For Quick Alerts
ALLOW NOTIFICATIONS  
For Daily Alerts

Mangala Gowri Vratha 2021 : ಮಂಗಳ ಗೌರಿ ವ್ರತ : ದಿನಾಂಕಗಳು ಹಾಗೂ ಪೂಜಾ ಸಮಯ, ವ್ರತದ ಮಹತ್ವ

|

ಶ್ರಾವಣ ಮಾಸವನ್ನು ಶಿವ ಹಾಗೂ ಪಾರ್ವತಿಗೆ ಅರ್ಪಿಸಲಾಗಿದೆ. ಶ್ರಾವಣ ಮಾಸದ ಸೋಮವಾರಗಳಲ್ಲಿ ಶ್ರಾವಣ ಸೋಮವಾರ ಆಚರಿಸಿ ಶಿವನ ಆರಾಧಿಸಿದರೆ ಶ್ರಾವಣ ತಿಂಗಳ ಮಂಗಳವಾರ ಮಂಗಳ ಗೌರಿ ವ್ರತ ಮಾಡಲಾಗುವುದು.

Mangala Gauri Vrat

ಪ್ರತೀ ಮಂಗಳವಾರ ವಿವಾಹಿತ ಹೆಣ್ಮಕ್ಕಳು ಈ ಮಂಗಳ ಗೌರಿ ವ್ರತ ಆಚರಿಸುತ್ತಾರೆ. ಮದುವೆಯಾದ ಬಳಿಕ ಮೊದಲ 5 ವರ್ಷ ಈ ಮಂಗಳ ಗೌರಿ ವ್ರತ ಮಾಡಲಾಗುವುದು. 5 ವರ್ಷಗಳ ಬಳಿಕ ಉದ್ಯಾಪನ ಮಾಡಲಾಗುವುದು.

ಮದುವೆಯಾದ ಹೆಣ್ಣು ಮಕ್ಕಳು ತಮ್ಮ ವೈವಾಹಿಕ ಜೀವನ ಸುಖಕರವಾಗಿರಲಿ, ಉತ್ತಮ ಸಂತಾನ ಭಾಗ್ಯ ಲಭಿಸಲಿ, ಗಂಡನ ಆರೋಗ್ಯ, ಸಂಪತ್ತು ವೃದ್ಧಿಸಲಿ ಎಂದು ಪ್ರಾರ್ಥಿಸಿ ಈ ವ್ರತ ಮಾಡುತ್ತಾರೆ.

ಈ ವರ್ಷ ಮಂಗಳಗೌರಿ ವ್ರತವನ್ನು ಯಾವ ದಿನಾಂಕಗಳಲ್ಲಿ ಆಚರಿಸಲಾಗುವುದು, ಪೂಜಾ ಸಮಯ ಹಾಗೂ ಮಹತ್ವದ ಬಗ್ಗೆ ತಿಳಿಯೋಣ:

 ಮಂಗಳ ಗೌರಿ ವ್ರತದ ದಿನಾಂಕಗಳು

ಮಂಗಳ ಗೌರಿ ವ್ರತದ ದಿನಾಂಕಗಳು

ಆಗಸ್ಟ್ 10, 2021 ಮಂಗಳವಾರ

ಆಗಸ್ಟ್ 17, 2021 ಮಂಗಳವಾರ

ಆಗಸ್ಟ್‌ 24, 2021 ಮಂಗಳವಾರ

ಆಗಸ್ಟ್ 31, 2021 ಮಂಗಳವಾರ

ಸೆಪ್ಟೆಂಬರ್ 7, 2021 ಮಂಗಳವಾರ

ಪೂಜಾ ಸಮಯ

ಪೂಜಾ ಸಮಯ

ಆಗಸ್ಟ್ 10 ಪೂಜಾ ಸಮಯ

ರಾಹುಕಾಲ:ಮಧ್ಯಾಹ್ನ 03:34ರಿಂದ 05:08ರವರೆಗೆ

ಅಮೃತ ಕಾಲ : ಬೆಳಗ್ಗೆ 07:29ರಿಂದ 09:54ರವರೆಗೆ

ಅಭಿಜಿತ್‌ ಮುಹೂರ್ತ: ಮಧ್ಯಾಹ್ನ 12ರಿಂದ 12:50ರವರೆಗೆ

ಆಗಸ್ಟ್‌ 17 ಪೂಜಾ ಸಮಯ

ರಾಹುಕಾಲ: ಮಧ್ಯಾಹ್ನ 03:32ರಿಂದ 05:06

ಅಮೃತ ಕಾಲ: ಸಂಜೆ 05:19ರಿಂದ 06:50

ಅಭಿಜಿತ್‌ ಮುಹೂರ್ತ: ಮಧ್ಯಾಹ್ನ 11:59ರಿಂದ 12:49ರವರೆಗೆ

ಆಗಸ್ಟ್‌ 24 ಪೂಜಾ ಸಮಯ

ರಾಹುಕಾಲ: ಮಧ್ಯಾಹ್ನ 03:29ರಿಂದ 05:02ರವರೆಗೆ

ಅಮೃತ ಕಾಲ: ಬೆಳಗ್ಗೆ 11:40ರಿಂದ ಮಧ್ಯಾಹ್ನ 01:18ರವರೆಗೆ

ಅಭಿಜಿತ್‌ ಮುಹೂರ್ತ: ಮಧ್ಯಾಹ್ನ 11:57ರಿಂದ 12:47ರವರೆಗೆ

ಆಗಸ್ಟ್‌ 31 ಪೂಜಾ ಸಮಯ

ರಾಹುಕಾಲ: ಮಧ್ಯಾಹ್ನ 03:25ರಿಂದ ಸಮಜೆ 04:58ರವರೆಗೆ

ಅಮೃತ ಕಾಲ: ಮಧ್ಯಾಹ್ನ 02:44ರಿಂದ ಸೆಪ್ಟೆಂಬರ್ 1 ಮುಂಜಾನೆ 04:32ರವರೆಗೆ

ಅಭಿಜಿತ್‌ ಮುಹೂರ್ತ: ಬೆಳಗ್ಗೆ 11:55ರಿಂದ ಮಧ್ಯಾಹ್ನ 12:45ರವರೆಗೆ

ಸೆಪ್ಟೆಂಬರ್ 7 ಪೂಜಾ ಸಮಯ

ರಾಹುಕಾಲ: ಮಧ್ಯಾಹ್ನ 03:22ರಿಂದ 04:54ರವರೆಗೆ

ಅಮೃತ ಕಾಲ:10:54ರಿಂದ ಮಧ್ಯಾಹ್ನ 12:27ರವರೆಗೆ

ಅಭಿಜಿತ್‌ ಮುಹೂರ್ತ : ಬೆಳಗ್ಗೆ 11:53ರಿಂದ ಮಧ್ಯಾಹ್ನ 12:42ರವರೆಗೆ

ನೀವು ಪೂಜೆಯನ್ನು ರಾಹುಕಾಲದಲ್ಲಿ ಮಾಡಬಾರದು. ಪೂಜೆಗೆ ತುಂಬಾ ಶುಭ ಮುಹೂರ್ತ ಅಂದ್ರೆ ಅಭಿಜಿತ್‌ ಮುಹೂರ್ತ ಸಮಯ, ಅಮೃತ ಕಾಲ ಅಥವಾ ಗೋಧೂಳಿ ಸಮಯದಲ್ಲೂ ಪೂಜೆ ಮಾಡಬಹುದಾಗಿದೆ.

ಮಂಗಳ ಗೌರಿ ವ್ರತ ಕತೆ

ಮಂಗಳ ಗೌರಿ ವ್ರತ ಕತೆ

ಒಂದು ಕಾಲದಲ್ಲಿ ಧರ್ಮಪಾಲ ಎಂಬ ಶ್ರೀಮಂತ ವ್ಯಾಪಾರಿಯಿದ್ದ. ಅವನಿಗೆ ಸುಂದರವಾದ ಹೆಂಡತಿ. ಆದರೆ ಅವರಿಗೆ ತುಂಬಾ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಅವರು ದೇವರನ್ನು ಪ್ರಾರ್ಥಿಸಿ, ವ್ರತವನ್ನು ಮಾಡಿ ಮಗನನ್ನು ಪಡೆಯುತ್ತಾರೆ. ಆದರೆ ಆ ಮಗನಿಗೆ 16 ವರ್ಷವಾಗುವಾಗ ಹಾವು ಕಚ್ಚಿ ಅವನು ಸಾಯುತ್ತಾನೆ ಎಂಬ ಶಾಪ ಇರುತ್ತದೆ. ಅವನಿಗೆ 16 ವರ್ಷ ತುಂಬುವ ಮುನ್ನವೇ ಮದುವೆಯಾಗುವುದು. ಅವನ ಹೆಂಡತಿ ತನ್ನ ತಾಯಿ ಮಂಗಳ ಗೌರಿ ವ್ರತ ಮಾಡುವುದನ್ನು ನೋಡಿರುತ್ತಾಳೆ, ಅದರಂತೆ ತಾನೂ ಕೂಡ ಶ್ರದ್ಧೆ ಹಾಗೂ ಭಕ್ತಿಯಿಂದ ಮಂಗಳಗೌರಿ ವ್ರತ ಮಾಡುತ್ತಾಳೆ. ಇದರಿಂದಾಗಿ ಗಂಡನ ಶಾಪ ದೂರವಾಗುವುದು. ಪಾರ್ವತಿ ಅವರಿಬ್ಬರು ಸುಖವಾಗಿ ಬಾಳುವಂತೆ ಅನುಗ್ರಹಿಸುತ್ತಾಳೆ.

 ಮಂಗಳ ಗೌರಿ ವ್ರತ ನಿಯಮಗಳು

ಮಂಗಳ ಗೌರಿ ವ್ರತ ನಿಯಮಗಳು

* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಬೇಕು.

* ಮಣೆ ಮೇಲೆ ಕೆಂಪು ಬಟ್ಟೆ ಹಾಸಿ ಅದರ ಮೇಲೆ ದೇವಿ ಹಾಗೂ ಗಣೇಶನ ವಿಗ್ರಹ ಇಡಬೇಕು.

* ಗೋಧಿ ಹಿಟ್ಟಿನ ಹಣತೆ ತಯಾರಿಸಿ ದೀಪ ಹಚ್ಚಬೇಕು.

* ಅರಿಶಿಣ-ಕುಂಕುಮ, ವೀಳ್ಯೆದೆಲೆ, ಅಕ್ಷತೆ, ಹೂ ಇವುಗಳನ್ನು ಅರ್ಪಿಸಬೇಕು.

* ಮಂಗಳಗೌರಿ ಸ್ತೋತ್ರ ಹೇಳಬೇಕು.

* ನೈವೇದ್ಯ ಅರ್ಪಿಸಬೇಕು.

* ನಂತರ ಮಂಗಳ ಗೌರಿಗೆ ಆರತಿ ಬೆಳಗಬೇಕು.

* ದೇವಿಗೆ ಭಕ್ತಿಯಿಂದ ಕೈ ಮುಗಿದು ಏನೇ ತಪ್ಪುಗಳಾಗಿದ್ದರೂ ಕ್ಷಮಿಸಿ ಆಶೀರ್ವದಿಸಿ ಎಂದು ಬೇಡಿಕೊಳ್ಳಬೇಕು.

* ಮಾರನೇಯ ದಿನ ಮಂಗಳ ಗೌರಿ ಮೂರ್ತಿಯನ್ನು ಕೊಳ ಅಥವಾ ನದಿಯಲ್ಲಿ ಮುಳುಗಿಸಬೇಕು.

ದೇವಿ ಮಂತ್ರ

ದೇವಿ ಮಂತ್ರ

|| ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ, ಶರಣ್ಯೇ ತ್ರಯಂಭಿಕೆ ದೇವಿ ನಾರಾಯಣಿ ನಮೋಸ್ತುತೆ ||

English summary

Mangala Gowri Vratha 2021: Dates, Puja Timings & Significance in Kannada

Mangala Gauri Vrat 2021: Dates, Puja Timings & Significance in Kannada, read on.....
X
Desktop Bottom Promotion