For Quick Alerts
ALLOW NOTIFICATIONS  
For Daily Alerts

ರಂಜಾನ್ ಬಗ್ಗೆ ಇರುವ ತಪ್ಪುಕಲ್ಪನೆಗಳು - ವಿದ್ವಾಂಸರ ಸ್ಪಷ್ಟನೆ

By Arshad
|

ಇಸ್ಲಾಂ ಧರ್ಮ ಐದು ಮೂಲ ಸ್ಥಂಭಗಳ ಮೇಲೆ ನಿಂತಿದೆ. ಏಕದೇವನಿಷ್ಠೆ, ನಿತ್ಯ ಐದು ಹೊತ್ತಿನ ಪ್ರಾರ್ಥನೆ, ರಂಜಾನ್ ತಿಂಗಳ ಉಪವಾಸ, ಕಡ್ಡಾಯ ದಾನ ಹಾಗೂ ಜೀವಮಾನದಲ್ಲೊಮ್ಮೆ ಹಜ್. ಇದರಲ್ಲಿ ಉಪವಾಸ ಹಾಗೂ ದಾನ ವರ್ಷಕ್ಕೊಮ್ಮೆ ನಿರ್ವಹಿಸಬೇಕಾಗಿರುತ್ತದೆ.

ರಂಜಾನ್ ತಿಂಗಳ ಇಪತ್ತೊಂಭತ್ತು ಅಥವಾ ಮೂವತ್ತು ದಿನ (ಚಂದ್ರದರ್ಶನವನ್ನು ಆಧರಿಸಿ) ಸೂರ್ಯೊದಯಕ್ಕೂ ಸುಮಾರು ಒಂದೂ ಕಾಲು ಗಂಟೆಯ ಮುನ್ನಾ ಸಮಯದಿಂದ ಪ್ರಾರಂಭಿಸಿ ಸೂರ್ಯಾಸ್ತದ ವರೆಗೆ ಮನಸ್ಸಿನ ಬಯಕೆಗಳನ್ನು ಹತ್ತಿಕ್ಕುವ ಮೂಲಕ ಮನಸ್ಸನ್ನು ನಿಯಂತ್ರಿಸುವುದು, ಹಸಿವನ್ನು ಅನುಭವಿಸಿ ಬಡವರ ಬವಣೆಯನ್ನು ಅರಿಯುವುದು ಹಾಗೂ ದಿನವನ್ನು ದೇವರ ಗ್ರಂಥ ಪಾರಾಯಣ ಹಾಗೂ ದಾನಗಳ ಮೂಲಕ ಕಳೆಯುವುದೇ ಉಪವಾಸದ ಮೂಲವಾಗಿದೆ. ಇದರಲ್ಲಿ ಅನ್ನಾಹಾರಗಳನ್ನೂ ಬಿಡುವುದೂ ಒಂದು ಅಂಗವೇ ಹೊರತು ಅನ್ನಾಹಾರಗಳನ್ನು ಬಿಡುವುದೇ ಉಪವಾಸವಲ್ಲ.

ರಂಜಾನ್ ಉಪವಾಸವನ್ನು ಉದ್ಯೋಗಿಗಳು ಹೇಗೆ ಪಾಲಿಸಬೇಕು?

ಈ ವರ್ಷ ಮೇ 27 ರಿಂದ ಜೂನ್ 24 ರವರೆಗೆ (ಕೆಲವೆಡೆ ಮೇ 28 ರಿಂದ ಜೂನ್ 25) ರಂಜಾನ್ ಮಾಸವನ್ನು ಆಚರಿಸಲಾಗಿದೆ. ಚಂದ್ರನ ಚಲನೆಯನ್ನು ಆಧರಿಸಿ ಅನುಸರಿಸಲಾಗಿರುವ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ರಂಜಾನ್ ಒಂಬತ್ತನೆಯ ಮಾಸವಾಗಿದೆ. ಮುಸ್ಲಿಮರಿಗೆ ಈ ಮಾಸ ಅತ್ಯಂತ ಪವಿತ್ರವಾಗಿದ್ದು ಉಪವಾಸ ಆಚರಿಸುವ ಮೂಲಕ ಇಡಿಯ ವರ್ಷ ಮನಸ್ಸನ್ನು ನಿಯಂತ್ರಣದಲ್ಲಿರಿಸಲು ತರಬೇತಿಯನ್ನು ಪಡೆಯಲಾಗುತ್ತದೆ.

ರಂಜಾನ್ ಮಾಸದಲ್ಲಿ ತಂಪುಣಿಸುವ ಕಾಮಕಸ್ತೂರಿ ಬೀಜ

ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರ್‍ಆನ್ ಈ ತಿಂಗಳಲ್ಲಿ ಅವತೀರ್ಣಗೊಂಡಿತು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ಪ್ರವಾದಿಯವರು ಈ ತಿಂಗಳಿಂದಲೇ ತಮ್ಮ ದೀಕ್ಷೆಯನ್ನು ಪ್ರಾರಂಭಿಸಿದರು ಎಂದೂ ಹೇಳಲಾಗುತ್ತದೆ. ಆದರೆ ರಂಜಾನ್ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಜನರಲ್ಲಿ ಮನೆಮಾಡಿದ್ದು ಕಿವಿಯಿಂದ ಕಿವಿಗೆ ಮಾಹಿತಿ ಕೊಂಚ ಕೊಂಚವಾಗಿ ಬದಲಾವಣೆ ಪಡೆಯುತ್ತಾ ನಾಲ್ಕನೆಯ ವ್ಯಕ್ತಿಗೆ ದೊರಕುವ ಮಾಹಿತಿ ಬೇರೆಯೇ ಆಗಿರುತ್ತದೆ. ಈಗ ರಂಜಾನ್ ಮಾಸ ಕೊನೆಗೊಂಡಿದ್ದು ಈಗಲೂ ಈ ಮಾಸದ ಮಹತ್ವದ ಬಗ್ಗೆ ಅರಿಯದೇ ಇದ್ದವರಿಗೆ ಕೆಳಗಿನ ಮಾಹಿತಿಗಳು ಸರಿಯಾದ ಅರಿವು ನೀಡಬಲ್ಲುದು. ರಂಜಾನ್ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು ಹಾಗೂ ಇವುಗಳನ್ನು ವಿದ್ವಾಂಸರು ಹೇಗೆ ವಿವರಿಸಿದ್ದಾರೆ ಎಂಬುದನ್ನು ನೋಡೋಣ.....

ಮುಸ್ಲಿಮರು ಈ ತಿಂಗಳಲ್ಲಿ ಊಟ ಮಾಡುವುದಿಲ್ಲ

ಮುಸ್ಲಿಮರು ಈ ತಿಂಗಳಲ್ಲಿ ಊಟ ಮಾಡುವುದಿಲ್ಲ

ಊಟ ಮಾಡದೇ ಇದ್ದರೆ ಯಾವುದೇ ಮನುಷ್ಯರಿಗೆ ಜೀವಂತವಾಗಿರಲು ಸಾಧ್ಯವಿಲ್ಲ. ಈ ತಿಂಗಳಲ್ಲಿ ಸೂರ್ಯೋದಯಕ್ಕೂ ಒಂದೂ ಕಾಲು ಘಂಟೆಗೂ ಮುನ್ನ (ಅಂದರೆ ಮುಂಜಾನೆ ಪ್ರಾರ್ಥನೆಯ ಬಾಂಗ್ ಗೂ ಮೊದಲು) ಉಪಾಹಾರವನ್ನು ಪೂರೈಸಿಕೊಳ್ಳಬೇಕು. ಈ ಊಟಕ್ಕೆ ಸುಹೂರ್ ಎಂದು ಕರೆಯಲಾಗುತ್ತದೆ. ಈ ಸಮಯದಿಂದ ಸರಿಯಾಗಿ ಸೂರ್ಯಾಸ್ತದವರೆಗೆ ಅಂದರೆ ಹಗಲಿನ ಅಷ್ಟೂ ಹೊತ್ತು ಊಟ, ನೀರು ಏನನ್ನೂ ತಿನ್ನುವಂತಿಲ್ಲ. ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಇನ್ನೊಂದು ಉಪಾಹಾರವನ್ನು ಸ್ವೀಕರಿಸಿ ಈ ಉಪವಾಸವನ್ನು ಸಂಪನ್ನಗೊಳಿಸಬೇಕು. ಈ ಉಪಾಹಾರಕ್ಕೆ ಇಫ್ತಾರ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ತಿನ್ನುವಂತಿಲ್ಲ ಎನ್ನುವುದಕ್ಕಿಂತ ತಿನ್ನುವ ಬಯಕೆಯನ್ನೇ ಮಾಡಕೂಡದು. ನೆನಪೇ ಇಲ್ಲದೇ ಊಟ ಮಾಡಿದರೂ ಆ ಉಪವಾಸ ಸ್ವೀಕಾರಾರ್ಹ! ಆದರೆ ನೆನಪಿದ್ದೂ ಬಲವಂತವಾಗಿ ಉಗುಳನ್ನು ನುಂಗಿದರೂ ಅದು ಸ್ವೀಕಾರಾರ್ಹವಲ್ಲ. ಅಷ್ಟೇ ಅಲ್ಲ, ಮನದಲ್ಲಿ ಊಟದ ಮಾತ್ರವಲ್ಲ, ಕಾಮ, ಹಣದ, ಅಧಿಕಾರ, ದರ್ಪ, ಅಸತ್ಯ ಮೊದಲಾದ ಯಾವುದೇ ಆಸೆ ಮನದಲ್ಲಿ ಮೂಡದಂತೆ ನೋಡಿಕೊಳ್ಳಬೇಕು. ಧರ್ಮಗ್ರಂಥದಲ್ಲಿ ಏನನ್ನು ತಿಳಿಸಲಾಗಿದೆ ಎಂಬುದನ್ನು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಉಪವಾಸವಾಗಿದೆ.

ಉಪವಾಸ ಎಲ್ಲರಿಗೂ ಕಡ್ಡಾಯ, ಯಾರಿಗೂ ವಿನಾಯಿತಿ ಇಲ್ಲ

ಉಪವಾಸ ಎಲ್ಲರಿಗೂ ಕಡ್ಡಾಯ, ಯಾರಿಗೂ ವಿನಾಯಿತಿ ಇಲ್ಲ

ಉಪವಾಸವನ್ನು ಬುದ್ಧಿ ಇನ್ನೂ ಪಕ್ವವಾಗಿರದ ಮಕ್ಕಳು, ಉಪವಾಸವಿರಲು ಅಸಮರ್ಥರಾದ ವೃದ್ದರು, ಗರ್ಭಿಣಿಯರಿಗೆ ವಿನಾಯಿತಿ ನೀಡಲಾಗಿದೆ. ತಿಂಗಳ ರಜಾದಿನದಲ್ಲಿರುವ ಮಹಿಳೆಯರಿಗೆ, ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಉಪವಾಸದ ಅವಧಿಯಲ್ಲಿ ಔಷಧಿಯನ್ನು ಸೇವಿಸುವವರಿಗೆ, ಪ್ರಯಾಣದಲ್ಲಿರುವವರಿಗೆ ಉಪವಾಸದಿಂದ ವಿನಾಯಿತಿ ಇಲ್ಲ, ಬದಲಿಗೆ ರಿಯಾಯಿತಿ ಇದೆ. ಅಂದರೆ ಈ ಅವಧಿಯಲ್ಲಿ ತಪ್ಪಿಸಿಕೊಂಡ ಉಪವಾಸಗಳನ್ನು ಮುಂದಿನ ದಿನಗಳಲ್ಲಿ ಪೂರೈಸಿಕೊಳ್ಳಬೇಕು. ಅನಾರೋಗ್ಯದ ಕಾರಣ ಉಪವಾಸ ಇರಲು ಅಸಮರ್ಥರಾದವರು ತಮ್ಮ ಬದಲಿಗೆ ಇನ್ನೊಬ್ಬರು ಉಪವಾಸವಿರುವ ಖರ್ಚನ್ನು ನೀಡುವ ಮೂಲಕ ತಮ್ಮ ಕಡ್ಡಾಯ ಕರ್ಮವನ್ನು ಪೂರೈಸಿಕೊಳ್ಳಬಹುದು. ಅಂದರೆ ದೈಹಿಕವಾಗಿ ಸಮರ್ಥರಿರುವವರಿಗೆ ಮಾತ್ರವೇ ಇಸ್ಲಾಂ ಉಪವಾಸವನ್ನು ಕಡ್ಡಾಯಗೊಳಿಸಿದೆ.

ಈ ಅವಧಿಯಲ್ಲಿ ಉಗುಳನ್ನೂ ನುಂಗಬಾರದು

ಈ ಅವಧಿಯಲ್ಲಿ ಉಗುಳನ್ನೂ ನುಂಗಬಾರದು

ಇದೊಂದು ತಪ್ಪು ಕಲ್ಪನೆಯಾಗಿದೆ. ವಾಸ್ತವವಾಗಿ ನಮ್ಮ ಬಾಯಿಯಲ್ಲಿ ಸತತವಾಗಿ ಜೊಲ್ಲು ಸುರಿಯುತ್ತಲೇ ಇರುತ್ತದೆ ಹಾಗೂ ಗಂಟಲಿನಿಂದ ಜಠರಕ್ಕೆ ಇಳಿಯುತ್ತಲೇ ಇರುತ್ತದೆ. ಇದರಿಂದ ಉಪವಾಸ ಹೋಗುವುದಿಲ್ಲ. ಬದಲಿಗೆ, ಬಲವಂತವಾಗಿ ಬಾಯಿಯಲ್ಲಿ ಲಾಲಾರಸವನ್ನು ಸ್ರವಿಸಿ ಕುಡಿಯುವುದನ್ನು ನಿಷೇಧಿಸಲಾಗಿದೆ. ಲಾಲಾರಸ ಯಾವಾಗ ಬರುತ್ತದೆ? ಯಾವುದಾದರೂ ರುಚಿಯನ್ನು ಬಯಸಿದಾಗ. ಈ ಬಯಕೆಯನ್ನು ಹತ್ತಿಕ್ಕಬೇಕು ಎಂಬುದೇ ನಿಜವಾದ ಅರ್ಥವಾಗಿದೆ.

ದಿನದ ಅವಧಿಯಲ್ಲಿ ಇಷ್ಟು ಬಿಸಿಲಿದ್ದಾಗ ನೀರನ್ನೂ ಕುಡಿಯಬಾರದೇ?

ದಿನದ ಅವಧಿಯಲ್ಲಿ ಇಷ್ಟು ಬಿಸಿಲಿದ್ದಾಗ ನೀರನ್ನೂ ಕುಡಿಯಬಾರದೇ?

ಉಪವಾಸದ ಅವಧಿಯಲ್ಲಿ ನೀರಿನ ಸಹಿತ ಯಾವುದೇ ದ್ರವ ಅಥವಾ ಘನ ಆಹಾರವನ್ನು ಸೇವಿಸುವಂತಿಲ್ಲ. ಆದರೆ ಸುಹೂರ್ ನಲ್ಲಿ ಸಾಕಷ್ಟು ನೀರು ಮತ್ತು ದ್ರವಾಹಾರವನ್ನು ಸೇವಿಸುವ ಮೂಲಕ ದಿನದ ಅವಧಿಯಲ್ಲಿ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬಹುದು.

ರಂಜಾನ್ ನಿಗದಿತ ಅವಧಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ

ರಂಜಾನ್ ನಿಗದಿತ ಅವಧಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ

ಇಲ್ಲ, ಈ ತಿಂಗಳ ಪ್ರಾರಂಭ ಮತ್ತು ಕೊನೆಗೊಳ್ಳಲು ಅಮಾವಾಸ್ಯೆಯ ಮರುದಿನದ ಮೊದಲ ಚಂದ್ರನ ಕಮಾನನ್ನು ನೋಡುವುದು ಕಡ್ಡಾಯವಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಕ್ಷೀಣವಾಗಿ ಕಾಣುವ ಚಂದ್ರನ ಕಮಾನು ಎಲ್ಲೆಡೆ ಏಕಸಮಾನವಾಗಿ ಕಾಣಲು ಸಾಧ್ಯವಿಲ್ಲದ ಕಾರಣ ಈ ನಿರ್ಧಾರವನ್ನು ತಮ್ಮ ಊರಿನ ಹತ್ತಿರದ ಊರುಗಳಲ್ಲಿ ಚಂದ್ರದರ್ಶನವಾದ ಖಚಿತ ಸಮಾಚಾರದ ಮೇರೆಗೆ ಊರಿನ ಹಿರಿಯರು ನಿರ್ಧರಿಸುತ್ತಾರೆ. ಹಾಗಾಗಿ ಈ ದಿನಗಳನ್ನು ಮುಂಚಿತವಾಗಿ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ವಿವಿಧ ದೇಶಗಳಲ್ಲಿ, ಒಂದೇ ದೇಶದ ಭಿನ್ನ ನಗರಗಳಲ್ಲಿ ಈ ತಿಂಗಳು ಪ್ರಾರಂಭವಾಗುವುದು ಒಂದು ದಿನ ತಡವಾಗಬಹುದು.

English summary

Myths Of The Holy Month Of Ramzan Explained

This month is considered Holy because according to the beliefs, the writing of the Holy book of Quran started in this month. This month also saw the first sermon of Prophet Muhammad. There are a lot of myths surrounding the Holy Month of Ramzan, the ideology behind it and the way it is observed. As the Ramzan month is coming to an end, let us discuss some of these myths and educate ourselves.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more