For Quick Alerts
ALLOW NOTIFICATIONS  
For Daily Alerts

Navratri 2022 Mantra : ನವರಾತ್ರಿಯಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಎಲ್ಲಾ ಕಷ್ಟಗಳು ದೂರಾಗುವುದು

|

ದೇಶದ ಪ್ರಮುಖ ಆಚರಣೆಗಳಲ್ಲಿ ಒಂದಾದ ನವರಾತ್ರಿ ಅಕ್ಟೋಬರ್ 15ರಿಂದ ಪ್ರಾರಂಭವಾಗಲಿದೆ. 9 ದಿನಗಳ ಕಾಲ ನಡೆಯುವ ನವರಾತ್ರಿ ಆಚರಣೆಯಲ್ಲಿ ದುರ್ಗೆಯ ಒಂಭತ್ತು ಅವತಾರಗಳನ್ನು ಪೂಜಿಸಲಾಗುವುದು. ದೇವಿಯ ಒಂಭತ್ತು ಸ್ವರೂಪಗಳನ್ನು ಆರಾಧಿಸುವುದರಿಂದ ಒಂದೊಂದು ರೀತಿಯ ಪ್ರಯೋಜನವಿದೆ. ದೇವಿಯ ಪ್ರತಿಯೊಂದು ಸ್ವರೂಪವನ್ನು ಪೂಜಿಸುವಾಗ ಪಠಿಸಲು ಮಂತ್ರಗಳಿದ್ದು, ಪೂಜೆ ಮಾಡುವಾಗ ಈ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಫಲ ಸಿಗುವುದು, ನಿಮ್ಮ ಸಂಕಲ್ಪ ನೆರವೇರುವುದು.

Navratri 2022

ನವರಾತ್ರಿಯಲ್ಲಿ ಈ ಮಂತ್ರಗಳನ್ನು ಪಠಿಸಿ:

1. ನವರಾತ್ರಿ ಮೊದಲ ದಿನದ ದೇವೀ ಸ್ವರೂಪ ಶೈಲಪುತ್ರಿ ಮಂತ್ರ …

1. ನವರಾತ್ರಿ ಮೊದಲ ದಿನದ ದೇವೀ ಸ್ವರೂಪ ಶೈಲಪುತ್ರಿ ಮಂತ್ರ …

ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ |

ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್

ನವರಾತ್ರಿಯ ಮೊದಲ ದಿನ ದೇವಿ ಶೈಲಪುತ್ರಿಯಯನ್ನು ಆರಾಧಿಸಲಾಗುವುದು. ಈ ಮಂತ್ರಗಳನ್ನು ಹೇಳಿ ಶೈಲಪುತ್ರಿಯನ್ನು ಪೂಜಿಸುವುದರಿಂದ ನಿಮ್ಮ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ.

2. ಬ್ರಹ್ಮಚಾರಿಣಿ ದೇವಿಯ ಮಂತ್ರ

2. ಬ್ರಹ್ಮಚಾರಿಣಿ ದೇವಿಯ ಮಂತ್ರ

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ

ದಾಧನಾ ಕರ್‌ ಪದ್ಮಭಯಮಕ್ಷಾಮಾಲಾ ಕಮಂಡಲೋ

ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ

ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಈ ಮಂತ್ರಗಳನ್ನು ಹೇಳಿ ಬ್ರಹ್ಮಚಾರಿಣಿಯನ್ನು ಆರಾಧಿಸುವುದರಿಂದ ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ನೀವು ಬಯಸಿದ್ದು ನೆರವೇರುವುದು, ಮನಸ್ಸಿಗೆ ಶಾಂತಿ ದೊರೆಯುವುದು.

3. ಮೂರನೇ ದಿನ ಪಠಿಸಬೇಕಿರುವ ಮಂತ್ರಗಳು

3. ಮೂರನೇ ದಿನ ಪಠಿಸಬೇಕಿರುವ ಮಂತ್ರಗಳು

ದೇವಿ ಚಂದ್ರಘಂಟಾ ಮಂತ್ರಗಳು

ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವಿ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವಾರುಧ್ ಚಂಡಕೊಪಸ್ತ್ರಕೈರ್ಯುತ

ಪ್ರಸಾದಂ ತನುತೆ ಮಧ್ಯಮ ಚಂದ್ರಘಂಟತಿ ವಿಶ್ರೂತಾ

ಚಂದ್ರಘಂಟ ದೇವಿಯು ಜಗತ್ತಿನ ಸುಖ ಹಾಗೂ ಜೀವನದಲ್ಲಿ ಸಂತೋಷವನ್ನು ನೀಡುವವಳು ಎಂದು ನಂಬಲಾಗಿದೆ. ಚಂದ್ರಘಂಟ ದೇವಿಯು ನಿಮಗೆ ಆಶೀರ್ವದಿಸಿದರೆ ಆಗ ನಿಮಗೆ ಎಲ್ಲಾ ರೀತಿಯ ಸಂಪತ್ತು ಹಾಗೂ ಸಮೃದ್ಧಿಯು ಸಿಗುವುದು. ಈ ದೇವಿಯ ಆಶೀರ್ವಾದವಿದ್ದರೆ ನಿಮಗೆ ಯಾವತ್ತಿಗೂ ಆಹಾರದ ಕೊರತೆಯಾಗದು.

4. ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಮಂತ್ರ ಪಠಿಸಿ

4. ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಮಂತ್ರ ಪಠಿಸಿ

ಯಾ ದೇವಿ ಸರ್ವಭೂತೇಷು

ಮಾಂ ಕೂಷ್ಮಾಂಡ ರೂಪೇಣ ಸಂಸ್ಥಿತಾ|

ನಮಸ್ತ್ಯೈ ನಮಸ್ತೈ ನಮಸ್ತೈ ನಮೋ ನಮಃ||

​ಕೂಷ್ಮಾಂಡ ದೇವಿ ಉಪಾಸನ ಮಂತ್ರ

ಕುಸ್ತಿತಃ ಕೂಷ್ಮಾ

ಕೂಷ್ಮಾ - ತ್ರಿವಿಧತಾಪಯುತಃ

ಸಂಸಾರಃ, ಸ ಅಂಡೇ ಮಾಂಸಪೇಶ್ಯಾಮುದರರೂಪಾಯಾಂ

ಯಸ್ಯಾಃ ಸಾ ಕೂಷ್ಮಾಂಡ

ಕೂಷ್ಮಾಂಡಾ ದೇವಿಯನ್ನು ಪೂಜಿಸುವುದರಿಂದಾಗಿ ನಿಮ್ಮ ಜಾತಕದಲ್ಲಿ ಗ್ರಹ ದೋಷವಿದ್ದರೆ ದೂರಾಗುವುದು, ನೀವು ಸಮಾಜದಲ್ಲಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗುವುದು.

5. ಸ್ಕಂದಾ ಮಾತಾ ಮಂತ್ರ

5. ಸ್ಕಂದಾ ಮಾತಾ ಮಂತ್ರ

"ಓಂ ದೇವಿ ಸ್ಕಂದಮಾತಾಯ ನಮಃ

ಓಂ ದೇವಿ ಸ್ಕಂದಮಾತಾಯೈ ನಮಃ

ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ ಶುಭದಾಸ್ತು

ಸದಾದೇವಿ ಸ್ಕಂದ ಮಾತಾ ಯಶಸ್ವಿನಿ."

ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ಯಾರು ಆರಾಧನೆ ಮಾಡುತ್ತಾರೋ ಅಂತಹವರಿಗೆ ಸ್ಕಂದಾ ಮಾತೆ ಖ್ಯಾತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.

6. ಕಾತ್ಯಾಯಿನಿ ದೇವಿಯ ಮಂತ್ರ

6. ಕಾತ್ಯಾಯಿನಿ ದೇವಿಯ ಮಂತ್ರ

"ಓಂ ದೇವಿ ಕಾತ್ಯಾಯಿನಿ ನಮಃ

ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ

ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ."

ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹ ದೋಷವಿದ್ದರೆ ಅದಕ್ಕೆ ಪರಿಹಾರ ಸಿಗುವುದು . ಗುರುಬಲದಿಂದಾಗಿ ಎಲ್ಲಾ ಒಳಿತಾಗುವುದು.

7. ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಮಂತ್ರ

7. ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಮಂತ್ರ

ಓಂ ದೇವಿ ಕಾಲರಾತ್ರೈ ನಮಃ

ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ

ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ

ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ

ಯಾರಿಗೆ ಶನಿ ದೋಷ ಅತವಾ ಶನಿ ಸಾಡೇಸಾತಿ ಇದೆಯೋ ಅವರು ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.

8. ದೇವಿ ಮಹಾಗೌರಿಯ ಮಂತ್ರ

8. ದೇವಿ ಮಹಾಗೌರಿಯ ಮಂತ್ರ

ಓಂ ದೇವಿ ಮಹಾಗೌರೈ ನಮಃ

ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ

ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಯಶಸ್ಸು ನೀಡುತ್ತಾಳೆ.

9. ಸಿದ್ಧಿದಾತ್ರಿ ದೇವಿಯ ಮಂತ್ರ

9. ಸಿದ್ಧಿದಾತ್ರಿ ದೇವಿಯ ಮಂತ್ರ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ

ಯಕ್ಷದ್ಯರಸುರೈರಮಾರೈರಪಿ

ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ

ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿದ್ದಾಳೆ. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಕೇತು ದೋಷ ನಿವಾರಣೆಯಾಗುವುದು.

English summary

Navratri 2023 Mantra: Mantras For 9-Day Festival, Know Meaning And Significance in kannada

Navratri 2022 Mantra: Here are Mantras For 9-Day Festival, Know Meaning And Significance in kannada,
X
Desktop Bottom Promotion