For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ನಾಗರಪಂಚಮಿ

|
Naga Panchami 2019 : ನಾಗರಪಂಚಮಿ ಹಬ್ಬದ ಆಚರಣೆಯ ಹಿಂದಿರುವ ಮಹತ್ವ

ಹಿಂದೂ ಸಂಪ್ರದಾಯದಲ್ಲಿ ಹಲವು ಪ್ರಾಣಿಗಳೂ ಪೂಜ್ಯಸ್ಥಾನ ಪಡೆದಿವೆ. ಗೋವು, ಕೋತಿ, ನಂದಿ, ಮೊದಲಾದವುಗಳನ್ನು ನಾವು ದೇವರಿಗೆ ಸಮಾನವಾಗಿ ಕಾಣುತ್ತೇವೆ. ಮನೆಯ ಪ್ರಾರಂಭೋತ್ಸವದಲ್ಲಿಯೂ ಗೋವನ್ನು ಮನೆಯೊಳಗೆ ತರುತ್ತಾರೆ. ರಾಜಸ್ಥಾನದಲ್ಲಿ ಇಲಿಗಳಿಗಾಗಿಯೇ ಒಂದು ದೇವಾಲಯವಿದೆ! ಪೂಜೆಗೊಳಪಡುವ ಇನ್ನೊಂದು ಜೀವಿಯೆಂದರೆ ಹಾವು.

ಪುರಾತನಕಾಲದಿಂದಲೂ ದೇವರ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಹಿಂದೂಗಳು ಶ್ರಾವಣ ಮಾಸದ ಐದನೆಯ ದಿನ ಅರ್ಧಚಂದ್ರನಿರುವ ರಾತ್ರಿಹೊತ್ತಿನಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸುವ ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್‌ನ ಒಂದು ಮಾಸವಾಗಿದ್ದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತದೆ. ನಾಗರಪಂಚಮಿ ವಿಶೇಷ: ಘಮಘಮಿಸುವ ನುಚ್ಚಿನುಂಡೆ ರೆಸಿಪಿ

ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ. ಬನ್ನಿ ನಾಗರಪಂಚಮಿ ಆಚರಿಸುವ ಹಿಂದಿರುವ ರಹಸ್ಯವೇನು ಎಂಬುದನ್ನು ನೋಡೋಣ... ನಾಗರಪಂಚಮಿ : ಅಚ್ಚ ಕನ್ನಡ ಅಣ್ಣ-ತಂಗಿಯರ ಹಬ್ಬ

ಹಬ್ಬದ ಹಿಂದಿನ ಕಥೆ

ಹಬ್ಬದ ಹಿಂದಿನ ಕಥೆ

ಪುರಾಣದಲ್ಲಿ ಬರುವ ಕಥೆಯೊಂದರ ಪ್ರಕಾರ ಕಾಲಿಯಾ ಅಥವಾ ಕಾಳಿಯಾ ಎಂಬ ಭಯಂಕರ ಸರ್ಪದ ಧಾಳಿಯಿಂದ ಜನರನ್ನು ಭಗವಂತ ಶ್ರೀಕೃಷ್ಣ ರಕ್ಷಿಸುತ್ತಾನೆ. ಕೃಷ್ಣ ಆಗಿನ್ನೂ ಬಾಲಕನಾಗಿದ್ದಾಗ ಯಮುನಾ ನದಿ ತೀರದಲ್ಲಿ ಆಡುತ್ತಿದ್ದಾಗ ಚೆಂಡು ಹೋಗಿ ತೀರದಲ್ಲಿ ಬೆಳೆದು ನದಿಯೆಡೆಗೆ ಚಾಚಿದ್ದ ಕೊಂಬೆಯೊಂದರಲ್ಲಿ ಸಿಕ್ಕಿಕೊಳ್ಳುತ್ತದೆ. ಮುಂದೆ ಓದಿ

ಹಬ್ಬದ ಹಿಂದಿನ ಕಥೆ

ಹಬ್ಬದ ಹಿಂದಿನ ಕಥೆ

ಈ ಚೆಂಡನ್ನು ತೆಗೆಯುವ ಪ್ರಯತ್ನದಲ್ಲಿ ಚೆಂಡು ನೀರಿಗೆ ಬೀಳುತ್ತದೆ. ಚೆಂಡನ್ನು ಹಿಡಿಯಲು ಕೃಷ್ಣನೂ ನೀರಿಗೆ ಧುಮುಕುತ್ತಾನೆ.ಆಗ ನೀರಿನಲ್ಲಿದ್ದ ಕಾಲಿಂಗ ಕೃಷ್ಣನ ಮೇಲೆ ಧಾಳಿ ನಡೆಸುತ್ತಾನೆ. ಯಾವುದೋ ಬಾಲಕ ಎಂದು ಉಡಾಫೆಯಲ್ಲಿದ್ದ ಕಾಲಿಂಗ ಹಾವುಗೆ ಈತ ಸಾಮಾನ್ಯನಲ್ಲ ಎಂದು ಕೊಂಚಕಾಲದಲ್ಲಿಯೇ ಅರಿವಿಗೆ ಬರುತ್ತದೆ.

ಹಬ್ಬದ ಹಿಂದಿನ ಕಥೆ

ಹಬ್ಬದ ಹಿಂದಿನ ಕಥೆ

ಕೂಡಲೇ ಕೃಷ್ಣನಿಗೆ ಶರಣಾಗತನಾದ ಕಾಲಿಯ ಇನ್ನೆಂದೂ ತೊಂದರೆ ಕೊಡಲಾರೆ ಎಂದು ಪ್ರಮಾಣ ಮಾಡಿದನಂತೆ. ಕಾಲಿಯಾನ ಮೇಲೆ ಕೃಷ್ಣ ಸಾಧಿಸಿದ ವಿಜಯವನ್ನು ನಾಗಪಂಚಮಿಯ ಮೂಲಕ ಅಂದಿನಿಂದ ಆಚರಿಸುವ ಪದ್ಧತಿ ನಡೆದುಕೊಂಡು ಬಂದಿದೆ.

 ಹಬ್ಬದ ಆಚರಣೆಯ ವಿಧಾನ

ಹಬ್ಬದ ಆಚರಣೆಯ ವಿಧಾನ

ಹಬ್ಬದ ದಿನದಂದು ಜನರು ಉಳುಮೆ ಸಹಿತ ಯಾವುದೇ ನೆಲವನ್ನು ಅಗಿಯುವ ಕೆಲಸವನ್ನು ಮಾಡುವುದಿಲ್ಲ. ನಾಗರ ಕಲ್ಲಿಗೆ ಹಸುವಿನ ಹಾಲು, ಹುರಿದ ಭತ್ತ (ಅರಳು), ಭತ್ತದ ತೆನೆ ಮತ್ತು ದೂರ್ವ ಅಥವಾ ಗರಿಕೆ (ಎಳೆಹುಲ್ಲಿನ ತುರಿಭಾಗ) ಯನ್ನು ಅರ್ಪಿಸಿ ನಾಗನನ್ನು ಪೂಜಿಸಲಾಗುತ್ತದೆ.

 ಹಬ್ಬದ ಆಚರಣೆಯ ವಿಧಾನ

ಹಬ್ಬದ ಆಚರಣೆಯ ವಿಧಾನ

ಭಾರತದಾದ್ಯಂತ ಎಲ್ಲೆಡೆ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಕೆಲವೆಡೆ ಕಲ್ಲಿನ ಬದಲು ಮಣ್ಣಿನಿಂದ ಮಾಡಿದ ಹಾವಿನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕೆಲವೆಡೆ ಜೀವಂತ ಹಾವಿಗೂ ಹಾಲು ಮತ್ತು ಹಾವು ಸ್ವೀಕರಿಸುವ ಇತರ ಪದಾರ್ಥಗಳನ್ನು ನೀಡಿ ಪೂಜೆ ಸಲ್ಲಿಸಲಾಗುತ್ತದೆ.

ಶಿವನಿಗೆ ಪ್ರಿಯನಾದ ನಾಗ

ಶಿವನಿಗೆ ಪ್ರಿಯನಾದ ನಾಗ

ಅತಿ ಶಕ್ತಿಶಾಲಿ ದೇವನಾದ ಶಿವನ ಕೊರಳಿನಲ್ಲಿ ಯಾವಾಗಲೂ ಒಂದು ಸರ್ಪ ಹೆಡೆಯೆತ್ತಿ ನಿಂತಿರುವುದನ್ನು ಕಾಣಬಹುದು. ಹಾವುಗಳ ಬಗ್ಗೆ ವಿಶೇಷ ಮಮತೆಯನ್ನು ಹೊಂದಿದ್ದ ಶಿವನನ್ನು ಒಲಿಸಿಕೊಳ್ಳಲು ನಾಗಪಂಚಮಿಯ ಪೂಜೆ ಶ್ರೇಯಸ್ಕರ ಎಂದು ಹಿಂದೂಗಳು ನಂಬುತ್ತಾರೆ.

ಶಿವನಿಗೆ ಪ್ರಿಯನಾದ ನಾಗ

ಶಿವನಿಗೆ ಪ್ರಿಯನಾದ ನಾಗ

ಶಿವ ಮುಂಗೋಪಿಯಾಗಿದ್ದು ಆತನ ಅನುಗ್ರಹ ಪಡೆಯಲು ಮೊದಲು ನಾಗನನ್ನು ಸಂಪ್ರೀತಗೊಳಿಸುವುದು ಅಗತ್ಯ ಎಂದು ಪುರಾಣಗಳು ತಿಳಿಸುತ್ತವೆ.

ವಿವಿಧ ರಾಜ್ಯಗಳಲ್ಲಿ ಆಚರಣೆ

ವಿವಿಧ ರಾಜ್ಯಗಳಲ್ಲಿ ಆಚರಣೆ

ಭಾರತದಾದ್ಯಂತ ಹಬ್ಬಗಳ ಆಚರಣೆಯಲ್ಲಿ ವೈವಿಧ್ಯತೆ ಇರುವಂತೆಯೇ ನಾಗಪಂಚಮಿಯಲ್ಲಿಯೂ ಇದೆ. ಮಹಾರಾಷ್ಟ್ರ ರಾಜ್ಯದಲ್ಲಿ ಹಾವಿನ ಮರಿಯೊಂದನ್ನು ತಟ್ಟೆಯೊಂದರಲ್ಲಿಟ್ಟು ಪೂಜೆ ಸಲ್ಲಿಸುವ ತಂಡವೊಂದು ಊರೆಲ್ಲಾ ತಿರುಗುತ್ತಾ ಹಣ, ಬಟ್ಟೆ ಅಥವಾ ಆಹಾರವನ್ನು ಬೇಡುತ್ತಾ ಹೋಗುತ್ತಾರೆ.

ವಿವಿಧ ರಾಜ್ಯಗಳಲ್ಲಿ ಆಚರಣೆ

ವಿವಿಧ ರಾಜ್ಯಗಳಲ್ಲಿ ಆಚರಣೆ

ಕೇರಳದಲ್ಲಿ ಜನರು ಒಂದಕ್ಕಿಂತ ಹೆಚ್ಚು ನಾಗರಕಲ್ಲು ಅಥವಾ ಕಟ್ಟೆಗಳಿಗೆ ಭೇಟಿ ನೀಡಿ ವರ್ಷವಿಡೀ ಜನರಿಗೆ ತೊಂದರೆ ನೀಡದಂತೆ ಪ್ರಾರ್ಥಿಸುತ್ತಾರೆ.

ಪೂಜೆಯ ಮೂಲಕ ಕೋರುವ ಕೋರಿಕೆಗಳು

ಪೂಜೆಯ ಮೂಲಕ ಕೋರುವ ಕೋರಿಕೆಗಳು

ನಾಗನನ್ನು ಪೂಜಿಸಿ ಕೋರುವ ಕೋರಿಕೆಗಳನ್ನು ಶಿವನು ಮನ್ನಿಸುತ್ತಾನೆ ಎಂಬ ನಂಬಿಕೆಯಿರುವುದರಿಂದ ಜನರು ಪೂಜೆಯ ಬಳಿಕ ತಮ್ಮ ಇಷ್ಟಾರ್ಥಗಳನ್ನು ತಿಳಿಸುತ್ತಾರೆ. ಅವಿವಾಹಿತ ಕನ್ಯೆಯರು ತಮಗೆ ಉತ್ತಮ ವರ ಸಿಗಲಿ ಎಂದು ಹಾರೈಸಿ ಪೂಜಿಸುತ್ತಾರೆ.

ಪೂಜೆಯ ಮೂಲಕ ಕೋರುವ ಕೋರಿಕೆಗಳು

ಪೂಜೆಯ ಮೂಲಕ ಕೋರುವ ಕೋರಿಕೆಗಳು

ಹಾವುಗಳು ತಮಗೆ ಹಾನಿ ಎಸಗಿದವರ ಮುಖಗಳನ್ನು ಗುರುತಿಸುತ್ತದೆ ಎಂಬ ನಂಬಿಕೆ ಇರುವುದರಿಂದ ಮತ್ತು ಮುಂದೆಂದಾದರೂ ಕೇಡು ಎಸಗಿದವರ ಮನೆಯವರಲ್ಲಿ ಯಾರಿಗಾದರೂ ಹಾನಿ ಮಾಡುವ ಮೂಲಕ ಅನಾಹುತ ತಂದೊಡ್ಡಬಹುದು, ನಮ್ಮಲ್ಲಿ ಯಾರಿಂದಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ ಕಾಪಾಡು ಎಂದು ಜನರು ನಾಗದೇವತೆಯಲ್ಲಿ ಪೂಜೆಯ ಮೂಲಕ ವಿನಂತಿಸಿಕೊಳ್ಳುತ್ತಾರೆ.

English summary

Nag Panchami: Story and Worship Methods

Nag Panchmi is a Hindu festival on which snakes are worshipped. Hinduism is a religion of faith and is surrounded by common search of truth. For Hindus all this means a way of life and worshipping forces of nature has been a part of Hinduism from ancient times.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more