For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿ 2022: ಯಾವ ಬಣ್ಣದ ಬಟ್ಟೆ ಧರಿಸಿದರೆ, ಶಿವನ ಕೃಪೆ ಲಭಿಸುವುದು?

|

ಮಹಾಶಿವರಾತ್ರಿಯು ಶಿವನನ್ನು ಪೂಜಿಸಲು ಪವಿತ್ರವಾದ ದಿನವಾಗಿದೆ. ಈ ದಿನದಂದು ಶಿವನನ್ನು ಶ್ರದ್ಧಾ-ಭಕ್ತಯಿಂದ ಪೂಜಿಸಿದರೆ, ಕೇಳಿದ್ದೆಲ್ಲವನ್ನು ನೀಡುತ್ತಾನೆ ಎಂಬ ನಂಬಿಕೆಯಿದೆ. 2022ರ ಮಹಾಶಿವರಾತ್ರಿ ಇದೇ ಮಾರ್ಚ್ 1ರಂದು ಆಚರಿಸಲಾಗುತ್ತಿದೆ.

ಶಿವ, ತುಂಬಾ ನಿಷ್ಕಪಟನಾಗಿರುವುದರಿಂದ, ಪರಿಶುದ್ಧ ಮನಸ್ಸಿನಿಂದ ಭಕ್ತರು ಮಾಡುವ ಭಕ್ತಿಯಿಂದ ಮಾತ್ರ ಸಂತೋಷಪಡುತ್ತಾನೆ. ಹಾಗಂತ ಅದು ಸುಲಭದ ಕೆಲಸವಲ್ಲ. ಮಹಾಶಿವರಾತ್ರಿಯಂದು ಶಿವನನ್ನು ಮೆಚ್ಚಿಸಲು, ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು, ಅವುಗಳಲ್ಲಿ ಒಂದು ಬಟ್ಟೆ. ಶಿವರಾತ್ರಿಯಂದು ಅವನನ್ನು ಪೂಜಿಸಲು ಹೋಗುತ್ತಿದ್ದರೆ, ನಿಮ್ಮ ಬಟ್ಟೆಗಳ ಆಯ್ಕೆಗೆ ವಿಶೇಷ ಗಮನ ಕೊಡಿ. ಹಾಗಾದರೆ, ಪೂಜೆಯ ಸಮಯದಲ್ಲಿ ಬಟ್ಟೆಗಳ ಬಣ್ಣ ಮತ್ತು ಶೈಲಿ ಹೇಗಿರಬೇಕು ಎಂಬುದನ್ನು ಇಲ್ಲಿ ನೋಡೋಣ.

ಶಿವರಾತ್ರಿ ಮಹತ್ವ:

ಶಿವರಾತ್ರಿ ಮಹತ್ವ:

ಪುರಾಣಗಳ ಪ್ರಕಾರ, ಈ ದಿನದಂದು ಪಾರ್ವತಿ ದೇವಿಯು ಶಿವನನ್ನು ವಿವಾಹವಾದಳು. ಆದ್ದರಿಂದ ಈ ದಿನದಂದು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವವರಿಗೆ ವೈವಾಹಿಕ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿ ಪತಿ-ಪತ್ನಿಯರು ಮಹಾಶಿವರಾತ್ರಿಯಂದು ಉಪವಾಸ ಮಾಡಬೇಕು. ಹಿಂದೂ ಸಂಪ್ರದಾಯದ ಪ್ರಕಾರ, ಮಹಾಶಿವರಾತ್ರಿಯಂದು ಉಪವಾಸ ಮಾಡುವ ಹುಡುಗಿಯರು ಬಯಸಿದ ಪತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಬಯಸಿದಂತೆ ಮದುವೆ ನಡೆಯಲು ಈ ದಿನ ಉಪವಾಸ ಮಾಡುವುದು ಒಳ್ಳೆಯದು.

ಪೂಜೆಗೆ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬಾರದು?:

ಪೂಜೆಗೆ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬಾರದು?:

ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸುವಾಗ, ಬಟ್ಟೆಯ ಬಣ್ಣದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪೂಜೆಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಏಕೆಂದರೆ ಶಿವನಿಗೆ ಕಪ್ಪು ಬಣ್ಣವನ್ನು ಇಷ್ಟವಾಗುವುದಿಲ್ಲ. ಶಿವ ಕಪ್ಪು ಬಟ್ಟೆಗಳನ್ನು ನೋಡಿ ಕೋಪಗೊಳ್ಳಬಹುದು.

ಶಿವಪೂಜೆಗೆ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು?:

ಶಿವಪೂಜೆಗೆ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು?:

ಭೋಲೇನಾಥನನ್ನು ಪೂಜಿಸುವಾಗ ಹಸಿರು ಬಟ್ಟೆಯನ್ನು ಧರಿಸಬೇಕು. ಶಿವನಿಗೆ ಹಸಿರು ಬಣ್ಣ ತುಂಬಾ ಇಷ್ಟ. ಆದರೆ ನಿಮ್ಮ ಬಳಿ ಹಸಿರು ಬಟ್ಟೆ ಇಲ್ಲದಿದ್ದರೆ, ಕೆಂಪು, ಬಿಳಿ, ಹಳದಿ, ಕೇಸರಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು.

ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು?:

ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು?:

ಪೂಜೆಗೆ ಸ್ನಾನದ ನಂತರ ಹತ್ತಿ ಬಟ್ಟೆಗಳನ್ನು ಧರಿಸಬೇಕು, ಏಕೆಂದರೆ ಹತ್ತಿ ಬಟ್ಟೆಗಳನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಇದು ಆರಾಮದಾಯಕ ಮತ್ತು ಹಗುರವಾಗಿರುತ್ತದೆ.

ಚರ್ಮದ ಬಟ್ಟೆ, ವಸ್ತು ಬೇಡ:

ಚರ್ಮದ ಬಟ್ಟೆ, ವಸ್ತು ಬೇಡ:

ಮಹಾಶಿವರಾತ್ರಿಯಂದು ನೀವು ಯಾವುದೇ ರೀತಿಯ ಬಟ್ಟೆಗಳನ್ನು ಧರಿಸಬಹುದು. ಆದರೆ ಅದರಲ್ಲಿ ಚರ್ಮವನ್ನು ಬಳಸಿಲ್ಲ ಎಂಬುದನ್ನು ನೆನಪಿನಲ್ಲಿಡಿ, ಪುರುಷರು ಪ್ಯಾಂಟ್ ಜೊತೆ ಬೆಲ್ಟ್‌ಗಳನ್ನು ಧರಿಸುತ್ತಾರೆ. ಇದು ತಪ್ಪು, ಮಹಾಶಿವರಾತ್ರಿಯಂದು ಇದನ್ನು ತ್ಯಜಿಸಿ. ಬದಲಾಗಿ ಧೋತಿ ಅಥವಾ ಪೈಜಾಮವನ್ನು ಧರಿಸಬೇಕು.

English summary

Maha Shivratri 2022: What Color Clothes To Wear On This Auspicious Day in Kannada

Here we talking about Maha Shivratri 2022: What Color Clothes To Wear On This Auspicious Day in Kannada, read on
Story first published: Monday, February 28, 2022, 16:06 [IST]
X
Desktop Bottom Promotion