For Quick Alerts
ALLOW NOTIFICATIONS  
For Daily Alerts

ಮಹಾಲಯ ಅಮವಾಸ್ಯೆ 2021: ಪೂಜಾವಿಧಿ ಹಾಗೂ ಈ ದಿನ ಏನು ಮಾಡಬಾರದು?

|

ಪಿತೃಪಕ್ಷದ ಕೊನೆಯ ದಿನವೇ ಮಹಾಲಯ ಅಮವಾಸ್ಯೆ. 2021ರಲ್ಲಿ ಮಹಾಲಯ ಅಮವಾಸ್ಯೆ ಸೆಪ್ಟೆಂಬರ್‌ 6ರಂದು ಆಚರಿಸಲಾಗುವುದು. ಈ ದಿನ ಪಿತೃಗಳಿಗೆ ತರ್ಪಣ ನೀಡಲಾಗುವುದು. ಅಲ್ಲದೆ ಕಾಗೆಗೆ ಆಹಾರವನ್ನು ನೀಡಲಾಗುವುದು.

ಗತಿಸಿದ ಪಿತೃಗಳ ಹೆಸರಿನಲ್ಲಿ ದಾನ ಮಾಡುವುದರಿಂದ ಕೂಡ ಪುಣ್ಯ ದೊರೆಯುತ್ತದೆ. ಪಿತೃದೋಷವಿದ್ದರೆ ಮನುಷ್ಯ ಬದುಕಿನಲ್ಲಿ ತುಂಬಾ ಕಷ್ಟಗಳನ್ನು ಎದುರಿಸಬೇಕಾಗುವುದು, ಅವುಗಳ ನಿವಾರಣೆಗೆ ಮಹಾಲಯ ಅಮವಾಸ್ಯೆಯಮದು ಪಿತೃಗಳಿಗೆ ತರ್ಪಣ ನೀಡಬೇಕು. ಪಿತೃಗಳಿಗೆ ತರ್ಪಣ ನೀಡುವಾಗ ಕೆಲವೊಂದು ನಿಯಮಗಳಿವೆ. ಅವುಗಳನ್ನು ಪಾಲಿಸಬೇಕು. ಆಗ ಹಿರಿಯರ ಆಶೀರ್ವಾದದಿಂದ ಒಳ್ಳೆಯದಾಗುವುದು.

ಮಹಾಲಯ ಅಮವಾಸ್ಯೆಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಪಿತೃ ದೋಷದ ಲಕ್ಷಣಗಳು

ಪಿತೃ ದೋಷದ ಲಕ್ಷಣಗಳು

* ಮನೆಯಲ್ಲಿ ಹಿರಿಯ ವ್ಯಕ್ತಿಯ ಕೂದಲು ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಕೆಮ್ಮಿನ ಸಮಸ್ಯೆ ಹಾಗೂ ಕಫ ಕಪ್ಪು ಬಣ್ಣದಲ್ಲಿರುವುದು

* ಸಮಾಜದಲ್ಲಿ ಗೌರವ ಹಾಳಾದರೆ

* ಕುಟುಂಬದಲ್ಲಿ ಆಗಾಗ ಜಗಳವಾಗುತ್ತಿದ್ದರೆ

* ಯಾವುದೇ ಕೆಲಸ ಮಾಡಿದರೂ ಸಫಲವಾಗದಿರುವುದು, ಆರ್ಥಿಕ ತೊಂದರೆ

* ಮಕ್ಕಳಾಗದಿರುವುದು ಅಥವಾ ಹುಟ್ಟಿರುವ ಮಕ್ಕಳಲ್ಲಿ ನ್ಯೂನ್ಯತೆ

* ಮದುವೆ ವಿಳಂಬವಾಗುವುದು

ಪಿತೃ ದೋಷ ನಿವಾರಣೆಗೆ ಮಹಾಲಯ ಅಮವಾಸ್ಯೆಯಂದು ಏನು ಮಾಡಬಾರದು?

ಪಿತೃ ದೋಷ ನಿವಾರಣೆಗೆ ಮಹಾಲಯ ಅಮವಾಸ್ಯೆಯಂದು ಏನು ಮಾಡಬಾರದು?

* ಪಿತೃಗಳಿಗೆ ಮಾಂಸಾಹಾರ ನೀಡಬಾರದು

* ಈ ದಿನ ಮಾಂಸಾಹಾರ ತಯಾರಿಸುವುದು, ತಿನ್ನುವುದು ಮಾಡಬಾರದು

* ಪೂಜೆಗೆ ಸ್ಟೀಲ್, ಪ್ಲಾಸ್ಟಿಕ್ ಅಥವಾ ಗ್ಲಾಸ್‌ನ ವಸ್ತುಗಳನ್ನು ಬಳಸಬಾರದು. ಬದಲಿಗೆ ಮಣ್ಣಿನ ಪಾತ್ರೆಗಳನ್ನು ಬಳಸಬೇಕು.

* ಪಿತೃಗಳಿಗೆ ಪೂಜೆ ಮಾಡುವಾಗ ಘಂಟೆ ಬಾರಿಸಬಾರದು.

* ತರ್ಪಣ ಕಾರ್ಯ ಮಾಡುವಾಗ ಆ ವ್ಯಕ್ತಿಗೆ ಯಾವುದೇ ಅಡೆತಡೆ ಮಾಡಬಾರದು.

* ಹಿರಿಯರನ್ನು ಅವಗಣಿಸಬಾರದು.

ಮಹಾಲಯ ಅಮವಾಸ್ಯೆ ದಿನ ಏನು ಮಾಡಬೇಕು?

ಮಹಾಲಯ ಅಮವಾಸ್ಯೆ ದಿನ ಏನು ಮಾಡಬೇಕು?

* ಪಿತೃ ಪಕ್ಷದ ಕೊನೆಯ ಶ್ರಾದ್ಧ ದಿನವೇ ಮಹಾಲಯ ಅಮವಾಸ್ಯೆ. ಸಾಮಾನ್ಯವಾಗಿ ವ್ಯಕ್ತಿ ಸತ್ತ ತಿಥಿಯ ದಿನಾಂಕದಂದು ಶ್ರಾದ್ಧ ಮಾಡಲಾಗುವುದು. ಅದು ನೆನಪಿಲ್ಲದಿದ್ದರೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮವಾಸ್ಯೆಯಂದು ಪಿತೃಗಳಿಗೆ ತರ್ಪಣ ನೀಡಬೇಕು.

* ಮಹಾಲಯ ಅಮವಾಸ್ಯೆಯ ದಿನದಂದು ಮುಂಜಾನೆ ಎದ್ದು ನದಿಯಲ್ಲಿ ಅಥವಾ ಗಂಗಾಜಲ ಹಾಕಿದ ನೀರಿನಲ್ಲಿ ಸ್ನಾನ ಮಾಡಬೇಕು.

* ನಂತರ ಮಡಿ ಬಟ್ಟೆ ಧರಿಸಬೇಕು. ಈ ದಿನ ಮನೆಯಲ್ಲಿ ಸಾತ್ವಿಕವಾದ ಆಹಾರವನ್ನಷ್ಟೇ ಸೇವಿಸಬೇಕು.

* ತರ್ಪಣ ಕಾರ್ಯ ಇರುವವರು ಉಪವಾಸವಿದ್ದು ಕಾರ್ಯವನ್ನು ಮಾಡಬೇಕು. ಕೆಲವರಿಗೆ ಮನೆಗೆ ಬ್ರಾಹ್ಮಣರನ್ನು ಕರೆಸಿ ಪೂಜೆ ಮಾಡಿದರೆ, ಹೆಚ್ಚಾಗಿ ನದಿ ತಟದಲ್ಲಿ ತರ್ಪಣ ಕಾರ್ಯ ಮಾಡಲಾಗುವುದು.

ಸಂಜೆ ಹೊತ್ತಿಗೆ ನಾಲ್ಕು ಮಣ್ಣಿನ ದೀಪದಲ್ಲಿ ಸಾಸಿವೆಯೆಣ್ಣೆ, ಬತ್ತಿ ಹಾಕಿ ಹಚ್ಚಿಟ್ಟು ಮನೆಯೊಳಗಡೆ ಬಂದು ಪಿತೃಪಕ್ಷ ಮುಗಿದಿದೆ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ, ನಮ್ಮನ್ನು ಆಶೀರ್ವದಿಸಿ ಎಂದು ಪ್ರಾರ್ಥಿಸಬೇಕು.

 ಪಿತೃ ತರ್ಪಣ ಮಾಡುವಾಗ ಈ ಮಂತ್ರ ಪಠಿಸಿ

ಪಿತೃ ತರ್ಪಣ ಮಾಡುವಾಗ ಈ ಮಂತ್ರ ಪಠಿಸಿ

ತೀರಿ ಹೋದ ತಂದೆಗೆ ತರ್ಪಣ ಬಿಡುವಾಗ ಹೇಳಬೇಕಾದ ಮಂತ್ರ

ತರ್ಪಣ ನೀಡುವ ಮುನ್ನ ಪಾತ್ರೆಯಲ್ಲಿ ಗಂಗಾಜಲ ಅಥವಾ ಇತರೆ ಶುದ್ಧ ಜಲ ತೆಗೆದುಕೊಂಡು ಅದರಲ್ಲಿ ಹಾಲು, ಎಳ್ಳು ಹಾಗೂ ಬಾರ್ಲಿಯನ್ನು ಬೆರೆಸಬೇಕು. ಇದಾದ ಬಳಿಕ ಸವಟಿನಲ್ಲಿ ಆ ನೀರನ್ನು ತೆಗೆದುಕೊಂಡು ಮೂರು ಬಾರಿ ಜಲಾಂಜಲಿ ನೀಡಬೇಕು. ಹೀಗೆ ಮಾಡುವಾಗ ನಿಮ್ಮ ಗೋತ್ರವನ್ನು ಉಚ್ಚರಿಸಿ' ಗೋತ್ರ ಅಸ್ಮತಪಿತ ಶರ್ಮಾ ವಸುರೂಪತ್ ತ್ರುಪ್ಯತ ಮಿಂದ ತಿಲೋದಕಂ ಗಂಗಾ ಜಲಂ ವಾ ತಸ್ಮೈ ಸ್ವದಾನಮಃ, ತಸ್ಮೈಸ್ವಧಾ ನಮಃ, ತಸ್ಮೈ ಸ್ವಧಾನಮಃ ' ಎಂಬ ಮಂತ್ರ ಪಠಿಸಿ.

ತಾಯಿಯ ತರ್ಪಣೆಗಾಗಿ ಮಂತ್ರ

ತಾಯಿಗೆ ತಿಲಾಂಜಲಿ ಅರ್ಪಿಸುವಾಗ, ನಿಮ್ಮ ಗೋತ್ರದ (ಗೋತ್ರದ ಹೆಸರು) ಹೆಸರನ್ನು ಹೇಳಿ ' ಗೋತ್ರ ಅಸ್ಮಾನ್ಮಾತ (ತಾಯಿಯ ಹೆಸರು) ದೇವಿ ವಸುರೂಪಸ್ತಂ ತೃಪ್ತಮಿದಂ ತಿಲೋದಕಂ ಗಂಗಾ ಜಲ್ ವಾ ತಸ್ಮೈ ಸ್ವಧ ನಮಃ, ತಸ್ಮೈ ಸ್ವಧ ನಮಃ, ತಸ್ಮೈ ಸ್ವಧ ನಮಃ' ಎಂಬ ಮಂತ್ರ ಪಠಿಸಿ.

English summary

Mahalaya Amavasya Puja Vidhi, Mahay Amavasya Puja Vidhi Rituals, Do's and Don'ts In

Mahalaya Amavasya Puja Vidhi, Rituals, Do's and Don'ts, Read on...
X
Desktop Bottom Promotion