For Quick Alerts
ALLOW NOTIFICATIONS  
For Daily Alerts

ಡಿ. 18ಕ್ಕೆ ಮಾರ್ಗಶಿರ ಪೂರ್ಣಿಮೆ: ಇಷ್ಟಾರ್ಥ ಸಿದ್ಧಿಗಾಗಿ ಈ ಆಚರಣೆಗಳನ್ನು ಮಾಡಿ

|

ಹಿಂದೂ ಧರ್ಮದಲ್ಲಿ ಪೂರ್ಣಿಮೆಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಪ್ರತಿಯೊಂದು ಹುಣ್ಣಿಮೆಯು ವಿಭಿನ್ನ ಮಹತ್ವವನ್ನು ಹೊಂದಿವೆ. ಮಾರ್ಗಶಿರ ಮಾಸದ ಹುಣ್ಣಿಮೆಯನ್ನು ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ.

ಮಾರ್ಗಶೀರ್ಷ ಮಾಸದಲ್ಲಿ ಶ್ರಿಕೃಷ್ಣನನ್ನು ಪೂಜಿಸಲಾಗುತ್ತದೆ. ಆದರೆ, ಮಾರ್ಗಶಿರ ಮಾಸದ ಹುಣ್ಣಿಮೆಯಂದು ಸತ್ಯನಾರಾಯಣ ಕಥೆಯನ್ನು ಪಠಿಸಲಾಗುತ್ತದೆ ಜೊತೆಗೆ, ಲಕ್ಷ್ಮಿ ದೇವಿಯನ್ನು ಪೂಜಿಸುವ ಕಾನೂನು ಕೂಡ ಇದೆ. ಅಷ್ಟೇ ಅಲ್ಲ ಈ ದಿನ ಚಂದ್ರನನ್ನೂ ಪೂಜಿಸಲಾಗುತ್ತದೆ. ಪೂರ್ಣಿಮೆಯ ದಿನದಂದು ಲಕ್ಷ್ಮಿಯ ಆಶೀರ್ವಾದ ಪಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಮಾರ್ಗಶಿರ ಮಾಸದ ಹುಣ್ಣಿಮೆಯ ತಿಥಿ, ಮಹತ್ವ ಮತ್ತು ಚಂದ್ರೋದಯದ ಸಮಯದ ಬಗ್ಗೆ ತಿಳಿಯೋಣ.

ಮಾರ್ಗಶಿರ ಪೂರ್ಣಿಮಾ 2021 ದಿನಾಂಕ:

ಮಾರ್ಗಶಿರ ಪೂರ್ಣಿಮಾ 2021 ದಿನಾಂಕ:

ಮಾರ್ಗಶಿರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹುಣ್ಣಿಮೆಯನ್ನು ಮಾರ್ಗಶೀರ್ಷ/ಮಾರ್ಗಶಿರ ಪೂರ್ಣಿಮೆ ಎಂದು ಕರೆಯಲಾಗುತ್ತದೆ.

ಹುಣ್ಣಿಮೆ ತಿಥಿ ಪ್ರಾರಂಭ : 18 ಡಿಸೆಂಬರ್, ಶನಿವಾರ ಬೆಳಿಗ್ಗೆ 07:24 ರಿಂದ

ಹುಣ್ಣಿಮೆ ತಿಥಿ ಅಂತ್ಯ: ಡಿಸೆಂಬರ್ 19 ರಂದು ಭಾನುವಾರ 10.05 ರವರೆಗೆ

ಚಂದ್ರನ ಉದಯ: ಡಿಸೆಂಬರ್ 18 ರಂದು ಸಂಜೆ 04:46 ಕ್ಕೆ

ಮಾರ್ಗಶಿರ ಪೂರ್ಣಿಮೆಯ ಮಹತ್ವ:

ಮಾರ್ಗಶಿರ ಪೂರ್ಣಿಮೆಯ ಮಹತ್ವ:

ಪ್ರತಿ ತಿಂಗಳ ಹುಣ್ಣಿಮೆಗೆ ವಿಭಿನ್ನ ಮಹತ್ವವಿದೆ. ಮಾರ್ಗಶಿರ ಮಾಸವೂ ಅತ್ಯಂತ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಶ್ರೀ ಕೃಷ್ಣನನ್ನು ಪೂಜಿಸುವುದರಿಂದ ಆತನ ಅನುಗ್ರಹ ದೊರೆಯುತ್ತದೆ. ಈ ತಿಂಗಳ ಹುಣ್ಣಿಮೆಯ ದಿನದಂದು ಉಪವಾಸವನ್ನು ಆಚರಿಸುವುದರಿಂದ, ವ್ಯಕ್ತಿಯು ಪಾಪಗಳಿಂದ ಮುಕ್ತಿ ಹೊಂದುತ್ತಾನೆ, ಜೊತೆಗೆ ಆತನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಹುಣ್ಣಿಮೆಯಂದು ದಾನ, ಸ್ನಾನ ಮತ್ತು ಪೂಜೆ ಇತ್ಯಾದಿಗಳನ್ನು ಮಾಡುವುದರಿಂದಲೂ ವಿಶೇಷ ಲಾಭವಿದೆ. ಈ ದಿನದ ಚಂದ್ರನ ಆರಾಧನೆಗೂ ವಿಶೇಷ ಮಹತ್ವವಿದೆ. ಜಾತಕದಲ್ಲಿ ಚಂದ್ರನ ಸ್ಥಾನವನ್ನು ಬಲಪಡಿಸಲು, ಹುಣ್ಣಿಮೆಯ ದಿನದಂದು ಪೂಜೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತದೆ. ಅಲ್ಲದೆ, ಸತ್ಯನಾರಾಯಣನನ್ನು ಪೂಜಿಸುವುದು ಮತ್ತು ಕಥೆಗಳನ್ನು ಕೇಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಾರ್ಗಶಿರ ಪೂರ್ಣಿಮೆಯಂದು ಪೂಜೆ ಮಾಡುವುದು ಹೇಗೆ?:

ಮಾರ್ಗಶಿರ ಪೂರ್ಣಿಮೆಯಂದು ಪೂಜೆ ಮಾಡುವುದು ಹೇಗೆ?:

ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.

ಉಪವಾಸ ಮಾಡುವವರು, ಅದರ ಪ್ರತಿಜ್ಞೆ ಕೈಗೊಳ್ಳಬೇಕು.

ಈ ದಿನ ಲಕ್ಷ್ಮಿ ಜೊತೆಗೆ ವಿಷ್ಣುವನ್ನು ಪೂಜಿಸಿ.

ವಿಷ್ಣುವಿಗೆ ಹಳದಿ ಹೂವುಗಳನ್ನು ಅರ್ಪಿಸಿ ಮತ್ತು ಹಳದಿ ಬಟ್ಟೆಗಳನ್ನು ಧರಿಸಿ ಪೂಜಿಸಿ.

ಸತ್ಯನಾರಾಯಣರ ಕಥೆಯನ್ನು ಕುಟುಂಬದವರೆಲ್ಲ ಸೇರಿ ಓದಬೇಕು.

ಮೊಸರಿನ ಪಂಚಾಮೃತವನ್ನು ತಯಾರಿಸಿ, ಅರ್ಪಿಸಿ.

ಪ್ರಸಾದವನ್ನು ಎಲ್ಲಾ ಜನರಿಗೆ ಹಂಚಿ ಮತ್ತು ಅದನ್ನು ನೀವೂ ಸೇವಿಸಿ, ಉಪವಾಸ ಮುರಿಯಿರಿ.

English summary

Margashirsha Purnima 2021 Date, Shubh Muhurat, Significance and How to Worship in kannada

Here we talking about Margashirsha Purnima 2021 Date, Shubh Muhurat, Significance and How to Worship in kannada, read on
X
Desktop Bottom Promotion