For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿಯಂದು ನಿಮ್ಮ ರಾಶಿಗನುಸಾರ ಈ ದಾನ ಮಾಡಿ

|

ಜನವರಿ 15ರಂದು ಹಿಂದೂಗಳ ಪವಿತ್ರ ಹಬ್ಬ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಸಾಕಷ್ಟು ಮಹತ್ವ ಪಡೆದಿರುವ ಈ ದಿನದಂದು ದಾನಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ.

ತಮ್ಮ ಕೈಲಾದಷ್ಟು ಅಕ್ಕಿ, ಆಹಾರ ಬಟ್ಟೆಯನ್ನು ಅಸಹಾಯಕರು, ಬಡವರಿಗೆ ದಾನ ಮಾಡಿದರೆ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅದರಲ್ಲೂ ಮಕರ ಸಂಕ್ರಾಂತಿಯ ದಿನ ಮಾಡಿದ ದಾನಕ್ಕೆ ಅಗ್ರಸ್ಥಾನವಿದೆ. ಮಕರ ಸಂಕ್ರಾಂತಿಯ ದಿನ ರಾಶಿಗನುಸಾರ ದಾನ ಮಾಡಿದ್ರೆ ಮತ್ತಷ್ಟು ಶುಭಕರ.

ಹಾಗಾದ್ರೆ ಬನ್ನಿ ಮಕರ ಸಂಕ್ರಾಂತಿಯಂದು ಯಾವ ರಾಶಿಯವರು ಏನು ದಾನ ಮಾಡಿದರೆ ಒಳಿತು ಎಂಬುದನ್ನು ನೋಡೋಣ.

ಮೇಷ:

ಮೇಷ:

ಈ ರಾಶಿಯವರು ಸಂಕ್ರಾಂತಿಯ ದಿನ ಎಳ್ಳು, ಬೆಲ್ಲ ಮತ್ತು ಕಡಲೆಕಾಯಿಯನ್ನು ದಾನ ಮಾಡಿ.

ವೃಷಭ:

ವೃಷಭ:

ರಾಶಿಯವರು ಬಿಳಿ ಬೆಚ್ಚಗಿನ ಬಟ್ಟೆ, ಖಿಚಡಿ ಮತ್ತು ಎಣ್ಣೆಯನ್ನು ದಾನ ಮಾಡಬೇಕು.

ಮಿಥುನ:

ಮಿಥುನ:

ಮಿಥುನ ರಾಶಿಯವರು ಅಕ್ಕಿ, ಖಿಚಡಿ, ಕಂಬಳಿ, ಬೆಲ್ಲ, ಅಥವಾ ಕಡಲೆಕಾಯಿ ಮತ್ತು ಹಸಿರು ಬಟ್ಟೆಗಳನ್ನು ದಾನ ಮಾಡಬೇಕು.

ಕರ್ಕ:

ಕರ್ಕ:

ಕರ್ಕಾಟಕ ರಾಶಿಯವರು ಬಿಳಿ ಬಟ್ಟೆ, ಸಂಪೂರ್ಣ ಅಕ್ಕಿ, ಬೆಳ್ಳಿ ವಸ್ತುಗಳು, ಹಣ್ಣುಗಳು, ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಬೇಕು.

ಸಿಂಹ:

ಸಿಂಹ:

ರಾಶಿಯವರು ಕಡಲೆಕಾಯಿ, ತಾಮ್ರದ ಪಾತ್ರೆಗಳು, ಕೆಂಪು ಬಟ್ಟೆ, ಕೆಂಪು ಶ್ರೀಗಂಧ ಮತ್ತು ಬೆಲ್ಲವನ್ನು ಅಗತ್ಯವಿರುವ ಜನರಿಗೆ ದಾನ ಮಾಡಬೇಕು.

ಕನ್ಯಾ :

ಕನ್ಯಾ :

ರಾಶಿಯವರು ಹಸಿರು ಬಟ್ಟೆ, ಸಂಪೂರ್ಣ ಉದ್ದಿನ ಬೇಳೆ, ಹಸಿರು ತರಕಾರಿಗಳು, ಕಡಲೆಯನ್ನು ಮತ್ತು ಖಿಚಡಿಯನ್ನು ದಾನ ಮಾಡಿ.

ತುಲಾ:

ತುಲಾ:

ತುಲಾ ರಾಶಿಯವರು ಬಿಳಿ ಸಿಹಿತಿಂಡಿ, ಗುಲಾಬಿ ಬಟ್ಟೆ, ಸಕ್ಕರೆ ಕ್ಯಾಂಡಿ, ಖಿಚಡಿ, ಹಣ್ಣು ಮತ್ತು ಗುಲಾಬಿ ಸುಗಂಧ ದ್ರವ್ಯವನ್ನು ದಾನ ಮಾಡಿ.

ವೃಶ್ಚಿಕ :

ವೃಶ್ಚಿಕ :

ವೃಶ್ಚಿಕ ರಾಶಿಯವರು ಕೆಂಪು ಬಟ್ಟೆ ಖಿಚಡಿ, ಬೆಲ್ಲ, ಎಣ್ಣೆಯನ್ನು ದಾನ ಮಾಡಬೇಕು.

ಧನು :

ಧನು :

ಈ ರಾಶಿಯವರು ಅರಿಶಿನ, ಹಳದಿ ಬಟ್ಟೆ, ಕೇಸರಿ, ಹಿತ್ತಾಳೆ ಪಾತ್ರೆಗಳು, ಹಳದಿ ಹಣ್ಣುಗಳು, ಮತ್ತು ಖಿಚಡಿಗಳನ್ನು ದಾನ ಮಾಡಬೇಕು.

ಮಕರ:

ಮಕರ:

ರಾಶಿಯವರು ಅಕ್ಕಿಖಿಚಡಿ, ಲಾಡು, ಸಾಸಿವೆ ಎಣ್ಣೆ, ಕಪ್ಪು ಎಳ್ಳನ್ನು ದಾನ ಮಾಡಬೇಕು.

ಕುಂಭ:

ಕುಂಭ:

ಈ ರಾಶಿಯವರು ಖಿಚಡಿ, ಕಪ್ಪು ಬಟ್ಟೆ, ಎಳ್ಳು, ಕಪ್ಪು ಉದ್ದು, ಸಾಸಿವೆ ಎಣ್ನೆ ಮತ್ತು ಪಚ್ಚೆಯನ್ನು ದಾನ ಮಾಡಬೇಕು.

ಮೀನರಾಶಿ:

ಮೀನರಾಶಿ:

ಈ ರಾಶಿಯವರು ಹಳದಿ ರೇಷ್ಮೆ ಬಟ್ಟೆ, ಅಕ್ಕಿ, ಎಳ್ಳು, ಹಳದಿ ಸಿಹಿತಿಂಡಿ, ಖಿಚಡಿಯನ್ನು ದಾನ ಮಾಡಬೇಕು.

English summary

Makar Sankranti: Things To Donate Based On Zodiac Signs

Here we told about Things to donate Makar Sankranti based on Zodiac Signs, have a look.
X
Desktop Bottom Promotion