For Quick Alerts
ALLOW NOTIFICATIONS  
For Daily Alerts

Mangala Gouri Vratha 2022: ಮಂಗಳ ಗೌರಿ ವ್ರತ ಮುತ್ತೈದೆಯರು ಏಕೆ ಮತ್ತು ಹೇಗೆ ಮಾಡಬೇಕು?

|

ಶ್ರಾವಣ ಮಾಸ 2022ನೇ ಸಾಲಿನಲ್ಲಿ ಆಗಸ್ಟ್ 2ರಿಂದ ಆಗಸ್ಟ್ 23ರವರೆಗೆ ಇರಲಿದೆ. ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿತವಾಗಿದೆ, ಆದರೂ ಈ ಮಾಸದಲ್ಲಿ ಶಿವನ ಪತ್ನಿ ಗೌರಿಯ ಪೂಜೆಯೂ ಸಹ ಅಷ್ಟೇ ಮಹತ್ವವನ್ನು ಪಡೆಯುತ್ತದೆ. ಗೌರಿಗೆ ಪ್ರಿಯವಾದ ಮಾಸ ಎಂದು ಸಹ ಹೇಳಲಾಗುತ್ತದೆ.

ಈ ಶುಭ ಶ್ರಾವಣಮಾಸದಲ್ಲಿ ಮಹಿಳೆಯರು ಮಂಗಳ ಗೌರಿ ವ್ರತ ಮಾಡುವ ಮೂಲಕ ಪತಿಯ ಆಯಸ್ಸು, ಆರೋಗ್ಯ ಹಾಗೂ ಕುಟುಂಬದ ಸರ್ವತೋಮುಖ ಏಳ್ಗೆಗಾಗಿ ಮಂಗಳಗೌರಿ ಉಪವಾಸ, ವ್ರತ ಮಾಡುತ್ತಾರೆ.

ಮಂಗಳಗೌರಿ ವ್ರತ, ಉಪವಾಸ ಆಚರಿಸಲು ವಿಶೇಷ ನಿಯಮಗಳಿವೆ. ನಾವಿಂದು ಮಂಗಳ ಗೌರಿ ಉಪವಾಸದ ಮಹತ್ವ, ಕಥೆ , ಪೂಜಾ ವಿಧಾನವನ್ನು ಮತ್ತು ಗೌರಿ ಪೂಜೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

2022ನೇ ಸಾಲಿನಲ್ಲಿ ಮಂಗಳಗೌರಿವ್ರತ ಆಚರಿಸುವ ದಿನಗಳು

2022ನೇ ಸಾಲಿನಲ್ಲಿ ಮಂಗಳಗೌರಿವ್ರತ ಆಚರಿಸುವ ದಿನಗಳು

ಶ್ರಾವಣ ಆರಂಭ - ಜುಲೈ 29 ಶುಕ್ರವಾರ

ಮಂಗಳವಾರ, 2 ಆಗಸ್ಟ್ 2022

ಮಂಗಳವಾರ, 9 ಆಗಸ್ಟ್ 2022

ಮಂಗಳವಾರ, 16 ಆಗಸ್ಟ್ 2022

ಮಂಗಳವಾರ, 23 ಆಗಸ್ಟ್ 2022

ಶ್ರಾವಣ ಕೊನೆಯ ದಿನ - ಶನಿವಾರ, 27 ಆಗಸ್ಟ್‌ 2022

ಮಂಗಳ ಗೌರಿ ವ್ರತ ವಿಧಿ-ವಿಧಾನ

ಮಂಗಳ ಗೌರಿ ವ್ರತ ವಿಧಿ-ವಿಧಾನ

ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳಿ. ಅದರ ನಂತರ ಸ್ನಾನ ಮಾಡಿ ಮತ್ತು ಶುದ್ಧವಾದ ಬಟ್ಟೆಗಳನ್ನು ಧರಿಸಿ.

ಈಗ ಒಂದು ಸ್ವಚ್ಛವಾದ ಮಣೆಯ ಮೇಲೆ ಕೆಂಪು ಬಟ್ಟೆಯನ್ನು ಹರಡಿ.

ಅದರ ಮೇಲೆ ಗೌರಿಯ ಪ್ರತಿಮೆ ಅಥವಾ ಅರಿಶಿನದಿಂದ ತಯಾರಿಸಿದ ಮೂರ್ತಿಯನ್ನು ಇಡಿ.

ಅಕ್ಕಿಯ ತಟ್ಟೆಯಲ್ಲಿ ಕಳಶ ಇಟ್ಟು, ಕಳಶಕ್ಕೆ ಮಾವಿನ ಎಲೆ ಅಥವಾ ವೀಳ್ಯದೆಲೆ ಇಡಿ.

ತಾಯಿಯ ಮುಂದೆ ಉಪವಾಸದ ನಿರ್ಣಯವನ್ನು ಮಾಡಿ ಮತ್ತು ಹಿಟ್ಟಿನಿಂದ ಮಾಡಿದ ದೀಪವನ್ನು ಬೆಳಗಿಸಿ.

ಇದರ ನಂತರ, ಧೂಪ, ನೈವೇದ್ಯ, ಹಣ್ಣುಗಳು ಮತ್ತು ಹೂವುಗಳು ಇತ್ಯಾದಿಗಳಿಂದ ಗೌರಿ ದೇವಿಯನ್ನು ಷೋಡಶೋಪಚಾರ ಪೂಜೆಯೊಂದಿಗೆ ಪೂಜಿಸಿ.

ಪೂಜೆ ಮುಗಿದ ನಂತರ ಗೌರಿಯ ಆರತಿಯನ್ನು ಮಾಡಿ ಮತ್ತು ಅವಳನ್ನು ಪ್ರಾರ್ಥಿಸಿ.

ಶಿವ ಮತ್ತು ಪಾರ್ವತಿಯ ಅಷ್ಠೋತ್ತರ ಹೇಳಿ.

ವ್ರತದ ದಿನ ಒಪ್ಪೊತ್ತಿನ ಅಥವಾ ಒಂದು ಹೊತ್ತು ಮಾತ್ರ ಆಹಾರ ಸೇವಿಸಿ, ಇಡೀ ದಿನ ಪಾರ್ವತಿ ದೇವಿಯನ್ನು ಪೂಜಿಸಬೇಕು.

ದೇವಿಗೆ ಮೊಸರನ್ನ ಶ್ರೇಷ್ಠ, ಅದನ್ನು ಅರ್ಪಿಸಿ.

ಮುತ್ತೈದೆಯರಿಗೆ ನವಧಾನ್ಯ, ಹಣ್ಣು, ಹೂವು, ತೆಂಗಿನಕಾಯಿ, ಅರಿಶಿನ ಕುಂಕುಮ ಸಹಿತ ಬಾಗಿನ ಮತ್ತು ತಂಬೂಲ ನೀಡಿ.

ಮಂಗಳ ಗೌರಿ ವ್ರತದ ಮಹತ್ವ

ಮಂಗಳ ಗೌರಿ ವ್ರತದ ಮಹತ್ವ

* ಮಂಗಳ ಗೌರಿ ವ್ರತದ ಸಮಯದಲ್ಲಿ ಗೌರಿಯನ್ನು ಪೂಜಿಸುವುದರಿಂದ ದೇವತೆಯ ಅಶೀರ್ವಾದಕ್ಕೆ ಪಾತ್ರರಾಗುತ್ತೇವೆ.

* ಅದೃಷ್ಟದ ಆಶೀರ್ವಾದ ಸಿಗುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಅಪಾರ ಪ್ರೀತಿ ಉಳಿಯುತ್ತದೆ.

* ಈ ದಿನ ಉಪವಾಸ ಮಾಡುವ ಮೂಲಕ ನಿಮ್ಮ ವೈವಾಹಿಕ ಜೀವನದಲ್ಲಿ ಹಾಗೂ ಇಡೀ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

* ಪತಿಯು ದೀರ್ಘಾಯುಷ್ಯದ ಆಶೀರ್ವಾದವನ್ನು ಪಡೆಯುತ್ತಾರೆ.

* ಮಕ್ಕಳನ್ನು ಬಯಸುವ ಮಹಿಳೆಯರಿಗೆ ಈ ಉಪವಾಸವು ತುಂಬಾ ಮಂಗಳಕರವಾಗಿದೆ.

* ಯಾರೊಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವರು ಮಂಗಳ ಗೌರಿಯನ್ನು ಉಪವಾಸ ಮಾಡಬೇಕು.

* ಈ ವ್ರತದಿಂದ ವೈಷಮ್ಯ ಮತ್ತು ವೈವಾಹಿಕ ಜೀವನದ ಎಲ್ಲಾ ಇತರ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ. ಈ ಉಪವಾಸವನ್ನು ಪೂರ್ಣ ಶ್ರದ್ಧಾ ಭಕ್ತಿಯಿಂದ ಮಾಡಬೇಕು.

ಬಾಗಿನದ ಮಹತ್ವ

ಬಾಗಿನದ ಮಹತ್ವ

ಮಂಗಳಗೌರಿ ಪೂಜೆಯಲ್ಲಿ ಬಾಗಿನ ಕೊಡುವುದು ಬಹಳ ಮಹತ್ವವನ್ನು ಸಾರುತ್ತದೆ. ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಬಾಗಿನ ಕೊಡಬೇಕು. ಗೌರಿಯ ಪ್ರತೀಕವಾಗಿರುವಂತಹ ಮುತೈದೆಯರಿಗೆ ಪೂಜೆಯನ್ನು ಸಲ್ಲಿಸಿ, ಅವರ ಪಾದ ತೊಳೆದು ತಲೆಗೆ ಹೂವು ಮುಡಿಸಿ, ಅರಿಶಿನ ಕುಂಕುಮ ನೀಡಿ, ಅವರ ಹುಡಿಯನ್ನು ತುಂಬಿಸಬೇಕು. ಗೌರಿಯ ಪೂರ್ಣವಾದ ಅನುಗ್ರಹ ಸಿಗಲಿ ಎಂದು ಅವರ ಕೈಯಿಂದ ಮಂತ್ರಾಕ್ಷತೆಯನ್ನು ಸೆರಗಿನ ಮೂಲಕ ಹಿಡಿದು ಭಗವಂತನನ್ನು ಪ್ರಾರ್ಥಿಸಿ ನಿಮ್ಮ ತಲೆಯ ಮೇಲೆ ಹಾಕಿಸಿಕೊಳ್ಳಬೇಕು.

ಮಂಗಳ ಗೌರಿ ವ್ರತದ ಕಥೆ

ಮಂಗಳ ಗೌರಿ ವ್ರತದ ಕಥೆ

ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ ಒಂದು ಊರಿನಲ್ಲಿ ಧರಂಪಾಲ್ ಎಂಬ ವ್ಯಾಪಾರಿ ವಾಸಿಸುತ್ತಿದ್ದ. ಅವನ ಹೆಂಡತಿ ತುಂಬಾ ಸುಂದರವಾಗಿದ್ದಳು ಮತ್ತು ಅವರಿಗೆ ಸಂಪತ್ತಿನ ಕೊರತೆಯಿರಲಿಲ್ಲ, ಆದರೆ ಮಕ್ಕಳಿಲ್ಲದ ಕಾರಣ ತುಂಬಾ ದುಃಖಿತರಾಗಿದ್ದರು. ಸ್ವಲ್ಪ ಸಮಯದ ನಂತರ, ದೇವರ ಅನುಗ್ರಹದಿಂದ ಅವನಿಗೆ ಮಗ ರತ್ನ ಸಿಕ್ಕಿತು, ಆದರೆ ಅವನು ಅಲ್ಪಕಾಲಿಕವಾಗಿದ್ದನು. ಆದ್ಧರಿಂದ ಧರಂಪಾಲ್‌ ತನ್ನ ಮಗನಿಗೆ 16ನೇ ವಯಸ್ಸಿಗೆ ಬರುವ ಮೊದಲೇ ವಿವಾಹ ಮಾಡಿದ್ದನು,ಸೊಸೆಯು ಮದುವೆಯ ನಂತರ ಮಂಗಳ ಗೌರಿವ್ರತ, ಉಪವಾಸ ಆಚರಿಸುತ್ತಿದ್ದರು. ಧರಂಪಾಲ್‌ ಮಗನಿಗೆ 16ನೇ ವಯಸ್ಸಿನಲ್ಲಿ ಹಾವಿನ ಕಡಿತದಿಂದ ಸಾಯುವಂಥ ಪರಿಸ್ಥಿತಿ ಎದುರಾಯಿತು.

ಗೌರಿಯ ಈ ಉಪವಾಸದ ಪರಿಣಾಮದಿಂದಾಗಿ ಅವಳು ಎಂದಿಗೂ ವಿಧವೆಯಾಗಲು ಸಾಧ್ಯವಿಲ್ಲ ಎಂದು ಆಶೀರ್ವದಿಸಲ್ಪಟ್ಟಳು.ಆಕೆ ಮಾಡಿದ ಮಂಗಳ ಗೌರಿ ವ್ರತ ಹಾಗೂ ವರದಿಂದಧರಂಪಾಲ್ ಮಗನಿಗೆ ಸೌಭಾಗ್ಯ ಸಿಕ್ಕಿತು ಮತ್ತು ಆತನ ಮಗ ಅಂದರೆ ಮಂಗಳಗೌರಿ ಪತಿಗೆ 100 ವರ್ಷಗಳ ದೀರ್ಘಾಯುಷ್ಯ ಸಿಕ್ಕಿತು ಎಂದು ಹೇಳಲಾಗಿದೆ. ಅಂದಿನಿಂದ ಎಲ್ಲರುಮಂಗಳ ಗೌರಿ ವ್ರತ ಮಾಡಲು ಆರಂಭಿಸಿದರು ಎನ್ನಲಾಗುತ್ತದೆ.

ಈ ಉಪವಾಸವನ್ನು ಆಚರಿಸುವ ಮೂಲಕ, ಮಹಿಳೆಯರು ಅದೃಷ್ಟವನ್ನು ಪಡೆಯುವುದು ಮಾತ್ರವಲ್ಲ, ಪ್ರೀತಿ ಯಾವಾಗಲೂ ವೈವಾಹಿಕ ಜೀವನದಲ್ಲಿ ಉಳಿಯುತ್ತದೆ ಎಂದು ನಂಬಲಾಗಿದೆ.

English summary

Mangala Gowri Vratha Puja Vidhi, Vrat Katha and Benefits in Kannada

Here we are discussing about Mangala Gauri Vrat 2021 Puja Vidhi, Vrat Katha and Benefits in Kannada. The Vrat of Mangala Gauri is kept on every Tuesday falling in Sawan. By observing the fast, the married couple gets the blessings of being an unbroken good fortune. Read more.
X
Desktop Bottom Promotion