For Quick Alerts
ALLOW NOTIFICATIONS  
For Daily Alerts

ನಾಗರ ಪಂಚಮಿಯ ಮಹತ್ವ, ಉಪವಾಸ ಮತ್ತು ಪೂಜಾ ವಿಧಿ ವಿಧಾನ

By Hemanth
|

ಹಿಂದೂಗಳಿಗೆ ನಾಗರ ಪಂಚಮಿ ಬಂತೆಂದರೆ ಇನ್ನು ಹಬ್ಬಗಳ ಸುಗ್ಗಿ ಶುರು ಎನ್ನಬಹುದು. ಯಾಕೆಂದರೆ ಮೊದಲಾಗಿ ಬರುವುದು ನಾಗರ ಪಂಚಮಿ. ಇದರ ಬಳಿಕ ಒಂದೊಂದೇ ಹಬ್ಬಗಳು ವರ್ಷಾಂತ್ಯದ ತನಕ ಬರುವುದು. ಕರ್ನಾಟಕ ಸಹಿತ ಕೆಲವೊಂದು ರಾಜ್ಯಗಳಲ್ಲಿ ನಾಗರಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ನಾಗರಪಂಚಮಿಯನ್ನು ವಿವಿಧ ರೀತಿಯಿಂದ ಆಚರಿಸಲಾಗುತ್ತದೆ. ನಾಗನ ಕಲ್ಲಿಗೆ ಹಾಲೆರೆಯುವುದು, ಉಪವಾಸ ವ್ರತ ಮಾಡುವುದು ಇತ್ಯಾದಿಗಳು ನಾಗರಪಂಚಮಿ ಆಚರಣೆಯಲ್ಲಿ ಪ್ರಮುಖವಾಗಿರುವಂತದ್ದಾಗಿದೆ. ಶ್ರಾವಣ ಮಾಸದ ಪ್ರಕಾಶರ್ಧಮಾನದ ಐದನೇ ದಿನದಂದು ನಾಗರಪಂಚಮಿ ಬರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಪಂಚಾಂಗದ ಪ್ರಕಾರ ಐದನೇ ದಿನದ ದೇವರು ನಾಗ. ಈ ದಿನದಂದು ನಾಗಗಳನ್ನು ಆರಾಧಿಸಲಾಗುವುದು....

ನಾಗರ ಪಂಚಮಿಯ ಮುಹೂರ್ತ

ನಾಗರ ಪಂಚಮಿಯ ಮುಹೂರ್ತ

*ನಾಗರ ಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿ(ಶ್ರಾವಣ ತಿಂಗಳ ಕಾಶರ್ಧಮಾನದ ಐದನೇ ದಿನ)ಯಂದು ಆಚರಿಸಲಾಗುವುದು.

*ಪಂಚಮಿಯಂದು ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದರೆ ಮತ್ತು ಚತುದರ್ಶಿಯಂದು ಕೂಡ ಮೂರಕ್ಕಿಂತ ಕಡಿಮೆ ಮುಹೂರ್ತವಿದ್ದರೆ ಆಗ ವ್ರತವನ್ನು ಚತುರ್ಥಿಯಂದು ಆಚರಿಸಬೇಕು.

*ಚತುರ್ಥಿಯಂದು ಮೂರಕ್ಕಿಂತ ಹೆಚ್ಚಿನ ಮುಹೂರ್ತವಿದ್ದರೆ, ಆಗ ಪಂಚಮಿಯು ಮರುದಿನ ಎರಡು ಮುಹೂರ್ತಗಳ ಕೊನೆಗೊಂಡ ಬಳಿಕ ಆರಂಭವಾಗುವುದು. ಇದರಿಂದ ಮರುದಿನ ಉಪವಾಸ ಮಾಡಬೇಕು.

ನಾಗರ ಪಂಚಮಿ ಉಪವಾಸ ಮತ್ತು ಪೂಜಾ ವಿಧಿ

ನಾಗರ ಪಂಚಮಿ ಉಪವಾಸ ಮತ್ತು ಪೂಜಾ ವಿಧಿ

1. 8 ಹಾವುಗಳನ್ನು ಈ ದಿನದ ದೇವರೆಂದು ಪರಿಗಣಿಸಲಾಗಿದೆ. ಇದರಿಂದ ಈ ದಿನ ಹಾವುಗಳನ್ನು ಪೂಜಿಸಬೇಕು. ಹಾವುಗಳ ಹೆಸರುಗಳು ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಲೀರ್, ಕರ್ಕತ ಮತ್ತು ಶಂಖಪಾಲ

2. ಚತುರ್ಥಿಯಂದು ಒಂದು ಹೊತ್ತು ಊಟ ಮಾಡಿ ಮತ್ತು ಪಂಚಮಿಯಂದು ಉಪವಾಸ ಮಾಡಿ. ಪಂಚಮಿಯಂದು ಉಪವಾಸ ಬಿಟ್ಟ ಬಳಿಕ ರಾತ್ರಿ ಊಟ ಮಾಡಿ.

3. ಪೂಜೆ ಮಾಡಲು ನಾಗದೇವರ ಚಿತ್ರ ಅಥವಾ ಮಣ್ಣಿನಿಂದ ಮಾಡಿದ ನಾಗನ ಮೂರ್ತಿಯನ್ನು ಮಣ್ಣಿನ ಬೆಂಚಿನ ಮೇಲಿಡಿ.

4. ಅರಶಿನ, ಕುಂಕುಮ, ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸಿ.

5. ಇದರ ಬಳಿಕ ಹಸಿಹಾಲು, ತುಪ್ಪ, ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸಿ.

6. ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗಿ.

7. ಹಾವಾಡಿಗರಿಗೆ ದಾನ ಮಾಡಬಹುದು ಮತ್ತು ಹಾಲಿನ ಮಿಶ್ರಣ ನೀಡಬಹುದು.

8. ಪೂಜೆಯ ಅಂತ್ಯದಲ್ಲಿ ನೀವು ನಾಗ ಪಂಚಮಿ ಕಥೆ ಕೇಳಿ.

ನಾಗರಪಂಚಮಿ ವಿಶೇಷ: ನಾಗ ದೇವತೆಗಳ ಹಲವು ರೂಪದ ತುಣುಕು ಕಥೆಗಳು

ಸೂಚನೆ:

ಸೂಚನೆ:

ಸಂಪ್ರದಾಯದ ಪ್ರಕಾರ ನಾಗರ ಪಂಚಮಿಯನ್ನು ಚೈತ್ರಶುಕ್ಲ ಪಂಚಮಿ ಅಥವಾ ಭಾದ್ರಪದ ಶುಕ್ಲ ಪಂಚಮಿಯಂದು ಕೆಲವೊಂದು ಕಡೆಗಳಲ್ಲಿ ಆಚರಿಸಲಾಗುತ್ತದೆ. ಆಚರಣೆಗಳು ಒಂದು ಕಡೆಯಿಂದ ಮತ್ತೊಂದು ಕಡೆ ಭಿನ್ನವಾಗಿರುವುದರಿಂದಾಗಿ ಕೆಲವೊಂದು ಕಡೆಗಳಲ್ಲಿ ಕೃಷ್ಣ ಪಂಚಮಿಯಂದು ಕೂಡ ಇದನ್ನು ಆಚರಿಸಲಾಗುವುದು.

ನಾಗರ ಪಂಚಮಿಯ ಪುರಾಣ

ನಾಗರ ಪಂಚಮಿಯ ಪುರಾಣ

*ಹಿಂದೂ ಪುರಾಣದ ಪ್ರಕಾರ ಬ್ರಹ್ಮ ದೇವರ ಪುತ್ರ ಋಷಿ ಕಶ್ಯಪನಿಗೆ ನಾಲ್ಕು ಮಂದಿ ಪತ್ನಿಯರಿದ್ದರು. ಮೊದಲ ಪತ್ನಿ ದೇವತಾಸನಿಗೆ, ಎರಡನೇ ಪತ್ನಿ ಗರುಡನಿಗೆ, ನಾಲ್ಕನೇ ಪತ್ನಿಯು ದೈತರ(ರಾಕ್ಷಸರು)ನ್ನು ಭೂಮಿ ತಂದಳು ಎನ್ನುವ ನಂಬಿಕೆಯಿದೆ. ಮೂರನೇ ಪತ್ನಿ ಕದ್ರುಗೆ ನಾಗವಂಶದೊಂದಿಗೆ ಸಂಬಂಧವಿದ್ದ ಕಾರಣ ಆಕೆ ನಾಗಗಳನ್ನು ರೂಪಿಸಿದಳು.

*ಪುರಾಣಗಳ ಪ್ರಕಾರ ಎರಡು ರೀತಿಯ ನಾಗ ದೇವತೆಗಳು ಇವೆ. ದಿವ್ಯಾ ಮತ್ತು ಭುಮ. ವಾಸುಕಿ, ತಕ್ಷಕ ಇತ್ಯಾದಿಗಳು ದಿವ್ಯಾ ನಾಗವಂಶಕ್ಕೆ ಸೇರಿರುವುದು. ಇವರು ಭೂಮಿಯ ಭಾರವನ್ನು ಹೊತ್ತುಕೊಂಡಿರುವ ಅವುಗಳಲ್ಲಿ ಅಗ್ನಿಯಂತಹ ವರ್ಚಸ್ಸು ಇದೆ ಎಂದು ನಂಬಲಾಗಿದೆ. ಇವುಗಳು ಕ್ರೋಧಕ್ಕೆ ಒಳಗಾದರೆ ಆಗ ನಾಲಗೆ ಹೊರಹಾಕಿ ಬೆಂಕಿಯುಗುಳಿ ಎಲ್ಲವನ್ನು ಭಸ್ಮ ಮಾಡುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಇವುಗಳ ವಿಷಕ್ಕೆ ಯಾವುದೇ ಮದ್ದಿಲ್ಲವೆನ್ನಲಾಗುತ್ತದೆ. ದವಡೆಯಲ್ಲಿ ವಿಷ ಹೊಂದಿರುವ 80 ಹಾವುಗಳು ಭೂಮಿ ಮೇಲಿದೆ ಎನ್ನಲಾಗುತ್ತದೆ.

*8 ನಾಗಗಳಾದ ಅನಂತ, ವಾಸುಕಿ, ತಕ್ಷಕ, ಕಾರ್ಕೋಟಕ, ಪದ್ಮ, ಮಹಾಪದ್ಮ, ಶಂಖಪಾಲ ಮತ್ತು ಕುಲಿಕ ಎಲ್ಲಾ ಹಾವುಗಳಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಎರಡು ಹಾವುಗಳು ಬ್ರಾಹ್ಮಣ, ಎರಡು ಹಾವುಗಳು ಕ್ಷತ್ರೀಯ ಮತ್ತು ಎರಡು ಹಾವುಗಳು ವೈಶ್ಯ ಮತ್ತು ಎರಡು ಶೂದ್ರ ಎಂದು ಪರಿಗಣಿಸಲಾಗಿದೆ. ಅನಂತ ಮತ್ತು ಕುಲಿಕ ಬ್ರಾಹ್ಮಣ ಹಾವುಗಳು, ವಾಸುಕಿ ಮತ್ತು ಶಂಖಪಾಲ ಕ್ಷತ್ರೀಯ, ತಕ್ಷಕ ಮತ್ತು ಮಹಾಪದ್ಮ ಹಾವುಗಳು ವೈಶ್ಯ, ಪದ್ಮ ಮತ್ತು ಕಾರ್ಕೋಟಕ ಶೂದ್ರ ಎಂದು ನಂಬಲಾಗಿದೆ.

ನಾಗರ ಪಂಚಮಿಯ ಪುರಾಣ

ನಾಗರ ಪಂಚಮಿಯ ಪುರಾಣ

*ಅರ್ಜುನನ ಮೊಮ್ಮಗ ಮತ್ತು ಪರೀಕ್ಷಿತನ ಮಗನಾಗಿರುವ ಜನ್ಮಾಜೇಯ ನಾಗಗಳ ವಿರುದ್ಧ ಸೇಡು ತೀರಿಸಲು ಮತ್ತು ಅವುಗಳ ವಂಶವನ್ನು ನಾಶ ಮಾಡಲು ನಾಗಯಜ್ಞವನ್ನು ಆಯೋಜಿಸಿದ. ತಕ್ಷಕನು ಪರೀಕ್ಷಿತನನ್ನು ಕೊಂದಿರುವುದೇ ಜನ್ಮಾಜೇಯನ ಕೋಪಕ್ಕೆ ಕಾರಣವಾಗಿತ್ತು. ನಾಗಗಳ ರಕ್ಷಣೆ ಮಾಡಲು ಋಷಿ ಜಾರತಕುವಿನ ಮಗ ಅಸ್ತಿಕ ಮುನಿಯು ಯಜ್ಞವನ್ನು ನಿಲ್ಲಿಸಿದ. ಈ ಯಜ್ಞವನ್ನು ನಿಲ್ಲಿಸಿದ ದಿನವೇ ಶ್ರಾವಣ ಶುಕ್ಲ ಪಕ್ಷದ ಪಂಚಮಿಯಾಗಿತ್ತು. ತಕ್ಷಕ ಮತ್ತು ಆತನ ವಂಶವನ್ನು ಅಸ್ತಿಕ ಮುನಿ ಕಾಪಾಡಿದ. ಈ ದಿನದಿಂದ ಜನರು ನಾಗರಪಂಚಮಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ನಂಬಲಾಗಿದೆ.

ನಾಗರ ಪಂಚಮಿಯ ಮಹತ್ವ

ನಾಗರ ಪಂಚಮಿಯ ಮಹತ್ವ

*ಪ್ರಾಚೀನ ಕಾಲದಿಂದಲೂ ಹಾವುಗಳನ್ನು ಪೂಜಿಸಿಕೊಂಡು ಬರಲಾಗುತ್ತಿದೆ ಎಂದು ಹಿಂದೂಗಳ ನಂಬಿಕೆಯಾಗಿದೆ. ಇದರಿಂದ ನಾಗರ ಪಂಚಮಿಯ ದಿನದಂದು ನಾಗ ಪೂಜೆಯು ಮಹತ್ವದ್ದಾಗಿದೆ.

*ಈ ದಿನ ನಾಗದೇವರನ್ನು ಪೂಜಿಸುವವರಿಗೆ ಹಾವುಗಳ ಬಗ್ಗೆ ಭೀತಿಯಿರುವುದಿಲ್ಲವೆಂದು ನಂಬಲಾಗಿದೆ.

*ಸ್ನಾನ ಮಾಡಿಕೊಂಡು ಶುದ್ಧರಾಗಿ ಹಾವುಗಳಿಗೆ ಹಾಲು ನೀಡಿ, ಅವುಗಳನ್ನು ಪೂಜಿಸುವುದರಿಂದ ದೇವರ ಆಶೀರ್ವಾದವು ಸಿಗುವುದು ಎಂದು ನಂಬಲಾಗಿದೆ.

*ಈ ದಿನವು ಹಾವಾಡಿಗರಿಗೆ ಕೂಡ ವಿಶೇಷವಾಗಿದೆ. ಯಾಕೆಂದರೆ ಈ ದಿನದಂದು ಅವರಿಗೆ ದಾನದ ರೂಪದಲ್ಲಿ ಹಣ ಮತ್ತು ಹಾಲು ಸಿಗುವುದು.

*ಮನೆಯ ಅಂಗಳದಲ್ಲಿ ಹಾವಿನ ಚಿತ್ರ ಬಿಡಿಸುವ ಸಂಪ್ರದಾಯ ಕೂಡ ಇದೆ. ಇದರಿಂದ ಹಾವುಗಳ ಆಶೀರ್ವಾದ ಮತ್ತು ರಕ್ಷಣೆ ಸಿಗುವುದು ಎಂದು ನಂಬಲಾಗಿದೆ.

English summary

Nag Panchami 2018 Puja Vidhi

Nag Panchami is celebrated on the fifth date of the bright half of the Sawan month. As per astrology, Lord of the fifth Hindu date is snake. On this day, snakes are worshiped prominently.
Story first published: Tuesday, August 14, 2018, 11:41 [IST]
X
Desktop Bottom Promotion