For Quick Alerts
ALLOW NOTIFICATIONS  
For Daily Alerts

ಮಣ್ಣೆತ್ತಿನ ಅಮವಾಸ್ಯೆ 2021: ಈ ದಿನದ ವಿಶೇಷತೆ ಏನು?

|

ಭಾರತ ದೇಶ ವೈವಿಧ್ಯತೆಯಿಂದ ಕೂಡಿರುವ ದೇಶ. ನಮ್ಮಲ್ಲಿ ಸಂಪ್ರದಾಯ, ಹಬ್ಬಗಳಿಗೆ ತುಂಬಾನೇ ಮಹತ್ವ ನೀಡಲಾಗುವುದು. ಇನ್ನು ರೈತ ವರ್ಗವು ಆಚರಿಸುವ ಹಲವಾರು ಹಬ್ಬಗಳಿವೆ. ರೈತರ ಉಸಿರೆಂದರೆ ಮಣ್ಣು ಹಾಗೂ ಜಾನುವಾರುಗಳು, ಹಾಗಾಗಿ ಅನೇಕ ರೈತರ ಹಬ್ಬಗಳಲ್ಲಿ ಎತ್ತುಗಳಿಗೆ ತುಂಬಾನೇ ಮಹತ್ವವಿದೆ.

ಕಾರ ಹುಣ್ಣಿಮೆಯಲ್ಲಿ ರೈತರು ಎತ್ತುಗಳಿಗೆ ಸಿಂಗರಿಸಿ ಹಬ್ಬವನ್ನು ಆಚರಿಸಿದರೆ, ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಅಲಂಕರಿಸಿ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದ ವಿಶೇಷತೆ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಕಾರ ಹುಣ್ಣಿಮೆ ಬಳಿಕ ಬರುವ ಮಣ್ಣೆತ್ತಿನ ಅಮವಾಸ್ಯೆ

ಕಾರ ಹುಣ್ಣಿಮೆ ಬಳಿಕ ಬರುವ ಮಣ್ಣೆತ್ತಿನ ಅಮವಾಸ್ಯೆ

ರೈತನ ಮಣ್ಣನ್ನು ಹದ ಮಾಡಿ, ಬೆಳೆ ಬಿತ್ತಲು ಸಹಾಯ ಮಾಡುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸಲು ಉತ್ತರ ಕರ್ನಾಟಕದ ಕಡೆ ಖಾರ ಹುಣ್ಣಿಮೆ ಆಚರಿಸಲಾಗುವುದು. ಅದೇ ರೀತಿ ಮಣ್ಣೆತ್ತಿನ ಅಮವಾಸ್ಯೆ ದಿನ ಕೂಡ ಮಣ್ಣಿನ ಎತ್ತಿನ ಪ್ರತಿಮೆಗಳಿಗೆ ಸಿಂಗರಿಸಿ ಪೂಜೆ ಮಾಡಲಾಗುವುದು. ಈ ವರ್ಷ ಜುಲೈ 9 ಶುಕ್ರವಾರದಂದು ಆಚರಿಸಲಾಗುವುದು.

ಮಣ್ಣೆತ್ತಿನ ಅಮವಾಸ್ಯೆಯ ವಿಶೇಷತೆ

ಮಣ್ಣೆತ್ತಿನ ಅಮವಾಸ್ಯೆಯ ವಿಶೇಷತೆ

ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾದಾಗ ಕೃಷಿ ಚಟುವಟಿಕೆಗಳು ಶುರುವಾಗುವುದು... ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ, ನಾಟಿ ಕೂಡ ಮುಗಿದಿರುತ್ತದೆ, ಈ ಸಂಭ್ರಮವನ್ನು ಆಚರಿಸಲು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎಲ್ಲರೂ ಒಟ್ಟಾಗಿ ಅನೇಕ ಚಟುವಟಿಗಳನ್ನು ಹಮ್ಮಿಕೊಂಡು ಇಂಥ ಹಬ್ಬಗಳನ್ನು ಆಚರಿಸುವುದರಿಂದ ಸಂತೋಷ ಹೆಚ್ಚಿಸಿ, ಐಕ್ಯತೆಯನ್ನು ಮೂಡಿಸುತ್ತದೆ.

ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಹೇಗೆ ಮಾಡಲಾಗುವುದು?

ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಹೇಗೆ ಮಾಡಲಾಗುವುದು?

ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮವಾಸ್ಯೆ. ಈ ದಿನ ರೈತರು ಹೊಲಕ್ಕೆ ಹೋಗಿ, ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ ಪೂಜಿಸಲಾಗುವುದು. ಕೆಲವರು ಊರು ದೇವಾಲಯಕ್ಕೆ ಈ ಎತ್ತುಗಳನ್ನು ಕೊಂಡೊಯ್ದು ಪೂಜೆ ಮಾಡಿ ಬರುತ್ತಾರೆ. ನಂತರ ಎತ್ತುಗಳಿ ಹೋಳಿಗೆ, ಸಿಹಿ ಕಡಬು ಇಟ್ಟು ಎಡೆ ಇಡಲಾಗುವುದು. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ.

ರೈತರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಎತ್ತು

ರೈತರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಎತ್ತು

ರೈತರಿಗೆ ಎತ್ತುಗಳೇ ಜೀವಾಳ. ತಮ್ಮ ಕೃಷಿ ಚಟುವಟಿಕೆಗಳಿಗೆ ದೊಡ್ಡ ಸಹಾಯವಾಗಿರುವ ಎತ್ತುಗಳೆಂದರೆ ರೈತರಿಗೆ ತಮ್ಮ ಪ್ರಾಣಗಿಂತಲೂ ಮಿಗಿಲಾದ ಪ್ರೀತಿ. ರೈತರ ಎಲ್ಲಾ ಹಬ್ಬಗಳಲ್ಲಿಯೂ ಎತ್ತುಗಳಿಗೆ ಪ್ರಮುಖ ಸ್ಥಾನ ನೀಡಲಾಗುವುದು ಜೊತೆಗೆ ಮಣ್ಣಿನ ಆರಾಧನೆಯನ್ನು ಕೂಡ ಮಾಡಲಾಗುವುದು. ಮೆಣ್ಣೆತ್ತಿನ ಅಮವಾಸ್ಯೆಗೆ ಮಣ್ಣಿನಿಂದ ಎತ್ತುಗಳನ್ನು ಮಾಡಿದರೆ ನಾಗರ ಪಂಚಮಿಗೆ ಮಣ್ಣಿನ ನಾಗರ ಮೂರ್ತಿಗಳನ್ನು ಮಾಡಲಾಗುವುದು. ಗಣಪನನ್ನು ಮಣ್ಣಿನಿಂದ ತಯಾರಿಸಿ ಗಣೇಶ ಹಬ್ಬ ಆಚರಿಸಲಾಗುವುದು. ಹೀಗೆ ಮಣ್ಣು ಹಾಗೂ ಎತ್ತಗಳಿಗೆ ನಮ್ಮ ಎಲ್ಲಾ ಹಬ್ಬಗಳಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.

English summary

Mannettina Amavasya 2021 date, time, history, rituals & significance in kannada

Mannettina Amavasya 2021 date, time, history, rituals & significance in kannada, read on...
Story first published: Friday, July 9, 2021, 14:43 [IST]
X
Desktop Bottom Promotion