For Quick Alerts
ALLOW NOTIFICATIONS  
For Daily Alerts

Maha Shivaratri 2022: ಮಹಾಶಿವರಾತ್ರಿ ಯಾವಾಗ, ಪೂಜಾ ಸಮಯ, ಪಾರಣ ಸಮಯ ಯಾವಾಗ?

|

ಹಿಂದೂಗಳಿಗೆ ಮಹಾಶಿವರಾತ್ರಿ ತುಂಬಾ ಮಹತ್ವವಾದ ಆಚರಣೆಯಾಗಿದೆ. ಈ ದಿನ ಶಿವನನ್ನು ಜಾಗರಣೆ ಇದ್ದು ಪೂಜಿಸಲಾಗುವುದು. ಯಾರು ಶಿವರಾತ್ರಿಯಂದು ಉಪವಾಸವಿದ್ದು ಶಿವನ ಪೂಜೆ ಮಾಡುತ್ತಾರೋ ಅವರು ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆಯಾಗಿದೆ. ಈ ವರ್ಷ ಮಹಾಶಿವರಾತ್ರಿಯನ್ನು ಯಾವಾಗ ಆಚರಿಸಲಾಗುವುದು, ಪೂಜಾ ಸಮು, ವ್ರತ ಕಥಾ ಮುಂತಾದ ಮಾಹಿತಿ ಇಲ್ಲಿದೆ:

ಮಹಾಶಿವರಾತ್ರಿ ದಿನಾಂಕ ಮತ್ತು ಸಮಯ

ಮಹಾಶಿವರಾತ್ರಿ ದಿನಾಂಕ ಮತ್ತು ಸಮಯ

ಹಿಂದೂಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳು`14ನೇ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುವುದು. ವರ್ಷದಲ್ಲಿ ಒಟ್ಟು 12 ಶಿವರಾತ್ರಿಗಳನ್ನು ಆಚರಿಸಲಾಗುವುದು. ಅವುಗಳಲ್ಲಿ ಮಹಾಶಿವರಾತ್ರಿ ತುಂಬಾ ದೊಡ್ಡ ಆಚರಣೆಯಾಗಿದೆ. ಸಾಮಾನ್ಯವಾಗಿ ಶಿವರಾತ್ರಿ ಫೆಬ್ರವರಿ-ಮಾರ್ಚ್‌ ತಿಂಗಳಿನಲ್ಲಿ ಬರುವುದು. ಈ ವರ್ಷ ಮಾರ್ಚ್‌ನಲ್ಲಿ ಬಂದಿದೆ. ಈ ದಿನ ಶಿವನನ್ನು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ಹೆಚ್ಚಿನ ಫಲ ದೊರೆಯುವುದು.

ಮಹಾಶಿವರಾತ್ರಿ ದಿನಾಕ: ಮಾರ್ಚ್ 1, 2022

ದಿನಾಂಕ: ಮಂಗಳವಾರ

ನಿಶ್ಚಿತಾ ಕಾಲ ಪೂಜಾ ಸಮಯ: ಮಾರ್ಚ್ 2, 2022 ( ಬೆಳಗ್ಗೆ 12:08ರಿಂದ 12:58ಕ್ಕೆ)

ಒಟ್ಟು ಸಮಯ: 50 ನಿಮಿಷ

ಮಹಾಶಿವರಾತ್ರಿ ಪೂಜಾ ಸಮಯ 2022

ಮಹಾಶಿವರಾತ್ರಿ ಪೂಜಾ ಸಮಯ 2022

ಮಹಾಶಿವರಾತ್ರಿ ಪಾರಣ ಸಮಯ: ಬೆಳಗ್ಗೆ 06:45( ಮಾರ್ಚ್ 2 )

ರಾತ್ರಿ ಮೊದಲ ಪ್ರಹರ ಪೂಜಾ ಸಮಯ: ಸಂಜೆ 06:21ರಿಂದ 09:27ರವರೆಗೆ

ರಾತ್ರಿ 2ನೇ ಪ್ರಹರ ಪೂಜಾ ಸಮಯ: ರಾತ್ರಿ 09:27ರಿಂದ 12:33ರವರೆಗೆ

ರಾತ್ರಿ 3ನೇ ಪ್ರಹರ ಪೂಜಾ ಸಮಯ : 12:33ರಿಂದ ಬೆಳಗ್ಗೆ 03:39ರವರೆಗೆ (ಮಾರ್ಚ್ 2)

ರಾತ್ರಿ 4ನೇ ಪ್ರಹರ ಪೂಜಾ ಸಮಯ: ಬೆಳಗ್ಗೆ 03:39ರಿಂದ 06:45ರವರೆಗೆ (ಮಾರ್ಚ್ 2)

ಮಹಾಶಿವರಾತ್ರಿ ಮಹತ್ವ

ಮಹಾಶಿವರಾತ್ರಿ ಮಹತ್ವ

ಮಹಾಶಿವರಾತ್ರಿಯಂದು ಮಹಾದೇವ ಶಿವ ದೇವಿ ಪಾರ್ವತಿಯನ್ನು ವಿವಾಹವಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ಈ ದಿನ ಜಾಗರಣೆ ಇದ್ದು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಬದುಕಿನ ಎಲ್ಲಾ ಕಷ್ಟಗಳು ದೂರಾಗುವುದು. ಈ ದಿನಂದು ಪತಿ-ಪತ್ನಿ ಇಬ್ಬರೂ ಜಾಗರಣೆ ಇದ್ದು ಶಿವನ ಪೂಜಿಸಬೇಕು, ಅವನ ಮಂತ್ರಗಳನ್ನು ಹೇಳಬೇಕು ಆಗ ಶಿವನು ನಿಮ್ಮ ಬೇಡಿಕೆಗಳನ್ನು ಪೂರೈಸುತ್ತಾನೆ. ಜೀವನದಲ್ಲಿ ನೆಮ್ಮದಿ ಇರುವುದು, ಸಂತಾನ ಭಾಗ್ಯ ಉಂಟಾಗುವುದು.

ಮಹಾಶಿವರಾತ್ರಿ ಪೂಜಾವಿಧಿಗಳೇನು?

ಮಹಾಶಿವರಾತ್ರಿ ಪೂಜಾವಿಧಿಗಳೇನು?

* ಈ ದಿನ ಭಕ್ತರು ಮುಂಜಾನೆ ಎದ್ದು ಸ್ನಾನ ಮಾಡಬೇಕು.

* ನಂತರ ಮಡಿ ಬಟ್ಟೆ ಧರಿಸಬೇಕು

* ನಂತರ ಪಕ್ಕದ ಶಿವನ ದೇವಾಲಯಕ್ಕೆ ಹೋಗಿ.

* ಅದಾದ ಬಳಿಕ ಸಂಕಲ್ಪ ಕೈಗೊಳ್ಳಬೇಕು (ನೀವು ಏನು ಮನಸ್ಸಿನಲ್ಲಿ ಬೇಡಿಕೊಳ್ಳುತ್ತೀರೋ ಅದುವೇ ಸಂಕಲ್ಪ)

* ಶಿವನಿಗೆ ಬಿಲ್ವೆ ಪತ್ರೆ ಹಾಗೂ ಹೂಗಳನ್ನು ಅರ್ಪಿಸಿ.

* ನಂತರ ಶಿವನಿಗೆ ಆರತಿ ಮಾಡಿ.

* ಪಾರಣ ಮುಹೂರ್ತದಲ್ಲಿ ಪಾರಣ ಮಾಡಿ.

ಶಿವರಾತ್ರಿ ಹಾಗೂ ಮಹಾ ಶಿವರಾತ್ರಿ ನಡುವಿನ ವ್ಯತ್ಯಾಸವೇನು?

ಶಿವರಾತ್ರಿ ಹಾಗೂ ಮಹಾ ಶಿವರಾತ್ರಿ ನಡುವಿನ ವ್ಯತ್ಯಾಸವೇನು?

ಶಿವರಾತ್ರು ಹಿಂದೂ ಮಾಸದ 14ನೇ ದಿನಂದು ಪ್ರದೋಷ ವ್ರತವೆಂದು ಆಚರಿಸಲಾಗುವುದು. ವರ್ಷದಲ್ಲಿ 12 ಪ್ರದೋಷ ವ್ರತ ಇರುತ್ತದೆ. ಮಹಾಶಿವರಾತ್ರಿಯನ್ನು ವರ್ಷದಲ್ಲಿ ಒಂದೇ ಬಾರಿ ಆಚರಿಸಲಾಗುವುದು. ಈ ದಿನ ಉಪವಾಸ ಹಾಗೂ ಜಾಗರಣೆ ಇದ್ದು ಶಿವನ ಆರಾಧನೆ ಮಾಡಲಾಗುವುದು.

FAQ's
  • 2022ರಲ್ಲಿ ಮಹಾಶಿವರಾತ್ರಿ ಯಾವಾಗ ಆಚರಿಸಲಾಗುವುದು?

    ಮಾರ್ಚ್ 1ರಂದು ಮಹಾಶಿವರಾತ್ರಿ ಆಚರಿಸಲಾಗುವುದು.

  • ಮಹಾಶಿವರಾತ್ರಿ ವ್ರತ ಮಾಡುವಾಗ ಏನನ್ನು ತಿನ್ನಬಹುದು?

    ತುಂಬಾ ಜನ ನಿರ್ಜಲ ಉಪವಾಸ ಅಂದರೆ ನೀರು ಕೂಡ ಕುಡಿಯದೆ ಉಪವಾಸ ಮಾಡುತ್ತಾರೆ. ಅಷ್ಟೊಂದು ಕಠಿಣ ಉಪವಾಸ ಸಾಧ್ಯವಿಲ್ಲದವರು ಹಾಲು, ಹಣ್ಣುಗಳನ್ನು ಸೇವಿಸಿ ಉಪವಾಸ ಮಾಡುತ್ತಾರೆ.

  • ಶಿವರಾತ್ರಿಯಂದು ಯಾವ ಬಣ್ಣದ ವಸ್ತ್ರಗಳನ್ನು ಧರಿಸಬೇಕು?

    ಈ ದಿನ ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಬೇಕು.

English summary

Maha Shivratri 2022: Date, Shubh Muhurat, Puja Vidhi, Puja Samagri and Importance in Kannada

Maha Shivratri 2022, an auspicious Hindu festival, will be celebrated on March 1, 2022 this year. Know Shubh Muhurat, Paran Timing, Significance, Puja Vidhi ,Puja Samagri, Significance and Importance in Kannada. Read on.
X
Desktop Bottom Promotion