For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿ 2022: ಪೂಜಾ ಸಮಯ, ಶಿವನಿಗೆ ರುದ್ರಾಭಿಷೇಕ ಮಾಡುವ ವಿಧಾನ?

|

ಮಹಾದೇವನು ಪಾರ್ವತಿ ದೇವಿಯನ್ನು ವರಿಸಿದ ಸುದಿನವನ್ನು ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿ ಎಂದು ಆಚರಿಸುತ್ತೇವೆ. ಮತ್ತೊಂದು ಪುರಾಣ ಕಥೆಯ ಪ್ರಕಾರ ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣ. ಹೀಗೆ ಶೀವರಾತ್ರಿಯ ಬಗ್ಗೆ ಹತ್ತು ಹಲವು ಪೌರಾಣಿ ಕಥೆಗಳಿವೆ. ಒಂದು ವರ್ಷದ ಒಟ್ಟು 12 ಶಿವರಾತ್ರಿಗಳು ಬರುತ್ತದೆ, ಪ್ರತಿ ಚಂದ್ರ ಮಾಸದ 14ನೇ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಮಹಾಶಿವರಾತ್ರಿ ಅತ್ಯಂತ ಪ್ರಮುಖವಾದದ್ದು.

2022ನೇ ಸಾಲಿನಲ್ಲಿ ಮಹಾ ಶಿವರಾತ್ರಿಯನ್ನು ಮಾರ್ಚ್‌ 1ರಂದು ಶಿವರಾತ್ರಿ ಆಚರಿಸಲಾಗುತ್ತದೆ. ಈ ಮಹಾಶಿವರಾತ್ರಿ ಹಿನ್ನೆಲೆ ಶಿವನ ಪೂಜಾ ವಿಧಿವಿಧಾನ ಹೇಗೆ, ಶಿವನಿಗೆ ಪ್ರಮುಖವಾಗಿ ಮಾಡಬೇಕಾದ ಅಭಿಷೇಕದ ಸರಿಯಾದ ಕ್ರಮ ಯಾವುದು, ಅಭಿಷೇಕ ಹಾಗೂ ಶಿವನ ಪೂಜೆಗೆ ಬೇಕಾಗಿರುವ ಅಗತ್ಯ ಸಾಮಾಗ್ರಿಗಳು ಯಾವುವು ಮುಂದೆ ನೋಡೋಣ:

1. ಮಹಾಶಿವರಾತ್ರಿ 2022: ಪೂಜಾ ಸಮಯ, ತಿಥಿ

1. ಮಹಾಶಿವರಾತ್ರಿ 2022: ಪೂಜಾ ಸಮಯ, ತಿಥಿ

ಮಾರ್ಚ್‌ 1ರ ಮಂಗಳವಾರ ಮಹಾಶಿವರಾತ್ರಿ ಪೂಜೆ

ನಿಶಿತಕಾಲ ಪೂಜಾ ಸಮಯ: ಮಧ್ಯಾಹ್ನ 12.08 ರಿಂದ 12.56ರವರೆಗೆ

ಮಾರ್ಚ್‌ 2ರಂದು ಪಾರಣ ಸಮಯ ಬೆಳಗ್ಗೆ 6.35

ಇಷ್ಟಾರ್ಥ ಸಿದ್ಧಿಗೆ ನಿತ್ಯ ಪಠಿಸಿ ಶಿವನ ಅಷ್ಟೋತ್ತರ ಶತ ನಾಮಾವಳಿ

2. ರುದ್ರಾಭಿಷೇಕ ಪೂಜೆ ಎಂದರೇನು

2. ರುದ್ರಾಭಿಷೇಕ ಪೂಜೆ ಎಂದರೇನು

ಭಗವಾನ್ ಶಿವನನ್ನು ಶಿವಲಿಂಗ ರೂಪದಲ್ಲಿ ದೇವಾಲಯಗಳಲ್ಲಿ ಮತ್ತು ಮನೆಯಲ್ಲಿ ಪೂಜಿಸಲಾಗುತ್ತದೆ. ಪ್ರಪಂಚದಾದ್ಯಂತದ ಭಕ್ತರಿಂದ ಪೂಜಿಸಲ್ಪಡುವ ಶಿವನಿಗೆ ಅನೇಕ ಹೆಸರುಗಳಿವೆ ಮತ್ತು ಅವುಗಳಲ್ಲಿ ರುದ್ರ ಕೂಡ ಒಂದು.

ಭಗವಾನ್ ಶಿವನ ರುದ್ರ ಅಭಿವ್ಯಕ್ತಿಯು ಉಗ್ರವಾಗಿದೆ ಮತ್ತು ವಿಧ್ವಂಸಕನ ಆರಾಧನೆಯು ಅಭಿಷೇಕವನ್ನು ಮಾಡುವ ಮೂಲಕ ಮಾಡಲಾಗುತ್ತದೆ ಮತ್ತು ಇದು ಭಗವಂತನಿಗೆ ಪ್ರಿಯವಾದ ಪೂಜೆಯ ವಿಧಾನವಾಗಿದೆ.

ರುದ್ರ ಅಭಿಷೇಕ ಎಂದರೆ ಶಿವಲಿಂಗದ ಪವಿತ್ರ ಸ್ನಾನ, ಇದನ್ನು ಹಾಲು, ಗಂಗಾಜಲ, ಜೇನು, ಮೊಸರು, ಕಬ್ಬಿನ ರಸ, ಶ್ರೀಗಂಧ, ಬಿಲ್ಪತ್ರೆ ನೀರು ನಂತಹ ದ್ರವಗಳ ಪವಿತ್ರ ಮಿಶ್ರಣದಿಂದ ಮಾಡಲಾಗುತ್ತದೆ.

ಅಭಿಷೇಕದ ವೇಳೆ ಮಂತ್ರಗಳು/ಸ್ತೋತ್ರಗಳ ಪಠಣವು ಶಿವ ರುದ್ರಾಭಿಷೇಕವನ್ನು ನಿರ್ವಹಿಸುವ ಒಂದು ಅವಿಭಾಜ್ಯ ಅಂಗವಾಗಿದೆ ಹಿಂದೂಗಳಲ್ಲಿ ಹೆಚ್ಚು ಮಹತ್ವದ್ದಾಗಿದೆ.

ಈ ಪೂಜೆಯ ಸಮಯದಲ್ಲಿ ಉಂಟಾಗುವ ಕಂಪನಗಳು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತವೆ.

Shiv Chalisa in Kannada: ಶಿವ ಚಾಲೀಸ ಸ್ತೋತ್ರ, ಅರ್ಥ ಹಾಗೂ ಅದರ ಮಹತ್ವ

3. ರುದ್ರಾಭಿಷೇಕ ಪೂಜೆಗೆ ಬೇಕಾಗುವ ಸಾಮಾಗ್ರಿಗಳು

3. ರುದ್ರಾಭಿಷೇಕ ಪೂಜೆಗೆ ಬೇಕಾಗುವ ಸಾಮಾಗ್ರಿಗಳು

ಅಭಿಷೇಕ ದ್ರವಗಳು - ಗಂಗಾಜಲ, ರೋಸ್ ವಾಟರ್, ಕುದಿಸದ ಹಸುವಿನ ಹಾಲು, ಕಬ್ಬಿನ ರಸ ಅಥವಾ ಯಾವುದೇ ಹಣ್ಣಿನ ರಸಗಳೊಂದಿಗೆ ಬೆರೆಸಿದ ನೀರು,

ಪಂಚಾಮೃತಕ್ಕೆ ಬೇಕಾಗುವ ವಸ್ತುಗಳು: ಕುದಿಸದ ಹಸುವಿನ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಬೆಣ್ಣೆ ಮತ್ತು ತುಪ್ಪದ ಮಿಶ್ರಣ.

ಧೂಪ, ಕರ್ಪೂರ, ತುಪ್ಪದ ದೀಪ, ಗಂಧದ ಕಡ್ಡಿ, ಐದು ಬಗೆಯ ಹೂವು, ಐದು ಬಗೆಯ ಹಣ್ಣುಗಳು,

ಶ್ರೀಗಂಧದ ಪೇಸ್ಟ್, ಸುಗಂಧ ತೈಲಗಳು, ಸುಗಂಧ ದ್ರವ್ಯಗಳು

ಅಕ್ಷತೆಗೆ ಮುರಿಯದ ಅಕ್ಕಿ ಕಾಳುಗಳು

ಧಾನ ನೀಡಲು: ಸಿಹಿ ತಿಂಡಿಗಳು, ಬಟ್ಟೆ, ಹೂವುಗಳು, ಹಣ್ಣುಗಳು, ಬಿಲ್ಪತ್ರೆ, ದತುರಾ, ವೀಳ್ಯದೆಲೆ, ಬೆಲ್ಲದಹಣ್ಣು, ತೆಂಗಿನ ಕಾಯಿ

4. ರುದ್ರ ಮಂತ್ರ

4. ರುದ್ರ ಮಂತ್ರ

ಓಂ ನಮೋ ಭಗವತೇ ರುದ್ರಾಯ

ಈ ರುದ್ರ ಮಂತ್ರವು ಶಿವನನ್ನು ತಲುಪಲು ಇರುವ ಹತ್ತಿರದ ಮಾರ್ಗ ಎಂದು ಹೇಳಬಹುದು. ಮಹಾಶಿವನಿಂದ ಆಶೀರ್ವಾದ ಪಡೆಯುವುದಕ್ಕಾಗಿ ಈ ಮಂತ್ರವನ್ನು ಬಳಸಲಾಗುತ್ತದೆ.ಶಿವನಿಂದ ನಿಮ್ಮ ಇಷ್ಟಾರ್ಥ ಸಿದ್ಧಿಸುವುದಕ್ಕಾಗಿ ಈ ಮಂತ್ರ ಪಠಣೆ ಮಾಡಬಹುದು.

5. ಪಂಚಾಕ್ಷರಿ ಶಿವ ಮಂತ್ರ

5. ಪಂಚಾಕ್ಷರಿ ಶಿವ ಮಂತ್ರ

ಓಂ ನಮಃ ಶಿವಾಯ

ಇದರ ಅರ್ಥ -ನಾನು ಶಿವನಿಗೆ ನಮಸ್ಕರಿಸುತ್ತೇನೆ

ಓಂ ನಮಃ ಶಿವಾಯದ ಅರ್ಥವೇನೆಂದರೆ ಶಿವನಿಗೆ ನಾನು ನಮಸ್ಕರಿಸುತ್ತಿದ್ದೇನೆ. ಶಿವ ಇಲ್ಲಿ ಸರ್ವೋಚ್ಛ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಿವ ಇಲ್ಲಿ ಆಂತರಿಕ ಆತ್ಮ. ಈ ಮಂತ್ರವನ್ನು ಪಠಿಸುವುದರಿಂದಾಗಿ ನೀವು ನಿಮ್ಮ ಅಂತರಾತ್ಮವನ್ನು ಕರೆಯುತ್ತೀರಿ, ಭಜಿಸುತ್ತೀರಿ. ಸುರಕ್ಷತೆ ಮತ್ತು ರಕ್ಷಣೆಯನ್ನು ಬಯಸುತ್ತಿರುವವರಿಗಾಗಿ ಶಿವ ಪಂಚಾಕ್ಷರಿ ಮಂತ್ರ ಬಹಳ ಒಳ್ಳೆಯದು. ನಿಮ್ಮೊಳಗಿನ ಶಕ್ತಿಯನ್ನು ಇದು ಅಭಿವೃದ್ಧಿ ಪಡಿಅಉತ್ತದೆ ಮತ್ತು ಜೀವನವನ್ನು ಧನಾತ್ಮಕ ಶಕ್ತಿಯಿಂದ ಭರ್ತಿ ಮಾಡುತ್ತದೆ. ಈ ಮಂತ್ರವನ್ನು ಪ್ರತಿಯೊಬ್ಬರೂ ಹೇಳಬಹುದು ಮತ್ತು ಇದಕ್ಕೆ ಯಾವುದೇ ನಿಯಮಗಳಿಲ್ಲ. ನೀವಿದನ್ನು ಎಲ್ಲಿ ಬೇಕಿದ್ದರೂ ಯಾವಾಗ ಬೇಕಿದ್ದರೂ ಪುನರಾವರ್ತಿಸುತ್ತಾ ಇರಬಹುದು.

English summary

Maha Shivratri 2022: What is Rudrabhishek, puja vidhi and ingredients required in kannada

Here we are discussing about Maha Shivratri 2022: What is Rudrabhishek, puja vidhi and ingredients required in kannada. Read more.
X
Desktop Bottom Promotion