For Quick Alerts
ALLOW NOTIFICATIONS  
For Daily Alerts

ಶಿವನಿಗೆ ಪ್ರಿಯವಾದ ಮಹಾಮೃತ್ಯುಂಜಯ ಮಂತ್ರ ಪಠಿಸಿ- ಸಕಲ ಕಷ್ಟ ಪರಿಹಾರ

|

ವೇದಗಳಲ್ಲಿ ಅತ್ಯಂತ ಪ್ರಮುಖ ಅಥವಾ ಜನಜನಿತ ಮಂತ್ರಗಳಲ್ಲಿ ಮೃತ್ಯುಂಜಯ ಮಂತ್ರವು ಒಂದು. ಯಮನನ್ನೇ ಜಯಿಸಿದವ ಎನ್ನುವ ಅರ್ಥವನ್ನು ಈ ಮಂತ್ರ ನೀಡುತ್ತದೆ. ದೈಹಿಕವಾಗಿ ಕಾಯಿಲೆಯುಳ್ಳವರು. ಮಾನಸಿಕ ನೆಮ್ಮದಿ ಕಳೆದುಕೊಂಡವರು, ಆತಂಕಕ್ಕೆ ಒಳಗಾದವರು, ವಿಪತ್ತು ಬರಬಹುದೆಂಬ ಭಯವುಳ್ಳವರು ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಬಹುಬೇಗ ಸಮಸ್ಯೆಯಿಂದ ಪಾರಾಗಬಹುದು. ಮೃತ್ಯುಂಜಯ ಮಂತ್ರದಿಂದ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅನೇಕ ಉಪಯೋಗವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ಮೃತ್ಯುಂಜಯ ಮಂತ್ರವನ್ನು "ಸಾವು ವಿಜಯದ" ಮಂತ್ರ ಅಥವಾ "ತ್ರಯಂಬಕಮ್ ಮಂತ್ರ" ಎಂದು ಕರೆಯುತ್ತಾರೆ. ಮಹಾ ಮೃತ್ಯಂಜಯ ಮಂತ್ರವು ಶಿವನಿಗೆ ಸಮರ್ಪಿತವಾಗಿದೆ. ಇದನ್ನು ಮಾರ್ಕಂಡೇಯ ಋಷಿ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದು ಮಾರ್ಕಂಡಯ್ಯವರಿಗೆ ಮಾತ್ರ ತಿಳಿದಿರುವ ರಹಸ್ಯದ ಮಂತ್ರವಾಗಿತ್ತು ಎನ್ನಲಾಗುತ್ತದೆ. ರಾಜ ದಕ್ಷನಿಂದ ಚಂದ್ರನು ಶಾಪಕ್ಕೆ ಒಳಗಾಗಿ ತನ್ನ ಪ್ರಕಾಶವನ್ನು ಕಳೆದುಕೊಂಡಿದ್ದನು. ಆ ಸಂದರ್ಭದಲ್ಲಿ ಋಷಿ ಚಂದ್ರನನ್ನು ರಕ್ಷಿಸಲು ಸತಿಗೆ ಈ ಮಂತ್ರವನ್ನು ಹೇಳಿಕೊಟ್ಟನು ಎನ್ನಲಾಗುತ್ತದೆ. ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ಮಂತ್ರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮಹಾ ಮೃತ್ಯುಂಜಯ ಮಂತ್ರ

ಮಹಾ ಮೃತ್ಯುಂಜಯ ಮಂತ್ರ

ಓಂ ಹ್ರಮ್ ಜಮ್ ಸಹ್,

ಓಂ ಭ್ರುರ್ಬುವ ಸ್ವಹ್,

ಓಂ ತ್ರಯಂಬಕಮ್ ಯಜಮಹೇ,

ಸುಗಂಧಿಮ್ ಪಿಷ್ಟಿ ವರ್ಧನಮ್,

ಉರ್ವರ್ಕುಮಿವ್ ಬಂದಾನತ್,

ಮೃತ್ಯು ಮೋಕ್ಷ ಮಮರತ್,

ಓಂ ಸ್ವಾಹ್ ಭುವ್ ಭುರ್ ಓಂ ಸಹ್ ಜಮ್ ಜುಮ್ ಹೃಮ್ ಓಂ.

ಮಂತ್ರವನ್ನು ಹೀಗೆ ಅನುವಾಧಿಸಬಹುದು

ಮಂತ್ರವನ್ನು ಹೀಗೆ ಅನುವಾಧಿಸಬಹುದು

" ಓಂ, ನಾವು ಮೂರು ಕಣ್ಣಿನ ದೇವರರನ್ನು (ಶಿವ) ಪೂಜಿಸುತ್ತೇವೆ. ಸುಗಂಧ ಭರಿತ ಮತ್ತು ಪೋಷಣಾತ್ಮ ಗುಳವುಳ್ಳ ಶಿವನು ಮೃತ್ಯುವಿನಿಂದ ಪಾರುಮಾಡುತ್ತಾನೆ. ಒಂದು ಸೌತೆಕಾಯಿ ಹೇಗೆ ತನ್ನಿಂದ ತಾನೆ ಬಳ್ಳಿಯಿಂದ ಹೇಗೆ ಕಳಚಲ್ಪಡುತ್ತದೆಯೋ ಹಾಗೆಯೇ ಈ ಜಗದ ವ್ಯಾಮೋಹದಿಂದ ನಮ್ಮನ್ನು ನಾವೇ ಪ್ರತ್ಯೇಕಿಸುವಂತಾಗಲಿ. ಅವನು ನಮ್ಮನ್ನು ಮರಣದ ಹಿಡಿತದಿಂದ ಮುಕ್ತಗೊಳಿಸಬಹುದು ಮತ್ತು ಅಮರತ್ವದ ಕಡೆಗೆ ನಮ್ಮನ್ನು ತೆಗೆದುಕೊಳ್ಳಬಹುದು" ಎನ್ನುವ ಅರ್ಥವನ್ನು ಅನುವಾಧಿಸುತ್ತದೆ.

Most Read:ದಿನಾ ಒಂದೊಂದು ಗ್ಲಾಸ್ 'ಟೊಮೆಟೊ ಜ್ಯೂಸ್' ಕುಡಿದರೆ ಆರೋಗ್ಯವಾಗಿರುವಿರಿ

ಮಂತ್ರವನ್ನು ಹೀಗೆ ಅನುವಾಧಿಸಬಹುದು

ಮಂತ್ರವನ್ನು ಹೀಗೆ ಅನುವಾಧಿಸಬಹುದು

ಈ ಮಹಾ ಮೃತ್ಯುಂಜಯ ಮಂತ್ರವು ಶಿವನ ಎರಡು ಅಂಶಗಳನ್ನು ವಿವರಿಸುತ್ತದೆ. ಒಂದು ಕಣ್ಣು ಮೂರು ಕಣ್ಣುಗಳಿಂದ ಉರಿಯುತ್ತಿರುವ ದೇವರನ್ನು ತೋರಿಸುತ್ತದೆ. ಇತರ ಅಂಶವು ರಕ್ಷಕನ ಅಂಶವನ್ನು ಒಳಗೊಂಡಿದೆ. ಮರಣದ ಪರಿಕಲ್ಪನೆ ಇಲ್ಲವಾದ ಸಮಯ ಇತ್ತು ಎಂದು ನಂಬಲಾಗಿದೆ. ಸಂಚರಿಸುತ್ತಿದ್ದ ಭೂಮಿಯಲ್ಲಿ ಸಂಪನ್ಮೂಲಗಳು ಖಾಲಿಯಾದವು. ಆದ್ದರಿಂದ ಪ್ರಕೃತಿಯಲ್ಲಿ ಸಂಪತ್ತನ್ನು ಸಮತೋಲನದಲ್ಲಿ ಇರುವಂತೆ ನಿರ್ವಹಿಸಬೇಕೆಂದು ಯಮ ಮನುಷ್ಯರಿಗೆ ಮರಣವನ್ನು ತಂದು ಜವಾಬ್ದಾರಿಯನ್ನು ಪುನಃ ಸ್ಥಾಪಿಸಿದನು ಎನ್ನಲಾಗುವುದು.

ಮಂತ್ರವನ್ನು ಹೀಗೆ ಅನುವಾಧಿಸಬಹುದು

ಮಂತ್ರವನ್ನು ಹೀಗೆ ಅನುವಾಧಿಸಬಹುದು

ಈ ಕಾರಣದಿಂದ ಮಾನವರು ಮರಣದ ಭಯವನ್ನು ಹೊಂದಿದರು. ಹಾಗಾಗಿಯೇ ಭೂಮಿಯ ಮೇಲೆ ವಾಸಿಸುವುದು ಒಂದು ದೊಡ್ಡ ನೋವಾಯಿತು. ಆಗ ಎಲ್ಲಾ ರೀತಿಯ ನೋವನ್ನು ಶಮನಗೊಳಿಸಲು ಶಿವನು ಮಾನವನಿಗೆ ಈ ಮಂತ್ರವನ್ನು ನೀಡಿದನು. ಹಾಗಾಗಿಯೇ ಒತ್ತಡ, ದುಃಖ, ಅನಾರೋಗ್ಯ ಅಥವಾ ಅಕಾಲಿಕ ಮರಣದ ಬೆದರಿಕೆಯನ್ನು ಹೋಗಲಾಡಿಸಲು ಈ ಮಂತ್ರ ಸಹಾಯ ಮಾಡುವುದು ಎಂದು ಹೇಳಲಾಗುತ್ತದೆ.

ಮಂತ್ರವನ್ನು ಹೇಗೆ ಪಠಿಸುವುದು?

ಮಂತ್ರವನ್ನು ಹೇಗೆ ಪಠಿಸುವುದು?

ಮಂತ್ರವನ್ನು ಎರಡು ವಿಧಾನದಲ್ಲಿ ಪಠಿಸಬಹುದು. 1. ಒಬ್ಬ ವ್ಯಕ್ತಿ 108 ಬಾರಿ ಮಂತ್ರವನ್ನು ಹೇಳಬಹುದು. 108 ಆಧ್ಯಾತ್ಮಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ. 108 ಎನ್ನುವುದು ಗುಣಾಕಾರ ಮೊತ್ತ 12 ಮತ್ತು 9 ಆಗಿದೆ. 12 ಎನ್ನುವುದು ರಾಶಿಚಕ್ರವನ್ನು ಸೂಚಿಸುತ್ತದೆ. 9 ಎನ್ನುವುದು ಗ್ರಹಗಳನ್ನು ಉಲ್ಲೇಖಿಸುತ್ತದೆ. ಮಾನವನ ಜೀವನಕ್ಕೆ ಸುಉಲಭವಾಗಿ ಎಲ್ಲವನ್ನು ಪಡೆಯಲು 108 ಬಾರಿ ಜಪಿಸುವುದರಿಂದ ತನ್ನ ಗ್ರಹಗಳು ಮತ್ತು ರಾಶಿಚಕ್ರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ಜೀವನದ ಏರು ಪೇರು ಎಲ್ಲವೂ ಸರಿಹೊಂದುವುದು ಎಂದು ಹೇಳಲಾಗುತ್ತದೆ.

ಮಂತ್ರವನ್ನು ಹೇಗೆ ಪಠಿಸುವುದು?

ಮಂತ್ರವನ್ನು ಹೇಗೆ ಪಠಿಸುವುದು?

ಒಬ್ಬ ವ್ಯಕ್ತಿ ಅಸ್ವಾಭಾವಿಕವಾಗಿ ಗಂಭೀರ ರೋಗ ಮತ್ತು ಸಾವಿನ ಭಯವನ್ನು ಎದುರಿಸುತ್ತಿದ್ದರೆ ಅವನು ಶಿವನ ಪೂಜೆಯನ್ನು ಮಾಡಬೇಕು. ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ದಿನದಲ್ಲಿ ಅಥವಾ ರಾತ್ರಿಯ ಸಮಯದಲ್ಲಿ ಹೇಳಬಹುದು. ಇದರಿಂದ ನಮ್ಮ ಏಕಾಗೃತೆಯ ಸಾಮರ್ಥ್ಯ ಹೆಚ್ಚುವುದು. ಜೊತೆಗೆ ಉತ್ತಮ ನಿದ್ರೆಯನ್ನು ಹೊಂದಬಹುದಾಗಿದೆ.

ಮಂತ್ರದ ಮಹತ್ವ ಮತ್ತು ಪ್ರಾಮುಖ್ಯತೆ

ಮಂತ್ರದ ಮಹತ್ವ ಮತ್ತು ಪ್ರಾಮುಖ್ಯತೆ

ಮಹಾ ಮೃತ್ಯುಂಜಯ ಮಂತ್ರವು ಭಯ ಮತ್ತು ಪ್ರತಿಕೂಲತೆಯ ಮುಖದಲ್ಲಿ ಶಾಂತತೆ ಮತ್ತು ಸಂತೋಷವನ್ನು ತರುವ ಶಕ್ತಿಯನ್ನು ಹೊಂದಿದೆ. ಇದು ಮನಸ್ಸು ಮತ್ತು ದೇಹವನ್ನು ಪೋಷಿಸುವ ಒಂದು ಗುಣಪಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಮಂತ್ರದ ಮಹತ್ವ ಮತ್ತು ಪ್ರಾಮುಖ್ಯತೆ

ಮಂತ್ರದ ಮಹತ್ವ ಮತ್ತು ಪ್ರಾಮುಖ್ಯತೆ

ವ್ಯಕ್ತಿಯ ಪೋಷಣೆ ಮತ್ತು ನವ ಯೌವನ ಪಡೆಯುವಿಕೆಗೆ ಮಂತ್ರ ಸಹಾಯ ಮಾಡುತ್ತದೆ. ಇದು ದೀರ್ಘಾಯುಷ್ಯ, ಆರೋಗ್ಯ ಮತ್ತು ವ್ಯಕ್ತಿಯ ಯೋಗಕ್ಷೇಮದ ಮೂಲವಾಗಿದೆ. ಮಂತ್ರ ದೈವಿಕ ಕಂಪನಗಳನ್ನು ಸೃಷ್ಟಿಸುತ್ತದೆ ಅದು ವ್ಯಕ್ತಿಯ ಸುತ್ತಲೂ ಇರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಅವನಿಗೆ/ಅವಳಿಗೆ ಇರುವ ಎಲ್ಲಾ ಭೀತಿಯನ್ನು ನಿವಾರಿಸುತ್ತದೆ.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಯಾವುದೇ ಮಂತ್ರದಂತೆ ಈ ಮಂತ್ರವನ್ನೂ ಅತಿ ಪ್ರಾಮಾಣಿಕತೆಯಿಂದ, ಭಕ್ತಿಯಿಂದ ಮತ್ತು ಪೂರ್ಣ ಶ್ರದ್ಧೆಯಿಂದ ದೇವರನ್ನೇ ಧ್ಯಾನಿಸಿ ಪಠಿಸಿದಾಗ ಮಾತ್ರ ಇದು ಶಿವನಿಗೆ ಕೇಳುತ್ತದೆ. ಇದನ್ನು ಪಠಿಸಲು ಅತ್ಯುತ್ತಮವಾದ ಸಮಯವೆಂದರೆ ಮುಂಜಾನೆಯ ಬ್ರಹ್ಮಮುಹೂರ್ತ ಅಂದರೆ ಸರಿಯಾಗಿ ನಾಲ್ಕು ಗಂಟೆಗೆ. ದಿನದ ಇತರ ಸಮಯಗಳಲ್ಲಿಯೂ ಇದನ್ನು ಪಠಿಸುವುದು ಉತ್ತಮ.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಪ್ರತಿದಿನ ನಿಮ್ಮ ಉದ್ಯೋಗಗಳಿಗೆ ಅಥವಾ ವೃತ್ತಿನಿಮಿತ್ತ ಮನೆಯಿಂದ ಹೊರಡುವ ಮುನ್ನ, ಯಾವುದಾದರೂ ಶುಭಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ, ರಾತ್ರಿ ಮಲಗುವ ಮುನ್ನ, ಯಾವುದೇ ಔಷಧಿ ಸೇವಿಸುವ ಮುನ್ನ ಈ ಮಂತ್ರವನ್ನು ಕನಿಷ್ಟ ಒಂಭತ್ತು ಬಾರಿ ಪಠಿಸಬೇಕು. ನಿಮ್ಮ ವಾಹನವನ್ನು ಚಲಾಯಿಸಲು ತೊಡಗುವ ಮುನ್ನ ಅಥವಾ ಪ್ರಯಾಣದ ವಾಹನ ಚಾಲನೆಗೂ ಮುನ್ನ ಈ ಮಂತ್ರವನ್ನು ಮೂರು ಬಾರಿ ಪಠಿಸಬೇಕು.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ದಿನದ ಇತರ ಯಾವುದೇ ಬಿಡುವಿನ ವೇಳೆಯಲ್ಲಿ ನೂರಾಎಂಟು ಬಾರಿ ಪ್ರತಿದಿನ ಪಠಿಸುವ ಮೂಲಕ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಸ್ನಾನದ ಬಳಿಕ ದೇಹಕ್ಕೆ ಹಚ್ಚಿಕೊಳ್ಳುವ ವಿಭೂತಿ, ಭಸ್ಮ, ಪವಿತ್ರ ಬೂದಿ, ಚಂದನ ಅಥವಾ ಕುಂಕುಮವನ್ನು ಹಚ್ಚಿಕೊಳ್ಳುವಾಗಲೂ ಈ ಮಂತ್ರವನ್ನು ಪಠಿಸಬೇಕು.

Most Read:ನೀರಿನಲ್ಲಿ ನೆನೆಸಿಟ್ಟ 'ಮೆಂತೆ ಕಾಳಿನ' ಆರೋಗ್ಯಕಾರಿ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರ ಪ್ರಯೋಜನಗಳು

ಇನ್ನೊಂದು ವಿಧಾನವೆಂದರೆ ಒಂದು ಲೋಟದಲ್ಲಿ ತಣ್ಣೀರು ತುಂಬಿ ಪೂರ್ವಾಭಿಮುಖವಾಗಿ, ಸಾಧ್ಯವಾದರೆ ಪದ್ಮಾಸನದಲ್ಲಿ ಅಥವಾ ಚಕ್ಕಲಮಕ್ಕಲ ಬೆನ್ನು ನೆಟ್ಟಗಿರುವಂತೆ ಕುಳಿತು ಬಲಹಸ್ತದಿಂದ ಲೋಟವನ್ನು ಮುಚ್ಚಿ ಈ ಮಂತ್ರವನ್ನು 1008 ಬಾರಿ ಪಠಿಸಿ ಈ ನೀರನ್ನು ಮನೆಯ ಒಳಗೆಲ್ಲಾ ಪ್ರೋಕ್ಷಳಿಸಿ, ಚಿಕ್ಕ ಚಮಚ ಅಥವಾ ಪ್ರಸಾದದ ಮಿಳ್ಳೆಯನ್ನು ಉಪಯೋಗಿಸಿ ಇತರ ಭಕ್ತರಿಗೂ ವಿತರಿಸಿ. ಇದರಿಂದ ಶಿವನ ಅಪಾರ ಶಕ್ತಿಯ ಒಂದು ಅಂಶ ಈ ನೀರಿಗೆ ಲಭ್ಯವಾಗಿ ಮನೆಯನ್ನು ಬೆಳಗುತ್ತದೆ ಹಾಗೂ ಭಕ್ತರಿಗೂ ಒಳ್ಳೆಯದಾಗುತ್ತದೆ.

ಹಾಲಿನ ಪ್ರಸಾದ

ಹಾಲಿನ ಪ್ರಸಾದ

ಶಿವ ದೇವರಿಗೆ ಹಾಲಿನ ಪ್ರಸಾದಗಳೆಂದರೆ ತುಂಬಾ ಪ್ರಿಯವಾದುದು. ಹಾಗಾಗಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದ ನಂತರ ಹಾಲಿನಿಂದ ಮಾಡಿದ ಪಾಯಸ, ಅಥವಾ ಇತರೆ ಹಾಲ ಉತ್ಪನ್ನಗಳನ್ನು ಶಿವ ದೇವರಿಗೆ ಅರ್ಪಿಸಿ.

Most Read:ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಅಪಾರ ಸಂಪತ್ತು ಮತ್ತು ಸುಖವನ್ನು ಹೊಂದುವ ಅವಕಾಶವಿದ್ದರೂ ಶಿವ ಆಯ್ದುಕೊಂಡಿದ್ದು ಹಿಮಾಲಯದ ಶೀತಲ ಪ್ರದೇಶ ಮತ್ತು ಸ್ಮಶಾನದ ವಾಸ್ತವ್ಯ. ಅಂದರೆ ಸರಳತೆ ಮತ್ತು ದುಃಖದಲ್ಲಿರುವವರಿಗೆ ಶಿವ ಸದಾ ಸಹಾಯ ಮಾಡುತ್ತಾನೆ ಎಂದು ಅರ್ಥೈಸಿಕೊಳ್ಳಬಹುದು. ಅಂತೆಯೇ ನಮ್ಮ ಸುತ್ತ ಮುತ್ತಲಿರುವ ಜನರ ಸುಖಕ್ಕೆ ಹೋಗದಿದ್ದರೂ ದುಃಖದ ಸಮಯದಲ್ಲಿ ಭಾಗಿಯಾಗುವ ಮೂಲಕ ಶಿವನ ಕೃಪೆಗೆ ಪಾತ್ರರಾಗಬಹುದು. ನಿಮ್ಮ ಸುತ್ತಮುತ್ತಲ ಜನರಲ್ಲಿ ಯಾರಾದರೂ ಕಾಯಿಲೆ ಬಿದ್ದಿದ್ದರೆ, ಅಪಘಾತಕ್ಕೊಳಗಾಗಿ ಮನೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರೆ ಇಂತಹ ಜನರನ್ನು ಭೇಟಿಯಾಗಿ ಅವರ ಪಕ್ಕ ಕುಳಿತು ಈ ಮಂತ್ರವನ್ನು ಮೌನವಾಗಿ ಪಠಿಸಿ.

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಕಾಯಿಲೆಯಲ್ಲಿದ್ದವರ ತೊಂದರೆಗಳಿಗೂ ಪರಿಹಾರ ಸಿಗುತ್ತದೆ

ಒಂದು ವೇಳೆ ರೋಗಿ ಮರಣಶಯ್ಯೆಯಲ್ಲಿರುವ ಸಂದರ್ಭವಿದ್ದರೆ ಈ ಮಂತ್ರವನ್ನು ಜೋರಾಗಿ ಕೇಳುವಂತೆ ಪಠಿಸುವುದು ಅಥವಾ ಧ್ವನಿಮುದ್ರಣವನ್ನು ಕೇಳಿಸುವುದು ಒಳಿತು. ಇದರಿಂದ ಮರಣದ ಬಾಧೆಯಿಂದ ರೋಗಿ ಮುಕ್ತನಾಗುತ್ತಾನೆ. ಮಹಾಮೃತ್ಯುಂಜಯ ಮಂತ್ರದ ಪಠಣದಿಂದ ಪರಿಸರದಲ್ಲಿ ಒಂದು ರೀತಿಯ ಕಂಪನ ಉಂಟಾಗಿ ರೋಗಿಯ ಆತ್ಮವನ್ನು ಕೊಂಡೊಯ್ಯಲು ಆಗಮಿಸಿರುವ ದುಷ್ಟಶಕ್ತಿಗಳನ್ನು ಮತ್ತು ಋಣಾತ್ಮಕ ಶಕ್ತಿಗಳನ್ನು ದೂರಾಗಿಸಬಹುದು. ಇದರಿಂದ ರೋಗಿ ಚೇತರಿಸಿಕೊಳ್ಳಲೂ ಸಾಧ್ಯವಾಗುತ್ತದೆ.

English summary

miracles of maha mrityunjaya mantra

The Maha Mrityunjaya Mantra is also known as the 'death conquering' mantra or the 'Trayambakam' mantra. The Maha Mrityunjaya Mantra is considered as one of the most powerful mantra which has great healing powers. The Maha Mrityunjaya Mantra is dedicated to Lord Shiva and is said to have been created by sage Markandeya. It was a secret mantra which was known only to sage Markandeya. Once when the moon was cursed by king Daksha and had lost its brightness, the sage gave this mantra to Sati to save the moon.
X
Desktop Bottom Promotion