For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿ 2022: ಶಿವ ಪೂಜೆಗೆ ಈ ಹೂಗಳನ್ನು ಬಳಸಿ

|

ಹಿಂದೂಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಮಹಾಶಿವರಾತ್ರಿಯನ್ನು ಮಾರ್ಚ್‌ 1ರಂದು ಆಚರಿಸಲಾಗುತ್ತಿದೆ. ಶಿವರಾತ್ರಿ ಶಿವನಿಗೆ ತುಂಬಾ ಪ್ರಿಯವಾದ ದಿನ. ಈ ದಿನ ಶಿವನ ಭಕ್ತರು ಶಿವನ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಶಿವನು ಪಾರ್ವತಿ ದೇವಿಯನ್ನು ಮದುವೆಯಾದ ದಿನ ಶಿವರಾತ್ರಿ ಎಂದು ಹೇಳಲಾಗುವುದು. ಶಿವನು ಗಂಗೆಯನ್ನು ಭೂಮಿಗೆ ಹರಿಯ ಬಿಟ್ಟದ್ದು ಇದೇ ದಿನ ಎಂಬ ಪೌರಾಣಿಕ ಕತೆಯೂ ಇದೆ.

ಶಿವ ಪೂಜೆಯಲ್ಲಿ ಶಿವನಿಗೆ ಇಷ್ಟವಾದ ರೀತಿಯಲ್ಲಿ ಪೂಜೆ ಮಾಡಬೇಕು, ಅದರಲ್ಲೂ ಬಿಲ್ವೆ ಪತ್ರೆ ಇರಲೇಬೇಕು. ಅಲ್ಲದೆ ಶಿವನಿಗೆ ಕೆಲವೊಂದು ಪ್ರಿಯವಾದ ಹೂಗಳಿವೆ, ಅವುಗಳನ್ನು ಪೂಜೆಗೆ ಬಳಸಿದರೆ ಇನ್ನೂ ಒಳ್ಳೆಯದು.

ಕಣಗಿಲೆ ಹೂ

ಕಣಗಿಲೆ ಹೂ

ಶಿವನ ಕಣಗಿಲೆ ಹೂವನ್ನು ಅರ್ಪಿಸಲಾಗುವುದು. ಈ ಹೂವಿನ ಗಿಡ ಬೆಳೆಸುವುದು ಸುಲಭವಾಗಿ ಬೆಳೆಯುವುದು, ಅಲ್ಲದೆ ಈ ಗಿಡದಲ್ಲಿ ಎಲ್ಲಾ ಸಮಯದಲ್ಲೂ ಹೂ ಇರುತ್ತದೆ.

ಕಾಡು ಕಣಗಿಲೆ

ಕಾಡು ಕಣಗಿಲೆ

ಹಳದಿ ಬಣ್ಣದ ಈ ಹೂ ಶಿವನಿಗೆ ತುಂಬಾ ಪ್ರಿಯವಾದ ಹೂವಾಗಿದೆ. ಈ ಹೂ ಸಾಮಾನ್ಯವಾಗಿ ಎಲ್ಲಾ ಶಿವನ ದೇವಾಲಯಗಳಲ್ಲಿ ಇರುತ್ತದೆ.

ಪಾರಿಜಾತ

ಪಾರಿಜಾತ

ಶಿವನಿಗೆ ಪಾರಿಜಾತ ಹೂ ಕೂಡ ತುಂಬಾ ಪ್ರಿಯವಾದ ಹೂವಾಗಿದೆ. ನೀವು ಶಿವನಿಗೆ ಪಾರಿಜಾತ ಹೂವನ್ನು ಹರಿಕೆ ಜೊತೆ ಅರ್ಪಿಸಿ.

ಗುಲಾಬಿ:

ಗುಲಾಬಿ:

ನೀವು ಕೆಂಪು, ಬಿಳಿ ಹೀಗೆ ಯಾವುದೇ ಬಣ್ಣದ ಹೂವುಗಳನ್ನು ಶಿವನ ಪೂಜೆಯಲ್ಲಿ ಬಳಸಬಹುದು.

ಮಲ್ಲಿಗೆ ಹೂ:

ಮಲ್ಲಿಗೆ ಹೂ:

ಶಿವನ ಆರಾಧನೆ ಮಲ್ಲಿಗೆ ಹೂವನ್ನು ಬಳಸಬಹುದು. ದುಂಡು ಮಲ್ಲಿಗೆಯ ಸುವಾಸನೆ ಶಿವನಿಗೆ ತುಂಬಾ ಪ್ರಿಯವಂತೆ.

ಎಕ್ಕ ಗಿಡದ ಹೂ

ಎಕ್ಕ ಗಿಡದ ಹೂ

ಬಿಡಿಸಿದ ಎಕ್ಕ ಗಿಡದ ಹೂ ಶಿವನಿಗೆ ಅರ್ಪಿಸಬಹುದು. ಶಿವಲಿಂಗಕ್ಕೆ ಈ ಹೂಗಳನ್ನು ಅರ್ಪಿಸುವುದರಿಂದ ರೋಗ-ರುಜಿನಗಳು ದೂರಾಗುವುದು ಎಂದು ಹೇಳಲಾಗುವುದು.

ಶಂಖ ಪುಷ್ಪ

ಶಂಖ ಪುಷ್ಪ

ಶಂಖ ಪುಷ್ಪ ಕೂಡ ಶಿವನಿಗೆ ತುಂಬಾ ಪ್ರಿಯವಾದ ಹೂ.. ನೀಲಿ ಬಣ್ಣದ ಹೂ ನೋಡಲು ಶಂಖದ ರೀತಿಯಲ್ಲಿ ಇರುತ್ತದೆ, ಈ ಹೂವನ್ನು ಪೂಜೆಗೆ ಬಳಸಲಾಗುವುದು.

English summary

Maha Shivratri: offer favorite flowers of lord shiva for mahashivratri puja

Maha Shivratri 2022: offer favorite flowers of lord shiva for mahashivratri puja, read on...
Story first published: Saturday, February 26, 2022, 12:32 [IST]
X
Desktop Bottom Promotion