For Quick Alerts
ALLOW NOTIFICATIONS  
For Daily Alerts

ಮಂಗಳಗೌರಿ ವ್ರತ 2022: ದಿನ ಹಾಗೂ ಮಂಗಳಗೌರಿ ವ್ರತ ಮಾಡುವ ವಿಧಾನ ಹೇಗೆ?

|

ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದೆ. ಹಬ್ಬಗಳ ಮಾಸ ಶ್ರಾವಣ ಜುಲೈ 29 ಶುಕ್ರವಾರದಿಂದ ಆರಂಭವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬ ಹಾಗೂ ಅದರಲ್ಲೂ ದೇವಿಗೆ ಅರ್ಪಿತವಾದ ಹಬ್ಬ ಮಂಗಳ ಗೌರಿ ವ್ರತ. ಆಗಸ್ಟ್‌ 2, ಮಂಗಳವಾರ ಮೊದಲ ಮಂಗಳ ಗೌರಿ ವ್ರತದ ಆರಂಭದ ದಿನ.

Mangala Gouri Vrat 2020: Date, Significance & How To Do Pooja, ಮಂಗಳಗೌರಿ ವ್ರತ ಪೂಜೆ | Boldsky Kannada
Mangala Gouri Vrat 2020: Date, Significance And How To Do Pooja

ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ವೈವಾಹಿಕ ಜೀವನ ಆನಂದದಿಂದ ಇರುವಂತೆ ಆಶೀರ್ವದಿಸುವ ಉದ್ದೇಶದಿಂದ ಈ ಪೂಜೆಯನ್ನು ಪಾರ್ವತಿ ಅಥವಾ ಗೌರಿ ದೇವಿಗೆ ಪೂಜೆಯನ್ನು ಸಮರ್ಪಿಸಲಾಗುತ್ತದೆ. ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ.

ಮುತ್ತೈದೆಯರು ದೀರ್ಘ ಸುಮಂಗಲಿಯ ಆಶೀರ್ವಾದಕ್ಕಾಗಿ, ಸಂತಾನ ಭಾಗ್ಯ ಪಡೆಯಲು, ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಾಡಿದರೆ, ಹೆಣ್ಣುಮಕ್ಕಳು ಉತ್ತಮ ಬಾಳ ಸಂಗಾತಿಗಾಗಿ ಬೇಡಿಕೆ ಇಟ್ಟು ಬಹಳ ಭಕ್ತಿ ಭಾವದಿಂದ ಆಚರಿಸುವ ಈ ವ್ರತವನ್ನು ಪಾರ್ವತಿ ದೇವಿಗೆ ಅರ್ಪಿಸುತ್ತಾರೆ.

ಈ ವ್ರತ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹಿಂದೂಗಳು ಆಚರಿಸುವ ಪ್ರಮುಖ ವ್ರತ. ಶ್ರಾವಣ ಮಾಸದ ಯಾವುದೇ ಮಂಗಳವಾರವೂ ಮಂಗಳಗೌರಿ ವ್ರತ ಆಚರಿಸಬಹುದು.

2022ರಲ್ಲಿ ಮಂಗಳಗೌರಿ ವ್ರತ ಆಚರಿಸುವ ದಿನಗಳು

2022ರಲ್ಲಿ ಮಂಗಳಗೌರಿ ವ್ರತ ಆಚರಿಸುವ ದಿನಗಳು

ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಮತ್ತು ತಮಿಳುನಾಡಿನಲ್ಲಿ ಮಂಗಳಗೌರಿ ವ್ರತ ಆಚರಿಸುವ ದಿನಗಳು

ಮಂಗಳವಾರ, 2 ಆಗಸ್ಟ್ 2022

ಮಂಗಳವಾರ, 9 ಆಗಸ್ಟ್ 2022

ಮಂಗಳವಾರ, 16 ಆಗಸ್ಟ್ 2022

ಮಂಗಳವಾರ, 23 ಆಗಸ್ಟ್ 2022

ಪೂಜೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳು

ಪೂಜೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳು

ಪಾರ್ವತಿ ಅಥವಾ ಗೌರಿ ದೇವಿಯ ವಿಗ್ರಹ

ಅಥವಾ ಅರಿಶಿನ ಪುಡಿಯಿಂದ ಮಾಡಿದ ಪಿರಮಿಡ್ ಆಕೃತಿ

ಕಲಶ

ಬೆಲ್ಲ

ಅಕ್ಕಿ

ಹತ್ತಿ ಅಥವಾ ಹೂವಿನ ಮಾಲಾ ಅಥವಾ ಹಾರ

ಕೆಂಪು ಹೂವುಗಳು

ತೆಂಗಿನಕಾಯಿ

ಪಿರಮಿಡ್‌ನಂತೆ ಮಡಿಚಲ್ಪಟ್ಟ ಬಟ್ಟೆ

ಬಗೆಬಗೆಯ ಹಣ್ಣುಗಳು

ಪೂಜೆ ಮಾಡುವ ವಿಧಾನ ಹೇಗೆ

ಪೂಜೆ ಮಾಡುವ ವಿಧಾನ ಹೇಗೆ

ಸೂರ್ಯೋದಯಕ್ಕೂ ಮುನ್ನ ಮುಂಜಾನೆ ಮಹಿಳೆ/ಹೆಣ್ಣುಮಕ್ಕಳು ಸ್ನಾನ ಮಾಡಿ, ಗೌರಿಯ ವಿಗ್ರಹವನ್ನು ಅರಿಶಿನದೊಂದಿಗೆ ತಯಾರಿಸಿ ಅದನ್ನು ಮಡಿ ಬಟ್ಟೆಯಿಂದ ಅಲಂಕರಿಸಿ. ಅಗತ್ಯ ಪೂಜಾ ವಸ್ತುಗಳನ್ನು ಮೊದಲೇ ಸಿದ್ಧ ಇಟ್ಟುಕೊಳ್ಳಿ. ಬೇಯಿಸದ ಅಕ್ಕಿಯನ್ನು ಬೆಳ್ಳಿ ತಟ್ಟೆಯಲ್ಲಿ, ನೀರನ್ನು ತುಂಬಿಸಿದ ಕಲಶವನ್ನು ಅಕ್ಕಿ ತಟ್ಟೆಯಲ್ಲಿ ಇಡಲಾಗುತ್ತದೆ. ಕಳಶಕ್ಕೆ ಐದು ವೀಳ್ಯದೆಲೆಯನ್ನು ಇಡಿ ಮತ್ತು ತೆಂಗಿನಕಾಯಿಗೆ ಅರಿಶಿನ, ಕುಂಕುಮ ಇಟ್ಟು ಅಲಂಕರಿಸಿ. ಪೂಜೆ ಆರಂಭಕ್ಕೂ ಮುನ್ನ ಗಣೇಶ ವಿಗ್ರಹಕ್ಕೆ ಹಾಲು, ನೀರು ಚಿಮುಕಿಸಿ ಪೂಜೆ ಮಾಡಿ. ನಂತರ ಅರಿಶಿನದ ಅಥವಾ ಬೆಳ್ಳಿಯ ಗೌರಿಗೆ ಅಭಿಷೇಕ ಮಾಡಲು ಪ್ರಾರಂಭಿಸಿ. ಅಷ್ಠೋತ್ರವನ್ನು ಹೇಳುತ್ತಾ ಹೂವುಗಳಿಂದ ಅಭಿಷೇಕ ಮಾಡಿ, ಸಂಜೆ ಪೂಜೆ ವೇಳೆ ಮಂಗಳಗೌರಿಯ ಕಥೆಯನ್ನು ಓದಿ.

ಮತ್ತೈದೆಯರಿಗೆ ನೀಡುವ ತಾಂಬೂಲದಲ್ಲಿ ಏನಿರಬೇಕು?

ಮತ್ತೈದೆಯರಿಗೆ ನೀಡುವ ತಾಂಬೂಲದಲ್ಲಿ ಏನಿರಬೇಕು?

ಕನಿಷ್ಠ ಐದು ಮಹಿಳೆಯರನ್ನು ಕರೆದು ಕುಂಕುಮ ತಾಂಬೂಲ ನೀಡಬೇಕು. ತಾಂಬೂಲದಲ್ಲಿ 5 ಬಗೆಯ ಹಣ್ಣುಗಳು, ಹಸಿರು ಕಾಳುಗಳು, ಅಕ್ಕಿ ಹಿಟ್ಟು ಮತ್ತು ಎಳ್ಳಿನಿಂದ ತಯಾರಿಸಿ ಸಿಹಿ ಖಾದ್ಯ ತಮಟೆ ನೀಡಬೇಕು. ಶುಭ ಸುದ್ದಿ, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಪೂಜೆಯನ್ನು ಶ್ರಾವಣ ತಿಂಗಳ ಎಲ್ಲಾ ಮಂಗಳವಾರದಂದು 5ವರ್ಷಗಳು ವ್ರತ ಮಾಡಬೇಕು.

English summary

Mangala Gouri Vrat 2022: Dates, Timings, Rituals, Puja Vidhi, Vrat Katha and Significance

Here we are discussing about Mangala Gouri Vrat 2020: Date, Significance And How To Do Pooja. Shravan Mangala Gauri Vrat or Mangala Gauri puja is regarded as one of the most rewarding Vrats or fasts. It is performed during the month of Shravan Maas. Read more.
X
Desktop Bottom Promotion