For Quick Alerts
ALLOW NOTIFICATIONS  
For Daily Alerts

ನಾಗರ ಪಂಚಮಿ 2022: ದಿನ, ಶುಭ ಮುಹೂರ್ತ, ಪೂಜಾ ವಿಧಾನ

|

ಹಿಂದೂ ಸಂಸ್ಕೃತಿಯ ಪ್ರಮುಖ ದಿನಗಳಲ್ಲಿ ಒಂದಾದ ನಾಗರ ಪಂಚಮಿಯು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪಂಚಮಿ ತಿಥಿಯ ಅಧಿಪತಿ ನಾಗದೇವತೆಯನ್ನು ಈ ದಿನ ಪೂಜಿಸಲಾಗುತ್ತದೆ. ಹಾವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಾಗ ಪಂಚಮಿಯಂದು ಮಾಡಿದ ಪ್ರಾರ್ಥನೆಯು ನಾಗದೇವತೆಗಳನ್ನು ತಲುಪುತ್ತದೆ ಎಂದು ನಂಬಲಾಗಿದೆ.

ಈ ವರ್ಷ ಅಂದರೆ 2022ರಲ್ಲಿ ನಾಗರ ಪಂಚಮಿಯನ್ನು ಆಗಸ್ಟ್ 2ರಂದು ಅಂದರೆ ಮಂಗಳವಾರ ಆಚರಿಸಲಾಗುವುದು. ಈ ವರ್ಷದ ನಾಗರ ಪಂಚಮಿ ಹಬ್ಬದ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಿ, ಪೂಜೆ ಮಂತ್ರ ಮತ್ತು ಶ್ರೀಕೃಷ್ಣನೊಂದಿಗಿನ ಹಬ್ಬದ ಸಂಬಂಧದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ:

ನಾಗ ಪಂಚಮಿಯಂದು ನಾಗನನ್ನು ಏಕೆ ಪೂಜಿಸುತ್ತಾರೆ?

ನಾಗ ಪಂಚಮಿಯಂದು ನಾಗನನ್ನು ಏಕೆ ಪೂಜಿಸುತ್ತಾರೆ?

ನಾಗರ ಪಂಚಮಿಯಂದು ವಿಶೇಷವಾಗಿ ನಾಗದೇವತೆಗಳು, ನಾಗದೇವರು ನೆಲೆಸುವ ಹುತ್ತಗಳಿಗೆ ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗ ಪೂಜೆ ಮಾಡುವುದರಿಂದ ಜಾತಕದಲ್ಲಿನ ಕಾಳ ಸರ್ಪ ದೋಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ, ಈ ದಿನದಂದು ಬಡವರು, ಅಗತ್ಯವಿರುವವರಿಗೆ ದಾನ ಮಾಡುವುದು ಸಹ ಶುಭಫಲ ಸಿಗಲಿದೆ ಎಂಬ ನಂಬಿಕೆ ಇದೆ.

ನಾಗ ಪಂಚಮಿ 2022 ಶುಭ ಮುಹೂರ್ತ

ನಾಗ ಪಂಚಮಿ 2022 ಶುಭ ಮುಹೂರ್ತ

ನಾಗ ಪಂಚಮಿ 2022 ರ ಪ್ರಾರಂಭ ದಿನಾಂಕ- 02ರ ಆಗಸ್ಟ್ ಬೆಳಿಗ್ಗೆ 5:13 ರಿಂದ

ನಾಗ ಪಂಚಮಿ 2022 ದಿನಾಂಕ ಕೊನೆಗೊಳ್ಳುತ್ತದೆ - 03ರ ಆಗಸ್ಟ್ 05:41 ರವರೆಗೆ

ನಾಗ ಪಂಚಮಿ 2022 ಪೂಜೆಯ ಶುಭ ಸಮಯ- 02 ಆಗಸ್ಟ್ ಬೆಳಿಗ್ಗೆ 5:43 ರಿಂದ 8.25 ರವರೆಗೆ ಪೂಜೆಯ ಶುಭ ಮುಹೂರ್ತವಿದೆ. ಪೂಜೆಯ ಅವಧಿ 2 ಗಂಟೆ 41 ನಿಮಿಷಗಳು.

ನಾಗ ಪಂಚಮಿಯ ದಿನದಂದು ವಿಶೇಷ ಕಾಕತಾಳೀಯ

ನಾಗ ಪಂಚಮಿಯ ದಿನದಂದು ವಿಶೇಷ ಕಾಕತಾಳೀಯ

2022ರ ನಾಗ ಪಂಚಮಿ ದಿನದಂದು ವಿಶೇಷ ಕಾಕತಾಳೀಯ ಸಂಭವಿಸುತ್ತಿದೆ. ನಾಗರ ಪಂಚಮಿ ಈ ವರ್ಷ ಮಂಗಳವಾರ ಬಂದಿದ್ದು, ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತವನ್ನು ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಪತಿಗಾಗಿ ಮಂಗಳವಾರ ಉಪವಾಸವನ್ನು ಮಾಡುತ್ತಾರೆ. ಶ್ರಾವಣ ಸೋಮವಾರದಂತೆಯೇ ಮಂಗಳವಾರವೂ ಬಹಳ ಮುಖ್ಯ. ಈ ವರ್ಷ ನಾಗರಪಂಚಮಿ ದಿನವೇ ಮಂಗಳಗೌರಿ ವ್ರತ ಸಹ ಆಚರಿಸುವುದರಿಂದ ನಾಗಪಂಚಮಿಯಂದು ನಾಗದೇವತೆಯೊಂದಿಗೆ ಶಿವ ಮತ್ತು ತಾಯಿ ಪಾರ್ವತಿಯನ್ನೂ ಪೂಜಿಸಲಾಗುವುದು. ಹೀಗಾಗುವುದು ಅಪರೂಪ. ಆದ್ದರಿಂದ ನಾಗದೇವತೆ ಮತ್ತು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲಿತಾಂಶ ಸಿಗುತ್ತದೆ ಎನ್ನಲಾಗುತ್ತದೆ.

ನಾಗ ಪಂಚಮಿ ಪೂಜಾ ವಿಧಾನ

ನಾಗ ಪಂಚಮಿ ಪೂಜಾ ವಿಧಾನ

* ಬೆಳಗ್ಗೆಯೇ ಎದ್ದು ಶುದ್ಧ ಸ್ನಾನ ಮಾಡಿ, ಪೂಜೆಗೆ ಸಿದ್ಧತೆ ಆರಂಭಿಸಬೇಕು. ನಿಮ್ಮ ಮನಸ್ಸಿನಲ್ಲಿ ಉಪವಾಸದ ನಿರ್ಣಯವನ್ನು ತೆಗೆದುಕೊಳ್ಳಿ.

* ನಾಗ ಪಂಚಮಿಯ ದಿನದಂದು ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿರ್, ಕರ್ಕಟ್, ಶಂಖ, ಕಾಳಿಯ ಮತ್ತು ಪಿಂಗಲ್ ಎಂಬ ದೇವತೆಗಳನ್ನು ಪೂಜಿಸಲಾಗುತ್ತದೆ. ಈ ದಿನ, ಮನೆಯ ಬಾಗಿಲಲ್ಲಿ ಹಿಟ್ಟಿನಿಂದ ಅಥವಾ ಸಗಣಿಯಿಂದ ತಯಾರಿಸಿದ ಎಂಟು ಹಾವುಗಳನ್ನು ಮಾಡಿ ಪೂಜಿಸಲಾಗುವುದು.

* ನಾಗದೇವತೆಗಳನ್ನು ಪೂಜಿಸುವಾಗ ಅರಿಶಿನ, ಕುಂಕುಮ, ಅಕ್ಕಿ, ನೀರು, ಹೂವುಗಳು ಮತ್ತು ಶ್ರೀಗಂಧವನ್ನು ಅರ್ಪಿಸಲಾಗುತ್ತದೆ. ನಾಗದೇವತೆಯನ್ನು ಹಸಿ ಹಾಲಿಗೆ ತುಪ್ಪ ಮತ್ತು ಸಕ್ಕರೆ ಬೆರೆಸಿ ಪೂಜಿಸಬೇಕು.

* ನಂತರ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯಿಂದ ಪಂಚಾಮೃತವನ್ನು ಮಾಡಿ ಮತ್ತು ನಾಗ ಮೂರ್ತಿಗೆ ಅಭಿಷೇಕ ಮಾಡಿಸಿ.

* ನಂತರ ಶ್ರೀಗಂಧ, ಅರಿಶಿನ, ಕುಂಕುಮ, ಸಿಂಧೂರ, ಬಿಲ್ಪತ್ರೆ, ಆಭರಣಗಳು, ಹೂವಿನ ಹಾರ, ದ್ರವ್ಯ, ಧೂಪ-ದೀಪ, ಹಣ್ಣು ಮತ್ತು ವೀಳ್ಯದೆಲೆಯನ್ನು ಅರ್ಪಿಸಿ ಮತ್ತು ಆರತಿ ಮಾಡಿ.

* ನಾಗದೇವತೆಯ ಆರತಿಯನ್ನು ಮಾಡಿ ಮತ್ತು ಮನಸ್ಸಿನಲ್ಲಿ ನಾಗದೇವತೆಯನ್ನು ಧ್ಯಾನಿಸಿ. ಕೊನೆಗೆ ನಾಗ ಪಂಚಮಿಯ ಕಥೆ ಕೇಳಬೇಕು.

* ಸಂಜೆ ನಾಗದೇವತೆಯ ಚಿತ್ರಕ್ಕೆ ಪೂಜೆ ಮಾಡಿದ ನಂತರ ಉಪವಾಸ ಮುರಿಯಿರಿ.

ನಾಗ ಪಂಚಮಿ ಮತ್ತು ಶ್ರೀ ಕೃಷ್ಣನ ಸಂಬಂಧ

ನಾಗ ಪಂಚಮಿ ಮತ್ತು ಶ್ರೀ ಕೃಷ್ಣನ ಸಂಬಂಧ

ಪುರಾಣಗಳ ಪ್ರಕಾರ, ಕಂಸನೇ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಶ್ರೀಕೃಷ್ಣನನ್ನು ಕೊಲ್ಲಲು ಕಾಳಿಯ ಎಂಬ ಸರ್ಪವನ್ನು ಕಳುಹಿಸಿದನು. ಕಾಳಿಯ ಗ್ರಾಮಸ್ಥರಿಗೆ ತುಂಬಾ ತೊಂದರೆ ನೀಡುತ್ತಿದ್ದನು, ಜನ ಬಹಳ ಹೆದರುತ್ತಿದ್ದರು. ಒಂದು ದಿನ ಕೃಷ್ಣನು ಆಟವಾಡುತ್ತಿದ್ದಾಗ ಅವನ ಚೆಂಡು ನದಿಗೆ ಬಿದ್ದಿತು. ಅವರನ್ನು ಕರೆತರಲು ನದಿಗೆ ಇಳಿದಾಗ ಕಾಳಿಯ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಶ್ರೀ ಕೃಷ್ಣನು ಕಾಳಿಯ ವಿರುದ್ಧ ಗೆಲ್ಲುತ್ತಾನೆ, ನಂತರ ಕಾಳಿಯ ಶ್ರೀಕೃಷ್ಣನಲ್ಲಿ ಕ್ಷಮೆಯಾಚಿಸಿದನು ಮತ್ತು ಗ್ರಾಮಸ್ಥರಿಗೆ ಎಂದಿಗೂ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದನು. ಕಾಳಿಯ ನಾಗ ವಿರುದ್ಧ ಬಾಲಕೃಷ್ಣನ ವಿಜಯವನ್ನು ನಾಗ ಪಂಚಮಿ ಎಂದು ಆಚರಿಸಲಾಗುತ್ತದೆ.

ನಾಗ ಪಂಚಮಿ ಇತಿಹಾಸ ಮತ್ತು ಮಹತ್ವ

ನಾಗ ಪಂಚಮಿ ಇತಿಹಾಸ ಮತ್ತು ಮಹತ್ವ

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ನಾಗಪಂಚಮಿಯ ದಿನದಂದು ಸರ್ಪಗಳನ್ನು ಪೂಜಿಸುವುದರಿಂದ ಜೀವನದ ತೊಂದರೆಗಳು ನಾಶವಾಗುತ್ತವೆ. ಬಯಸಿದ ಫಲಿತಾಂಶವನ್ನು ಸಾಧಿಸಲಾಗುತ್ತದೆ. ಈ ದಿನದಂದು ಸರ್ಪಗಳ ದರ್ಶನವನ್ನು ಹೊಂದಿದ್ದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಹಾವುಗಳಿಗೆ ಸ್ನಾನ ಮಾಡಿಸಿ ಹಾಲು ಉಣಿಸಿದರೆ ಪುನರುತ್ಥಾನ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ಜೀವಂತ ಹಾವುಗಳನ್ನು ಪೂಜಿಸಲಾಗುತ್ತದೆ ಏಕೆಂದರೆ ಜನರು ಅವುಗಳನ್ನು ಸರ್ಪ ದೇವರುಗಳ ಪ್ರತಿನಿಧಿಗಳು ಎಂದು ಪರಿಗಣಿಸುತ್ತಾರೆ. ಅನೇಕ ಸರ್ಪ ದೇವರುಗಳಿವೆ, ಆದಾಗ್ಯೂ, ಕೆಳಗಿನ 12 ನಾಗ ಪಂಚಮಿಯಂದು ಪೂಜಿಸಲಾಗುತ್ತದೆ. ಅನಂತ, ವಾಸುಕಿ, ಶೇಷ, ಪದ್ಮಾ, ಕಂಬಳ, ಕಾರ್ಕೋಟಕ, ಅಶ್ವತಾರ, ಧೃತರಾಷ್ಟ್ರ, ಶಂಖಪಾಲ, ಕಲಿಯಾ, ತಕ್ಷಕ, ಪಿಂಗಲ.

English summary

Nag Panchami 2022: Date, Time, Tithi, Shubh Muhurat, Puja Vidhi and Significance in kannada

Here we are discussing about Nag Panchami 2022: Date, Time, Tithi, Shubh Muhurat, Puja Vidhi and Significance in kannada. Read more.
X
Desktop Bottom Promotion