Just In
Don't Miss
- News
ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ನಿಧನ
- Movies
ಅಭಿಮಾನಿಗಳಿಗೆ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Automobiles
ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ
- Sports
ಆಸ್ಟ್ರೇಲಿಯಾ vs ಶ್ರೀಲಂಕಾ ಟೆಸ್ಟ್ ಸರಣಿ: ಮೊದಲ ಪಂದ್ಯದ ಸಂಭಾವ್ಯ ತಂಡ, ಪ್ರಿವ್ಯೂ
- Technology
ಸ್ಲೈಸ್ ಅಪ್ಲಿಕೇಶನ್ ಅನ್ನು ಕೂಡಲೇ ಡಿಲೀಟ್ ಮಾಡಿ ಎಂದ ಗೂಗಲ್? ಕಾರಣ ಏನು?
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಮೇ 12ಕ್ಕೆ ಮೋಹಿನಿ ಏಕಾದಶಿ: ಪೂಜೆಗೆ ಶುಭ ಮುಹೂರ್ತ ಹಾಗೂ ಪಾಲಿಸಬೇಕಾದ ಉಪವಾಸದ ನಿಯಮಗಳ ಬಗ್ಗೆ ನೋಡಿ
ಏಕಾದಶಿ ಶ್ರೀವಿಷ್ಣುವಿನ ಪೂಜೆಗಾಗಿ ಮೀಸಲಿಟ್ಟಿರುವ ದಿನ. ಈ ದಿನ ವಿಷ್ಣು ಭಕ್ತರು ಉಪವಾಸ ನಿಯಮಗಳನ್ನು ಪಾಲಿಸಿ ವ್ರತ ಮಾಡುತ್ತಾರೆ. ಯಾರು ಏಕಾದಶಿ ವ್ರತ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ. ಪ್ರತೀ ತಿಂಗ 2 ಏಕಾದಶಿ ಬರುತ್ತದೆ. ವರ್ಷದಲ್ಲಿ ಒಟ್ಟು 24 ಏಕಾದಶಿ ಆಚರಣೆ ಮಾಡಲಾಗುವುದು. ಪ್ರತಿಯೊಂದು ಏಕಾದಶಿಯು ಒಂದೊಂದು ವೈಶಿಷ್ಟ್ಯತೆ ಹೊಂದಿದೆ. ಮೇ 12 ಬುಧವಾರದಂದು ಮೋಹಿನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ.
ಮೋಹಿನಿ ಏಕಾದಶಿಯ ವಿಶೇಷತೆ ಹಾಗೂ ಮಹತ್ವವೇನು? ಏಕಾದಶಿ ಉಪವಾಸದ ನಿಯಮಗಳೇನು ಎಂದು ನೋಡೋಣ ಬನ್ನಿ:

ಮೋಹಿನಿ ಏಕಾದಶಿ
ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮೋಹಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಎಲ್ಲಾ ಏಕಾದಶಿ ದಿನಾಂಕಗಳಲ್ಲಿ ಮೋಹಿನಿ ಏಕಾದಶಿಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಈ ಬಾರಿ ಮೋಹಿನಿ ಏಕಾದಶಿಯನ್ನು 12ನೇ ಮೇ 2022 ಗುರುವಾರ ಬಂದಿದೆ.
ಗುರುವಾರವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಗುರುವಾರ ಏಕಾದಶಿಯಾಗಿರುವುದರಿಂದ ಈ ದಿನದ ಮಹತ್ವ ಹೆಚ್ಚಿದೆ. ಪೌರಾಣಿಕ ಕತೆಯ ಪ್ರಕಾರ ಸಾಗರ ಮಂಥನದ ಸಮಯದಲ್ಲಿ ಹೊರಬಂದ ಅಮೃತವನ್ನು ರಾಕ್ಷಸರಿಂದ ರಕ್ಷಿಸಲು ಶ್ರೀ ವಿಷ್ಣುವು ಮೋಹಿನಿ ರೂಪವನ್ನು ತಾಳಿದನು. ಆ ದಿನವನ್ನು ಮೋಹಿನಿ ಏಕಾದಶಿ ಎಂದು ಆಚರಿಸಲಾಗುತ್ತಿದೆ.

ಮೋಹಿನಿ ಏಕಾದಶಿಯ ಮಹತ್ವ-
ಧಾರ್ಮಿಕ ನಂಬಿಕೆಯ ಪ್ರಕಾರ, ಮೋಹಿನಿ ಏಕಾದಶಿಯನ್ನು ಆಚರಿಸುವುದರಿಂದ ವ್ಯಕ್ತಿಯು ಬಾಂಧವ್ಯದ ಬಂಧನದಿಂದ ದೂರವಿರಲು ಮತ್ತು ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಉಪವಾಸ ಮಾಡುವುದರಿಂದ ವ್ಯಕ್ತಿಯು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ. ಈ ದಿನದಂದು ಉಪವಾಸದ ಕಥೆಯನ್ನು ಹೇಳುವುದರಿಂದ ಅಥವಾ ಕೇಳುವುದರಿಂದ ಸಾವಿರ ಗೋವನ್ನು ದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಮೋಹಿನಿ ಏಕಾದಶಿ ಶುಭ ಮುಹೂರ್ತ
ವೈಶಾಖ ಶುಕ್ಲ ಏಕಾದಶಿ ದಿನಾಂಕವು ಮೇ 11 ರ ಬುಧವಾರದಂದು ರಾತ್ರಿ 07.31 ಕ್ಕೆ ಪ್ರಾರಂಭವಾಗಿದೆ. ಇದು ಮೇ 12 ರ ಗುರುವಾರ ಸಂಜೆ 06.51 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ಮೇ 12 ರಂದು ಮೋಹಿನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ.

ಉಪವಾಸದ ಪಾರಣೆಯ ಸಮಯ
ಮೇ 13 ರಂದು ಶುಕ್ರವಾರ ಸೂರ್ಯೋದಯದ ನಂತರ ಮೋಹಿನಿ ಏಕಾದಶಿ ಉಪವಾಸ ಮುರಿಯಬಹುದು. ಬೆಳಗ್ಗೆ 07:59 ರವರೆಗೆ ಪಾರಣೆಗೆ ಶುಭ ಮುಹೂರ್ತ ಇದೆ.

ಮೋಹಿನಿ ಏಕಾದಶಿ ಉಪವಾಸ ವಿಧಾನ-
* ಈ ಪುಣ್ಯದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ.
* ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
ಇದಾದ ನಂತರ, ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ತುಪ್ಪದ ದೀಪವನ್ನು ಬೆಳಗಿಸಿ.
* ಗಂಗಾಜಲದಿಂದ ವಿಷ್ಣುವಿಗೆ ಅಭಿಷೇಕ ಮಾಡಿ, ಹೊಸ ಬಟ್ಟೆ ಅರ್ಪಿಸಿ.
* ಭಗವಾನ್ ವಿಷ್ಣುವನ್ನು ಆರಾಧಿಸಿ ಮತ್ತು ನೈವೇದ್ಯ ಅರ್ಪಿಸಿ. ತುಳಸಿಯನ್ನು ವಿಷ್ಣುವಿನ ನೈವೇದ್ಯದಲ್ಲಿ ಸೇರಿಸಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣುವು ತುಳಸಿ ಇಲ್ಲದೆ ನೈವೇದ್ಯ ಸ್ವೀಕರಿಸುವುದಿಲ್ಲ.