For Quick Alerts
ALLOW NOTIFICATIONS  
For Daily Alerts

ನವರಾತ್ರಿಯ ಏಳನೇಯ ದಿನ: ಕಾಲರಾತ್ರಿ ದೇವಿಯ ಆರಾಧನೆ ಹಾಗೂ ಪೂಜಾ ಮಂತ್ರಗಳು

|

ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ 9 ರೂಪಗಳನ್ನು ಪೂಜಿಸಲಾಗುವುದು. 2021ರಲ್ಲಿ ಅಕ್ಟೋಬರ್‌ 7ರಿಂದ ಆರಂಭವಾಗಿರುವ ನವರಾತ್ರಿ ಆಚರಣೆಯ 7ನೇ ದಿನವಾದ ಅಕ್ಟೋಬರ್‌ 13ರಂದು ಕಾಳರಾತ್ರಿ ದೇವಿಯ ಆರಾಧನೆ ಮಾಡಲಾಗುವುದು.

ಈ ವರ್ಷ 13ರಂದು ಬುಧವಾರದಂದು ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಇದು ತುಂಬಾ ವಿಚಿತ್ರ ರೂಪವಾಗಿದೆ. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುವರು.

ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ. ಕತ್ತೆಯ ಮೇಲೆ ಆಕೆ ಸಂಚಾರಿಯಾಗಿದ್ದಾರೆ. ಕಾಲರಾತ್ರಿ ದೇವಿಗೆ ನಾಲ್ಕು ಕೈಗಳಿವೆ. ಇದರಲ್ಲಿ ಎರಡಲ್ಲಿ ಒಂದರಲ್ಲಿ ಬೆಂಕಿ, ಮತ್ತೊಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಗಳು ವರ ನೀಡುವ ಮತ್ತು ರಕ್ಷಿಸುವ ಹಾಗೆ ಇದೆ.

ತಾಯಿ ಕಾಲರಾತ್ರಿಯ ಕಥೆ

ತಾಯಿ ಕಾಲರಾತ್ರಿಯ ಕಥೆ

ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ತಾಯಿ ದುರ್ಗೆಯು ಕಾಲರಾತ್ರಿಯಾಗಿ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುವಳು. ಕಾಲರಾತ್ರಿಯು ಕಪ್ಪು ಹಾಗೂ ವಿಚಿತ್ರವಾಗಿ ಕಾಣಿಸುವರು. ಆಕೆ ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುವರು. ಅದಾಗ್ಯೂ, ಆಕೆ ತನ್ನ ಭಕ್ತರಿಗೆ ವರ ನೀಡಿ ರಕ್ಷಿಸುವರು. ಆಕೆ ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವಳು. ಇದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗಿದೆ.

Most Read: ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ದೇವಿಯನ್ನು ಪೂಜಿಸಬೇಕು?

ತಾಯಿ ಕಾಲರಾತ್ರಿಯ ಪೂಜೆಯ ಪ್ರಾಮುಖ್ಯತೆ

ತಾಯಿ ಕಾಲರಾತ್ರಿಯ ಪೂಜೆಯ ಪ್ರಾಮುಖ್ಯತೆ

ತಾಯಿ ಕಾಲರಾತ್ರಿಯು ಶನಿ ಗ್ರಹದ ಅಧಿಪತಿ. ಆಕೆ ಜನರು ಮಾಡಿರುವ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವರು. ಆಕೆ ದುಷ್ಟತೆಯನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸುವರು. ಅವರು ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಗುರುತಿಸುವರು. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದಾಗಿ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವ ತಗ್ಗಿಸಬಹುದು.

ನವರಾತ್ರಿ 7ನೇ ದಿನ ತಾಯಿ ಕಾಲರಾತ್ರಿ ಪೂಜೆ

ನವರಾತ್ರಿ 7ನೇ ದಿನ ತಾಯಿ ಕಾಲರಾತ್ರಿ ಪೂಜೆ

ಮಲ್ಲಿಗೆ ಹೂ ತಾಯಿ ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂ. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನದಿಂದ ತಾಯಿ ಕಾಲರಾತ್ರಿಯ ಪೂಜೆ ಮಾಡಬೇಕು. ಗಣಪತಿ ಪೂಜೆಯ ಬಳಿಕ ಷೋಡಸೋಪಚಾರ ಪೂಜೆಯನ್ನು ಕಾಲರಾತ್ರಿ ತಾಯಿಗೆ ಮಾಡಬೇಕು. ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.

ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಮಂತ್ರ

ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಮಂತ್ರ

ಓಂ ದೇವಿ ಕಾಲರಾತ್ರೈ ನಮಃ

ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ

ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ

ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ

ತಾಯಿ ಕಾಲರಾತ್ರಿ ಪ್ರಾರ್ಥನೆ

ತಾಯಿ ಕಾಲರಾತ್ರಿ ಪ್ರಾರ್ಥನೆ

ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ

ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ

ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ

ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ

Most Read: ಈ ವರ್ಷದ ನವರಾತ್ರಿ ಯಾಕೆ ಇಷ್ಟೊಂದು ಮಂಗಳಕರ ಗೊತ್ತೇ? ಇಲ್ಲಿದೆ ಕಾರಣಗಳು

ತಾಯಿ ಕಾಲರಾತ್ರಿ ಸ್ತುತಿ

ತಾಯಿ ಕಾಲರಾತ್ರಿ ಸ್ತುತಿ

ಯಾ ದೇವಿ ಸರ್ವಭುತೇಶ್ ಮಾ ಕಾಲರಾತ್ರಿ ರೂಪೇನಾ ಸಂಹಿತಾ

ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮಃ

ಕಾಲರಾತ್ರಿ ದೇವಿ ಧ್ಯಾನ

ಕಾಲರಾತ್ರಿ ದೇವಿ ಧ್ಯಾನ

ಕರಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ

ಕಾಲರಾತ್ರಿಮ್ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭಾಷಿತಂ

ದಿವ್ಯಾಂ ಲಾಹುವಾಜ್ರಾ ಖಡ್ಗ ವಮೊಘೋರ್ಧ್ವಾ ಕರಂಭುಜಮ್

ಅಭಯಂ ವರದಂ ಚೈವ ದಕ್ಷಿಣೋಧವಘಹ್ ಪರ್ಣಿಕಾಮ್ ಮಾಮ್

ಮಹಮೇಘ ಪ್ರಬಂಧ ಶ್ಯಾಮಮ್ ತಕ್ಷ ಚೈವಾ ಗಾರ್ದಭಾರುಧ

ಘೋರದಾಂಶ ಕರಾಲ್ಯಾಸಂ ಪಿನ್ನೊನಾತಾ ಪಯೋಧರಂ

ಸುಖ ಪ್ರಸನ್ನವಧನ ಶರ್ಮೆನ್ನಾ ಸರೊರುಹಮ್

ಇವಾಮ್ ಸಚಿಯಂತಾಯೆತ್ ಕಾಲರಾತ್ರಿಮ್ ಸರ್ವಕಂ ಸಮೃದ್ಧಿಂ

ತಾಯಿ ಕಾಲರಾತ್ರಿ ಸ್ತೋತ್ರ

ತಾಯಿ ಕಾಲರಾತ್ರಿ ಸ್ತೋತ್ರ

ಹಿಮ್ ಕಲಾರತ್ರಿ ಶಿಮ್ ಕರಾಳಿ ಚಾ ಕ್ಲೈಮ್ ಕಲ್ಯಾಣಿ ಕಲಾವತಿ

ಕಲಾಮತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ

ಕಾಮಬಿಜಪಂದ ಕಮಬಿಜಸ್ವರ್ಪಿನಿ

ಕುಮತಿಘಿನಿ ಕುಲಿನಾರ್ನಾನಿಶಿ ಕುಲಾ ಕಾಮಿನಿ

ಕ್ಲಿಮ್ ಹ್ರಮ್ ಶ್ರೀಮಿ ಮಾಂತ್ರ್ವರ್ನೆನಾ ಕಲಾಕಂತಕಘಾತಿನಿ

ಕೃಪಮಾಯಿ ಕೃಪಾಧಾರ ಕೃಪಾಪಾರಾ ಕೃಪಾಗಾಮಾ

Most Read: ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?

ಏಳನೇ ದಿನ ಕಾಲರಾತ್ರಿ ಕವಚ

ಏಳನೇ ದಿನ ಕಾಲರಾತ್ರಿ ಕವಚ

ಓಂ ಕ್ಲಿಮ್ ಮಿ ಹೃದಯಂ ಪತು ಪದೂ ಶ್ರೀಕಾಲಾರಾತ್ರಿ

ಲಲೇತೆ ಸತತಂ ಪತು ತುಶ್ಗ್ರಾಘ ನಿವಾರಿಣಿ

ರಾಸನಮ್ ಪತು ಕೌಮರಿ, ಭೈರವಿ ಚಕ್ರಶೋರ್ಭಮಾ

ಕತೂ ಪ್ರಿಶ್ಥ್ ಮಹೇಶನಿ, ಕರ್ಣಶಂಕರಾಭಮಿಣಿ

ವರ್ಜಿತಾನಿ ತು ಸ್ತಾನಭಿ ಯಾನಿ ಚಾ ಕವಚೇನಾ ಹಾಯ್

ತನಿ ಸರ್ವಾನಿ ಮೀ ದೇವಿಸತಾಪಂಪತು ಸ್ಟ್ಯಾಂಬಿಣಿ

ಕಾಲರಾತ್ರಿ ದೇವಿಯ ಪೂಜೆಯ ಮಹತ್ವ

ಕಾಲರಾತ್ರಿ ದೇವಿಯ ಪೂಜೆಯ ಮಹತ್ವ

ಕಾಲರಾತ್ರಿ ತಾಯಿಯನ್ನು ಏಳನೇ ದಿನದಂದು ಪೂಜಿಸುವುದರಿಂದ ಭಕ್ತರಲ್ಲಿರುವಂತಹ ಎಲ್ಲಾ ರೀತಿಯ ಭಯವು ನಿವಾರಣೆಯಾಗುವುದು. ಅವರ ಅಭಿವೃದ್ಧಿಗೆ ಇರುವಂತಹ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು. ಗುಣವಾಗದ ರೋಗವು ಗುಣವಾಗುವುದು, ಮಾನಸಿಕ ಶಾಂತಿ ಹಾಗೂ ಸುಖ ನೀಡುವರು. ಆಕೆ ತನ್ನ ಭಕ್ತರಿಗೆ ಎಲ್ಲಾ ರೀತಿಯ ಒಳ್ಳೆಯತನ ಮತ್ತು ಸಮೃದ್ಧಿ ಕರುಣಿಸುವರು. ಇದೇ ವೇಳೆ ಎಲ್ಲಾ ರೀತಿಯ ಪಾಪ ನಿವಾರಣೆ ಮಾಡಿ ಸರಿಯಾದ ಮಾರ್ಗದಲ್ಲಿ ಸಾಗಲು ನೆರವಾಗುವರು. ನವರಾತ್ರಿಯ ಏಳನೇ ದಿನವನ್ನು ಮಹಾಸಪ್ತಮಿ ಎಂದು ಕರೆಯಲಾಗುತ್ತದೆ. ಈ ದಿನ ಸರಸ್ವತಿ ದೇವಿಯ ಪೂಜೆಯು ಆರಂಭವಾಗುವುದು.

English summary

Navratri 2021 Day 7, Maa Kalratri Colour, Puja Vidhi, Aaarti , Timings, Mantra, Muhurat, Vrat Katha and significance

On the seventh day of Navratri, it is a common practice to worship Ma Kalratri. In this strange form, Mother looks very fiery and appears in a dark complexion. The terms forming part of her name reveal that she is the form of darkness and time. She is mounted on an ass. Kalratri Devi has four hands two of which carry a torch and sword. The next two hands are shown in boon giving and protecting poses.
X