For Quick Alerts
ALLOW NOTIFICATIONS  
For Daily Alerts

ಜು. 22 ರಾಷ್ಟ್ರೀಯ ಧ್ವಜ ಸ್ವೀಕರಿಸಿದ ದಿನ: ತ್ರಿವರ್ಣ ಧ್ವಜದ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳಿವು

|

ನಮ್ಮ ರಾಷ್ಟ್ರಧ್ವಜದಲ್ಲಿ ಮೂರು ಬಣ್ಣಗಳಿವೆ. ನಮ್ಮ ರಾಷ್ಟ್ರೀಯ ತಿರಂಗ ಬಣ್ಣದ ನಮ್ಮ ಸ್ವಾತಂತ್ರ್ಯದ ಸಂಕೇತ.

ಕೇಸರಿ, ಬಿಳಿ, ಹಸಿರು ಬಣ್ಣ, ಮಧ್ಯದಲ್ಲಿ ಅಶೋಕ ಚಕ್ರವನ್ನು ಹೊಂದಿರುವ ನಮ್ಮ ಧ್ವಜ ಹಾರಾಡಲೆಂದೇ ದೊಡ್ಡ ಹೋರಾಟವೇ ನಡೆದಿದೆ. ಭಾರತವನ್ನು ವಶಪಡಿಸಿಕೊಂಡಿದ್ದ ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸಿ ಬಂಧ ಮುಕ್ತರಾದೆವು, ಇನ್ನು ಮುಂದೆ ನಾವು ಸ್ವಾತಂತ್ರ್ಯರು ಎಂದು ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.

ಇಂದು ಜುಲೈ 22, ಈ ದಿನವನ್ನು ರಾಷ್ಟ್ರೀಯ ಧ್ವಜ ಸ್ವೀಕರಿಸಿದ ದಿನವನ್ನಾಗಿ ಆಚರಿಸಲಾಗುವುದು.

ತ್ರಿವರ್ಣಧ್ವಜ ಸ್ವೀಕರಿಸಿದ ದಿನ

ತ್ರಿವರ್ಣಧ್ವಜ ಸ್ವೀಕರಿಸಿದ ದಿನ

ಜುಲೈ 22, 1947ರಲ್ಲಿ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರೀಯ ಧ್ವಜವನ್ನಾಗಿ ಸ್ವೀಕರಿಸಲಾಯಿತು. ಜನವರಿ 26, 2002ರಲ್ಲಿ ಧ್ವಜವನ್ನು ಹಾರಿಸುವ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ತಂದು ಭಾರತೀಯ ನಾಗರಿಕರ ಮನೆಗಳಲ್ಲಿ, ಆಫೀಸ್‌ ಹಾಗೂ ಫ್ಯಾಕ್ಟರಿಗಳಲ್ಲಿ ಯಾವುದೇ ದಿನಗಳಲ್ಲಿ ಧ್ವಜದ ನಿಯಮಗಳನ್ನು ಪಾಲಿಸಿ ಧ್ವಜ ಹಾರಿಸಲು ಅನುಮತಿ ನೀಡಲಾಗಿದೆ.

ತ್ರಿವರ್ಣ ಧ್ವಜ ಏನನ್ನು ಸೂಚಿಸುತ್ತದೆ:

ತ್ರಿವರ್ಣ ಧ್ವಜ ಏನನ್ನು ಸೂಚಿಸುತ್ತದೆ:

ನಮ್ಮ ಧ್ವಜದಲ್ಲಿ ಮೂರು ಬಣ್ಣಗಳಿವೆ ಮೊದಲಿಗೆ ಕೇಸರಿ, ನಂತರ ಬಿಳಿ ಕೊನೆಯದಾಗಿ ಹಸಿರು, ಈ ಮೂರು ಬಣ್ಣಗಳಿಗೂ ಈ ಅರ್ಥಗಳನ್ನು ಹೊಂದಿವೆ.

ಕೇಸರಿ: ಇದು ಧೈರ್ಯ, ನಿಸ್ವಾರ್ಥತೆ ಹಾಗೂ ಶಕ್ತಿಯ ಸಂಕೇತ

ಬಿಳಿ: ಸತ್ಯ, ಶಾಂತಿ, ಶುದ್ಧತೆಯ ಸಂಕೇತ

ಹಸಿರು: ಸಮೃದ್ಧಿ, ಬೆಳವಣಿಗೆ, ಫಲವತ್ತತೆಯ ಸಂಕೇತವಾಗಿದೆ.

ಅಶೋಕ ಚಕ್ರ: ಇದನ್ನು ಧರ್ಮ ಚಕ್ರವೆಂದು ಕರೆಯಲಾಗುವುದು. 24 ಪಟ್ಟೆಗಳನ್ನು ಹೊಂದಿರುವ ಅಶೋಕ ಚಕ್ರ ಚಲನ ಶೀಲತೆಯನ್ನು ಸೂಚಿಸುತ್ತದೆ.

ರಾಷ್ಟ್ರೀಯ ತ್ರಿವರ್ಣ ಧ್ವಜದ ಇತಿಹಾಸ

ರಾಷ್ಟ್ರೀಯ ತ್ರಿವರ್ಣ ಧ್ವಜದ ಇತಿಹಾಸ

ಭಾರತದ ತ್ರಿವರ್ಣಧ್ವಜ ಸ್ವತಂತ್ರ ಭಾರತದ ಗಣರಾಜ್ಯದ ಸಂಕೇತವಾಗಿದೆ. ನಮ್ಮ ದೇಶಕ್ಕೆ ಸ್ವತಂತ್ರ ಸಿಗುವ ಸ್ವಲ್ಪ ಮೊದಲು ಅಂದ್ರೆ ಜುಲೈ 22, 1947ರಲ್ಲಿ ಸ್ವತಂತ್ರ ಭಾರತದ ಸಂವಿಧಾನದ ಬಗ್ಗೆ ಒಂದು ಸಭೆಯನ್ನು ಆಯೋಜಿಸಲಾಗಿತ್ತು, ಆಗ ಮೊದಲ ಬಾರಿಗೆ ತ್ರಿವರ್ಣ ಧ್ವಜದ ಬಗ್ಗೆ ಪ್ರಸ್ತುತಪಡಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ತ್ರಿವರ್ಣ ಧ್ವಜವನ್ನು ಆರಿಸಲಾಯಿತು. ಆಗಸ್ಟ್ 15, 1947ರಿಂದ 1950, ಜನವರಿ 26ರವರೆಗೆ ತ್ರಿವರ್ಣ ಧ್ವಜವನ್ನು ಭಾರತದ ಪ್ರಾಬಲ್ಯವೆಂದು ಪ್ರಸ್ತುತಪಡಿಸಲಾಯಿತು. 1950ರಲ್ಲಿ ಸಂವಿಧಾನ ಜಾರಿಗೆ ಬಂತು ಆಗ ಸ್ವತಂತ್ರ ಗಣರಾಜ್ಯದ ರಾಷ್ಟ್ರೀಯ ಧ್ವಜವೆಂದು ಘೋಷಿಸಲಾಯಿತು. ತ್ರಿವರ್ಣ ಧ್ವಜವನ್ನು ಪಿಂಗಲಿ ವೆಂಕ್ಯ ವಿನ್ಯಾಸಗೊಳಿಸಿದ್ದಾರೆ.

ರಾಷ್ಟ್ರಧ್ವಜದ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳಿವು:

ರಾಷ್ಟ್ರಧ್ವಜದ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳಿವು:

* ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುವಾಗ, ಹಾರಿಸುವಾಗ ಕೇಸರಿ ಭಾಗ ಮೇಲೆ ಇರಬೇಕು.

* ರಾಷ್ಟ್ರ ಧ್ವಜದಲ್ಲಿ ಬೇರೆ ಧ್ವಜ ಅಥವಾ ಲಾಂಛನ ಇರಬಾರದು

* ರಾಷ್ಟ್ರಧ್ವಜದ ಪಕ್ಕದಲ್ಲಿ ಬೇರೆ ಧ್ವಜವನ್ನು ಹಾರಿಸುವುದಾದರೆ ಅದನ್ನು ರಾಷ್ಟ್ರ ಧ್ವಜದ ಎಡಕ್ಕೆ ಸಾಲಿನಲ್ಲಿ ಹಾರಿಸಬೇಕು.

* ಮೆರವಣಿಗೆಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರೆ ರಾಷ್ಟ್ರಧ್ವಜ ಬಲಭಾಗದಲ್ಲಿ ಅಥವಾ ಧ್ವಜಗಳ ಸಾಲಿನ ಮಧ್ಯದಲ್ಲಿರಬೇಕು.

* ರಾಷ್ಟ್ರಧ್ವಜ ಪ್ರಮುಖ ಸರ್ಕಾರಿ ಕಟ್ಟಡಗಳು, ರಾಷ್ಟ್ರಪತಿ ಭವನ, ಸಂಸತ್‌ ಭವನ, ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಲ್ಲಿ ಪ್ರತಿದಿನ ಹಾರಿಸಬೇಕು.

* ರಾಷ್ಟ್ರೀಯ ಧ್ವಜವನ್ನು ವೈಯಕ್ತಿಕ ವ್ಯವಹಾರಕ್ಕೆ ಹಾರಿಸಬಾರದು

* ಸೂರ್ಯಾಸ್ತದ ಸಮಯದಲ್ಲಿ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಇಳಿಸಬೇಕು

* ಹರಿದ ಅಥವಾ ಹೊಲಿದ ಧ್ವಜ ಬಳಸಬಾರದು

* ಪ್ಲಾಸ್ಟಿಕ್ ಧ್ವಜ ಬಳಸಬಾರದು

English summary

National Flag Adoption Day 2022: Interesting Facts About Tricolour, National Flag of India in kannada

National Flag Adoption Day 2021: interesting facts about tricolour, national flag of India in kannada,
X
Desktop Bottom Promotion