For Quick Alerts
ALLOW NOTIFICATIONS  
For Daily Alerts

ಅವಿವಾಹಿತ ಹೆಣ್ಮಕ್ಕಳು ಮಂಗಳ ಗೌರಿ ವ್ರತ ಮಾಡಿದರೆ ದೊರೆಯುವ ಪ್ರಯೋಜನಗಳೇನು?

|

ಹಬ್ಬಗಳ ಮಾಸ ಶ್ರಾವಣ ಜುಲೈ 29 ಶುಕ್ರವಾರದಿಂದ ಆರಂಭವಾಗಿದೆ. ಹಬ್ಬಗಳ ಮುನ್ನುಡಿಯಾಗಿ ನಾಗರ ಪಂಚಮಿ ಬಂದಿದೆ, ಅಲ್ಲದೇ ಅದೇ ದಿನ ಮಂಗಳ ಗೌರಿ ವ್ರತ ಕೂಡ ಬಂದಿದೆ. ಮಂಗಳ ಗೌರಿ ವ್ರತ ದೇವಿ ಪಾರ್ವತಿಗೆ ಸಮರ್ಪಿಸಲಾಗುವುದು. ಶ್ರಾವಣ ಮಾಸದ ಪ್ರತೀ ಮಂಗಳವಾರ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು.

Mangla Gauri Vrat for Unmarried

ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ವೈವಾಹಿಕ ಜೀವನ ಆನಂದದಿಂದ ಇರಲಿ ಹಾಗೂ ಅವಿವಾಹಿತ ಮಹಿಳೆಯರು ಬೇಗ ಕಲ್ಯಾಣ ಯೋಗ ಕೂಡಿ ಬರಲಿ ಎಂದು ಈ ವ್ರತವನ್ನು ಆಚರಿಸಲಾಗುವುದು. ಈ ವ್ರತ ಮಾಡುವುದರಿಂದ ನಾವು ಗೌರಿ ಮಾತೆಯ ಕೃಪೆಗೆ ಪಾತ್ರರಾಗುತ್ತೇವೆ, ಇದರಿಂದ ನಮಗೆಲ್ಲಾ ಒಳ್ಳೆಯದೇ ಆಗುತ್ತದೆ, ನಮ್ಮ ಸಂಕಲ್ಪ ನೆರವೇರುವುದು ಎಂಬುವುದು ಭಕ್ತರ ಅಚಲ ನಂಬಿಕೆ.

ಈ ವ್ರತವನ್ನು ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಆಚರಿಸುತ್ತಾರೆ, ಅವಿವಾಹಿತರು ಕೂಡ ಶ್ರೀಘ್ರ ಒಳ್ಳೆಯ ವರ ಸಿಗಲಿ ಎಂದು ಈ ವ್ರತವನ್ನು ಆಚರಸುತ್ತಾರೆ. ಅವಿವಾಹಿತ ಮಹಿಳೆಯರು ಮಂಗಳ ಗೌರಿ ವ್ರತವನ್ನು ಆಚರಿಸುವುದರಿಂದ ಏನು ಪ್ರಯೋಜನ ಸಿಗುವುದು ಎಂದು ನೋಡೋಣ ಬನ್ನಿ:

ಶ್ರಾವಣದಲ್ಲಿ ಮಂಗಳ ಗೌರಿ ವ್ರತದ ದಿನಾಂಕಗಳು

ಶ್ರಾವಣದಲ್ಲಿ ಮಂಗಳ ಗೌರಿ ವ್ರತದ ದಿನಾಂಕಗಳು

2 ಆಗಸ್ಟ್ 2022 , ಮಂಗಳವಾರ

9 ಆಗಸ್ಟ್ 2022 , ಮಂಗಳವಾರ

16 ಆಗಸ್ಟ್ 2022, ಮಂಗಳವಾರ

23 ಆಗಸ್ಟ್ 2022, ಮಂಗಳವಾರ

 ಅವಿವಾಹಿತ ಹೆಣ್ಮಕ್ಕಳಿಗೆ ಮಂಗಳ ಗೌರಿ ವ್ರತ ನೀಡುವುದು ಪರಿಹಾರ

ಅವಿವಾಹಿತ ಹೆಣ್ಮಕ್ಕಳಿಗೆ ಮಂಗಳ ಗೌರಿ ವ್ರತ ನೀಡುವುದು ಪರಿಹಾರ

ಮಂಗಳ ದೋಷವಿದ್ದರೆ, ಮತ್ತಿತರ ಗ್ರಹ ದೋಷವಿದ್ದರೆ ಈ ವ್ರತವನ್ನು ಆಚರಿಸುವುದರಿಂದ ಮಂಗಳಯೋಗ ಸಿಗುವುದು. ಇದರಿಂದ ಮದುವೆಗೆ ಇರುವ ಅಡ್ಡಿ ಅಥವಾ ಇತರ ದೋಷಗಳು ದೂರಾಗಿ ಒಳ್ಳೆಯ ಸಂಬಂಧ ಕೂಡಿ ಬರುವುದು. ಇದಲ್ಲದೆ, ಈ ಉಪವಾಸವನ್ನು ಆಚರಿಸುವುದು ಮದುವೆಯ ನಂತರ ಪತಿ ಮತ್ತು ಹೆಂಡತಿಯ ನಡುವೆ ಸಂಬಂಧದಲ್ಲಿ ಒಳ್ಳೆಯ ಸಾಮರಸ್ಯ ಇರುತ್ತದೆ.

 ಈ ದಿನ ಅವಾಹಿತ ಹೆಣ್ಮಕ್ಕಳು ಏನು ಮಾಡಬೇಕು?

ಈ ದಿನ ಅವಾಹಿತ ಹೆಣ್ಮಕ್ಕಳು ಏನು ಮಾಡಬೇಕು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳಗೌರಿಯ ವ್ರತವನ್ನು ಆಚರಿಸುವ ಅವಿವಾಹಿತ ಹುಡುಗಿಯರು ಮತ್ತು ವಿವಾಹಿತ ಮಹಿಳೆಯರು ಮಂಗಳವಾರ ಹನುಮಂತನ ಪಾದದಿಂದ ಸಿಂಧೂರವನ್ನು ತೆಗೆದುಕೊಂಡು ತಮ್ಮ ಹಣೆಯ ಮೇಲೆ ಹಚ್ಚಬೇಕು. ಇದು ಜಾತಕದಲ್ಲಿರುವ ಮಂಗಳದೋಷವನ್ನು ಹೋಗಲಾಡಿಸುತ್ತದೆ.

ಅವಿವಾಹಿತ ಹುಡುಗಿಯರು ಮಂಗಳ ಗೌರಿ ವ್ರತದ ಸಮಯದಲ್ಲಿ ಶ್ರೀಮದ್ ಭಾಗವತದ ಹದಿನೆಂಟನೇ ಅಧ್ಯಾಯದ ಒಂಬತ್ತನೇ ಶ್ಲೋಕ, ಗೌರಿ ಪೂಜೆ ಮತ್ತು ತುಳಸಿ ರಾಮಾಯಣದ ಸುಂದರಕಾಂಡವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಎಲ್ಲಾ ದೋಷ ಪರಿಹಾರವಾಗಿ ಶುಭವಾಗುವುದು.

ಈ ಮಂತ್ರವನ್ನು ಪಠಿಸಿ

ಈ ಮಂತ್ರವನ್ನು ಪಠಿಸಿ

ಮಂಗಳಗೌರಿ ವ್ರತದ ಸಮಯದಲ್ಲಿ, ಶ್ರೀ ಮಂಗಳ ಗೌರಿ ಮಂತ್ರದ 'ಓಂ ಗೌರಿಶಂಕರಾಯೈ ನಮಃ' ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಬೆಳಗ್ಗೆ ಮತ್ತು ಸಂಜೆ ಕನಿಷ್ಠ 108 ಬಾರಿ ಜಪಿಸಬೇಕು. ಹಾಗೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

English summary

Mangla Gauri Vrat for Unmarried; Know Puja Vidhi, Significance and Benefits

Mangla Gauri Vrat for Unmarried; Here are Puja Vidhi, Significance and benefits, read on...
X
Desktop Bottom Promotion