For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿಗೆ 8 ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ

|

ರೈತರ ಮನೆಮನೆಯಲ್ಲೂ ಉತ್ಸಾಹ, ಸಂಭ್ರಮ ಮನೆ ಮಾಡುವ ಹಬ್ಬ ಸಂಕ್ರಾಂತಿ. ಹೊಸ ವರ್ಷದ ಮೊದಲ ಹಬ್ಬ, ಸುಗ್ಗಿಯ ಸಂಭ್ರಮ, ಹಸುಗಳ ಕಿಚ್ಚು ಹಾಯಿಸುವ ಕಾತುರ, ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಖುಷಿಯೇ ಭಿನ್ನ. ರೈತರು ಬೆಳೆಯ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಮಾಗಿಯ ಚಳಿ ಮಾಯವಾಗಿ ಸೂರ್ಯನ ರಶ್ಮಿ ಭೂಮಿಗೆ ಚುಂಬಿಸುವ ವೇಳೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಕುಟುಂಬ ಸದಸ್ಯರೆಲ್ಲಾ ಒಂದಾಗಿ ಆಚರಿಸುವುದು ವಾಡಿಕೆ. ಈ ಹಬ್ಬದಂದು ಬಂಧು-ಬಾಂಧವರಿಗೆ, ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿದೆ ಕೆಲವು ಸಂದೇಶಗಳು.

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ಹೊಸ ಚೈತನ್ಯ ಮೂಡಲಿ, ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ.

ಮಕರ ಸಂಕ್ರಾಂತಿಯ ಶುಭಾಶಯಗಳು

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.

ಸುಗ್ಗಿ ಹಬ್ಬದ ಶುಭಾಶಯಗಳು

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ.

ಮಕರ ಸಂಕ್ರಮಣದ ಶುಭಾಶಯಗಳು

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.

ಮಕರ ಸಂಕ್ರಾಂತಿಯ ಶುಭಾಶಯಗಳು

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ.

ಸುಗ್ಗಿ ಮಕರ ಸಂಕ್ರಾಂತಿಯ ಶುಭಾಶಯಗಳು

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ

ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ.

ಮಕರ ಸಂಕ್ರಾಂತಿಯ ಶುಭಾಶಯಗಳು

ಸಂಕ್ರಾಂತಿ ಸುಗ್ಗಿಯ ಹರುಷ

ಸಂಕ್ರಾಂತಿ ಸುಗ್ಗಿಯ ಹರುಷ

ಈ ಮಕರ ಸಂಕ್ರಾಂತಿ ನಿಮ್ಮ ಬಾಳಲ್ಲಿ ಸುಂದರವಾದ ಕ್ಷಣಗಳನ್ನು ನೀಡಲಿ. ಈ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು ಎತ್ತರೆತ್ತರಕ್ಕೆ ಹಾರಿಸುವಂತೆ ನಿಮ್ಮ ಆಸೆ, ಕನಸುಗಳು ಹೊಸ ಎತ್ತರವನ್ನು ತಲುಪಲಿ ಎಂದು ಹಾರೈಸುತ್ತೇವೆ.

ಮಕರ ಸಂಕ್ರಾಂತಿಯ ಶುಭಾಶಯಗಳು

ಸಂಕ್ರಾಂತಿ ಸುಗ್ಗಿಯ ಹರುಷ

ಸಂಕ್ರಾಂತಿ ಸುಗ್ಗಿಯ ಹರುಷ

ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ.

ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು

English summary

Makara Sankranthi 2020: Wishes And Quotes In Kannada

Here are some wishes and quotes ideas for makara sankranthi. Makar Sankranti is one of the most auspicious occasions for the Hindus and is celebrated in almost all parts of the country in myriad cultural forms with great devotion, fervour & gaiety. It is a harvest festival. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X