For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ2022: ಮುತ್ತೈದೆಯರಿಗೆ ಇವುಗಳನ್ನು ದಾನ ಮಾಡಿದರೆ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ

|

ಮುತ್ತೈದೆಯರನ್ನು ದೇವಿ ಮಹಾಲಕ್ಷ್ಮಿ, ದುರ್ಗಾಮಾತೆಯ ಸ್ವರೂಪ ಎನ್ನಲಾಗುತ್ತದೆ. ಮಂಗಳವಾರ, ಶುಕ್ರವಾರದ ದಿನ ಮುತ್ತೈದೆಯರಿಗೆ ಫಲ, ತಾಂಬೂಲ ನೀಡಿ ಸಂತೃಪ್ತಿಪಡಿಸಿ ಅವರಿಂದ ಆಶೀರ್ವಾದ ಪಡೆದರೆ ಆ ದೇವಿಯಿಂದಲೇ ಆಶೀರ್ವಾದ ಪಡೆದಷ್ಟು ಧನ್ಯತೆ ಎಂಬ ನಂಬಿಕೆ ಇದೆ.

ಇದೀಗ ಶ್ರಾವಣ ಮಾಸ, ಮಂಗಳವಾರ ಮಂಗಳವಾರ ಮಂಗಳಗೌರಿ ವ್ರತವಾದರೆ, ಶುಕ್ರವಾರ ವರಮಹಾಲಕ್ಷ್ಮಿ ವ್ರತ. ಈ ವಿಶೇಷ ಸಂದರ್ಭದಲ್ಲಿ ಮುತ್ತೈದೆಯರಿಗೆ ಫಲ ತಾಂಬೂಲ ನೀಡುವುದು ವಾಡಿಕೆ ಹಾಗೂ ಶ್ರೇಷ್ಠವೂ ಹೌದು.

ಮುತ್ತೈದೆಯರಿಗೆ ಯಾವುದನ್ನು ದಾನ ಮಾಡಬೇಕು, ಇದರ ಅರ್ಥವೇನು, ಇದರಿಂದ ಆಗುವ ಪ್ರಯೋಜನವೇನು ಮುಂದೆ ನೋಡೋಣ:

ದಾನಗಳು ಮತ್ತು ಅದರ ಫಲಗಳು

1. ಅರಿಶಿನ ದಾನ

1. ಅರಿಶಿನ ದಾನ

ಅರಿಶಿನವನ್ನು ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ.

2. ಕುಂಕುಮ ದಾನ

2. ಕುಂಕುಮ ದಾನ

ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಹೊಂದಿರುತ್ತಾರೆ ಮತ್ತ ಅವರ ಮೇಲಿನ ನಂಬಿಕೆ ಜಾಸ್ತಿ ಆಗುತ್ತೆ. ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ. ದೃಷ್ಟಿದೋಷ ನಿವಾರಣೆ ಆಗುತ್ತದೆ. ಕೋಪ, ಹಠ, ಕಡಿಮೆ ಆಗುತ್ತದೆ.

3. ಕನ್ನಡೀ(ರೂಪಲಕ್ಷ್ಮೀ), ಬಾಚಣಿಗೆ ಮತ್ತು ಕಾಡಿಗೆ/ಕಣ್ಣುಕಪ್ಪು

3. ಕನ್ನಡೀ(ರೂಪಲಕ್ಷ್ಮೀ), ಬಾಚಣಿಗೆ ಮತ್ತು ಕಾಡಿಗೆ/ಕಣ್ಣುಕಪ್ಪು

* ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ.

* ಬಾಚಣಿಗೆ ದಾನ ಮಾಡಿದರೆ ತಲೆಗೆ ಸಂಭಂದಿಸಿದ ಖಾಯಿಲೆಗಳು, ಯೋಚನೆಗಳು ಕಡಿಮೆಯಾಗುತ್ತವೆ ಮತ್ತು ರೂಪವತಿಯಾಗುತ್ತಾರೆ.

* ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ. ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌

4. ಅಕ್ಕಿ

4. ಅಕ್ಕಿ

ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ.

5. ತೊಗರಿಬೇಳೆ

5. ತೊಗರಿಬೇಳೆ

ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ. ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು, ಸರ್ಪದೋಷಗಳು ನಿವಾರಣೆಯಾಗುತ್ತದೆ. ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ. ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ.

6. ಉದ್ದಿನ ಬೇಳೆ

6. ಉದ್ದಿನ ಬೇಳೆ

ಪಿತೃಶಾಪ ನಿವಾರಣೆಯಾಗುತ್ತದೆ. ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ. ಅಪಮೃತ್ಯುಗಳು ನಿವಾರಣೆಯಾಗುತ್ತದೆ. ಅಗೋಚರ ರೋಗಗಳು ನಿವಾರಣೆಯಾಗುತ್ತದೆ. ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ.

7. ಹೆಸರುಬೇಳೆ- ವಿದ್ಯಾಲಕ್ಷ್ಮೀ

7. ಹೆಸರುಬೇಳೆ- ವಿದ್ಯಾಲಕ್ಷ್ಮೀ

ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ. ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ. ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ.

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ, ದೇವಿಗೆ ಹೆಸರುಬೇಳೆ ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ. ಅಲ್ಲದೆ ಗ್ಯಾಸ್ಟ್ರಿಕ್‌ ಮತ್ತು ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ.

8. ತೆಂಗಿನಕಾಯಿ

8. ತೆಂಗಿನಕಾಯಿ

ಇಷ್ಟಾರ್ಥಸಿದ್ಧಿಯಾಗುತ್ತದೆ. ತೆಂಗಿನಕಾಯಿಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ. ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಕಾರ್ಯಗಳು ಪೂರ್ಣಫಲ ಕೊಡಬೇಕಾದರೆ "ತೆಂಗಿನಕಾಯಿ" ದಾನ ಮಾಡಲೇಬೇಕು, ಸರ್ವಕಾರ್ಯ ವಿಜಯವಾಗುತ್ತದೆ. ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ. ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ.

9. ವಸ್ತ್ರಲಕ್ಷ್ಮೀ

9. ವಸ್ತ್ರಲಕ್ಷ್ಮೀ

ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ"ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ. ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು. ಹೀಗೆ ಮಾಡುವುದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ. ಕುಲದೇವತೆಗೆ ತೃಪ್ತಿಯಾಗುತ್ತದೆ, ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ ಮತ್ತು ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ.

10. ವೀಳ್ಯದೆಲೆ

10. ವೀಳ್ಯದೆಲೆ

ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ" ಎನ್ನುತ್ತೇವೆ. ತಾಂಬೂಲ ದಾನವನ್ನು ಮಾಡವುದರಿಂದ ಧನಲಕ್ಷ್ಮೀ ಅನುಗ್ರಹವಾಗಿ ಧನಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ. ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

11. ಅಡಿಕೆ

11. ಅಡಿಕೆ

ಅಡಿಕೆಗೆ ಸಂಸ್ಕೃತದಲ್ಲಿ "ಪೂಗೀಫಲ" ಎಂದು ಹೆಸರು. ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".! ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ. ಬರೀ ಅಡಿಕೆಯನ್ನು ತಿಂದರೆ "ಬ್ರಹ್ಮಹತ್ಯಾ" ದೋಷ ಬರುವುದು. ಆದ್ದರಿಂದ ಬರೀ ಅಡಿಕೆ ತಿನ್ನಬಾರದು.

12. ಫಲದಾನ

12. ಫಲದಾನ

ಫಲದಾನಕ್ಕೆ ಜ್ಞಾನಲಕ್ಷ್ಮೀ ಅಧಿಪತಿ. ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌ ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ, ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ.

13. ಬೆಲ್ಲ (ರಸಲಕ್ಷ್ಮೀ)

13. ಬೆಲ್ಲ (ರಸಲಕ್ಷ್ಮೀ)

ಬೆಲ್ಲ ಅಭಿಮಾನ ದೇವತೆ "ರಸಲಕ್ಷ್ಮೀ". ಬೆಲ್ಲದಲ್ಲಿ "ಬ್ರಹ್ಮದೇವರು", ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ. ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ, ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ, ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ.

English summary

Mangla Gauri Vrat And Varamahalakshmi Remedies: Give These Things to Married Women to Get Rid of Problems

Here we are discussing about Mangla Gauri Vrat And varamahalakshmi Remedies: Give These Things to Married Women to Get Rid of Problems. Read more.
Story first published: Thursday, August 4, 2022, 17:35 [IST]
X
Desktop Bottom Promotion