For Quick Alerts
ALLOW NOTIFICATIONS  
For Daily Alerts

ನಾಗರ ಪಂಚಮಿಯ ದಿನ ಪೂಜೆ-ಉಪವಾಸ ಹೀಗಿರಲಿ

By Deepu
|

ಹಿಂದೂ ಸಂಪ್ರದಾಯದಲ್ಲಿ ಹಲವು ಪ್ರಾಣಿಗಳೂ ಪೂಜ್ಯಸ್ಥಾನ ಪಡೆದಿವೆ. ಗೋವು, ಕೋತಿ, ನಂದಿ, ಮೊದಲಾದವುಗಳನ್ನು ನಾವು ದೇವರಿಗೆ ಸಮಾನವಾಗಿ ಕಾಣುತ್ತೇವೆ. ಮನೆಯ ಪ್ರಾರಂಭೋತ್ಸವದಲ್ಲಿಯೂ ಗೋವನ್ನು ಮನೆಯೊಳಗೆ ತರುತ್ತಾರೆ. ರಾಜಸ್ಥಾನದಲ್ಲಿ ಇಲಿಗಳಿಗಾಗಿಯೇ ಒಂದು ದೇವಾಲಯವಿದೆ! ಪೂಜೆಗೊಳಪಡುವ ಇನ್ನೊಂದು ಜೀವಿಯೆಂದರೆ ಹಾವು.

ಪುರಾತನಕಾಲದಿಂದಲೂ ದೇವರ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಹಿಂದೂಗಳು ಶ್ರಾವಣ ಮಾಸದ ಐದನೆಯ ದಿನ ಅರ್ಧಚಂದ್ರನಿರುವ ರಾತ್ರಿಹೊತ್ತಿನಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸುವ ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್‌ನ ಒಂದು ಮಾಸವಾಗಿದ್ದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತದೆ. ನಾಗರ ಪಂಚಮಿಗೆ ಉಪವಾಸವಿದ್ದು ಹಾವಿಗೆ ಹಾಲೆರೆದು ಬರುವ ಸಂಪ್ರದಾಯವಿದೆ. ಈ ದಿನ ಉಪವಾಸ ಹೇಗಿರಬೇಕು, ಪೂಜಾ ವಿಧಾನಗಳೇನು ಎಂದು ಹೇಳಲಾಗಿದೆ ನೋಡಿ.

ಎಲ್ಲಾ ಹಬ್ಬಕ್ಕೆ ಮುನ್ನುಡಿ ನಾಗರ ಪಂಚಮಿ

ಎಲ್ಲಾ ಹಬ್ಬಕ್ಕೆ ಮುನ್ನುಡಿ ನಾಗರ ಪಂಚಮಿ

ಆಷಾಢ ಕಳೆದು ಶ್ರಾವಣ ಮಾಸ ಬಂದಾಗ ಹಬ್ಬಗಳ ಆರಂಭಕ್ಕೆ ಚಾಲನೆ ದೊರೆತಂತೆಯೇ. ಅದರಲ್ಲಿ ಬರುವ ಪ್ರಮುಖ ಹಬ್ಬ ನಾಗರ ಪಂಚಮಿಯಾಗಿದೆ. ನಾಗಪ್ಪನಿಗೆ ಹಾಲೆರೆದು ಪೂಜಿಸುವ ಈ ಹಬ್ಬವನ್ನು ಕರ್ನಾಟಕದಲ್ಲಿಯೇ ತುಸು ವಿಜೃಂಭಣೆಯಿಂದಲೇ ನಡೆಸುತ್ತಾರೆ. ಹುತ್ತಕ್ಕೆ ಹಾಲೆರೆದು ಬೇಡಿದ್ದನ್ನು ನೀಡೋ ಭಗವಂತ ಎಂದು ಹುತ್ತದ ಮುಂದೆ ಕನ್ಯೆಯರು ವಿವಾಹಿತ ಸ್ತ್ರೀಯರು ಕೈಮುಗಿದು ನಿಲ್ಲುತ್ತಾರೆ. ಶಿವನ ಕೊರಳಲ್ಲಿ ಹಾರವಾಗಿರುವ ನಾಗರ ಹಾವನ್ನು ಪೂಜಿಸುವುದರಿಂದ ಶಿವನ ಕೃಪಾಕಟಾಕ್ಷಕವನ್ನು ಪಡೆದುಕೊಳ್ಳಬಹುದು ಎಂಬುದು ಭಕ್ತರ ಮನದ ಇಂಗಿತವಾಗಿದೆ. ಈ ದಿನ ಶಿವನ ಪೂಜೆಯನ್ನು ಭಕ್ತರು ಮಾಡುತ್ತಾರೆ. ಈ ದಿನ ನೀವು ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ಮಂತ್ರವನ್ನು 108 ಬಾರಿ ಜಪಿಸಬಹುದಾಗಿದೆ. ಧೂಪ ದೀಪ ಮತ್ತು ಹಾಲನ್ನು ಲಿಂಗಕ್ಕೆ ಅರ್ಪಿಸಬಹುದಾಗಿದೆ. ಕೆಲವೊಂದು ಸ್ಥಳಗಳಲ್ಲಿ ನಾಗರ ಪಂಚಮಿಯನ್ನು ಗರುಡ ಪಂಚಮಿ ಎಂದೂ ಕರೆಯುತ್ತಾರೆ.

ಭಾರತದಾದ್ಯಂತ ಶ್ರದ್ಧಾ ಮತ್ತು ಭಕ್ತಿಯಲ್ಲಿ ಆಚರಿಸಲಾಗುತ್ತದೆ

ಭಾರತದಾದ್ಯಂತ ಶ್ರದ್ಧಾ ಮತ್ತು ಭಕ್ತಿಯಲ್ಲಿ ಆಚರಿಸಲಾಗುತ್ತದೆ

ಇಡೀ ಭಾರತದಾದ್ಯಂತ ಈ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ಹಿಂದೂಗಳು ನಾಗರ ಪಂಚಮಿಯನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಹಿಂದಿನ ಕಾರಣಗಳೇನು? ಎಂಬುದನ್ನು ನಾಗರ ಪಂಚಮಿಯನ್ನು ನಾಗ ದೇವತೆಗಳನ್ನು ಅಂದರೆ ಹಾವುಗಳನ್ನು ಆರಾಧಿಸುವ ಒಂದು ಹಬ್ಬವಾಗಿ ಹಿಂದೂಗಳು ಆಚರಿಸುತ್ತಾರೆ. ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ.

ಯಾಕೆ ಇದೇ ತಿಂಗಳುಗಳಲ್ಲಿ ಹಾವುಗಳಿಗೆ ಪೂಜೆ ಮಾಡುತ್ತಾರೆ

ಯಾಕೆ ಇದೇ ತಿಂಗಳುಗಳಲ್ಲಿ ಹಾವುಗಳಿಗೆ ಪೂಜೆ ಮಾಡುತ್ತಾರೆ

ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.

ನಾಗರ ಪಂಚಮಿಯ ದಿನಾಂಕಗಳು ಮತ್ತು ಸಮಯ

ನಾಗರ ಪಂಚಮಿಯ ದಿನಾಂಕಗಳು ಮತ್ತು ಸಮಯ

ಆಗಸ್ಟ್ 15 ಬುಧವಾರದಂದು ನಾಗರ ಪಂಚಮಿಯಂದು ಆಚರಿಸಲಾಗುತ್ತದೆ

* ಪಂಚಮಿ ತಿಥಿ ಅಂದರೆ ಆಗಸ್ಟ್ 5 ಮತ್ತು ಆಗಸ್ಟ್ 15.

* ಆಗಸ್ಟ್ 15 3: 27 ಮುಂಜಾನೆ ಪಂಚಮಿ ತಿಥಿ ಆರಂಭವಾಗುತ್ತದೆ

* ಪೂಜೆಗೆ ಮಂಗಳಕರವಾಗಿರುವ ಸಮಯವೆಂದರೆ ಮುಂಜಾನೆ 5:55 ರಿಂದ 8:31

*ಪಂಚಮಿ ತಿಥಿಯು ಕೊನೆಗೊಳ್ಳುವುದು ಆಗಸ್ಟ್ 16 ಗುರುವಾರ ಬೆಳಗ್ಗೆ 1:51 ಕ್ಕೆ

ನಾಗರ ಪಂಚಮಿಯಂದು ಹಾವು ಕಾಣಿಸಿಕೊಂಡರೆ ಸಂತಸಪಡುತ್ತಾರೆ

ನಾಗರ ಪಂಚಮಿಯಂದು ಹಾವು ಕಾಣಿಸಿಕೊಂಡರೆ ಸಂತಸಪಡುತ್ತಾರೆ

ಇತರ ದಿನಗಳಲ್ಲಿ ಜನರು ಹಾವುಗಳನ್ನು ಕಂಡರೆ ಭಯಗೊಳ್ಳುತ್ತಾರೆ ಆದರೆ ನಾಗರ ಪಂಚಮಿಯಂದು ಹಾವು ಕಾಣಿಸಿಕೊಂಡರೆ ಸಂತಸಪಡುತ್ತಾರೆ. ನಾಗನಿಗೆ ಹಾಲನ್ನು ಅರ್ಪಿಸಿ ಶಿವನ ಸಂಕೇತವಾಗಿ ಪೂಜಿಸುತ್ತಾರೆ. ನಾಗರ ಪಂಚಮಿಯಂದು ಹಾವುಗಳು ಕಣ್ಣಿಗೆ ಕಂಡರೆ ಆ ಭಕ್ತರ ಮೇಲೆ ಶಿವನ ಕಟಾಕ್ಷ ಇದೆ ಎಂದಾಗಿದೆ.

ಹಾವಿನ ಕಡಿತದಿಂದ ರಕ್ಷಣೆಯನ್ನು ಮಾಡುತ್ತದೆ

ಹಾವಿನ ಕಡಿತದಿಂದ ರಕ್ಷಣೆಯನ್ನು ಮಾಡುತ್ತದೆ

ಶ್ರಾವಣ ಮಾಸದಲ್ಲಿ ಮಳೆ ಸರ್ವೇಸಾಮಾನ್ಯವಾಗಿದೆ. ತಮ್ಮ ಬಿಲಗಳಿಂದ ಎಲ್ಲಾ ಹಾವುಗಳು ಬೆಚ್ಚನೆಯ ಸ್ಥಳವನ್ನು ಹುಡುಕಿಕೊಂಡು ಸಂಚರಿಸುತ್ತವೆ. ಹಾವಿನ ಕಡಿತದಿಂದ ತಪ್ಪಿಸಿಕೊಳ್ಳಲು ಜನರು ಶಂಕರನಿಗೆ ಮತ್ತು ಹಾವಿಗೆ ಪೂಜೆ ಮಾಡಲು ಆರಂಭಿಸುತ್ತಾರೆ. ಈ ದಿನ ಹಾವಿಗೆ ವಿಶೇಷ ಆಹಾರವನ್ನು ಜನರು ನೀಡುತ್ತಾರೆ ಅಂತೆಯೇ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತರಲು ನಾಗನನ್ನು ಪೂಜಿಸುವುದರಿಂದ ಸಾಧ್ಯ ಎಂಬುದು ಭಕ್ತರ ನಂಬಿಕೆಯಾಗಿದೆ. ಹೊಲಗಳಲ್ಲಿ ದುಡಿಯುವ ರೈತರಿಗೆ ಹಾವಿನ ಕಡಿತದಿಂದ ರಕ್ಷಣೆ ಬೇಕೇ ಬೇಕು. ಆದ್ದರಿಂದ ಈ ದಿನ ಅವರಿಗೆ ಅತಿ ಪ್ರಮುಖವಾದುದು. ಪತ್ನಿಯರು ಈ ದಿನ ತಮ್ಮ ಪತಿಗಾಗಿ ವಿಶೇಷ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ.

ನಾಗರ ಪಂಚಮಿ ಮಾಡುವ ಇತರ ಕಾರಣಗಳು

ನಾಗರ ಪಂಚಮಿ ಮಾಡುವ ಇತರ ಕಾರಣಗಳು

ಇಲಿಗಳನ್ನು ಹಾವುಗಳು ತಿಂದು ಬೆಳೆಯನ್ನು ಸಂರಕ್ಷಿಸುತ್ತವೆ. ಈ ಕಾರಣದಿಂದ ಕೂಡ ನಾಗರ ಪಂಚಮಿಯಂದು ವಿಶೇಷ ಪೂಜೆಯನ್ನು ನಾಗನಿಗೆ ಮಾಡುತ್ತಾರೆ. ಹೊಸದಾಗಿ ವಿವಾಹಿತರಾದವರಿಗೆ ನಾಗರ ಪಂಚಮಿ ವೃತದೊಂದಿಗೆ ಶ್ರಾವಣ ಸೋಮವಾರ, ಮಂಗಳ ಗೌರಿ ವೃತ, ಮಧುಶರ್ವಣಿ ಅತ್ಯಂತ ಪವಿತ್ರವಾಗಿದೆ. ಮತ್ತು ಒಳ್ಳೆಯದೂ ಕೂಡ. ಹಾವಿನ ಭಯ ಮತ್ತು ಹಾವಿನ ಕಡಿತದಿಂದ ರಕ್ಷಣೆಯನ್ನು ಇದು ನೀಡುತ್ತದೆ. ಅಂತೆಯೇ ಪತಿಯ ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಕರುಣಿಸಲು ಇದು ಸಹಕಾರಿಯಾಗಿದೆ.

ಪುರಾಣದಲ್ಲಿ ತಿಳಿಸಿರುವ ಒಂದು ಕಥೆಯ ಪ್ರಕಾರ

ಪುರಾಣದಲ್ಲಿ ತಿಳಿಸಿರುವ ಒಂದು ಕಥೆಯ ಪ್ರಕಾರ

ಪುರಾಣದಲ್ಲಿ ತಿಳಿಸಿರುವ ಒಂದು ಕಥೆಯ ಪ್ರಕಾರ ದಂಪತಿಗಳು ಜೀವನದಲ್ಲಿ ಎಲ್ಲಾ ಸುಖ ಸೌಭಾಗ್ಯವನ್ನು ಪಡೆದಿದ್ದರೂ ಮಕ್ಕಳ ಭಾಗ್ಯವಿಲ್ಲದೆ ಬೇಸರಗೊಂಡಿದ್ದರು. ನಾಗರ ಪಂಚಮಿ ಹಿಂದಿನ ದಿನ ಅವರ ಕನಸಿನಲ್ಲಿ ಐದು ನಾಗಗಳು ಪತ್ನಿಗೆ ಕಾಣಿಸಿಕೊಂಡು ಐದು ನಾಗಗಳಿಗೆ ಪ್ರಾರ್ಥನೆ ಸಲ್ಲಿಸಿದರೆ ಅವರಿಗೆ ಗಂಡು ಮಗುವಿನ ಸಂತಾನವಾಗುತ್ತದೆ ಎಂದು ಹೇಳುತ್ತದೆ. ಹೀಗೆ ಪತ್ನಿಯು ತನ್ನ ಗಂಡನಲ್ಲಿ ತನಗೆ ಉಂಟಾದ ಕನಸು ಮತ್ತು ಅಶರೀರವಾಣಿಯ ಬಗ್ಗೆ ತಿಳಿಸುತ್ತಾಳೆ. ಆಕೆ ಐದು ನಾಗಗಳ ಚಿತ್ರವನ್ನು ಬಿಡಿಸುತ್ತಾಳೆ ಹೀಗೆ ನಾಗಕ್ಕೆ ಹಾಲು ಅರ್ಪಿಸಿ ಪೂಜೆಯನ್ನು ಮಾಡುತ್ತಾಳೆ. ನಾಗನು ಅವರ ಪೂಜೆಗೆ ಮೆಚ್ಚಿ ಗಂಡು ಮಗುವನ್ನು ನೀಡುತ್ತಾರೆ.

ಕಲಿಯಗದ ನಾಗ

ಕಲಿಯಗದ ನಾಗ

ಹಿಂದೂ ಸಂಪ್ರದಾಯದ ಪ್ರಕಾರ ಕಲಿಯು, ಯಮುನಾ ನದಿಯಲ್ಲಿ ವಾಸಿಸುವ ಒಂದು ವಿಷಕಾರಿ ನಾಗ. ಅವನ ಹೆಂಡತಿಯೊಂದಿಗೆ ವೃಂದಾವನದ ನದಿಯ ನೀರನ್ನು ವಿಷಪೂರಿತಗೊಳಿಸಿದನು. ಇದನ್ನು ಪ್ರಾಣಿ-ಪಕ್ಷಿಗಳಾರು ಕುಡಿಯಲು ಸಾಧ್ಯವಾಗಲಿಲ್ಲ. ಕೃಷ್ಣ ಪರಮಾತ್ಮನು ಈ ಬಗ್ಗೆ ತಿಳಿದುಕೊಂಡಾಗ ಉದ್ದೇಶ ಪೂರ್ವಕವಾಗಿ ನದಿಯಲ್ಲಿ ಇಳಿದನು. ಕಲಿಯು ಕೃಷ್ಣನ ದೇಹವನ್ನು ಸುತ್ತಿಕೊಂಡನು. ಕೃಷ್ಣನು ಬೆಳೆಯುತ್ತಾ ಹೋದನು. ಆಗ ಕಲಿಯು ಬಿಡಲೇ ಬೇಕಾಯಿತು. ನಂತರ ಶ್ರೀಕೃಷ್ಣನು ಕಲಿಯ ತಲೆಯ ಮೇಲೆ ನೃತ್ಯ ಮಾಡಲು ಆರಂಭಿಸಿದನು. ಕಲಿಯು ನಿಧಾನವಾಗಿ ರಕ್ತ ವಾಂತಿಯನ್ನು ಮಾಡಲು ಪ್ರಾರಂಭಿಸಿದನು. ಕಲಿಯ ಹೆಂಡತಿಯು ಅದೇ ಸಮಯದಲ್ಲಿ ಭಕ್ತಿಯಿಂದ ಕೃಷ್ಣನಲ್ಲಿ ಕ್ಷಮೆಯಾಚಿಸಿದಳು. ನಂತರ ಕಲಿಯು ಕ್ಷಮೆಯಾಚಿಸಿ, ಯಾರಿಗೂ ತೊಂದರೆ ಕೊಡುವುದಿಲ್ಲವೆಂದು ಹೇಳಿದನು. ಆಗ ಕೃಷ್ಣನು ರಾಮನಕ ದ್ವೀಪಕ್ಕೆ ಹೋಗಲು ಆದೇಶಿಸಿದನು ಎನ್ನುವ ಪ್ರತೀತಿ ಇದೆ.

English summary

Nag Panchami 2018: Vrat, Puja Date, Auspicious Time

Naag Panchami falls on the fifth day of the fortnight and is dedicated to the worship of snakes. Lord Shiva wears snakes around his neck, and is believed to be the primary deity, worshipped by the snakes as well. Therefore, Lord Shiva is also worshipped on this day. On Naag Panchami, snakes are offered prayers in many regions of the country. Worshipping snakes pleases Lord Shiva as well.
X
Desktop Bottom Promotion