For Quick Alerts
ALLOW NOTIFICATIONS  
For Daily Alerts

ವಾರದ ನಾಲ್ಕು ದಿನ ತಲೆ ಸ್ನಾನ ಮಾಡುವಂತಿಲ್ಲ! ಯಾಕೆ ಹೀಗೆ?

By Manohar
|

ಪ್ರತಿಯೊಂದು ಧರ್ಮದಲ್ಲೂ ಅದರದ್ದೇ ಆದಂತಹ ಕೆಲವೊಂದು ಸಂಪ್ರದಾಯಗಳು, ಕಟ್ಟುಪಾಡುಗಳು ಇದ್ದೇ ಇರುತ್ತದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಆಚರಣೆಗಳು ಹಾಗೂ ಸಂಪ್ರದಾಯಗಳು ಹೆಚ್ಚು. ಕೆಲವೊಂದು ಸಲ ಈ ಆಚರಣೆಗಳು ಮೌಢ್ಯತೆಯನ್ನು ಪ್ರತಿಬಿಂಬಿಸುತ್ತದೆ. ಈಗಲೂ ಇರುವಂತಹ ಕೆಲವೊಂದು ಮೂಢನಂಬಿಕೆಗಳೇ ಇದಕ್ಕೆ ಕಾರಣವಾಗಿದೆ. ಆದರೆ ಹಿಂದಿನಿಂದಲೂ ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗಿದೆ ಮತ್ತು ಈಗಲೂ ಅದನ್ನು ಪಾಲಿಸಿಕೊಂಡು ಹೋಗಲಾಗುತ್ತಿದೆ.

ಮಂಗಳವಾರ ಮತ್ತು ಶನಿವಾರ ಗಡ್ಡ ತೆಗೆಯಬಾರದು ಎನ್ನುವುದು ಇದಕ್ಕೆ ಒಂದು ಉದಾಹರಣೆ. ಶನಿವಾರದಂದು ಕೂದಲು ತೆಗೆದರೆ ತಲೆಯಲ್ಲಿರುವ ಸಾಡೇ ಸಾತಿ ಶನಿಯನ್ನು ದೂರ ಓಡಿಸಬಹುದು ಎನ್ನುವ ನಂಬಿಕೆಯೂ ಮತ್ತೊಂದು ಉದಾಹರಣೆ. ಗುರುವಾರ ಕೂದಲು ಹಾಗೂ ಬಟ್ಟೆ ಒಗೆಯಬಾರದು ಎನ್ನುವ ನಿಯಮವೂ ಇದೆ. ಮಂಗಳವಾರ ಕೂದಲು ಕತ್ತರಿಸುವುದು ಅಪಶಕುನವೇ?

ಕೂದಲನ್ನು ತೊಳೆಯುವ ಬಗ್ಗೆ ಹಿಂದೂ ಸಂಪ್ರದಾಯದಲ್ಲಿ ಹಲವಾರು ರೀತಿಯ ಕಟ್ಟುಕಥೆಗಳು ಇವೆ. ಅದನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಕೆಲವು ಮಹಿಳೆಯರು ದಿನದ ಆಧಾರದಿಂದ ಇದನ್ನು ಈಗಲೂ ಪಾಲಿಸಿಕೊಂಡು ಹೋಗುತ್ತಿದ್ದಾರೆ. ಬನ್ನಿ ಹಿಂದೂ ಧರ್ಮದಲ್ಲಿ ತಲೆಗೆ ಸ್ನಾನ ಮಾಡುವ ಬಗ್ಗೆ ಇರುವ ಕಟ್ಟುಕಥೆಗಳೇನು ಎಂಬುದನ್ನು ಮುಂದೆ ಓದಿ...

ಮಂಗಳವಾರ

ಮಂಗಳವಾರ

ತಲೆಗೆ ಸ್ನಾನ ಮಾಡುವ ಬಗ್ಗೆ ಹಲವಾರು ಕಟ್ಟುಕಥೆಗಳು ಇವೆ. ಮಂಗಳವಾರದಂದು ತಲೆಗೆ ಸ್ನಾನ ಮಾಡಬಾರದು ಎನ್ನುವುದು ಇದರಲ್ಲಿ ಒಂದಾಗಿದೆ. ಮಂಗಳನಿಂದ ಪ್ರಭಾವಿತನಾದವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಮಂಗಳನ ಪ್ರಭಾವವನ್ನು ತಗ್ಗಿಸುವುದಕ್ಕಾಗಿ ಹೆಚ್ಚಿನವರು ಮಂಗಳವಾರ ತಲೆಗೆ ಸ್ನಾನ ಮಾಡುವುದಿಲ್ಲ.

ಬುಧವಾರ

ಬುಧವಾರ

ಒಬ್ಬನೇ ಮಗನಿರುವ ತಾಯಿಯು ಬುಧವಾರದಂದು ತಲೆಗೆ ಸ್ನಾನ ಮಾಡಬಾರದು ಎನ್ನುವ ಸಂಪ್ರದಾಯವನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಪಾಲಿಸಲಾಗುತ್ತದೆ. ತಲೆಗೆ ಸ್ನಾನ ಮಾಡಿದರೆ ಮಗನ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಗಂಡು ಮಗುವನ್ನು ಪಡೆಯಲು ಹೊಸದಾಗಿ ಮದುವೆಯಾದ ಮಹಿಳೆಯರು ಬುಧವಾರದಂದು ಕೂದಲು ತೊಳೆಯಬೇಕು ಎನ್ನುವ ನಂಬಿಕೆಯಿದೆ.

ಗುರುವಾರ

ಗುರುವಾರ

ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ಮನೆಯಲ್ಲಿರುವ ಲಕ್ಷ್ಮೀಯು ಹೊರಗೆ ಹೋಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಮನೆಯವರಿಗೆ ಬರುತ್ತದೆ ಎನ್ನುವ ನಂಬಿಕೆಯಿದೆ. ಇದನ್ನು ಹೆಚ್ಚಿನ ಕಡೆಗಳಲ್ಲಿ ಪಾಲಿಸಲಾಗುತ್ತಿದೆ.

ಗುರುವಾರ

ಗುರುವಾರ

ಅಲ್ಲದೇ ಗುರುವಾರದಂದು ತಲೆಗೆ ಸ್ನಾನ ಮಾಡಿದ ಮಹಿಳೆಯು ತನ್ನೆಲ್ಲಾ ಆಸ್ತಿಯನ್ನು ಕಳೆದುಕೊಂಡಿದ್ದಾಳೆ ಎನ್ನುವ ಕಥೆಯಿದೆ. ಗುರುವಾರದಂದು ಬಟ್ಟೆ ತೊಳೆಯುವುದು ಅಶುಭವೆಂದು ನಂಬಲಾಗಿದೆ.

ಶನಿವಾರ

ಶನಿವಾರ

ಶನಿವಾರದಂದು ತಲೆಗೆ ಸ್ನಾನ ಮಾಡುವ ಬಗ್ಗೆ ಹಿಂದೂ ಧರ್ಮದಲ್ಲಿ ಎರಡು ರೀತಿಯ ವಾದಗಳು ಇವೆ. ಕೆಲವರು ಸ್ನಾನ ಮಾಡಿದರೆ ಶನಿಯ ಸಾಡೇ ಸಾತಿ ನಿವಾರಣೆ ಆಗುತ್ತದೆ ಎಂದು ಹೇಳಿದರೆ....

ಶನಿವಾರ

ಶನಿವಾರ

ಇನ್ನು ಕೆಲವರು ತಲೆಗೆ ಸ್ನಾನ ಮಾಡುವುದರಿಂದ ಶನಿ ದೇವರಿಗೆ ಕೋಪ ಬರುತ್ತದೆ ಎನ್ನುತ್ತಾರೆ. ಇವು ತಲೆಗೆ ಸ್ನಾನ ಮಾಡುವ ಬಗ್ಗೆ ಇರುವ ಕೆಲವೊಂದು ಕಟ್ಟುಕಥೆಗಳು. ನಿಮಗೆ ಈ ಬಗ್ಗೆ ಏನಾದರೂ ತಿಳಿದಿದ್ದರೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

Myths About Hair Wash In Hinduism

There are many stories about hair wash in Hinduism which are practiced by many religious people. Women especially follow this custom on the basis of days...have a look
X
Desktop Bottom Promotion