For Quick Alerts
ALLOW NOTIFICATIONS  
For Daily Alerts

Narasimha Jayanti 2021: ಉಪವಾಸ ಸಮಯ, ಪೂಜಾ ವಿಧಿ, ಮಹತ್ವ

|

ವಿಷ್ಣುವಿನ ವಿವಿಧ ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ವೈಶಾಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುವುದು. ನರಸಿಂಹ ದೇವರೆಂದರೆ ನಮ್ಮ ಕಣ್ಮುಂದೆ ಬರುವುದು ಮನುಷ್ಯ ದೇಹದ ಸಿಂಹ ಮುಖದ ರೂಪವಾಗಿದೆ.

Narasimha Jayanti 2021

ಭಕ್ತ ಪ್ರಹ್ಲಾದ ದುಷ್ಟ ಹಿರಣ್ಯ ಕಶ್ಯಪುವಿನಲ್ಲಿ ನನ್ನ ದೇವ ಈ ಕಂಬದಲ್ಲಿಯೂ ಇದ್ದಾನೆ ಎಂದಾಗ ಆತನ ಮಾತನ್ನು ಸತ್ಯವಾಗಿಸಿ ನರಸಿಂಹ ಕಂಬ ಸೀಳಿ ದುಷ್ಟ ರಾಕ್ಷಸ ಹಿರಣ್ಯ ಕಶ್ಯಪುವಿನ ವಧೆ ಮಾಡುತ್ತಾನೆ. ತನ್ನ ನಂಬಿದ ಭಕ್ತರನ್ನು ಎಲ್ಲಾ ಸಂದರ್ಭದಲ್ಲೂ ನರಸಿಂಹ ಕಾಪಾಡುತ್ತಾನೆ ಎಂಬುವುದೇ ಅವನ ನಂಬಿದವರ ಅಚಲ ನಂಬಿಕೆ.

2021ರಲ್ಲಿ ಮೇ 25ಕ್ಕೆ ನರಸಿಂಹ ಜಯಂತಿ ಆಚರಿಸಲಾಗುವುದು. ಈ ಆಚರಣೆಯ ಪೂಜಾ ವಿಧಾನ, ಉಪವಾಸ ಸಮಯ, ಇದರ ಮಹತ್ವ ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ನರಸಿಂಹ ಜಯಂತಿ ಯಾವಾಗ ಆಚರಿಸಲಾಗುವುದು?

ನರಸಿಂಹ ಜಯಂತಿ ಯಾವಾಗ ಆಚರಿಸಲಾಗುವುದು?

ವೈಶಾಖ ಶುಕ್ಲ ಚತುರ್ದಶಿ ಆರಂಭ ಮೇ 24 ರಾತ್ರಿ 12:11ಕ್ಕೆ

ವೈಶಾಖ ಶುಕ್ಲ ಚತುರ್ದಶಿ ಆರಂಭ ಮೇ 25 ರಾತ್ರಿ 08:29ಕ್ಕೆ

ನರಸಿಂಹ ಜಯಂತಿ ಉಪವಾಸ ಸಮಯ, ಪೂಜೆ ಸಮಯ

ನರಸಿಂಹ ಜಯಂತಿ ಉಪವಾಸ ಸಮಯ, ಪೂಜೆ ಸಮಯ

ಮೇ 24 ರಾತ್ರಿ 12:11ರಿಂದ ಮೇ 25 ರಾತ್ರಿ 8:29ರವರೆಗೆ ಉಪವಾಸವಿದ್ದು ನರಸಿಂಹ ಜಯಂತಿ ಆಚರಿಸಬೇಕು.

ಪೂಜೆ ಸಮಯ: ಸಂಜೆ 04:32ಕ್ಕೆ

ಪಾರಣ ಕಾಲ (ಉಪವಾಸ ಮುರಿಯುವ ವಿಧಾನ: ಮೇ 26, ಬೆಳಗ್ಗೆ 06:01ಕ್ಕೆ

 ಪೂಜಾ ವಿಧಿ

ಪೂಜಾ ವಿಧಿ

ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ನರಸಿಂಹ ಜಯಂತಿಯ ಮಹತ್ವ

ನರಸಿಂಹ ಜಯಂತಿಯ ಮಹತ್ವ

ನರಸಿಂಹನನ್ನು ಆರಾಧಿಸುವುದರಿಂದ ಆ ದೇವ ತನ್ನ ಭಕ್ತ ಜೊತೆಗೆ ಸದಾ ಇದ್ದು ಅವರನ್ನು ಎಲ್ಲಾ ಕಷ್ಟದಿಂದ ಪಾರು ಮಾಡುತ್ತಾನೆ.

ನರಸಿಂಹನನ್ನು ಆರಾಧಿಸುವುದರಿಂದ ದೊರೆಯುವ ಪ್ರಯೋಜನಗಳು

* ಸಂಬಂಧದಲ್ಲಿ ಸಮಸ್ಯೆ, ಸಾಲ, ಆರ್ಥಿಕ ಸಂಕಷ್ಟ ಇವುಗಳಿಗೆ ಪರಿಹಾರ ಸಿಗುವುದು

* ಐಶ್ವರ್ಯ ಲಭಿಸುವುದು

* ಕಾಯಿಲೆ ವಿರುದ್ಧ ರಕ್ಷಣೆ ನೀಡುವುದು

* ಕೋರ್ಟ್, ಕೇಸ್‌ಗಳಿದ್ದರೆ ಜಯ ಲಭಿಸುವುದು.

ಪೌರಾಣಿಕ ಕತೆ

ಪೌರಾಣಿಕ ಕತೆ

ವಿಷ್ಣು ನರಸಿಂಹನ ಅವತಾರವೆತ್ತಲು ಕಾರಣವೇನು ಎಂಬುವುದಕ್ಕೆ ಕಾರಣವಿದೆ. ಅರಣ್ಯ ಕಶ್ಯಪು ತನ್ನನ್ನು ಮನುಷ್ಯ, ಪ್ರಾಣಿಗಾಗಲಿ ಅಥವಾ ಯಾವುದೇ ಆಯುಧದಿಮದ ಕೊಲ್ಲಲು ಸಾಧ್ಯವಾಗಬಾರದು ಎಂದು ವರ ಪಡೆದಿದ್ದ. ಆತನ ಕ್ರೌರ್ಯ, ಅಟ್ಟಹಾಸ ಮಿತಿ ಮೀರಿದಾಗ ವಿಷ್ಣು ಅರ್ಧ ಮನುಷ್ಯ, ಅರ್ಧ ಸಿಂಹದ ಅವತಾರ ತಾಳಿ ಹಿರಣ್ಯ ಕಶ್ಯಪು ವಧೆ ಮಾಡುತ್ತಾನೆ. ದುಷ್ಟರನ್ನು ಸಂರಕ್ಷಿಸಿ, ಭಕ್ತರನ್ನು ಪೊರೆಯುವ ನರಸಿಂಹನ ಆರಾಧನೆಯಿಂದ ಭಕ್ತರ ಬದುಕಿನಲ್ಲಿ ಒಳಿತಾಗುವುದು.

English summary

Narasimha Jayanti 2021: Date, Fasting Time, Puja Vidhi and Significance

Narasimha Jayanti 2021: Date, Fasting Time, Puja Vidhi and Significance, Have a look,
X
Desktop Bottom Promotion