For Quick Alerts
ALLOW NOTIFICATIONS  
For Daily Alerts

ಈದ್ ಮಿಲಾದ್ ಆಚರಣೆ: ದಿನಾಂಕ, ಐತಿಹಾಸಿಕ ಹಿನ್ನೆಲೆ, ಮಹತ್ವ

ಈದ್ ಮಿಲಾದ್ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರವಚನಗಳನ್ನು ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿಯನ್ನೂ, ಅವನ್ನು ಆಚರಿಸುವ ಬಗೆಯನ್ನೂ, ಧರ್ಮಪಾಲನೆಯ ಮಹತ್ವ ಮತ್ತು ಅದನ್ನು ಪಾಲಿಸುವ ಬಗೆಯನ್ನೂ ವಿವರಿಸಲಾಗುತ್ತದೆ....

By manu
|

ಇಸ್ಲಾಮಿಕ್ ತಿಂಗಳಾದ ರವಿ ಉಲ್ ಅವ್ವಲ್‌ನಲ್ಲಿ ಬರುವ ಈದ್ ಮಿಲಾದ್ ಹಬ್ಬವನ್ನು ಪ್ರಾಫೆಟ್ ಮೊಹಮ್ಮದನ (ಪ್ರವಾದಿಯವರ) ಜನುಮ ದಿನವಾಗಿ ಆಚರಿಸಲಾಗುತ್ತದೆ. ಈದ್ ಉಲ್ ಫಿತ್ರ್ ಮತ್ತು ಈದ್ ಉಲ್ ಅಧಾ ಮುಸ್ಲಿಮರಿಗೆ ಪವಿತ್ರವಾದ ಪ್ರಮುಖ ಎರಡು ಹಬ್ಬಗಳಾಗಿದ್ದು ಇದರ ನಂತರ ಪ್ರಮುಖ ದಿನವನ್ನಾಗಿ ಮಿಲಾದುನ್ನಬೀ ಅಥವಾ ಈದ್ ಮಿಲಾದ್ ಆಗಿದೆ.

ಶಿಯಾ ಮತ್ತು ಸುನ್ನಿ ಮುಸ್ಲಿಮರು ಈ ಹಬ್ಬವನ್ನು ತಮ್ಮದೇ ರೀತಿಯಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಈ ವರ್ಷ ಅಕ್ಟೋಬರ್‌ 18, 19ರಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ.

ಇದಕ್ಕೆ ಬದಲಾಗಿ ಅವರ ಪ್ರವಚನಗಳನ್ನು ಒರೆಹಚ್ಚುವ, ಅವರ ಜೀವನ ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುವ ಕಾರ್ಯಾಗಾರಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ. ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪರೀಕ್ಷೆಯ ಫಲಿತಾಂಶ ಪ್ರಕಟಣೆ, ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಪ್ರೋತ್ಸಾಹ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ.

Eidmilad

ಈ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರವಚನಗಳನ್ನು ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿಯನ್ನೂ, ಅವನ್ನು ಆಚರಿಸುವ ಬಗೆಯನ್ನೂ, ಧರ್ಮಪಾಲನೆಯ ಮಹತ್ವ ಮತ್ತು ಅದನ್ನು ಪಾಲಿಸುವ ಬಗೆಯನ್ನೂ ವಿಷದಪಡಿಸಲಾಗುತ್ತದೆ. ಧರ್ಮಪಾಲನೆಯಲ್ಲಿ ಎಲ್ಲೆಲ್ಲಿ ನಾವು ತಪ್ಪು ಮಾಡುತ್ತಿದ್ದೇವೆ, ಇದನ್ನು ಸರಿಪಡಿಸಿಕೊಳ್ಳುವ ಬಗೆ ಹೇಗೆ? ಸಮಾಜದಲ್ಲಿ ಸಹಬಾಳ್ವೆ, ಸೌಹಾರ್ದತೆಗೆ ಪ್ರವಾದಿಯಯವರು ನೀಡಿದ ಸಂದೇಶ ಏನು ಮೊದಲಾದ ವಿಷಯಗಳ ಮೇಲೆ ಚರ್ಚೆ ನಡೆಯುತ್ತದೆ.

ಇದು ಹಾದಿ ತಪ್ಪುತ್ತಿರುವ ಸಮಾಜದ ಯೋಚನೆಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಸೌಹಾರ್ದತೆ ಮೂಡಲು ನೆರವಾಗುತ್ತದೆ. ಊರಿನ ಜನರಿಗೆ ಊಟದ ವ್ಯವಸ್ಥೆಯೂ ಇದ್ದು ಉತ್ತಮ ಊಟವಿಲ್ಲದ ಬಡವರಿಗೆ ಸರಿಸಮಾನವಾದ ಆಹಾರ ದೊರೆಯುತ್ತದೆ. ಆಹಾರವಸ್ತು ಮತ್ತು ಇತರ ಬಳಕೆಯ ನಿತ್ಯವಸ್ತುಗಳನ್ನು ಅರ್ಹರಿಗೆ ಬಡಬಗ್ಗರಿಗೆ ದಾನ ಮಾಡಲಾಗುತ್ತದೆ.

ಆದ್ದರಿಂದ ಈದ್ ಮಿಲಾದ್ ಎಂಬುದು ಪ್ರವಾದಿಯವರ ಜನ್ಮದಿನ ಎಂಬ ಕೇವಲ ಸಾಂಕೇತಿಕ ರೂಪವೇ ಹೊರತು ನಿಜವಾಗಿ ಅವರ ಸಂದೇಶಗಳ ಪುನಸ್ಮರಣೆ ಮತ್ತು ಆಚರಣೆಯ ದ್ಯೋತಕವೇ ಆಗಿದೆ. ತಮ್ಮ ವಿಚಾರಗಳಿಂದ ಲಕ್ಷಾಂತರ ಜನರ ಹೃದಯದಲ್ಲಿರುವ ಪ್ರವಾದಿ ಮೊಹಮ್ಮದರ ವಿಚಾರಗಳನ್ನು ತಿರುವಿ ಹಾಕಲು ಈದ್ ಮಿಲಾದ್ ಒಂದು ಸುದಿನವಾಗಿ ಬಳಕೆಯಾಗುತ್ತದೆ.

English summary

Eid-e-Milad-Un-Nabi 2021: Date, history and importance

Though Milad Nabi forms one of the significant days for the followers of Islam, the celebrations associated with it are however constrained to an extent. Unlike other festivals of Eid, the celebrations are limited owing to the fact that it also happens to be the death anniversary of the Prophet.
X
Desktop Bottom Promotion