನಿರೂಪಣೆಗಳು ಸತತ ಒಂಬತ್ತು ದಿನಗಳ ಕಾಲ ನವರಾತ್ರಿ ಪೂಜಾ ಆಚರಣೆಗಳ ಜೊತೆ ದುರ್ಗೆಯ ಆರಾಧನೆ ನಡೆಯುತ್ತದೆ.

ಪೌರಾಣಿಕ ಮಹತ್ವ

ಪೌರಾಣಿಕ ಮಹತ್ವ

ಶ್ರೀರಾಮನು ರಾಕ್ಷಸ ರಾಜ ರಾವಣನೊಡನೆ ಯುದ್ಧಮಾಡಲು ಹೊರಡುವ ಮೊದಲು ದುರ್ಗಾ ಪೂಜೆಯನ್ನು ಪ್ರಾರಂಭಿಸಿದನು. ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ ಶ್ರೀರಾಮನು ಲಂಕೆಯ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸಿದನು. ಅದಕ್ಕಾಗಿ ಅವನು ಆರು ತಿಂಗಳು ಕಾಯುವುದಕ್ಕೆ ಇಷ್ಟಪಡಲಿಲ್ಲ. ಆದ್ದರಿಂದ ಅವನು ತಪ್ಪಾದ ಮಾಸದಲ್ಲಿ ದುರ್ಗಾ ದೇವಿ ಪೂಜೆ ಕೈಕೊಂಡನು. ಆದ್ದರಿಂದಲೇ ಅವನು ದುರ್ಗಾಪೂಜೆಯನ್ನು ಮಾಡಿದ ಮಾಸವನ್ನು 'ಅಕಾಲ್ ಬೋಧಾನ್' ಅಥವಾ ತಪ್ಪು ಮಾಸದಲ್ಲಿ ಮಾಡಿದ ಪೂಜೆ ಎಂದು ಹೇಳಲಾಗುತ್ತದೆ. ಅವನು ಪೂಜೆಯನ್ನು ಆಚರಿಸಲು ದುರ್ಗಾದೇವಿಗೆ 108 ಕಮಲ ಹೂವುಗಳನ್ನು ಅರ್ಪಿಸಿ 108 ದೀಪಗಳನ್ನು ಹಚ್ಚಿದನು. ಶ್ರೀರಾಮನು ಪೂಜೆಮಾಡುವ ಸಮಯದಲ್ಲಿ ರಾಕ್ಷಸನೊಬ್ಬನು ಒಂದು ಕಮಲವನ್ನು ಕದ್ದುಬಿಟ್ಟನು.

ಆದ್ದರಿಂದ ಪೂಜೆಯನ್ನು ಸಂಪೂರ್ಣಗೊಳಿಸಲು ಶ್ರೀರಾಮನು ಕಮಲದ ಬದಲಿಗೆ ತನ್ನ ಎರಡು ಕಣ್ಣುಗಳಲ್ಲಿ ಒಂದು ಕಣ್ಣನ್ನು ಅರ್ಪಿಸಲು ಸಿದ್ಧನಾದನು. ಆದರೆ ಅವನು ಹಾಗೆ ಮಾಡುವ ಮೊದಲೇ ದೇವಿಯು ಶ್ರೀರಾಮನ ಮುಂದೆ ಪ್ರತ್ಯಕ್ಷ್ಯಳಾಗಿ ಅವನು ಯುದ್ಧದಲ್ಲಿ ವಿಜಯಶಾಲಿಯಾಗಲೆಂದು ಹರಸಿದಳು. ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು ನವರಾತ್ರಿಯ ಹತ್ತನೇ ದಿವಸ ಶ್ರೀರಾಮನು ರಾವಣನನ್ನು ಸಂಹರಿಸಿದನು. ಈಗಲೂ ಕೂಡ ದಸರಾ ಹಬ್ಬದ ಹತ್ತನೆಯ ದಿವಸ ಶ್ರೀರಾಮನ ಐತಿಹಾಸಿಕ ವಿಜಯವನ್ನು ಆಚರಿಸಲು ರಾವಣನ ವಿಗ್ರಹವನ್ನು ಸೃಷ್ಟಿಸಿ ಸುಡುತ್ತಾರೆ.

ಶರದ್ ನವರಾತ್ರಿಯ 9 ದಿನಗಳ ಆಚರಣೆ ಹೀಗಿರಲಿ:

ಶರದ್ ನವರಾತ್ರಿಯ 9 ದಿನಗಳ ಆಚರಣೆ ಹೀಗಿರಲಿ:

● ದಿನ 1 - ಪ್ರತಿಪಾದ- ಶೈಲಪುತ್ರಿ ಪೂಜೆ - ದುರ್ಗಾದೇವಿಯ ಮೊದಲ ರೂಪ ಶೈಲಪುತ್ರಿ ಚಂದ್ರನನ್ನು ಪ್ರತಿನಿಧಿಸುತ್ತದೆ. ಅವಳನ್ನು ಆರಾಧಿಸುವುದರಿಂದ ಯಾವುದೇ ಕೆಟ್ಟ ಪರಿಣಾಮಗಳು ಅಥವಾ ಶಕುನಗಳನ್ನು ತೊಡೆದುಹಾಕಲು ಸಹಾಯವಾಗುತ್ತದೆ.

● ದಿನ 2- ದ್ವಿತೀಯ- ಬ್ರಹ್ಮಚಾರಿಣಿ ಪೂಜೆ - ಜ್ಯೋತಿಷ್ಯದ ಪ್ರಕಾರ ಬ್ರಹ್ಮಚಾರಿಣಿ ಮಂಗಳ ಗ್ರಹವನ್ನು ನಿಯಂತ್ರಿಸುತ್ತದೆ ಮತ್ತು ಶುದ್ಧ ಹೃದಯದಿಂದ ಪೂಜಿಸಿದರೆ ಯಾವುದೇ ಕೆಟ್ಟ ಪರಿಣಾಮಗಳನ್ನು ನಿವಾರಿಸುತ್ತಾಳೆ.

● ದಿನ 3 -ತೃತೀಯ - ಚಂದ್ರಘಂಟ ಪೂಜೆ - ದೇವಿ ಚಂದ್ರಘಟ ಶುಕ್ರ ಗ್ರಹದಲ್ಲಿ ಪ್ರಾಬಲ್ಯ ಹೊಂದಿದೆ. ಧೈರ್ಯ ಮತ್ತು ನಿರ್ಭಯತೆಯನ್ನು ನೀಡುತ್ತದೆ.

● ದಿನ 4 - ಚತುರ್ಥಿ - ಕುಶ್ಮಾಂಡ ಪೂಜೆ - ಕುಶ್ಮಂಡಾ ದೇವಿ ಸೂರ್ಯನನ್ನು ಪ್ರತಿನಿಧಿಸುತ್ತಾಳೆ. ಭವಿಷ್ಯದ ಯಾವುದೇ ದುಷ್ಪರಿಣಾಮಗಳನ್ನು ನಿವಾರಿಸುತ್ತಾಳೆ.

● ದಿನ 5 - ಪಂಚಮಿ - ಸ್ಕಂದಮಾತಾ ಪೂಜೆ - ಸ್ಕಂದಮಾತಾ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ಈಕೆ ತನ್ನ ಭಕ್ತನ ಬಗ್ಗೆ ತುಂಬಾ ಸಹಾನುಭೂತಿ ಹೊಂದಿದ್ದಾಳೆ.

● ದಿನ 6 - ಷಷ್ಠಿ - ಕಾತ್ಯಾಯನಿ ಪೂಜೆ - ದುರ್ಗಾ ಮಾತೆ ಕಾತ್ಯಾಯನಿ ಗುರು ಗ್ರಹವನ್ನು ನಿಯಂತ್ರಿಸುತ್ತಾರೆ. ಅವಳು ತನ್ನ ಆರಾಧಕರಿಗೆ ಧೈರ್ಯ ಮತ್ತು ಪರಾಕ್ರಮವನ್ನು ನೀಡುತ್ತಾಳೆ.

● ದಿನ 7 - ಸಪ್ತಮಿ - ಕಾಳರಾತ್ರಿ ಪೂಜೆ - ಕಾಳರಾತ್ರಿ ಶನಿ ಗ್ರಹವನ್ನು ನಿಯಂತ್ರಿಸುತ್ತದೆ ಮತ್ತು ಶೌರ್ಯವನ್ನು ಸಂಕೇತಿಸುತ್ತದೆ.

● ದಿನ 8 - ಅಷ್ಟಮಿ - ಮಹಾಗೌರಿ ಪೂಜೆ - ಮಹಾಗೌರಿ ರಾಹು ಗ್ರಹದ ನಿಯಂತ್ರಕ ಮತ್ತು ಹಾನಿಕಾರಕ ಪರಿಣಾಮಗಳನ್ನು ನಿರ್ಮೂಲನೆಗೊಳಿಸುತ್ತದೆ.

● ದಿನ 9 - ನವಮಿ - ಸಿದ್ಧಿಧಾತ್ರಿ ಪೂಜೆ - ಸಿದ್ಧಿಧಾತ್ರಿ ಕೇತು ಗ್ರಹದಲ್ಲಿ ಪ್ರಾಬಲ್ಯ ಸಾಧಿಸಿ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ನೀಡುತ್ತದೆ.

ಹೀಗೆ ನವದುರ್ಗೆಯರು ನವ ಗ್ರಹಗಳನ್ನು ನಿಯಂತ್ರಿಸಿ, ಅವಳನ್ನು ಪೂಜಿಸುವ ಭಕ್ತರಿಗೆ ಸದಾ ನಮ್ಮ ಸುಖ, ಶಾಂತಿ ನೆಮ್ಮದಿ ನೀಡುತ್ತಾಳೆ ಎಂದು ನಂಬಲಾಗಿದೆ.

ನವರಾತ್ರಿಯಲ್ಲಿ ಬಣ್ಣಗಳ ಪ್ರಾಮುಖ್ಯತೆ

ನವರಾತ್ರಿಯಲ್ಲಿ ಬಣ್ಣಗಳ ಪ್ರಾಮುಖ್ಯತೆ

ಇದಲ್ಲದೆ ನವರಾತ್ರಿ ಹಬ್ಬ ಪ್ರತಿ ದಿನವೂ ಒಂದು ನಿರ್ದಿಷ್ಟ ಬಣ್ಣಕ್ಕೆ ಸಂಬಂಧಿಸಿದೆ. ನವದುರ್ಗೆಯರನ್ನು ನವಬಣ್ಣಗಳು ಸಂಕೇತಿಸುತ್ತದೆ, ಈ ಬಣ್ಣವನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ನವರಾತ್ರಿ ಹಬ್ಬದ ಸಮಯದಲ್ಲಿ ಈ ಬಣ್ಣಗಳನ್ನು ಬಳಸುವುದರಿಂದ ಅಥವಾ ಈ ಬಣ್ಣಗಳ ಬಟ್ಟೆ ಧರಿಸುವುದರಿಂದ ನಿಮಗೆ ಅದೃಷ್ಟ ಸಿಗುತ್ತದೆ ಎಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿಯೇ ಒಂಬತ್ತು ದಿನಗಳ ಕಾಲ ಆಯಾ ಅವತಾರಗಳಿಗೆ ಸಂಬಂಧಿಸಿದಂತೆ ತಾಯಿಗೆ ಲೇಪನ, ವಸ್ತ್ರಾಲಂಕಾರ ಹಾಗೂ ಪೂಜೆಯನ್ನು ಸಲ್ಲಿಸಲಾಗುವುದು. ಭಕ್ತರ ಪಾಲಕಳಾದ ದುರ್ಗಾದೇವಿಯ ಒಂಬತ್ತು ದಿನಗಳ ವಿಶೇಷ ಅವತಾರ ಹಾಗೂ ಅವುಗಳ ಬಣ್ಣಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ:

ಪ್ರತಿಪಾದ - ಶೈಲಪುತ್ರಿ - ಹಳದಿ

ದ್ವಿತಿಯಾ - ಬ್ರಹ್ಮಚಾರಿಣಿ- ಹಸಿರು

ತೃತೀಯ - - ಚಂದ್ರಘಂಟ - ಬೂದು

ಚತುರ್ಥಿ - ಕುಶ್ಮಾಂಡ- ಕಿತ್ತಳೆ

ಪಂಚಮಿ - ಸ್ಕಂದಮಾತಾ - ಬಿಳಿ

ಷಷ್ಠಿ - ಕಾತ್ಯಾಯನಿ - ಕೆಂಪು

ಸಪ್ತಮಿ- ಕಾಳರಾತ್ರಿ- ರಾಯಲ್ ಬ್ಲೂ

ಅಷ್ಟಮಿ - ಮಹಾಗೌರಿ - ಗುಲಾಬಿ

ನವಮಿ- ಸಿದ್ಧಿಧಾತ್ರಿ- ನೇರಳೆ

ಬೋಲ್ಡ್‌ಸ್ಕೈನ ಸಮಸ್ತ ಓದುಗರಿಗೆ ಶರದ್ ನವರಾತ್ರಿಯ ಶುಭಾಶಯಗಳು. ದುರ್ಗಾ ದೇವಿಯು ನಿಮಗೆ ಶಾಂತಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ.

English summary

Navratri Colors: Importance and Significance of Nine Colors of Navratri in Kannada

Among all the five Navratras (Chaitra, Aashad, Ashwin, Paush and Magh) that fall in a year, Sharad Navratri is the most essential one. Apart from that, Magh, Ashadha & Paush are known as Gupt Navratris.
X
Desktop Bottom Promotion