For Quick Alerts
ALLOW NOTIFICATIONS  
For Daily Alerts

ಮಹಾಭಾರತದ ಪ್ರಕಾರ ಇಂತಹ ಜನರ ಬಳಿ ನಿಮ್ಮ ರಹಸ್ಯಗಳನ್ನು ಹೇಳಬೇಡಿ!

|

ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಮಹಾಭಾರತವು ಒಂದು. ಹಿಂದೂ ಧರ್ಮದ ಬಹುಮುಖ್ಯ ಪಠ್ಯ ಎನಿಸಿಕೊಂಡಿರುವ ಮಹಾಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದೆ. ಮಹಾಭಾರತವು ಚಂದ್ರವಂಶದ ರಾಜರುಗಳ ಕಥೆಯನ್ನು ಒಳಗೊಂಡಿದೆ. ಮಹಾಭಾರತವು ಶಂತನು ಮಹಾರಜನ ಕಥೆಯಿಂದ ಆರಂಭವಾಗಿ ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರ ಹಾಗೂ ಕಥೆಗಳು ಭಾರತೀಯ ಹಾಗೂ ಹಿಂದೂ ಸಂಸ್ಕøತಿಯಲ್ಲಿ ಬಹುಮುಖ್ಯ ಪಾತ್ರವನ್ನು ಪಡೆದುಕೊಳ್ಳುತ್ತವೆ.

ಮಹಾಭಾರತದಲ್ಲಿ ಅನೇಕ ಕಥೆಗಳು ಹಾಗೂ ಉಪ ಕಥೆಗಳಿರುವುದನ್ನು ಕಾಣಬಹುದು. ಹದಿನೆಂಟು ಪರ್ವಗಳನ್ನು ಹೊಂದಿರುವ ಈ ಮಹಾ ಕಾವ್ಯದಲ್ಲಿ ವಿಶ್ವ ಸೃಷ್ಟಿಯ ವಿವರ, ಸೃಷ್ಟಿಯಲ್ಲಿ ಇರುವ ಸಂಬಂಧಗಳು, ಸಂಬಂಧಗಳ ನಡುವೆ ಉಂಟಾಗುವ ಮಾತ್ಸರ್ಯ, ಮೋಸ, ವಂಚನೆ, ಆಸ್ತಿ, ಭೂಮಿ, ಮಾನವೀಯತೆ ಹೀಗೆ ವಿವಿಧ ವಿಷಯಗಳ ಕುರಿತು ಸುಂದರವಾದ ಚಿತ್ರಣಗಳಿವೆ. ಅವುಗಳನ್ನು ಒಮ್ಮೆ ಓದಿದದರೆ ನಾವು ನಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಯನ್ನು ಹಾಗೂ ಆಚಾರ-ವಿಚಾರಗಳನ್ನು ತಿಳಿದಿರಬೇಕು? ನಮ್ಮವರೊಂದಿಗೆ ಸಂಬಂಧಗಳು ಹೇಗಿರಬೇಕು ಎನ್ನುವಂತಹ ಸೂಕ್ಷ್ಮ ಜ್ಞಾನವನ್ನು ತಿಳಿಸಿಕೊಡುವುದು.

Mahabharata

ಬದುಕು ಎಂದ ಮೇಲೆ ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ವಿಶೇಷತೆ ಹಾಗೂ ವಿಭಿನ್ನತೆ ಇರುತ್ತದೆ. ಒಳ್ಳೆಯದ್ದು-ಕೆಟ್ಟದ್ದು, ಸತ್ಯ-ಸುಳ್ಳುಗಳನ್ನು ಹೇಳುವುದರ ಮೂಲಕ ನಮ್ಮ ಜೀವನದ ಹಾದಿಯಲ್ಲಿ ಸಾಕಷ್ಟು ಅನುಭವವನ್ನು ಪಡೆದುಕೊಳ್ಳುತ್ತಾ ಸಾಗುತ್ತೇವೆ. ನಮ್ಮ ದೌರ್ಭಲ್ಯದಿಂದ ಅಥವಾ ಕೆಟ್ಟ ತನದಿಂದ ಹೇಗೆ ಕೆಟ್ಟದ್ದು ಸಂಭವಿಸುವುದು? ಹಾಗೆಯೇ ಒಳ್ಳೆಯ ತನದಿಂದ ಹೇಗೆ ಒಳ್ಳೆಯದ್ದು ಉಂಟಾಗುತ್ತದೆ ಎನ್ನುವುದು ನಮ್ಮ ಅರಿವಿಗೆ ಬಂದಿರುತ್ತದೆ. ಆದರೆ ನಾವು ಯಾವ ತಪ್ಪು ಮಾಡಿದ್ದೇವೆ? ಯಾವ ತಪ್ಪನ್ನು ಮಾಡಲಿಲ್ಲ ಎನ್ನುವುದರ ಬಗ್ಗೆ ಎಲ್ಲೂ ಯಾರೊಂದಿಗೂ ಬಾಯಿಬಿಡುವುದಿಲ್ಲ. ಅದು ನಮ್ಮ ಜೀವನದ ರಹಸ್ಯವಾಗಿರುತ್ತದೆ ಎಂದು ಹೇಳಬಹುದು. ನಮ್ಮ ನಡತೆಯಿಂದ ಕಲಿತುಕೊಂಡ ಪಾಠಗಳ ಆಧಾರದ ಮೇಲೆ ಮುಂದಿನ ಜೀವನದ ಭವಿಷ್ಯವನ್ನು ತಿಳಿದುಕೊಳ್ಳುತ್ತೇವೆ.

ಮಹಾಭಾರತದಲ್ಲಿ ಬರುವ ಶ್ಲೋಕಗಳು ಸಾವಿರಕ್ಕೂ ಹೆಚ್ಚು ಸಲಹೆಯನ್ನು ನೀಡುತ್ತವೆ!

ಮಹಾಭಾರತದಲ್ಲಿ ಬರುವ ಶ್ಲೋಕಗಳು ಸಾವಿರಕ್ಕೂ ಹೆಚ್ಚು ಸಲಹೆಯನ್ನು ನೀಡುತ್ತವೆ!

ಮಹಾಭಾರತ ಎನ್ನುವುದು ಪ್ರತಿಯೊಬ್ಬರಿಗೂ ಜೀವನ ನಡೆಸಲು ಅಥವಾ ಜೀವನದ ಅರ್ಥವನ್ನು ತಿಳಿಯಲು ಇರುವ ಸ್ಫೂರ್ತಿದಾಯಕವಾದ ಸಂಗತಿ ಎನ್ನಬಹುದು. ಈ ಮಾಹಾಕ್ಯಾವ್ಯದಲ್ಲಿ ವಿವರಿಸಲಾದ ಕಥೆಗಳು, ಸಂದರ್ಭಗಳು ಅಥವಾ ಘಟನೆಗಳು ನಮ್ಮ ಜೀವನದಲ್ಲಿ ನಡೆದಂತಹ ಘಟನೆಗಳಿಗೆ ಸಾಮ್ಯತೆಯನ್ನು ಹೊಂದಿರುವಂತೆ ಇರುತ್ತದೆ. ಇದರಲ್ಲಿ ಇರುವ ಶ್ಲೋಕಗಳು ಸಾವಿರಕ್ಕೂ ಹೆಚ್ಚು ಸಲಹೆಯನ್ನು ನೀಡುತ್ತವೆ. ಅವೆಲ್ಲವೂ ನಮ್ಮ ಜೀವನಕ್ಕೆ ಅಥವಾ ಬದುಕಿಗೆ ಅಗತ್ಯವಾದ ಸಂಗತಿಗಳು ಎನ್ನಲಾಗುವುದು. ಮಹಾಭಾರತದಲ್ಲಿ ಹೇಳುವ ಪ್ರತಿಯೊಂದು ಶ್ಲೋಕವು ನೈಜ ಜೀವನಕ್ಕೆ ಹತ್ತಿರವಾಗಿದೆ. ಅದನ್ನು ಅರಿತರೆ ಅಥವಾ ಆ ಶ್ಲೋಕಗಳ ಮಾದರಿಯಲ್ಲಿ ನಾವು ನಡೆದರೆ ನಮಗೆ ಜೀವನವು ಬಲು ಸುಲಭವಾಗಿ ಇರುವುದು. ಅದರಲ್ಲಿ ಕೆಲವು ಶ್ಲೋಕಗಳು ಮನುಷ್ಯನ ಮನ ತಟ್ಟುವಂತೆ ಇವೆ. ಇದರಲ್ಲಿ ಹೇಳುವ ಒಂದು ಶ್ಲೋಕದ ಪ್ರಕಾರ ಮನುಷ್ಯ ಅಥವಾ ನಾವು ಎಂದಿಗೂ ನಮ್ಮ ರಹಸ್ಯಗಳನ್ನು ಇತರರ ಮುಂದೆ ತೆರೆದಿಡಬಾರದು ಎಂದು ಹೇಳಲಾಗುತ್ತದೆ. ಏಕೆ ಈ ಶ್ಲೋಕ ಹಾಗೆ ಹೇಳುವುದು? ಅದರಿಂದ ನಮಗೆ ಯಾವ ರೀತಿಯ ಉಪಯೋಗ ಉಂಟಾಗುವುದು? ಎನ್ನುವಂತಹ ಮಾಹಿತಿಗಳನ್ನು ನೀಡುವುದು. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಲೇಖನ ಮುಂದಿನ ಭಾಗ ಒಳಗೊಂಡಿದೆ.

ಮಹಾಭಾರತದ ಶ್ಲೋಕ

ಮಹಾಭಾರತದ ಶ್ಲೋಕ

ತೃಯಮ್ ಮುದ್ದೇನ ಬಾಲೇನ ಲುಬ್ದೇನ ಲಘುಪಣಿ ವಾ

ನಾ ಮಂತ್ರೈತ್ ಗುಯಾನಿ ಯಶು ಚೋನ್ಮಾದ ಲಕ್ಷಣಂ.

Most Read: ಮಹಾಭಾರತ ಯುದ್ಧದ ಬಳಿಕ ಪಾ೦ಡವರು-ಶ್ರೀ ಕೃಷ್ಣನ ಕಥೆ ಏನಾಗುತ್ತದೆ?

ಶ್ಲೋಕದ ಅರ್ಥ

ಶ್ಲೋಕದ ಅರ್ಥ

ನಾವು ನಮ್ಮ ಜೀವನದ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅದರಲ್ಲೂ ಮಹಿಳೆ, ಮಕ್ಕಳು, ಮೂರ್ಖ ವ್ಯಕ್ತಿ, ಅಸಮಾನ್ಯ ವ್ಯಕ್ತಿ, ದುರಾಸೆಯ ವ್ಯಕ್ತಿ, ದುಷ್ಟ ವ್ಯಕ್ತಿಗಳಲ್ಲಿ ಹೇಳಿಕೊಳ್ಳಬಾರದು. ಮಹಿಳೆಯರಲ್ಲಿ ಯಾವ ವಿಷಯವು ಗೌಪ್ಯವಾಗಿ ಇರಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಬಾರಿ ಯಾರ ಬಳಿಯಾದರೂ ಹೇಳಬಹುದು. ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ಅವರು ಸಹ ತಮ್ಮ ಮನಸ್ಸಿಗೆ ಏನು ತೋಚುತ್ತದೆಯೋ ಅದನ್ನು ಹಾಗೆಯೇ ಹೇಳಿ ಬಿಡುತ್ತಾರೆ. ಮೂರ್ಖ ವ್ಯಕ್ತಿಯ ಸ್ವಾಭವೇ ಮೂರ್ಖವಾಗಿರುವುದರಿಂದ ಯಾವ ಸಂಗತಿಯನ್ನು ಅವರು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಜ್ಞಾನ ಅಥವಾ ವರ್ತನೆ ಇಲ್ಲದವರಲ್ಲಿ ವಿಷಯ ಹೇಳಿಯೂ ವ್ಯರ್ಥ. ದುರಾಸೆಯ ವ್ಯಕ್ತಿಯು ಬೇರೆಯವರ ಸುದ್ದಿಯನ್ನು ಬಳಸಿಕೊಂಡು ತನ್ನ ಲಾಭಕ್ಕೆ ಬಳಸಿಕೊಳ್ಳಬಲ್ಲ. ದುಷ್ಟ ವ್ಯಕ್ತಿಯು ರಹಸ್ಯವನ್ನು ತಿಳಿದು ತನ್ನ ಉಪಯೋಗಕ್ಕೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಬುದ್ಧಿಯನ್ನು ತೋರುತ್ತಾರೆ. ಹಾಗಾಗಿ ನಾವು ನಮ್ಮ ರಹಸ್ಯಗಳನ್ನು ಇತರರ ಮುಂದೆ ಹೇಳಿಕೊಂಡರೆ ನಾವೇ ದುರ್ಬಲರು ಹಾಗೂ ಅಸಹನೀಯ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತೇವೆ ಎಂದು ತಿಳಿಸುತ್ತದೆ.

ಮೂರ್ಖ ಮತ್ತು ಬುದ್ಧಿ ವಿಕಲ್ಪತೆ ಹೊಂದಿರುವವರು

ಮೂರ್ಖ ಮತ್ತು ಬುದ್ಧಿ ವಿಕಲ್ಪತೆ ಹೊಂದಿರುವವರು

ಯಾರು ಯಾವ ಸಂದರ್ಭದಲ್ಲಿ ಸ್ಥಳದಲ್ಲಿ ಅರ್ಥವಿಲ್ಲದವರಂತೆ ವರ್ತಿಸುತ್ತಾರೋ ಅಂತಹವರನ್ನು ಮೂರ್ಖರು ಎಂದು ಹೇಳಲಾಗುವುದು. ಅಂತಹ ವ್ಯಕ್ತಿಗಳೊಂದಿಗೆ ಎನು ಹಂಚಿಕೊಂಡರೂ ಅಥವಾ ಹೇಳಿಕೊಂಡರೂ ಅದು ಸುರಕ್ಷಿತವಾಗಿ ಇರುವುದಿಲ್ಲ. ಅಂತಹ ಮೂರ್ಖರ ಬಳಿ ನಾವು ನಮ್ಮ ರಹಸ್ಯಗಳನ್ನು ಹೇಳಿಕೊಂಡರೆ ಅವರು ಏನು ಬೇಕಾದರೂ ಮಾಡಬಲ್ಲರು. ಅನಗತ್ಯ ಕಾರಣಗಳಿಗೆ ಅಥವಾ ಅನಗತ್ಯವಾದ ಸಂದರ್ಭಗಳಲ್ಲಿ ನಿಮ್ಮನ್ನು ತೊಂದರೆಗೆ ಒಳಗಾಗುವಂತೆ ಮಾಡಬಹುದು. ಹಾಗಾಗಿ ಅಂತಹ ವ್ಯಕ್ತಿಗಳಲ್ಲಿ ಎಂತಹ ಸಂಗತಿಯನ್ನೂ ಹಂಚಿಕೊಳ್ಳಬಾರದು. ಕೆಲವರಿಗೆ ಮಾನಸಿಕವಾಗಿ ದೃಢತೆ ಇರುವುದಿಲ್ಲ. ತಮ್ಮ ನೋವುಗಳನ್ನು ಅಥವಾ ಮನಸ್ಸಿನ ಮಾತುಗಳನ್ನು ಕೇಳುವವರು ಯಾರಾದರೂ ಇದ್ದಾರೆ ಎಂದು ಅನಿಸಿದರೆ ಅವರ ಮುಂದೆ ತಮ್ಮ ಕಥೆಗಳನ್ನು ಹೇಳಿಬಿಡುತ್ತಾರೆ. ಹಾಗೆ ತಮ್ಮ ಸುದ್ದಿ ಹೇಳಿಕೊಳ್ಳುವುದರ ಮೂಲಕ ಮಾನಸಿಕವಾಗಿ ನಿರಾಳತೆಯನ್ನು ಅನುಭವಿಸುತ್ತಾರೆ. ಈ ರೀತಿಯ ಸಮಾಧಾನ ತಾತ್ಕಾಲಿಕವಾಗಿ ನೆಮ್ಮದಿಯನ್ನು ನೀಡಬಹುದು. ಕೆಲವೊಮ್ಮೆ ಅದು ನಮಗೆ ಅಪಾಯವನ್ನು ತಂದೊಡ್ಡಬಹುದು. ನಾವು ಹೇಳಿಕೊಂಡ ಸಂಗತಿಗಳು ಒಬ್ಬ ಮೂರ್ಖ ವ್ಯಕ್ತಿಯ ಬಳಿ ಎಂದಾಗಿದ್ದರೆ ಆಗ ಮಾನಸಿಕ ನೆಮ್ಮದಿ ಇನ್ನಷ್ಟು ಹಾಳಾಗುವುದು. ಹಾಗಾಗಿ ಅಂತಹ ಮೂರ್ಖ ವ್ಯಕ್ತಿಗಳು ನಮ್ಮೆದುರ ಬಂದರೆ ಇಲ್ಲವೇ ಅವರೊಂದಿಗೆ ನಾವು ಇದ್ದಾಗ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ನಮ್ಮ ಮಾತು ಹಾಗೂ ವರ್ತನೆಯ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿರಬೇಕು.

Most Read: ಸ್ವಾರಸ್ಯಕರ-ರೋಚಕ ಕಥಾನಕಗಳ ಭಂಡಾರ 'ಮಹಾಭಾರತ'

ಮಕ್ಕಳು

ಮಕ್ಕಳು

ಮಕ್ಕಳ ಮನಸ್ಸು ಹಾಗೂ ಬುದ್ಧಿ ಒಂದು ಬಿಳಿಯ ಹಾಳೆ ಇದ್ದಂತೆ. ಅವರಲ್ಲಿ ತಪ್ಪು, ಸರಿ, ಮೋಸ ಎನ್ನುವ ವಿಷಯಗಳ ಬಗ್ಗೆ ಯಾವುದೇ ಜ್ಞಾನ ಇರುವುದಿಲ್ಲ. ಇನ್ನೊಬ್ಬ ವ್ಯಕ್ತಿಗೆ ತೊಂದರೆ ಉಂಟಾದರೆ ಏನಾಗುವುದು ಎನ್ನುವುದನ್ನು ತಿಳಿಯುವ ಅಥವಾ ನಿರ್ಧಾರ ಕೈಗೊಳ್ಳಬಹುದಾದಂತಹ ಪ್ರಬುದ್ಧತೆ ಇರುವುದಿಲ್ಲ. ಅವರ ಮುಗ್ಧ ಹೃದಯ ಹಾಗೂ ಮನಸ್ಸಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಾ ಹೋಗುವುದೋ ಅಂತಹದ್ದೇ ಬುದ್ಧಿಯ ಬೆಳವಣಿಗೆ ಆಗುವುದು ಅಷ್ಟೆ. ಅವರು ತಮ್ಮ ಬಳಿ ಹೇಳಿರುವ ಸಂಗತಿಯನ್ನು ಯಾರಲ್ಲಿ ಹೇಳಬೇಕು? ಯಾರಲ್ಲಿ ಹೇಳಬಾರದು? ಅಥವಾ ತನಗೆ ತಿಳಿದಿರುವ ವಿಷಯವನ್ನು ಎಷ್ಟು ರಹಸ್ಯವಾಗಿ ಇಡಬೇಕು? ಇದರಿಂದ ಯಾರಿಗೆ ತೊಂದರೆ ಉಂಟಾಗಬಹುದು? ಎನ್ನುವಂತಹ ವಿಚಾರಗಳು ಮಕ್ಕಳಿಗೆ ತಿಳಿದಿರುವುದಿಲ್ಲ. ಅವರು ಮನಸ್ಸಿಗೆ ತೋಷಿದಂತೆ ಹೇಳಬಹುದು. ಇಲ್ಲವೇ ಯಾರಾದರು ಆ ವ್ಯಕ್ತಿಗಳ ಬಗ್ಗೆ ಕೇಳಿದಾಗ ನೇರವಾಗಿ ಸಂಗತಿಯನ್ನು ಹೇಳಬಹುದು. ಹಾಗಾಗಿ ಮಕ್ಕಳಲ್ಲಿ ಯಾವುದೇ ರಹಸ್ಯ ಅಥವಾ ಸಂಗತಿಗಳನ್ನು ಹೇಳುವುದು ಸುರಕ್ಷಿತವಾದದ್ದಲ್ಲ ಎಂದು ಶ್ಲೋಕ ಒಳಾರ್ಥವನ್ನು ತಿಳಿಸುತ್ತದೆ.

ದುರಾಸೆಯ ಮತ್ತು ದುಷ್ಟ ವ್ಯಕ್ತಿಗಳು:

ದುರಾಸೆಯ ಮತ್ತು ದುಷ್ಟ ವ್ಯಕ್ತಿಗಳು:

ದುರಾಸೆಯ ವ್ಯಕ್ತಿಗಳು ಇತರರ ದೌರ್ಬಲ್ಯವನ್ನು ತಮ್ಮ ಅನುಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳಬಲ್ಲರು. ಅವರಿಗೆ ಸ್ನೇಹಿತರು, ಬಂಧುಗಳು ಅಥವಾ ಹತ್ತಿರದವರು ಎನ್ನುವಂತಹ ಯಾವುದೇ ಬಾಂಧವ್ಯ ಇರುವುದಿಲ್ಲ. ದುಷ್ಟ ವ್ಯಕ್ತಿಗಳು ನಿಮ್ಮ ರಹಸ್ಯವನ್ನು ತಿಳಿದುಕೊಂಡು ನಿಮ್ಮನ್ನೇ ಕಷ್ಟದ ಸನ್ನಿವೇಶಕ್ಕೆ ನೂಕಬಹುದು. ಇಲ್ಲವೇ ನಿಮ್ಮಿಂದಲೇ ಒಂದಷ್ಟು ಅನುಕೂಲತೆಯನ್ನು ಪಡೆದುಕೊಳ್ಳಲು ಬಯಸಬಹುದು. ಹಾಗಾಗಿ ಇಂತಹ ವ್ಯಕ್ತಿಗಳಲ್ಲಿ ನಾವು ನಮ್ಮ ದೌರ್ಬಲ್ಯವನ್ನು ಅಥವಾ ಅಸಹಾಯಕತೆಯನ್ನು ಹೇಳಿಕೊಳ್ಳಬಾರದು. ಅಂತಹ ವ್ಯಕ್ತಿಗಳಿಂದ ಆದಷ್ಟು ದೂರ ಉಳಿಯಲು ಪ್ರಯತ್ನಿಸಿ. ಇತರರ ವಿಷಯ ಹಾಗೂ ದೌರ್ಭಲ್ಯವನ್ನು ತಿಳಿದುಕೊಂಡು ತಮ್ಮ ಅನುಕೂಲಕ್ಕೆ ಬೇಕಂತೆ ಸನ್ನಿವೇಶಗಳನ್ನು ಸೃಷ್ಟಿಸಬಹುದು. ಇಲ್ಲವೇ ನಿಮಗೇ ಸವಾಲುಗಳನ್ನು ಹಾಕುವ ಮೂಲಕ ಭಯ ಪಡಿಸಬಲ್ಲರು. ಅಂತಹವರು ಎಂದಿಗೂ ಭಯಾನಕ ಹಾಗೂ ಆಘಾತಕಾರಿ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ನಮಗೆ ಯಾವ ವ್ಯಕ್ತಿ ಎಷ್ಟೇ ನಯವಾಗಿ ಮಾತನಾಡಿಸಿದರೂ ಅವರಲ್ಲಿ ಎಲ್ಲವನ್ನೂ ಹೇಳಿಕೊಳ್ಳಬಾರದು. ಮೊದಲು ವ್ಯಕ್ತಿಯ ಸಂಪೂರ್ಣ ಪರಿಚಯ, ವ್ಯಕ್ತಿಯ ವ್ಯಕ್ತಿತ್ವ ಮತ್ತು ವರ್ತನೆ, ಹಿನ್ನೆಲೆ, ಸ್ವಭಾವವನ್ನು ತಿಳಿದುಕೊಳ್ಳಬೇಕು. ನಮ್ಮ ಮನಸ್ಸಿಗೆ ಹತ್ತಿರದವರಾಗಿ, ಕಷ್ಟ ಸುಖಗಳಿಗೆ ಪಾಲುದಾರರಾಗಿದ್ದಾರೆ ಎನ್ನುವ ಭರವಸೆ ಇದ್ದಾಗ ಮಾತ್ರ ನಮ್ಮ ಮಾನಸಿಕ ಚಿಂತನೆಗಳನ್ನು ಹಂಚಿಕೊಳ್ಳಬಹುದು. ಇಲ್ಲವಾದರೆ ಎಂದಿಗೂ ನಮ್ಮ ವಿಷಯವನ್ನು ಇತರರಲ್ಲಿ ಹೇಳಿಕೊಳ್ಳಬಾರದು ಎನ್ನುವ ಸಲಹೆಯನ್ನು ಶ್ಲೋಕ ನೀಡುವುದು.

English summary

Mahabharata: People You Should Never Tell Your Secrets To

Mahabharata is a source of inspiration for anyone and everyone who is at the crossroads of life. The situations and incidents narrated in the epic are such that everybody can relate to. The largest epic that consists of 100,000 shlokas in its current circulation, offers many more than 100,000 advises. But not everyone can infer the deeper meaning of these shlokas.
X
Desktop Bottom Promotion