For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಮಾಸ ವಿಶೇಷ: ಶಿವನಿಗೆ ಪ್ರಿಯವಾದ ಮಂತ್ರಗಳು ನಿತ್ಯವೂ ಪಠಿಸಿ

By Jaya Subramanya
|

ಮಂತ್ರಗಳನ್ನು ದೇವರನ್ನು ಒಲಿಸಿಕೊಳ್ಳುವ ಪ್ರಮುಖ ವಿಧಾನವಾಗಿ ಬಳಸಿಕೊಳ್ಳಲಾಗುತ್ತದೆ. ವಾತಾವರಣದಲ್ಲಿರುವ ಒಂದು ರೀತಿಯ ಶಕ್ತಿಯನ್ನು ಪಡೆದುಕೊಳ್ಳಲು ಈ ಮಂತ್ರಗಳು ನಮಗೆ ಸಹಾಯ ಮಾಡಿ ದೇವರ ಜೊತೆ ನಾವು ಸಂವಹನ ನಡೆಸುವಂತೆ ಮಂತ್ರಗಳು ಮಾಡುತ್ತವೆ. ದೈವಿಕ ಚೈತನ್ಯವನ್ನು ಮಂತ್ರಗಳು ಹೊಂದಿದ್ದು ನಮ್ಮಲ್ಲಿ ಸಂತೋಷ ಸಮಾಧಾನವನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

Lord Shiva

ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿರುವ ಶಕ್ತಿಯುತ ಮಂತ್ರಗಳು ಪರಮಶಿವನದ್ದಾಗಿದೆ. ಈ ಮಂತ್ರಗಳನ್ನು ದಿನವೂ ಉಚ್ಛರಿಸುವುದರಿಂದ ನಿಮ್ಮ ದೇಹ ಶುದ್ಧವಾಗುತ್ತದೆ ಮತ್ತು ಆತ್ಮ ಎಲ್ಲಾ ಋಣಾತ್ಮಕ ಅಂಶಗಳಿಂದ ಮುಕ್ತಿಯನ್ನು ಹೊಂದುತ್ತದೆ. ಯಾವುದೇ ರೀತಿಯ ಮಾನಸಿಕ ಒತ್ತಡ, ಚಿಂತೆ, ದುಃಖ, ದುಗುಡಗಳನ್ನು ದೂರಮಾಡಲು ಈ ಮಂತ್ರಗಳು ಸಹಕಾರಿಯಾಗಿದೆ.

ಹಾಗಿದ್ದರೆ ಅತಿ ಶಕ್ತಿಯುತ ಶಿವ ಮಂತ್ರಗಳನ್ನು ಇಂದಿಲ್ಲಿ ಅರಿತುಕೊಳ್ಳೋಣ. ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ.

ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ. ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ....ಬನ್ನಿ ಶಿವನಿಗೆ ಪ್ರಿಯವಾದ ಮಂತ್ರವನ್ನು ಪಠಿಸುವ ಮೂಲಕ, ಕಷ್ಟ ಕಾರ್ಪಣ್ಯವನ್ನು ನಿವಾರಿಸಿಕೊಳ್ಳಿ...

ಪಂಚಾಕ್ಷರಿ ಶಿವ ಮಂತ್ರ
"ಓಂ ನಮಃ ಶಿವಾಯ"
ಶಿವನಿಗೆ ಹೆಚ್ಚು ಅರ್ಪಿತವಾಗಿರುವ ಪವಿತ್ರ ಮಂತ್ರವಾಗಿದೆ. ಶಿವನಿಗೆ ನಾನು ವಂದಿಸುತ್ತೇನೆ ಎಂಬ ಅರ್ಥವನ್ನು ಇದು ಒಳಗೊಂಡಿದೆ. ನಿಮ್ಮ ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಿ, ದೇವರ ವರವನ್ನು ಪಡೆದುಕೊಳ್ಳಲು ನಿತ್ಯವೂ ಇದನ್ನು 108 ಬಾರಿ ಪಠಿಸಬೇಕು.

ರುದ್ರ ಮಂತ್ರ
"ಓಂ ನಮೋ ಭಗವತೇ ರುದ್ರಾಯ"
ಶಿವನನ್ನು ಬಹುಬೇಗನೇ ಒಲಿಸಿಕೊಳ್ಳಲು ಈ ಮಂತ್ರ ಸಹಕಾರಿಯಾಗಿದೆ. ಶಿವನ ಕರುಣೆಯಿಂದ ನಿಮ್ಮ ಅಭಿಲಾಶೆ ಈಡೇರುವಂತಾಗಲು ಈ ಮಂತ್ರವನ್ನು ಪಠಿಸಿ.

ಶಿವ ಗಾಯತ್ರಿ ಮಂತ್ರ
"ಓಂ ತತ್ಪುರುಷಾಯ ವಿದ್‌ಮಹೇ
ಮಹಾ ದೇವಾಯ ಧೀಮಹಿ
ತನ್ನೋ ರುದ್ರಾ ಪ್ರಚೋದಯಾತ್"
ಗಾಯತ್ರಿ ಮಂತ್ರ ಮೂಲ ಸ್ವರೂಪದಲ್ಲಿದೆ. ಹಿಂದೂ ಧರ್ಮದಲ್ಲಿ ಹೆಚ್ಚು ಶಕ್ತಿಶಾಲಿ ಮಂತ್ರವಾಗಿದೆ. ಶಿವ ಗಾಯತ್ರಿ ಮಂತ್ರ ಕೂಡ ಹೆಚ್ಚು ಪ್ರಬಲವಾಗಿದೆ. ಶಿವನನ್ನು ಒಲಿಸಿಕೊಳ್ಳಲು ಮತ್ತು ಸಮಾಧಾನಕ್ಕಾಗಿ ಮಂತ್ರವನ್ನು ಪಠಿಸಿ.

ಶಿವ ಧ್ಯಾನ ಮಂತ್ರ
ಕರಾಚರಾನಕೃತಮ್ ವಾ ಕಾಯಜಂ ಕರ್ಮಜಂ ವಾ ಶ್ರವಾಣ್ಯಜ್ಞಂ ವಾ ಮಾನಸಂ ವಾ ಪರಧಂ
ವಿಹಿತಂ ವಿಹಿತಂ ವಾ ಸರ್ವ ಮೆತಾತ್ ಕ್ಷಮಸವ ಜಯ ಜಯ ಕರುಣಾಭ್ದೆ ಶ್ರೀ ಮಹಾದೇವ ಶಂಭೋ

ಶಿವನನ್ನು ಧ್ಯಾನಿಸಲು ಈ ಮಂತ್ರವನ್ನು ಪಠಿಸಿ. ನಾವು ಮಾಡಿರುವ ಎಲ್ಲಾ ಪಾಪಾ ಕಾರ್ಯಗಳಿಂದ ಇದು ಸಂರಕ್ಷಣೆಯನ್ನು ಮಾಡುತ್ತದೆ. ನಿಮ್ಮ ಆತ್ಮವನ್ನು ಶುದ್ಧೀಕರಿಸಲು ಈ ಮಂತ್ರವನ್ನು ಪಠಿಸಿ.

ಮಹಾ ಮೃತ್ಯುಂಜಯಾಯ ಮಂತ್ರ
ಓಂ ತ್ರಯಂಭಕಂ ಯಜಮಾಹೆ ಸುಗಂಧಿಂ ಪುಷ್ಟಿ ವರ್ಧನಂ
ಉರುವಾರುಕಮಿವಾ ಬಂಧನಾತ್ ಮೃತ್ಯುರ್ಮ್ಯುಕ್ಶ್ಯ ಮಾಮ್ರಿತಾತ್

ಮರಣ ಭಯದಿಂದ ರಕ್ಷಣೆಯನ್ನು ಪಡೆಯಲು ನಮಗೆ ಶಿವನೇ ಮಾರ್ಗವಾಗಿದ್ದಾರೆ. ಏಕೆಂದರೆ ಹುಟ್ಟು ಸಾವಿಗೆ ಒಡೆಯನು ಅವರೇ ಆಗಿದ್ದಾರೆ. ಈ ಮಂತ್ರವು ನಮ್ಮನ್ನು ಮರಣ ಭಯದಿಂದ ರಕ್ಷಿಸುತ್ತದೆ. ನಮ್ಮ ಬದುಕನ್ನು ಆನಂದದಿಂದ ಬದುಕಲು ಈ ಮಂತ್ರ ಸಹಾಯ ಮಾಡುತ್ತದೆ.

ಏಕದಶ ರುದ್ರ ಮಂತ್ರ
ಇದು ಹನ್ನೊಂದು ಮಂತ್ರಗಳನ್ನು ಒಳಗೊಂಡಿದೆ. ಶಿವನ ಬೇರೆ ಬೇರೆ ಅವತಾರಗಳಲ್ಲಿ ಅವರನ್ನು ಪೂಜಿಸಲು ಈ ಮಂತ್ರ ಸಹಕಾರಿಯಾಗಿದೆ. ತಿಂಗಳುಗಳು ವರ್ಷಗಳ ಕಾಲ ಈ ಮಂತ್ರಗಳ ರಚನೆಗೆ ತೆಗೆದುಕೊಳ್ಳಲಾಗಿದೆ. ನಿಮ್ಮ ಬಾಯಿಯ ಸಹಾಯದಿಂದ ಮಂತ್ರವನ್ನು ಪಠಿಸುವುದು ನಿಮಗೆ ಸಿದ್ಧಿಯನ್ನುಂಟು ಮಾಡುತ್ತದೆ. ಶಿವ ರಾತ್ರಿಯಂದು ನಡೆಯುವ ರುದ್ರ ಯಜ್ಞದ ಸಮಯದಲ್ಲಿ ಈ ಮಂತ್ರವನ್ನು ಪಠಿಸುವುದು ಇನ್ನಷ್ಟು ಶ್ರೇಯಸ್ಕರವಾಗಿದೆ.

ಕಪಾಲಿ
"ಓಂ ಹಮ್ ಹಮ್ ಶತ್ರುಸ್ಥಂಭನಾಯ ಹಮ್ ಹಮ್ ಓಂ ಫಟ್"

ಪಿಂಗಳ
"ಓಂ ಶ್ರೀಂ ಹ್ರೀಂ ಶ್ರೀಂ ಸರ್ವ ಮಂಗಳಾಯ ಪಿಂಗಳಾಯ ಓಂ ನಮಃ"

ಭೀಮ
"ಓಂ ಆಮ್ ಆಮ್ ಮನೊ ವಂಚಿತ ಸಿಧ್ಧಾಯ ಆಮ್ ಆಮ್ ಓಂ"

ವಿರೂಪಾಕ್ಷ
"ಓಂ ರುದ್ರಾಯ ರೋಗನಾಶಾಯ ಅಗಾಚ ಚ ರಾಮ್ ಓಂ ನಮಃ"

ವಿಲೋಹಿತಾ
"ಓಂ ಶ್ರೀಂ ಹ್ರೀಮ್ ಸಾಮ್ ಸಾಮ್ ಹ್ರೀಮ್ ಶ್ರೀಮ್ ಶಂಕರ್ಶಣಾಯ ಓಂ"

ಶಷ್ಟ
"ಓಂ ಹ್ರೀಮ್ ಹ್ರೀಮ್ ಸಫಲಾಯಿ ಸಿದ್ಧಯೇ ಓಂ ನಮಃ"

ಅಜಪದ
"ಓಂ ಶ್ರೀಮ್ ಬಾಮ್ ಸೋಗ್ ಬಲವರ್ಧನಾಯ ಬಲೇಶ್ವರಾಯ ರುದ್ರಾಯ ಫಟ್ ಓಂ"

ಅಹಿರ್ಭುಧನ್ಯ
"ಓಂ ಹ್ರಾಮ್ ಹ್ರೀಮ್ ಹಮ್ ಸಮಸ್ತ ಗ್ರಹ ದೋಷ ವಿನಾಶಾಯ ಓಂ"

ಸಂಭು
"ಓಂ ಗಮ್ ಹ್ಲುವಾಮ್ ಶೋರುಮ್ ಗ್ಲಮ್ ಗಮ್ ಓಂ ನಮಃ"

ಚಂಡ
"ಓಂ ಚಮ್ ಚಂಡೀಶ್ವರಾಯ ತೇಜಸ್ಸಾಯ ಚಮ್ ಓಂ ಫಟ್"

ಭಾವ
"ಓಂ ಭವೋದ್ ಭವ ಸಂಭವಾಯ ಇಷ್ಟ ದರ್ಶಣ ಓಂ ಸಾಮ್ ಓಂ ನಮಃ"

English summary

Most Powerful Mantras of Lord Shiva

Mantras are especially crafted incantations that hold immense power. They have boundless spiritual energy that helps in concentrating in the almighty. To know about the most powerful mantras of Lord Shiva, read on. Mantras are supposed to be uttered in a way that they create divine vibrations. These vibrations resound in the universe and bring peace of mind and happiness to us when we chant on them.
X
Desktop Bottom Promotion