For Quick Alerts
ALLOW NOTIFICATIONS  
For Daily Alerts

ನವರಾತ್ರಿಯಲ್ಲಿ ಈ ಪರಿಹಾರ ಮಾಡಿದರೆ ಮನೆಯಲ್ಲಿ ನೆಮ್ಮದಿ, ಸಂಪತ್ತು ವೃದ್ಧಿಸುವುದು

|

ಸೆಪ್ಟೆಂಬರ್ 26ಕ್ಕೆ ನವರಾತ್ರಿ ಪ್ರಾರಂಭ. ನವರಾತ್ರಿ ದುರ್ಗಾ ದೇವಿಯ ಒಂಭತ್ತು ಅವತಾರಗಳನ್ನು ಪೂಜಿಸಲಾಗುವುದು. ನವರಾತ್ರಿಯಲ್ಲಿ ದೇವಿಯನ್ನು ಪೂಜಿಸಿದರೆ ದೇವಿಯ ಕೃಪೆಯಿಂದ ನಮ್ಮ ಬದುಕಿನಲ್ಲಿರುವ ಕಷ್ಟಗಳೆಲ್ಲಾ ದೂರಾಗುವುದು ಎಂಬುವುದು ಅವಳನ್ನು ನಂಬಿರುವ ಭಕ್ತರ ಅಚಲ ನಂಬಿಕೆ.

ನಾವೆಲ್ಲಾ ನಮ್ಮ ವೃತ್ತಿ ಬದುಕು ಚೆನ್ನಾಗಿ ಆಗಬೇಕು, ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಲಾಭ ದೊರೆಯಬೇಕು, ಮನೆಯಲ್ಲಿ ನೆಮ್ಮದಿ ಇರಬೇಕು, ಯಾವುದೇ ಸಮಸ್ಯೆಗಳಿದ್ದರೆ ಅದೆಲ್ಲಾ ದೇವಿಯ ಕೃಪೆಯಿಂದ ದೂರಾಗಬೇಕು ಎಂದು ಯೋಚಿಸುತ್ತೇವೆ. ಆದರೆ ದಿನನಿತ್ಯದ ಬದುಕಿನಲ್ಲಿ ಎಲ್ಲವೂ ನಾವು ಯೋಚಿಸಿದಂತೆ ಇರುವುದಿಲ್ಲ, ನಾನಾ ಸಮಸ್ಯೆಗಳು ಎದುರಾಗುತ್ತೆ, ಆದರೆ ದೇವರ ಅನುಗ್ರಹ ನಮ್ಮ ಜೊತೆ ಇದ್ದರೆ ಎಲ್ಲಾ ಕಷ್ಟಗಳು ದೂರ ಸರಿಯುತ್ತದೆ. ಈ ನವರಾತ್ರಿಯಲ್ಲಿ ದುರ್ಗೆಯನ್ನು ಒಲಿಸಿಕೊಳ್ಳಲು ನೀವು ಕೆಲವೊಂದು ಪರಿಹಾರ ಮಾಡಿದರೆ ಕಷ್ಟಗಳು ದೂರಾಗುವುದು, ಸಂಪತ್ತು ವೃದ್ಧಿಸುವುದು.

ನವರಾತ್ರಿಯಲ್ಲಿ ಏನೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ:

ವೃತ್ತಿ ಜೀವನದ ಪ್ರಗತಿಗಾಗಿ ಪರಿಹಾರ

ವೃತ್ತಿ ಜೀವನದ ಪ್ರಗತಿಗಾಗಿ ಪರಿಹಾರ

* ನವರಾತ್ರಿಯಲ್ಲಿ ವೀಳ್ಯೆದೆಲೆ, ಹೂವಿನ ಹಾರ ಹಾಗೂ ಕೆಂಪು ಹೂಗಳನ್ನು ಹನುಮಂತನಿಗೆ ಅರ್ಪಿಸಿ ಪೂಜಿಸಿ.

* ನವರಾತ್ರಿಯ ಒಂಭತ್ತನೇ ದಿನ ಮನೆಯಲ್ಲಿ ಪೂಜೆ ಮಾಡಿ ತುಪ್ಪದ ದೀಪ ಹಚ್ಚಿ 5 ಲವಂಗ ಅದಕ್ಕೆ ಹಾಕಿ. ತುಪ್ಪದ ದೀಪವನ್ನು ಬೆಳಗ್ಗೆ-ಸಂಜೆ ಹಚ್ಚಬೇಕು.

ಆರ್ಥಿಕ ಸಮೃದ್ಧಿಗಾಗಿ

ಆರ್ಥಿಕ ಸಮೃದ್ಧಿಗಾಗಿ

ದುರ್ಗಾ ನವರಾತ್ರಿಯಲ್ಲಿ ಶ್ರೀಯಂತ್ರ ಖರೀದಿಸಿ, ಬೆಳ್ಳಿಯ ನಾಣ್ಯ ಖರೀದಿಸುವುದು ಕೂಡ ಶುಭವಾಗಿದೆ. ಕುಬೇರ ಯಂತ್ರವನ್ನು ತಂದು ದುರ್ಗೆಯ ಫೋಟೋದ ಕೆಳಗಡೆ ಇಡಿ.

ಮನೆಯ ನೆಮ್ಮದಿಗಾಗಿ

ಮನೆಯ ನೆಮ್ಮದಿಗಾಗಿ

ನವರಾತ್ರಿಯಲ್ಲಿ ಪ್ರತಿದಿನ ಶ್ರೀಸೂಕ್ತಂ ಪಠಿಸಿ.

|| ಶ್ರೀ ಸೂಕ್ತಮ್ ||

ಓಂ || ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್‌ |

ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ || 1 ||

ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್‌ |

ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಮ್‌ || 2 ||

ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದಪ್ರಬೋಧಿನೀಮ್‌ |

ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾ ದೇವೀಜುಷತಾಮ್‌ || 3 ||

ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್‌ |

ಪದ್ಮೇ ಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಮ್‌ || 4 ||

ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಮ್‌ |

ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಽಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ || 5 ||

ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ |

ತಸ್ಯ ಫಲಾನಿ ತಪಸಾ ನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ||6 ||

ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |

ಪ್ರಾದುರ್ಭೂತೋಽಸ್ಮಿ ರಾಷ್ಟ್ರೇಽಸ್ಮಿನ್‌ ಕೀರ್ತಿಮೃದ್ಧಿಂ ದದಾತು ಮೇ || 7 ||

ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಮ್‌ |

ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್‌ || 8 ||

ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಪಾಂ ಕರೀಷಿಣೀಮ್‌ |

ಈಶ್ವರೀ‌ಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್‌ || 9 ||

ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ |

ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ || 10 ||

ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ |

ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಮ್‌ || 11 ||

ಆಪಃ ಸೃಜಂತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ |

ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ || 12 ||

ಆರ್ದ್ರಾಂ ಪುಷ್ಕರಿಣೀಂ ಪುಷ್ಟಿಂ ಪಿಂಗಲಾಂ ಪದ್ಮಮಾಲಿನೀಮ್‌ |

ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ || 13 ||

ಆರ್ದ್ರಾಂ ಯಃ ಕರಿಣೀಂ ಯಷ್ಟಿಂ ಸುವರ್ಣಾಂ ಹೇಮಮಾಲಿನೀಮ್‌ |

ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ || 14 ||

ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್‌ |

ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋಽಶ್ವಾನ್, ವಿಂದೇಯಂ ಪುರುಷಾನಹಮ್‌ ||15 ||

**

ಯಃ ಶುಚಿಃ ಪ್ರಯತೋ ಭೂತ್ವಾ ಜುಹುಯಾದಾಜ್ಯ ಮನ್ವಹಮ್‌ |

ಶ್ರಿಯಃ ಪಂಚದಶರ್ಚಂ ಚ ಶ್ರೀಕಾಮಸ್ಸತತಂ ಜಪೇತ್‌ || 1 ||

ಪದ್ಮಾನನೇ ಪದ್ಮ ಊರೂ ಪದ್ಮಾಕ್ಷೀ ಪದ್ಮಸಂಭವೇ |

ತ್ವಂ ಮಾಂ ಭಜಸ್ವ ಪದ್ಮಾಕ್ಷೀ ಯೇನ ಸೌಖ್ಯಂ ಲಭಾಮ್ಯಹಮ್‌ || 2 ||

ಅಶ್ವದಾಯೀ ಚ ಗೋದಾಯೀ ಧನದಾಯೀ ಮಹಾಧನೇ |

ಧನಂ ಮೇ ಜುಷತಾಂ ದೇವಿ ಸರ್ವಕಾಮಾಂಶ್ಚ ದೇಹಿ ಮೇ || 3 ||

ಪದ್ಮಾನನೇ ಪದ್ಮವಿಪದ್ಮಪತ್ರೇ ಪದ್ಮಪ್ರಿಯೇ ಪದ್ಮದಲಾಯತಾಕ್ಷಿ |

ವಿಶ್ವಪ್ರಿಯೇ ವಿಷ್ಣುಮನೋಽನುಕೂಲೇ ತ್ವತ್ಪಾದಪದ್ಮಂ ಮಯಿ ಸಂನಿಧತ್ಸ್ವ || 4 ||

ಪುತ್ರ ಪೌತ್ರ ಧನಂ ಧಾನ್ಯಂ ಹಸ್ತ್ಯಶ್ವಾದಿಗವೇ ರಥಮ್‌ |

ಪ್ರಜಾನಾಂ ಭವಸಿ ಮಾತಾ ಆಯುಷ್ಮಂತಂ ಕರೋತುಮಾಮ್‌ || 5 ||

ಧನಮಗ್ನಿರ್ಧನಂ ವಾಯುರ್ಧನಂ ಸೂರ್ಯೋ ಧನಂ ವಸುಃ |

ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನುತೇ ||6 ||

ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ |

ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತು ಸೋಮಿನೀ || 7 ||

ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾಮತಿಃ |

ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಶ್ರೀಸೂಕ್ತಂ ಜಪೇತ್ಸದಾ || 8 ||

ವರ್ಷಂತು ತೇ ವಿಭಾವರಿದಿವೋ ಅಭ್ರಸ್ಯ ವಿದ್ಯುತಃ |

ರೋಹಂತು ಸರ್ವಬೀಜಾನ್ಯವ ಬ್ರಹ್ಮದ್ವಿಷೋ ಜಹಿ || 9 ||

ಯಾ ಸಾ ಪದ್ಮಾಸನಸ್ಥಾ ವಿಪುಲಕಟಿತಟೀ ಪದ್ಮಪತ್ರಾಯತಾಕ್ಷೀ,

ಗಂಭೀರಾವರ್ತನಾಭಿಸ್ತನಭರನಮಿತಾ ಶುಭ್ರವಸ್ತ್ರೋತ್ತರೀಯಾ |

ಲಕ್ಷ್ಮೀರ್ದಿವ್ಯೈರ್ಗಜೇಂದ್ರೈರ್ಮಣಿಗಣಖಚಿತೈಃ ಸ್ಥಾಪಿತಾ ಹೇಮಕುಂಭೈಃ,

ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ || 10 ||

ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ

ದಾಸೀಭೂತಸಮಸ್ತ ದೇವವನಿತಾಂ ಲೋಕೈಕ ದೀಪಾಂಕುರಾಮ್‌ |

ಶ್ರೀಮನ್ಮಂದಕಟಾಕ್ಷಲಬ್ಧವಿಭವ ಬ್ರಹ್ಮೇಂದ್ರ ಗಂಗಾಧರಾಂ

ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್‌ || 11 ||

ಸಿದ್ಧಲಕ್ಷ್ಮೀರ್ಮೋಕ್ಷಲಕ್ಷ್ಮೀರ್ಜಯಲಕ್ಷ್ಮೀಃ ಸರಸ್ವತೀ |

ಶ್ರೀ ಲಕ್ಷ್ಮೀರ್ವರಲಕ್ಷ್ಮೀಶ್ಚ ಪ್ರಸನ್ನಾ ಭವ ಸರ್ವದಾ || 12 ||

ವರಾಂಕುಶೌ ಪಾಶಮಭೀತಿಮುದ್ರಾಂ ಕರೈರ್ವಹಂತೀಂ ಕಮಲಾಸನಸ್ಥಾಮ್‌ |

ಬಾಲಾರ್ಕಕೋಟಿಪ್ರತಿಭಾಂ ತ್ರಿಣೇತ್ರಾಂ ಭಜೇಽಹಮಾದ್ಯಾಂ ಜಗದೀಶ್ವರೀಂ ತಾಮ್‌ || 13 ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಽಸ್ತುತೇ || 14 ||

ಸರಸಿಜನಿಲಯೇ ಸರೋಜಹಸ್ತೇ ಧವಲತರಾಂ ಶುಕಗಂಧಮಾಲ್ಯ ಶೋಭೇ |

ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್‌ || 15 ||

ವಿಷ್ಣುಪತ್ನೀಂ ಕ್ಷಮಾಂ ದೇವೀಂ ಮಾಧವೀಂ ಮಾಧವಪ್ರಿಯಾಮ್‌ |

ವಿಷ್ಣೋಃ ಪ್ರಿಯಸಖೀಂ ದೇವೀಂ ನಮಾಮ್ಯಚ್ಯುತವಲ್ಲಭಾಮ್‌ ||16 ||

ಮಹಾಲಕ್ಷ್ಮೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ |

ತನ್ನೋ ಲಕ್ಷ್ಮೀಃ ಪ್ರಚೋದಯಾತ್‌ || 17 ||

ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ |

ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವಥ್ಸರಂ ದೀರ್ಘಮಾಯುಃ || 18 ||

ಋಣರೋಗಾದಿ ದಾರಿದ್ರ್ಯ ಪಾಪಕ್ಷುದಪಮೃತ್ಯವಃ |

ಭಯ ಶೋಕಮನಸ್ತಾಪಾ ನಶ್ಯಂತು ಮಮ ಸರ್ವದಾ || 19 ||

ಶ್ರಿಯೇ ಜಾತಃ ಶ್ರಿಯ ಆನಿರಿಯಾಯ ಶ್ರಿಯಂ ವಯೋ ಜರಿತೃಭ್ಯೋ ದಧಾತಿ |

ಶ್ರಿಯಂ ವಸಾನಾ ಅಮೃತತ್ವಮಾಯನ್‌ ಭವಂತಿ ಸತ್ಯಾ ಸಮಿಥಾ ಮಿತದ್ರೌ |

ಶ್ರಿಯ ಏವೈನಂ ತಚ್ಛ್ರಿಯಮಾದಧಾತಿ |

ಸಂತತಮೃಚಾ ವಷಟ್ಕೃತ್ಯಂ ಸಂತತ್ಯೈ ಸಂಧೀಯತೇ ಪ್ರಜಯಾ ಪಶುಭಿರ್ಯ ಏವಂ ವೇದ ||

ಓಂ ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ |

ತನ್ನೋ ಲಕ್ಷ್ಮೀಃ ಪ್ರಚೋದಯಾತ್‌ ||

ಓಂ ಶಾಂತಿಃ ಶಾಂತಿಃ ಶಾಂತಿಃ ||

ನವರಾತ್ರಿಯ ಒಂಭತ್ತನೇ ದಿನ

* ಬಡವರಿಗೆ ಸಹಾಯ ಮಾಡಿ

* ಮನೆಯಲ್ಲಿರುವ ಸ್ತ್ರೀಯರನ್ನು ಗೌರವಿಸಿ

* ಮನೆಯ ಒಳಗಡೆ ಗಂಗಾಜಲ ಪ್ರೋಕ್ಷಣೆ ಮಾಡಿ

English summary

Navratri 2022: Do These Remedies on Navratri For Happiness And Prosperity in kannada

Navratri 2022: If you doo these remedies on navratri you will get success in career, prosperity in life, read on...
Story first published: Friday, September 23, 2022, 16:51 [IST]
X
Desktop Bottom Promotion