For Quick Alerts
ALLOW NOTIFICATIONS  
For Daily Alerts

ಮೂರು ಕಡೆ ನೀರಿನಿಂದ ಸುತ್ತುವರೆದ ಮುರುಡೇಶ್ವರ: ನೋಡುಗರ ಮನಸೂರೆಗೊಳ್ಳುತ್ತೆ ಈ ತಾಣ

|

ಭಾರತದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿಒಂದು ಕರ್ನಾಟಕದ ಮುರುಡೇಶ್ವರ. ಮುರುಡೇಶ್ವರ ನೋಡಲೆಂದೇ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಸಮುದ್ರ ಅಲೆಗಳ ನರ್ತನ, ಅತ್ಯಂತ ಎತ್ತರವಾದ ರಾಜಗೋಪುರ, ವಿಶಾಲವಾದ ಶಿವನ ಪ್ರತಿಮೆ ಇವೆಲ್ಲಾ ನೋಡುಗರನ್ನು ಮೋಡಿ ಮಾಡುವಂತಿದೆ. ಇಂಥ ಸುಂದರ ತಾಣ ಈಗ ಮಳೆಯಿಂದಾಗಿ ಸಕತ್‌ ಟ್ರೆಂಡ್‌ನಲ್ಲಿದೆ. ಮೂರು ಕಡೆ ನೀರು ಸುತ್ತುವರೆದಿರುವ ದೃಶ್ಯದಿಂದಾಗಿ ಈ ತಾಣ ಮತ್ತಷ್ಟು ಮನಮೋಹಕವಾಗಿ ಕಾಣತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರ ತಾಣ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರ ತಾಣ

ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಪ್ರಸಿದ್ಧವಾದ ಧಾರ್ಮಿಕ ಸ್ಥಳವಾಗಿದೆ. ಬೆಂಗಳೂರಿನಿಂದ 515ಕಿ.ಮೀ ದೂರದಲ್ಲಿದೆ. ಇಲ್ಲಿ ರೈಲು ನಿಲ್ದಾಣ ಕೂಡ ಇದ್ದು ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿದೆ.

ಮುರುಡೇಶ್ವರ ನೋಡಲು ಹೋಗುವವರಿಗೆ ಅದರ ಸುತ್ತ ಮುತ್ತಲೇ ಇರುವ ಶಿರಸಿ, ಗೋಕರ್ಣ, ಕೊಲ್ಲೂರಿಗೆ ಭೇಟಿ ನೀಡಬಹುದಾಗಿದೆ.

ಗಮನ ಸೆಳೆಯುವ ಅತಿ ಎತ್ತರದ ಭವ್ಯ ಗೋಪುರ

ಗಮನ ಸೆಳೆಯುವ ಅತಿ ಎತ್ತರದ ಭವ್ಯ ಗೋಪುರ

ಮುರುಡೇಶ್ವರ ಮತ್ತೊಂದು ವಿಶೇಷವೆಂದರೆ ಕುಂದುಕ ಬೆಟ್ಟದ ಮೇಲಿರುವ ಶಿವ ದೇವಾಲಯದ ಅತಿ ಎತ್ತರದ ರಾಜ ಗೋಪುರ. ಈ ಗೋಪುರ 237.5 ಅಡಿ ಎತ್ತರ ಹೊಂದಿದೆ. ನೀವು ಮುರುಡೇಶ್ವರ ಪ್ರವೇಶಿಸುವ ಮುಂಚೆಯೇ ಈ ಗೋಪುರ ಕಣ್ಣಿಗೆ ಬಿದ್ದು ನಮ್ಮಲ್ಲಿ ಕುತೂಹಲ ಕೆರಳಿಸುವುದು.

ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ

ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ

ಮುರುಡೇಶ್ವರದಲ್ಲಿ ಗೋಪುರದ ಮೇಲೆ ತೆರಳಿದರೆ ಅಲ್ಲಿ ಧ್ಯಾನ ಮುದ್ರೆಯಲ್ಲಿರುವ ಶಿವನ ಸುಂದರ ಪ್ರತಿಮೆ ದೇಶದಲ್ಲಿಯೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಈ ಶಿವ ಪ್ರತಿಮೆ 123 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಮನಸೂರೆಗೊಳ್ಳುವ ಕಡಲ ತೀರ

ಮನಸೂರೆಗೊಳ್ಳುವ ಕಡಲ ತೀರ

ಇಲ್ಲಿನ ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿಗರನ್ನು ಸೆಳೆಯುವ ಮತ್ತೊಂದು ಅಂಶವೆಂದರೆ ಅಲ್ಲಿಯ ಸುಂದರ ಕಡಲ ತೀರ. ಅಲೆಗಳು ಬಂದಪ್ಪಳಿಸುವ ಆ ಸುಂದರ ದೃಶ್ಯ ವೀಕ್ಷಕರ ಮನದಲ್ಲಿರುವ ಚಿಂತೆಯೆಂಬ ಅಲೆಗಳನ್ನು ಮರೆಸಿ, ಮನಸ್ಸಿನ ನವಚೇತನ ತುಂಬುವುದು, ಈ ಪ್ರದೇಶಕ್ಕೆ ಬೇಟಿ ನೀಡಿ ಮರಳುವಾಗ ಒಂದು ಬಗೆಯ ನವೋಲ್ಲಾಸ ನಮ್ಮಲ್ಲಿ ತುಂಬುವುದು, ಅಷ್ಟೊಂದು ಸುಂದರವಾಗಿದೆ ಈ ತಾಣ.

ಇದೀಗ ಮಳೆಯ ಆರ್ಭಟ ಚೋರಾಗಿದ್ದು ಮೂರು ದಿಕ್ಕಿನಿಂದಲೂ ನೀರು ಸುತ್ತುವರೆದಿರುವ ಮುರುಡೇಶ್ವರ ಮತ್ತಷ್ಟು ಮನ ಮೋಹಕವಾಗಿದೆ.

ಮುರುಡೇಶ್ವರ ಶಿವನ ದೇವಾಲಯ ಪೂಜೆಯ ಸಮಯ

ಮುರುಡೇಶ್ವರ ಶಿವನ ದೇವಾಲಯ ಪೂಜೆಯ ಸಮಯ

ಇಲ್ಲಿಯ ದೇವಾಲಯವು ಮುಂಜಾನೆ 3 ಗಂಟೆಗೆ ಓಪನ್‌ ಆಗುತ್ತೆ. ಮಧ್ಯಾಹ್ನ 1 ಗಂಟೆಯವರೆಗೆ ಪೂಜೆ ಇರುತ್ತದೆ. ನಂತರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ.

English summary

Murudeshwar Temple Timings, Poojas, and History in Kannada

Here more deatil about Murudeshwar Temple and it's Timings, Poojas, and History , read on...
Story first published: Tuesday, July 5, 2022, 15:58 [IST]
X
Desktop Bottom Promotion