For Quick Alerts
ALLOW NOTIFICATIONS  
For Daily Alerts

Mahalaya Amavasya 2022: ಮಹಾಲಯ ಅಮವಾಸ್ಯೆ ದಿನ, ಮುಹೂರ್ತ, ಆಚರಣೆಗಳು ಮತ್ತು ಮಹತ್ವ

|

ಹಿಂದೂ ಸಂಪ್ರದಾಯದಲ್ಲಿ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ಪಿತ್ರ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಈ ವಿಶೇಷ ದಿನವನ್ನು 'ಪಿತೃಗಳು' ಅಥವಾ ಪೂರ್ವಜರಿಗೆ ಸಮರ್ಪಿತವಾದ ದಿನವಾಗಿದೆ. ದಕ್ಷಿಣ ಭಾರತದಲ್ಲಿ ಈ ದಿನವನ್ನು 'ಭಾದ್ರಪದ' ಮಾಸದ ಅಮವಾಸ್ಯೆಯಂದು (ಅಮಾವಾಸ್ಯೆಯ ದಿನ) ಆಚರಿಸಲಾಗುತ್ತದೆ. ಈ ದಿನ ಪೂರ್ವಜರಿಗೆ ಪೂಜೆ ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ ಹಾಗೂ ನಮಗೆ ಅವರ ಆಶೀರ್ವಾದ ಇರುತ್ತದೆ ಎಂಬ ನಂಬಿಕೆ ಇದೆ.

Mahalaya Amavasya 2022 date, time, shubh muhurat, rituals, puja vidhi and significance in kannada

ಭಾದ್ರಪದ ಪೂರ್ಣಿಮೆಯಿಂದ ಅಶ್ವಿನಿ ಮಾಸದ ಕೃಷ್ಣ ಪಕ್ಷ ಅವಾಮಾಸ್ಯೆವರೆಗಿನ ಹದಿನಾರು ದಿನಗಳನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಅಂದರೆ 10 ಸೆಪ್ಟೆಂಬರ್ 2022ರಿಂದ ಸೆಪ್ಟೆಂಬರ್‌ 25ರವರೆಗೆ ಪಿತೃಪಕ್ಷ ಇರುತ್ತದೆ. 25ರಂದು ಕೊನೆಯ ದಿನ ಮಹಾಲಯ ಅಮಾವಾಸ್ಯೆ ಇದ್ದು 15 ದಿನಗಳ ಸುದೀರ್ಘ ಶ್ರಾದ್ಧ ಆಚರಣೆಗಳ ಕೊನೆಯ ದಿನವಾಗಿದೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಯಾವುದೇ ಮರಣ ಹೊಂದಿದ ವ್ಯಕ್ತಿಯ ಶ್ರದ್ಧಾ ಆಚರಣೆಯನ್ನು ಈ ದಿನದಂದು ಮಾಡಬಹುದು, ತಿಥಿಯನ್ನು ಲೆಕ್ಕಿಸದೆ.

2022ರಲ್ಲಿ ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 25, ಭಾನುವಾರ ಇರಲಿದ್ದು, ಶ್ರಾದ್ಧಾ ಪೂಜೆ ಯಾವ ಮುಹೂರ್ತದಲ್ಲಿ ಮಾಡಬೇಕು?, ಏನು ಈ ದಿನ ಮಹತ್ವ ಮುಂದೆ ತಿಳಿಯೋಣ:

ಮಹಾಲಯ ಅಮವಾಸ್ಯೆ ಪೂಜೆಗೆ ಮುಹೂರ್ತ

ಮಹಾಲಯ ಅಮವಾಸ್ಯೆ ಪೂಜೆಗೆ ಮುಹೂರ್ತ

ಸೂರ್ಯೋದಯ ಸೆಪ್ಟೆಂಬರ್ 25, 2022 ಬೆಳಗ್ಗೆ 6:20ಕ್ಕೆ

ಸೂರ್ಯಾಸ್ತ ಸೆಪ್ಟೆಂಬರ್ 25, 2022 ಸಂಜೆ 6:16ಕ್ಕೆ

ಅಮಾವಾಸ್ಯೆ ತಿಥಿ ಪ್ರಾರಂಭ: ಸೆಪ್ಟೆಂಬರ್ 25, 2022 ತಡರಾತ್ರಿ 3:12ರಿಂದ

ಅಮವಾಸ್ಯೆ ತಿಥಿ ಅಂತ್ಯ: ಸೆಪ್ಟೆಂಬರ್ 26, 2022 ಬೆಳಗ್ಗೆ 3:24 ರವರೆಗೆ

ಅಪರಾಹ್ನ ಕಾಲ ಸೆಪ್ಟೆಂಬರ್ 25, ಮಧ್ಯಾಹ್ನ 1:30 ರಿಂದ ಸೆಪ್ಟೆಂಬರ್ 25, ಮಧ್ಯಾಹ್ನ 3:53 ರವರೆಗೆ

ಕುಟುಪ್ ಮುಹೂರ್ತ ಸೆಪ್ಟೆಂಬರ್ 25, ಬೆಳಗ್ಗೆ 11:54 ರಿಂದ - ಸೆಪ್ಟೆಂಬರ್ 25, ಮಧ್ಯಾಹ್ನ 12:42 ರವರೆಗೆ

ರೋಹಿಣ ಮುಹೂರ್ತ ಸೆಪ್ಟೆಂಬರ್ 25, ಮಧ್ಯಾಹ್ನ 12:42 ರಿಂದ - ಸೆಪ್ಟೆಂಬರ್ 25, ಮಧ್ಯಾಹ್ನ 1:30 ರವರೆಗೆ

ಮಹಾಲಯ ಅಮವಾಸ್ಯೆ ಏಕೆ ಮಾಡಬೇಕು?

ಮಹಾಲಯ ಅಮವಾಸ್ಯೆ ತರ್ಪಣ ಮತ್ತು ಆಚರಣೆಗಳನ್ನು ಪೂರ್ವಜರ ಆಶೀರ್ವಾದವನ್ನು ಕೋರಲು ಮತ್ತು ಶಾಂತಿಯುತ ಮತ್ತು ಸಮೃದ್ಧ ಜೀವನಕ್ಕಾಗಿ ಅವರ ಆಶೀರ್ವಾದವನ್ನು ಪಡೆಯಲು ಮಾಡಲಾಗುತ್ತದೆ. ಮಹಾಲಯ ಅಮವಾಸ್ಯೆಯನ್ನು ಪಿತೃಪಕ್ಷದ ಕೊನೆಯ ದಿನ ಆಚರಿಸಲಾಗುತ್ತದೆ ಮತ್ತು ಈ ಅವಧಿಯ ಅತ್ಯಂತ ಮಹತ್ವದ ದಿನವೂ ಆಗಿದೆ.

ಮಹಾಲಯ ಅಮವಾಸ್ಯೆಯ ಆಚರಣೆಗಳು

ಮಹಾಲಯ ಅಮವಾಸ್ಯೆಯ ಆಚರಣೆಗಳು

* ಈ ದಿನ, ‘ಚತುರ್ದಶಿ', ‘ಅಮಾವಾಸ್ಯೆ' ಅಥವಾ ‘ಪೂರ್ಣಿಮಾ' ತಿಥಿಯಂದು ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ತರ್ಪಣ ಮತ್ತು ಶ್ರಾದ್ಧ ಆಚರಣೆಗಳನ್ನು ಆಚರಿಸಲಾಗುತ್ತದೆ.

* ಅಮಾವಾಸ್ಯೆಯ ದಿನ ಬೇಗನೆ ಎದ್ದು ಬೆಳಗಿನ ಆಚರಣೆಗಳನ್ನು ಮುಗಿಸುತ್ತಾರೆ. ಅವರು ಈ ದಿನ ಹಳದಿ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಬ್ರಾಹ್ಮಣನನ್ನು ತಮ್ಮ ಮನೆಗೆ ಆಹ್ವಾನಿಸುತ್ತಾರೆ. ಶ್ರಾದ್ಧ ಸಮಾರಂಭವನ್ನು ಕುಟುಂಬದ ಹಿರಿಯ ಪುರುಷ ಆಚರಿಸುತ್ತಾರೆ.

* ಬ್ರಾಹ್ಮಣರ ಪಾದಗಳನ್ನು ತೊಳೆದು ಅವರಿಗೆ ಕುಳಿತುಕೊಳ್ಳಲು ಸ್ವಚ್ಛವಾದ ಸ್ಥಳವನ್ನು ಒದಗಿಸಬೇಕು. ದೇವ ಪಕ್ಷ ಬ್ರಾಹ್ಮಣರು ಪೂರ್ವಾಭಿಮುಖವಾಗಿ ಕುಳಿತಿದ್ದರೆ, ಪಿತೃ ಪಕ್ಷ ಮತ್ತು ಮಾತೃಪಕ್ಷ ಬ್ರಾಹ್ಮಣರು ಉತ್ತರ ದಿಕ್ಕಿಗೆ ಮುಖಮಾಡಿ ಕುಳಿತಿದ್ದಾರೆ.

* ಮಹಾಲಯ ಅಮಾವಾಸ್ಯೆಯಂದು ಪೂರ್ವಜರು ಅಥವಾ 'ಪಿತೃಗಳನ್ನು' ಧೂಪ, ದೀಪ ಮತ್ತು ಹೂವುಗಳಿಂದ ಪೂಜಿಸಲಾಗುತ್ತದೆ. ಪೂರ್ವಜರನ್ನು ಮೆಚ್ಚಿಸಲು ನೀರು ಮತ್ತು ಬಾರ್ಲಿಯ ಮಿಶ್ರಣವನ್ನು ಸಹ ನೀಡಲಾಗುತ್ತದೆ.

* ಬಲ ಭುಜದ ಮೇಲೆ ಪವಿತ್ರ ದಾರವನ್ನು ಧರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕಾಗಿ ವಿಶೇಷವಾದ ಆಹಾರವನ್ನು ತಯಾರಿಸಲಾಗುತ್ತದೆ ಮತ್ತು ಪೂಜಾ ವಿಧಿಗಳನ್ನು ಮುಗಿಸಿದ ನಂತರ ಬ್ರಾಹ್ಮಣರಿಗೆ ನೈವೇದ್ಯ ಮಾಡಲಾಗುತ್ತದೆ. ಬ್ರಾಹ್ಮಣರು ಕುಳಿತುಕೊಳ್ಳುವ ನೆಲದ ಮೇಲೆ ಎಳ್ಳನ್ನು ಕೂಡ ಚಿಮುಕಿಸಲಾಗುತ್ತದೆ.

* ಈ ದಿನವನ್ನು ಪೂರ್ವಜರ ಗೌರವಾರ್ಥವಾಗಿ ಆಚರಿಸಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಅವರ ಸ್ಮರಣೆಯಲ್ಲಿ ದಿನವನ್ನು ಕಳೆಯುತ್ತಾರೆ. ಪೂರ್ವಜರ ಆಶೀರ್ವಾದವನ್ನು ಕೋರಲು ಮಂತ್ರಗಳನ್ನು ಪಠಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಜೀವನಕ್ಕಾಗಿ ಕೊಡುಗೆ ನೀಡಿದ ತಮ್ಮ ಪೂರ್ವಜರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಅವರು ತಮ್ಮ ಪೂರ್ವಜರಿಂದ ಕ್ಷಮೆಯಾಚಿಸುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾರೆ.

ಪೂರ್ವಜರಿಗೆ ಮಹಾಲಯ ಅಮವಾಸ್ಯೆ ಸಮರ್ಪಣೆಯ ಮಹತ್ವ

ಪೂರ್ವಜರಿಗೆ ಮಹಾಲಯ ಅಮವಾಸ್ಯೆ ಸಮರ್ಪಣೆಯ ಮಹತ್ವ

* ಮಹಾಲಯ ಅಮವಾಸ್ಯೆಯ ಆಚರಣೆಗಳನ್ನು ಆಶೀರ್ವಾದ, ಕಲ್ಯಾಣ ಮತ್ತು ಸಮೃದ್ಧಿಯನ್ನು ಪಡೆಯಲು ಮಾಡಲಾಗುತ್ತದೆ. ಈ ಆಚರಣೆಯ ವೀಕ್ಷಕರು ಭಗವಾನ್ ಯಮನಿಂದ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಅವರ ಕುಟುಂಬಗಳು ಎಲ್ಲಾ ದುಷ್ಟರಿಂದ ರಕ್ಷಿಸಲ್ಪಡುತ್ತವೆ.

* ಒಬ್ಬ ವ್ಯಕ್ತಿಯು ಮೊದಲ 15 ದಿನಗಳಲ್ಲಿ ತಮ್ಮ ಪೂರ್ವಜರ ಶ್ರಾದ್ಧವನ್ನು ಆಚರಿಸಲು ವಿಫಲರಾದರೆ ಅಥವಾ ಮರಣದ ದಿನಾಂಕ ತಿಳಿದಿಲ್ಲವಾದರೆ, ಅವರ ಪರವಾಗಿ 'ತರ್ಪಣ'ವನ್ನು 'ಸರ್ವಪಿತ್ರ ಮೋಕ್ಷದ ದಿನ' ಆಚರಿಸಬಹುದು ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಮಹಾಲಯ ಅಮವಾಸ್ಯೆಯ ದಿನದಂದು ಪೂರ್ವಜರು ತಮ್ಮ ಮನೆಗೆ ಭೇಟಿ ನೀಡುತ್ತಾರೆ ಮತ್ತು ಅವರ ಶ್ರದ್ಧಾ ಆಚರಣೆಯನ್ನು ಅವರ ಪರವಾಗಿ ಆಚರಿಸದಿದ್ದರೆ, ಅವರು ದುಃಖದಿಂದ ಹಿಂದಿರುಗುತ್ತಾರೆ ಎಂದು ನಂಬಲಾಗಿದೆ.

* ಜ್ಯೋತಿಷ್ಯ ಶಾಸ್ತ್ರದಲ್ಲಿ ಪೂರ್ವಜರು ಯಾವುದೇ ತಪ್ಪು ಮಾಡಿದರೆ ಅವರ ಮಕ್ಕಳ ಜಾತಕದಲ್ಲಿ 'ಪಿತೃ ದೋಷ' ಎಂದು ಪ್ರತಿಬಿಂಬಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರ ಪರಿಣಾಮವಾಗಿ ಅವರು ತಮ್ಮ ಜೀವನದಲ್ಲಿ ಕೆಟ್ಟ ಅನುಭವಗಳನ್ನು ಅನುಭವಿಸುತ್ತಾರೆ. ಈ ಪೂರ್ವಜರ ಆತ್ಮಗಳು ಮೋಕ್ಷವನ್ನು ಪಡೆಯುವುದಿಲ್ಲ ಮತ್ತು ಶಾಂತಿಯನ್ನು ಹುಡುಕುತ್ತಾ ಅಲೆದಾಡುತ್ತವೆ.

* ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಆಚರಣೆಗಳನ್ನು ಮಾಡುವುದರಿಂದ, ಈ 'ಪಿತೃ ದೋಷ' ನಿವಾರಣೆಯಾಗುತ್ತದೆ ಮತ್ತು ಸತ್ತ ಆತ್ಮಕ್ಕೆ ಮೋಕ್ಷವನ್ನು ನೀಡುತ್ತದೆ. ಪೂರ್ವಜರು ತಮ್ಮ ಕುಟುಂಬವನ್ನು ಆಶೀರ್ವದಿಸುತ್ತಾರೆ ಮತ್ತು ಅವರಿಗೆ ಜೀವನದಲ್ಲಿ ಎಲ್ಲಾ ಸಂತೋಷವನ್ನು ನೀಡುತ್ತಾರೆ.

English summary

Mahalaya Amavasya 2022 date, time, shubh muhurat, rituals, puja vidhi and significance in kannada

Here we are discussing about Mahalaya Amavasya 2022 date, time, shubh muhurat, rituals, puja vidhi and significance in kannada. Read more.
X
Desktop Bottom Promotion