For Quick Alerts
ALLOW NOTIFICATIONS  
For Daily Alerts

2018ರ ನಾಗರ ಪಂಚಮಿಯ ದಿನ ಹಾಗೂ ಮಹತ್ವ

By Divya Pandith
|
Naga Panchami 2018 : ಆಗಸ್ಟ್ 15ರಂದು ಬರುವ ನಾಗರ ಪಂಚಮಿ ಹಬ್ಬದ ಮಹತ್ವ ಹಾಗು ವೈಶಿಷ್ಟ್ಯಗಳು | Oneindia Kannada

ನಾರಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವುದು ಸಾಮಾನ್ಯವಾಗಿ ಎಲ್ಲರೂ ಅರಿತಿರುವ ಸತ್ಯ. ಪ್ರತಿ ಶುಕ್ಲ ಪಕ್ಷದ ಶ್ರಾವಣ ತಿಂಗಳ 5ನೇ ದಿನವನ್ನು ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ. ನಾಗದೇವರಿಗೆ ಮೀಸಲಾಗಿರುವ ಈ ಹಬ್ಬದಲ್ಲಿ ನಾಗರ ಕಲ್ಲು ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಲಾಗುವುದು. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪವಿತ್ರ ಹಬ್ಬಗಳಲ್ಲಿ ಇದು ಒಂದು.

ಈ ಋತುವಿನಲ್ಲಿ ಹಾವುಗಳು ತಮ್ಮ ಗೂಡನ್ನು ಬಿಟ್ಟು ಹೊರ ಬರುತ್ತವೆ ಎಂದು ಹೇಳಲಾಗುತ್ತದೆ. ಶ್ರಾವಣ ತಿಂಗಳನ್ನು ಶಿವನ ಆರಾಧನೆಗೆ ಸಮರ್ಪಿಸಲಾಗಿದೆ. ಹಾವುಗಳು ಎಂದರೆ ಶಿವನಿಗೆ ಪ್ರಿಯವಾದ ಪ್ರಾಣಿ ಎನ್ನುವ ನಂಬಿಕೆಯಿದೆ. ಹಾವನ್ನು ಆರಾಧಿಸುವುದರಿಂದ ಶಿವನಿಗೆ ಸಂತುಷ್ಟವಾಗುತ್ತದೆ ಎನ್ನಲಾಗುವುದು. ಹಾಗಾಗಿಯೇ ನಾಗರ ಪಂಚಮಿಯನ್ನು ವಿಶೇಷ ಆಚರಣೆಯ ಮೂಲಕ ಆರಾಧಿಸಲಾಗುವುದು.

ನಾಗರಪಂಚಮಿ ವಿಶೇಷ: ನಾಗ ದೇವತೆಗಳ ಹಲವು ರೂಪದ ತುಣುಕು ಕಥೆಗಳು

ಅಲ್ಲದೆ ಗೂಡು ಹಾಗೂ ಹುಲ್ಲಿನ ಪೊದೆಗಳಿಂದ ಹೊರ ಬರುವ ಹಾವುಗಳು ಮನುಷ್ಯರಿಗೆ ಯಾವುದೇ ತೊಂದರೆ ಉಂಟುಮಾಡಬಾರದು ಎನ್ನುವ ಉದ್ದೇಶಕ್ಕೂ ಸಹ ಪೂಜೆ ಮಾಡಲಾಗುವುದು. ನಾಗರ ಪಂಚಮಿಯ ಪ್ರಯುಕ್ತ ಮಂದಿ ನಾಗರ ಪೂಜೆ ಮಾಡುವುದರ ಮಹತ್ವ ಹಾಗೂ ಹಾಲು ಎರೆಯುವುದರ ವೈಶಿಷ್ಟ್ಯಗಳ ಕುರಿತು ಬೋಲ್ಡ್ ಸ್ಕೈ ಈ ಮುಂದೆ ಸೂಕ್ತ ವಿವರಣೆಯೊಂದಿಗೆ ವಿಶ್ಲೇಷಿಸಿದೆ.

ನಾಗರ ಪಂಚಮಿಯ ವಿಶಿಷ್ಟತೆ

ನಾಗರ ಪಂಚಮಿಯ ವಿಶಿಷ್ಟತೆ

ನಾಗರ ಪಂಚಮಿಯ ದಿನ ನಾಗರ ಕಲ್ಲು ಅಥವಾ ನಾಗರ ಹಾವನ್ನು ಆರಾಧಿಸುವುದರಿಂದ ಬಡತನವು ದೂರವಾಗುವುದು ಎಂದು ಹೇಳಲಾಗುವುದು. ಅವಿವಾಹಿತ ಮಹಿಳೆಯರು ನಾಗರ ಕಲ್ಲಿಗೆ ಹಾಲೆರೆಯುವುದು ಅಥವಾ ಪೂಜೆ ಗೈಯುವುದರಿಂದ ಮನದಿಂಗಿತದಂತಹ ಹುಡುಗನನ್ನು ಪಡೆದುಕೊಳ್ಳುವರು. ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಈ ಹಬ್ಬದ ದಿನ ಭಕ್ತರು ನಾಗರ ಪೂಜೆ ಹಾಗೂ ನಾಗದೇವರ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಪೂರೈಸುತ್ತವೆ ಎಂದು ಹೇಳಲಾಗುವುದು. ಈ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುವುದು.

ನಾಗರ ಹಾವುಗಳಲ್ಲಿ ವಿವಿಧತೆಗಳು

ನಾಗರ ಹಾವುಗಳಲ್ಲಿ ವಿವಿಧತೆಗಳು

ಕೆಲವು ಲಿಖಿತ ರೂಪದಲ್ಲಿರುವ ಪುರಾಣ ಇತಿಹಾಸಗಳ ಪ್ರಕಾರ ಹನ್ನೆರಡು ಬಗೆಯ ನಾಗರಹಾವುಗಳು ಇವೆ ಎಂದು ಹೇಳಲಾಗುವುದು. ಈ ವಿಧಗಳು ಎಂದರೆ 1. ಅನಂತ, 2. ವಾಸುಕಿ, 3. ಶೇಷ, 4. ಪದ್ಮ, 5. ಕಂಬಲ್, 6. ಕಾರ್ಕೋಟಾಕ್, 7. ಅಶ್ವತ್ತ್ಥರಾ, 8. ಧೃತರಾಷ್ಟ್ರ, 9. ಶಂಖಾ, 10. ಕಲಿಯ, 11. ತಕ್ಷಕ್, 12. ಪಿಂಗ್ಲಾ.

ನಾಗರ ಪಂಚಮಿಯಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ?

ನಾಗರ ಪಂಚಮಿಯಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ?

ನಾಗರ ಪಂಚಮಿಯ ದಿನ ವಿಷ್ಣು ದೇವರನ್ನು ಸಹ ಆರಾಧಿಸಲಾಗುತ್ತದೆ. ಈ ಪೂಜೆಯ ಹಿಂದೆ ಒಂದು ಪವಿತ್ರವಾದ ಪುರಾಣದ ಹಿನ್ನೆಲೆಯಿದೆ ಎಂದು ಹೇಳಲಾಗುವುದು. "ಕಲಿಯಾ ನಾಗ ಒಮ್ಮೆ ಯಮುನಾ ನದಿಯ ನೀರಿನಲ್ಲಿ ಪ್ರವೇಶಿಸಿತು. ಇದರ ಪರಿಣಾಮವಾಗಿ ನದಿಯ ನೀರೆಲ್ಲಾ ಕಪ್ಪು ಬಣ್ಣಕ್ಕೆ ತಿರುಗಿತು. ಜೊತೆಗೆ ನದಿಯ ನೀರೆಲ್ಲಾ ವಿಷವಾಗಿ ಪರಿವರ್ತನೆಯಾಯಿತು.

ಹಾವು ಮತ್ತು ಕೃಷ್ಣನ ನಡುವಿನ ಯುದ್ಧ

ಹಾವು ಮತ್ತು ಕೃಷ್ಣನ ನಡುವಿನ ಯುದ್ಧ

ನದಿಯ ನೀರು ಸಂಪೂರ್ಣವಾಗಿ ವಿಷವಾಗಿ ಹರಿಯುತ್ತಿರುವಾಗ ಆ ನದಿಯ ದಡದಲ್ಲಿ ಬರುವ ಕಾಡು ಹಾಗೂ ನಾಡಿನ ಜನರು ಅದನ್ನು ಬಳಸಿದಾಗ ಅದರಿಂದ ಉಂಟಾಗುವ ದುಷ್ಪರಿಣಾಮವನ್ನು ತಿಳಿದುಕೊಂಡರು. ಈ ನದಿಯು ಗೋಕುಲದ ಜನರಿಗೂ ಜೀವನಾದಾರವಾಗಿತ್ತು. ನೀರು ಸಂಪೂರ್ಣವಾಗಿ ವಿಷವಾಗಿರುವುದನ್ನು ಗ್ರಾಮದ ಜನರು ಅರಿತರು. ಇದನ್ನು ಶ್ರೀಕೃಷ್ಣನು ಅರಿತನು. ನಂತರ ಹಾವಿಗೆ ಸವಾಲನ್ನು ಒಡ್ಡಿದನು. ಹಾವು ಮತ್ತು ಕೃಷ್ಣನ ನಡುವೆ ಯುದ್ಧವು ಆರಂಭವಾಯಿತು. ಯುದ್ಧದಲ್ಲಿ ಕೃಷ್ಣನು ಜಯಶಾಲಿಯಾಗಿ ಹಾವಿನ ತಲೆಯ ಮೇಲೆ ನಿಂತು ನರ್ತನ ಮಾಡಿದನು.

ಸೋಲನ್ನು ಒಪ್ಪಿಕೊಂಡ ಹಾವು!

ಸೋಲನ್ನು ಒಪ್ಪಿಕೊಂಡ ಹಾವು!

ತನ್ನ ಸೋಲನ್ನು ಹಾವು ಒಪ್ಪಿಕೊಂಡಿತು. ಕೃಷ್ಣನು ನದಿಯ ನೀರನ್ನು ವಿಷದಿಂದ ಮುಕ್ತಗೊಳಿಸಿದನು. ಹಾವು ನೀರಿನಿಂದ ಹೊರ ಬಂದು ಕ್ಷಮೆಯಾಚಿಸಿತು. ಈ ಕಥೆಯ ಹಿನ್ನೆಲೆಯಲ್ಲಿಯೇ ವಿಷ್ಣು ದೇವರನ್ನು ಪೂಜಿಸಲಾಗುವುದು. ಹಾವುಗಳ ಆರಾಧನೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಹಾವನ್ನು ಆರಾಧಿಸುವ ಜನರ ಜೀವನದಲ್ಲಿ ಕಷ್ಟಗಳು ನಿವಾರಣೆಯಾಗುವುದು ಎಂದು ಹೇಳಲಾಯಿತು.

ನಾಗರ ಪಂಚಮಿಯ ದಿನ ಶಿವನ ಆರಾಧನೆ ಏಕೆ?

ನಾಗರ ಪಂಚಮಿಯ ದಿನ ಶಿವನ ಆರಾಧನೆ ಏಕೆ?

ಸಮುದ್ರ ಮಂಥನದ ಸಮಯದಲ್ಲಿ ಇಡೀ ವಿಶ್ವವನ್ನೇ ನಾಶ ಮಾಡುವಂತಹ ವಿಷವು ಮೇಲೆ ಬಂದಿತು. ಆಗ ಶಿವನು ಸೃಷ್ಟಿಯನ್ನು ರಕ್ಷಿಸುವುದಕ್ಕಾಗಿ ವಿಷವನ್ನು ತಾನೇ ಕುಡಿದನು. ಅದನ್ನು ತನ್ನ ಕಂಠದಲ್ಲಿಯೇ ಇರಿಸಿಕೊಂಡನು. ಇದರಿಂದಾಗಿ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗಿತು. ಈ ಕಾರಣಕ್ಕಾಗಿಯೇ ಶಿವನು ವಿಶಷವನ್ನು ಒಳಗೊಂಡಂತಹ ನಾಗರ ಹಾವನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡಿದ್ದನು ಎನ್ನಲಾಗುವುದು. ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ್ದು. ಶಿವನನ್ನು ಆನಂದಿಸುವುದಕ್ಕಾಗಿ ಆತನ ಕುತ್ತಿಗೆಯಲ್ಲಿ ಇರುವ ನಾಗರ ಹಾವನ್ನು ಪೂಜಿಸಲಾಗುವುದು ಎಂಬ ನಂಬಿಕೆಯಿದೆ. ನಾಗರ ಹಾವು ಶಿವ ಮತ್ತು ವಿಷ್ಣು ದೇವರಿಬ್ಬರಿಗೂ ಪ್ರಿಯವಾದ್ದು. ಹಾಗಾಗಿ ನಾಗರ ಪಂಚಮಿಯ ದಿನ ನಾಗರ ಪೂಜೆಯ ಜೊತೆಗೆ ಈ ಎರಡು ದೇವತೆಗಳನ್ನು ಆರಾಧಿಸಲಾಗುವುದು ಎಂದು ಹೇಳಲಾಗುತ್ತದೆ. ಇನ್ನು ನಾಗನನ್ನು ಪೂಜಿಸಿ ಕೋರುವ ಕೋರಿಕೆಗಳನ್ನು ಶಿವನು ಮನ್ನಿಸುತ್ತಾನೆ ಎಂಬ ನಂಬಿಕೆಯಿರುವುದರಿಂದ ಜನರು ಪೂಜೆಯ ಬಳಿಕ ತಮ್ಮ ಇಷ್ಟಾರ್ಥಗಳನ್ನು ತಿಳಿಸುತ್ತಾರೆ. ಅವಿವಾಹಿತ ಕನ್ಯೆಯರು ತಮಗೆ ಉತ್ತಮ ವರ ಸಿಗಲಿ ಎಂದು ಹಾರೈಸಿ ಪೂಜಿಸುತ್ತಾರೆ.

ನಾಗರ ಚತುರ್ಥಿ

ನಾಗರ ಚತುರ್ಥಿ

ಕೆಲವು ಪ್ರದೇಶದಲ್ಲಿ ಹಾಗೂ ಜನಾಂಗದವರು ನಾಗರ ಪಂಚಮಿಯ ಹಿಂದಿನ ದಿನ ಅಂದರೆ ಒಂದು ದಿನ ಮುಂಚಿತವಾಗಿ ನಾಗ ಚತುರ್ಥಿಯ ದಿನ ಆಚರಿಸುತ್ತಾರೆ. ಆಂಧ್ರಪ್ರದೇಶದ ಕೆಲವು ಭಾಗದಲ್ಲಿ ನಾಗ ಚೌತಿ ಎಂದು ಆಚರಿಸುತ್ತಾರೆ. ಅಂದು ಅವರು ಉಪವಾಸವನ್ನು ಕೈಗೊಳ್ಳುತ್ತಾರೆ ಎಂದು ಹೇಳಲಾಗುವುದು.

ನಾಗರ ಪಂಚಮಿ

ನಾಗರ ಪಂಚಮಿ

ಈ ವರ್ಷದ ನಾಗರ ಪಂಚಮಿಯನ್ನು ಹರಿಯಾಲಿ ತೇಜ್ ಉತ್ಸವದ ಎರಡು ದಿನದ ನಂತರ ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2018ರಲ್ಲಿ ಆಗಸ್ಟ್ 15ರಂದು ಆಚರಿಸಲಾಗುವುದು.

ಹಬ್ಬದ ಆಚರಣೆಯ ವಿಧಾನ

ಹಬ್ಬದ ಆಚರಣೆಯ ವಿಧಾನ

ಹಬ್ಬದ ದಿನದಂದು ಜನರು ಉಳುಮೆ ಸಹಿತ ಯಾವುದೇ ನೆಲವನ್ನು ಅಗಿಯುವ ಕೆಲಸವನ್ನು ಮಾಡುವುದಿಲ್ಲ. ನಾಗರ ಕಲ್ಲಿಗೆ ಹಸುವಿನ ಹಾಲು, ಹುರಿದ ಭತ್ತ (ಅರಳು), ಭತ್ತದ ತೆನೆ ಮತ್ತು ದೂರ್ವ ಅಥವಾ ಗರಿಕೆ (ಎಳೆಹುಲ್ಲಿನ ತುರಿಭಾಗ) ಯನ್ನು ಅರ್ಪಿಸಿ ನಾಗನನ್ನು ಪೂಜಿಸಲಾಗುತ್ತದೆ. ಭಾರತದಾದ್ಯಂತ ಎಲ್ಲೆಡೆ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಕೆಲವೆಡೆ ಕಲ್ಲಿನ ಬದಲು ಮಣ್ಣಿನಿಂದ ಮಾಡಿದ ಹಾವಿನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕೆಲವೆಡೆ ಜೀವಂತ ಹಾವಿಗೂ ಹಾಲು ಮತ್ತು ಹಾವು ಸ್ವೀಕರಿಸುವ ಇತರ ಪದಾರ್ಥಗಳನ್ನು ನೀಡಿ ಪೂಜೆ ಸಲ್ಲಿಸಲಾಗುತ್ತದೆ.

Read more about: nagara panchami festival
English summary

Naag Panchami 2018, Dates And Significance

The festival of Naga Panchami falls on the fifth day of the Shravana month during Shukla Paksha. This festival, dedicated wholly to the serpents, is celebrated as one of the most popular festivals in the month of Shravana. During this season, snakes come out of their nests and burrows. The Shravana month is dedicated to the worship of Lord Shiva. Snakes are dear to Lord Shiva; snakes are worshipped to please Lord Shiva. For them not to harm humans when they come out due to the rains, they are worshipped on Naag Panchami.
X
Desktop Bottom Promotion