For Quick Alerts
ALLOW NOTIFICATIONS  
For Daily Alerts

ಶಿವನಿಗೆ ಬಿಲ್ವೆ ಪತ್ರೆಗಳನ್ನು ಅರ್ಪಿಸುವುದೇಕೆ? ಇದರ ಮಹತ್ವವೇನು ಗೊತ್ತೇ?

|

ಶಿವಪೂಜೆಯಲ್ಲಿ ಇರಲೇಬೇಕಾದ ಮುಖ್ಯವಾದ ವಸ್ತುವೆಂದರೆ ಬಿಲ್ವೆ ಪತ್ರೆ. ಬಿಲ್ವೆ ಪತ್ರೆಯಿಲ್ಲದೆ ಮಾಡಿದ ಶಿವನ ಪೂಜೆ ಸಂಪೂರ್ಣವಾಗುವುದೇ ಇಲ್ಲ. ಆದ್ದರಿಂದ ಶಿವಪೂಜೆಯಲ್ಲಿ ಬಿಲ್ವೆ ಪತ್ರೆಗೆ ತುಂಬಾನೇ ಮಹತ್ವವಿದೆ. ಅಲ್ಲದೆ ಶಿವಪೂಜೆಯಲ್ಲಿ ಇದನ್ನು ಬಳಸುವುದರ ಹಿಂದೆ ಒಂದು ಅರ್ಥವೂ ಇದೆ.

ಶಿವಪೂಜೆಯಲ್ಲಿ ಬಿಲ್ವೆ ಪತ್ರೆಯನ್ನು ಏಕೆ ಬಳಸಲಾಗುತ್ತಿದೆ? ಬಿಲ್ವೆ ಪತ್ರೆಯನ್ನು ಶಿವ ಪೂಜೆಗೆ ಹೇಗೆ ಆಯ್ಕೆ ಮಾಡಬೇಕು ಎಂಬೆಲ್ಲಾ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ:

ಶಿವ ಪೂಜೆಗೆ ಬಿಲ್ವೆ ಪತ್ರೆ ಆಯ್ಕೆ ಹೇಗೆ?

ಶಿವ ಪೂಜೆಗೆ ಬಿಲ್ವೆ ಪತ್ರೆ ಆಯ್ಕೆ ಹೇಗೆ?

ಶಿವಪೂಜೆಗೆ ಬಿಲ್ವೆ ಪತ್ರೆ ಎಲೆಯನ್ನು ಆಯ್ಕೆ ಮಾಡುವಾಗ ಅದರಲ್ಲಿ ಯಾವುದೇ ಬಿಳಿ-ಬಿಳಿ ಇರಬಾರದು. ಎಲೆಯ ಮೇಲೆ ಕೀಟ ಕುಂತಾಗ ಆ ರೀತಿಯಾಗುವುದು, ಅಂಥ ಎಲೆಗಳನ್ನು ಆಯ್ಕೆ ಮಾಡಬೇಡಿ. ಲ್ಲದೆ 3 ಎಲೆ ಜೊತೆಗಿರುವ ದಂಟನ್ನು ಕಿತ್ತು ಶಿವನಿಗೆ ಅರ್ಪಿಸಬೇಕು, ಅದರಲ್ಲಿ ಒಂದು ಎಲೆ ಬಿದ್ದು ಹೋದರೂ ಅದನ್ನು ಶಿವ ಪೂಜೆಯಲ್ಲಿ ಬಳಸಬಾರದು. ಅಲ್ಲದೆ ಪೂಜೆಗೆ ಬಳಸುವ ಎಲೆ ಹರಿದಿರಬಾರದು.

ಬಿಲ್ವೆ ಪತ್ರೆಯ ಮೂರು ಎಲೆಗಳನ್ನು ಶಿವನಿಗೆ ಅರ್ಪಿಸುವುದು ಏನನ್ನು ಸೂಚಿಸುತ್ತೆ?

ಬಿಲ್ವೆ ಪತ್ರೆಯ ಮೂರು ಎಲೆಗಳನ್ನು ಶಿವನಿಗೆ ಅರ್ಪಿಸುವುದು ಏನನ್ನು ಸೂಚಿಸುತ್ತೆ?

ಬಿಲ್ವೆ ಪತ್ರೆಯ ಮೂರು ಎಲೆಗಳು ತ್ರಿಕಾಲ ಹಾಗೂ ಹಿಂದೂ ದೇವರಗಳಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವನನ್ನು ಸೂಚಿಸುತ್ತೆ. ಅಲ್ಲದೆ ಈ ಎಲೆ ರುದ್ರಮೂರ್ತಿಯಾದ ಶಿವನನ್ನು ಶಾಂತವಾಗಿಸುತ್ತೆ ಎಂದು ಹೇಳಲಾಗುವುದು. ಶಾಂತವಾದ ಶಿವ ನಮ್ಮನ್ನು ಆಶೀರ್ವಾದ ಮಾಡಿ ಹರಿಸುತ್ತಾನೆ, ಇದರಿಂದ ನಮ್ಮ ಕಷ್ಟಗಳು ದೂರಾಗುವುದು, ಸಂಕಲ್ಪ ನೆರವೇರುವುದು ಎಂಬುವುದು ನಂಬಿಕೆ.

ಬಿಲ್ವೆ ಪತ್ರೆ ಮರವನ್ನು ಸೌತೆಯಾಗಿ ಬಳಸುವುದಿಲ್ಲ, ಅದರ ಸೌದೆ ಬಳಸಿದರೆ ಶಿವನ ಕೋಪಕ್ಕೆ ಗುರಿಯಾಗುತ್ತೀರಿ.

3ನೇ ಕಣ್ಣಿನ ಮಹತ್ವ ಸಾರುವ ಬಿಲ್ವೆ ಪತ್ರೆ

3ನೇ ಕಣ್ಣಿನ ಮಹತ್ವ ಸಾರುವ ಬಿಲ್ವೆ ಪತ್ರೆ

ಶಿವನಿಗೆ ಮೂರು ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸುವುದು ಶಿವನ 3ನೇ ಕಣ್ಣಿನ ಮಹತ್ವದ ಬಗ್ಗೆ ಹೇಳುತ್ತೆ.

ಶಿವಣ್ಣನ ಮೂರನೇ ಕಣ್ಣಿನ ಕುರಿತು ಹಲವಾರು ಪೌರಾಣಿಕ ಕತೆಗಳಿವೆ. ದೇವ-ಅಸುರರ ನಡುವೆ ಯುದ್ಧ ನಡೆಯುತ್ತೆ, ಆಗ ತಾರಾಕಸುರ ಎಂಬ ರಾಕ್ಷಸ ವಿಶ್ವವನ್ನೇ ನಾಶ ಮಾಡುವ ಸಾಮರ್ಥ್ಯದ ಆಯುಧ ತಯಾರಿಸುತ್ತಾನೆ. ಆಗ ಶಿವನ 51 ಶಕ್ತಿ ಪೀಠ ಸ್ಥಾಪಿಸಿ ಭೂಲೋಕ ಹಾಗೂ ದೇವಲೋಕವನ್ನು ರಕ್ಷಿಸಲು ಮುಂದಾಗುತ್ತಾನೆ. ಶಿವನು ಆ ಮಾರಕ ಆಯುಧವನ್ನು ತನ್ನ ದೇಹದೊಳಗೆ ಹೀರಿಕೊಳ್ಳುತ್ತಾನೆ, ಅದುವೇ ಶಿವನ ಮೂರನೇ ಕಣ್ಣು ಎಂದು ಹೇಳಲಾಗುವುದು. ಆದ್ದರಿಂದ ಶಿವ 3ನೇ ಕಣ್ಣು ಬಿಟ್ಟರೆ ಇಡೀ ಭಸ್ಮವಾಗುತ್ತೆ ಎಂದು ಹೇಳಲಾಗುವುದು. ಶಿವನ ಮೂರನೇ ಕಣ್ಣು ಜ್ಞಾನ ಹಾಗೂ ಶಕ್ತಿಯ ಸಂಕೇತವಾಗಿದೆ.

ಬಿಲ್ವೆ ಪತ್ರೆ ಎಲೆಗಳು 3 ಗುಣಗಳನ್ನು ಸೂಚಿಸುತ್ತೆ

ಬಿಲ್ವೆ ಪತ್ರೆ ಎಲೆಗಳು 3 ಗುಣಗಳನ್ನು ಸೂಚಿಸುತ್ತೆ

ಶಿವನಿಗೆ 3 ಎಲೆಗಳಿರುವ ದಂಟನ್ನು ಅರ್ಪಿಸಲಾಗುವುದು. ಈ ಮೂರು ಎಲೆಗಳು ಮನುಷ್ಯರಲ್ಲಿರುವ ತಾಮಸ (ದೇಹ), ರಜಸ(ಭಾವನೆ) ಸಾತ್ವಿಕ (ಬುದ್ಧಿ) ಇವುಗಳನ್ನು ಸೂಚಿಸುತ್ತೆ. ಯಾರು ಈ ಮೂರನ್ನು ಸರಿಯಾಗಿ ಬಳಸುತ್ತಾರೋ ಅವರು ಮೋಕ್ಷ ಪಡೆಯುತ್ತಾರೆ ಎಂದು ಹೇಳಲಾಗುವುದು.

 ಬಿಲ್ವೆ ಪತ್ರೆ ಎಲೆಗಳನ್ನು ಶಿವನಿಗೆ ಯಾವ ರೀತಿ ಅರ್ಪಿಸಬೇಕು?

ಬಿಲ್ವೆ ಪತ್ರೆ ಎಲೆಗಳನ್ನು ಶಿವನಿಗೆ ಯಾವ ರೀತಿ ಅರ್ಪಿಸಬೇಕು?

ಬಿಲ್ವೆ ಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸುವಾದ ಅದರ ತೊಟ್ಟು ನಮ್ಮ ಕಡೆಗೆ ಇರುವಂತೆ ಇಡಬೇಕು. ಆಗ ಮುರು ಎಲೆಗಳ ತುದಿಯಿಂದ ಶಿವತತ್ತ್ವ ಆ ಪರಿಸರದಲ್ಲಿ ಹರಡಿ ಆ ಸ್ಥಳದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.

ಬಿಲ್ವೆ ಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸುವಾಗ ಹೇಳಬೇಕಾದ ಮಂತ್ರಗಳು

ಬಿಲ್ವೆ ಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸುವಾಗ ಹೇಳಬೇಕಾದ ಮಂತ್ರಗಳು

ಮೂಲತೋಭವರೂಪಾಯ ಮಧ್ಯತೋ

ಮೃದುರೂಪಿಣಿ

ಅಗ್ರತಃ ಶಿವರೂಪಾಯ

ಪತ್ರ್ನೆವೇರ್ದಸ್ವರೂಪಿಣಿ

ಸ್ಕಂದೇ ವೇದಾಂತರೂಪೆಯ ತರುರಾಜಯಃ ತೆ ನಮಃ

ಸರ್ವಕಾಮಪ್ರದಾಮ್ ಬಿಲ್ವಮ್ ದಾರಿದ್‌ರ್ಯ

ಪ್ರಣಾಶನಂ ಬಿಲ್ವಾತ್ಪಾತ್ರಂ ನಾಸ್ಪಿ ಯೇನ ತುಷ್ಯತಿ ಶಂಕರ

ಬಿಲ್ವ ಮರ ಶಿವನ ಬಾವ ರೂಪ. ಅದರ ಮೂರು ಎಲೆಗಳು ಮೂರು ವೇದಗಳು, ಕೊಂಬೆಗಳು ಉಪನಿಷತ್ತುಗಳು, ಬಿಲ್ವ ಪತ್ರೆ ಮರ ಮರಗಳ ರಾಜ, ಈ ಮರವನ್ನು ಭಕ್ತಿಯಿಂದ ಪೂಜಿಸಿದರೆ ಬಡತನ ದೂರವಾಗುವುದು, ಶಿವನಿಗೆ ಈ ಮರದ ಎಲೆಗಳನ್ನು ಅರ್ಪಿಸಿದರೆ ತುಂಬಾ ಖುಷಿಯಾಗುವುದು ಎಂಬುವುದು ಈ ಶ್ಲೋಕದ ಅರ್ಥವಾಗಿದೆ.

ಬಿಲ್ವೆ ಪತ್ರೆ ಮರದಲ್ಲಿದೆ ಔಷಧೀಯ ಗುಣ

ಬಿಲ್ವೆ ಪತ್ರೆ ಮರದಲ್ಲಿದೆ ಔಷಧೀಯ ಗುಣ

ಬಿಲ್ವೆ ಪತ್ರೆ ಮರದ ಬೇರು, ಹಣ್ಣುಗಳು ಹಾಗೂ ಎಲೆಗಳಲ್ಲಿ ಅನೇಕ ಔಷಧೀಯ ಗುಣಗಳಿದ್ದು ಇದನ್ನು ಆಯುರ್ವೇದದಲ್ಲಿ ಬಳಸಲಾಗುವುದು. ಬೇಧಿ ತಡೆಗಟ್ಟಲು, ಮಲಬದ್ಧತೆ ಹೋಗಲಾಡಿಸಲು, ಅಲ್ಸರ್, ಉಸಿರಾಟದ ತೊಂದರೆ ಮುಂತಾದ ಸೋಂಕು ತಡೆಗಟ್ಟಲು, ಮಧುಮೇಹ , ಉರಿಯೂತ, ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ ಹೀಗೆ ಮುಂತಾದ ಕಾಯಿಲೆ ತಡೆಗಟ್ಟಲು ಹಾಗೂ ಗುಣಪಡಿಸಲು ಈ ಮರವನ್ನು ಬಳಸಲಾಗುವುದು.

ಬಿಲ್ವೆ ಪತ್ರೆ ಗಿಡವನ್ನು ಮನೆಯ ಬಳಿ ನೆಡಬಹುದೇ?

ಬಿಲ್ವೆ ಪತ್ರೆ ಗಿಡವನ್ನು ಮನೆಯ ಸಮೀಪ ಅಥವಾ ತೋಟದಲ್ಲಿ ನೆಡಬಾರದು, ಇದರ ನೆರಳು ಮನೆ ಮೇಲೆ ಬಿದ್ದರೆ ಒಳ್ಳೆಯದಲ್ಲ ಎಂದು ಹೇಳಲಾಗುವುದು. ಈ ಗಿಡವನ್ನು ದೇವಾಸ್ಥಾನದ ಆವರಣದಲ್ಲಿ ಅಥವಾ ರಸ್ತೆಯಲ್ಲಿ ಬೆಳೆಸಲಾಗುವುದು.

ಬಿಲ್ವೆ ಪತ್ರೆ ಮನೆಯ ಬಳಿ ಏಕೆ ನೆಡಬಾರದು ಎಂಬುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಇದು ರಾತ್ರಿ ಹೊತ್ತಿನಲ್ಲಿ ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಮಾಡುವುದು, ಇದರ ಸೇವನೆ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಇದನ್ನು ಮನೆ ಪಕ್ಕ ನೆಡುವುದು ಅಥವಾ ಈ ಮರದ ಕೆಳಗಡೆ ಮಲಗಬಾರದು ಎಂದು ಹೇಳಲಾಗುವುದು.

English summary

Maha Shivaratri 2022: Why Do We Offer BILVA PATRA to lord Shiva in Kannada

Maha Shivaratri: Why Do We Offer BILVA PATRA to lord Shiva in Kannada, read on...
X
Desktop Bottom Promotion