For Quick Alerts
ALLOW NOTIFICATIONS  
For Daily Alerts

ಮಹಾ ಸಪ್ತಮಿ 2021: ದಿನಾಂಕ, ಪೂಜಾ ಮುಹೂರ್ತ, ಮಹತ್ವ

|

ಅಕ್ಟೋಬರ್ 12ರಂದು ಮಹಾಸಪ್ತಮಿ ಆಚರಿಸಲಾಗುತ್ತಿದೆ, ಬೆಂಗಾಳಿಗಳಿಗೆ ಇದು ಮಹತ್ವದ ಆಚರಣೆ, ದೇಶದೆಲ್ಲಡೆ ಮಹಾ ಸಪ್ತಮಿ ಆಚರಿಸಲಾಗುವುದು. ದುರ್ಗಾ ಪೂಜೆಯ 2ನೇ ದಿನ ಮಹಾ ಸಪ್ತಮಿ, ಈ ದಿನ ದುರ್ಗಾ ದೇವಿಗೆ ಮಹಾ ಪೂಜೆ ಮಾಡಲಾಗುವುದು.

Maha Saptami 2021 Date, Puja Vidhi, Timing, Story And Significance in Kannada

ಮಹಾ ಸಪ್ತಮಿ ಕುರಿತು ಹೆಚ್ಚಿನ ವಿಷಯಗಳನ್ನು ಈ ಲೇಖನದ ಮೂಲಕ ಅರಿತುಕೊಳ್ಳೋಣ:

ಮಹಾ ಸಪ್ತಮಿ 2021
ಮಹಾ ಸಪ್ತಮಿ ಅಕ್ಟೋಬರ್ 12ರಂದು ಆಚರಿಸಲಾಗುತ್ತಿದೆ.
ಮಹಾ ಸಪ್ತಮಿ ತಿಥಿ ಅಕ್ಟೋಬರ್ 11 ರಾತ್ರಿ 11:5ಕ್ಕೆ ಪ್ರಾರಂಭವಾಗಿದೆ.
ಅಕ್ಟೋಬರ್‌ 12, ರಾತ್ರಿ 09:47ಕ್ಕೆ ಸಪ್ತಮಿ ತಿಥಿ ಮುಕ್ತಾಯ

ಮಹಾ ಸಪ್ತಮಿಯಂದು ಮಹಾ ಸ್ನಾನ

ಸಪ್ತಮಿಯ ದಿನವನ್ನು ಮಹಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಮಹಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಸಪ್ತಮಿಯ ದಿನ ದುರ್ಗಾದೇವಿಯ ವಿಗ್ರಹದ ಮುಂದೆ ಕನ್ನಡಿಯನ್ನು ಇರಿಸುವ ಮೂಲಕ, ಅದರ ಮೇಲೆ ಬೀಳುವ ದುರ್ಗಾದೇವಿಯ ಚಿತ್ರಕ್ಕೆ ಸ್ನಾನ ಮಾಡಲಾಗುತ್ತದೆ ಮತ್ತು ಇದನ್ನು ಮಹಾಸ್ನಾನ ಎಂದು ಕರೆಯಲಾಗುತ್ತದೆ.

ಮಹಾಸಪ್ತಮಿಯ ದಿನ ನವಪತ್ರಿಕೆಯನ್ನು ಪೂಜಿಸಲಾಗುತ್ತದೆ ಅಂದರೆ ಒಂಬತ್ತು ಗಿಡಗಳ ಪವಿತ್ರ ಸ್ನಾನದಿಂದ ದಿನ ಆರಂಭವಾಗುತ್ತದೆ. ಈ ಒಂಬತ್ತು ಸಸ್ಯಗಳನ್ನು ನದಿಗೆ ಅಥವಾ ಕೊಳಕ್ಕೆ ತೆಗೆದುಕೊಂಡು ಹೋಗಿ ಮುಳಗಿಸಿ ಅದಕ್ಕೆ ಕೆಂಪು ಅಥವಾ ಕೇಸರಿ ಬಟ್ಟೆ ಸುತ್ತಿ ದೇವಿಯ ಬಲ ಭಾಗದಲ್ಲಿ ಇಡಲಾಗುವುದು. ಗಿಡಗಳ ಬದಲು ಒಂಬತ್ತು ವಿಧದ ಎಲೆಗಳನ್ನು ಕೂಡ ಬಳಸಬಹುದು.

ಈ ಎಲೆಗಳನ್ನು ಹಳದಿ ದಾರದಿಂದ ಬಿಳಿ ಅಪರಾಜಿತಾ ಗಿಡಗಳ ರೆಂಬೆಗಳಿಗೆ ಕಟ್ಟಲಾಗುತ್ತದೆ. ಮಾ ದುರ್ಗಾದ ಒಂಬತ್ತು ರೂಪಗಳನ್ನು ಈ ಎಲೆಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರತಿನಿಧಿಸಲಾಗುತ್ತದೆ. ಇವು ಒಂಬತ್ತು ಸಸ್ಯಗಳು ದೇವಿಯ ಅವತಾರಗಳ ಪ್ರತೀಕವಾಗಿದೆ.

ಯಾವ ಎಲೆಗಳನ್ನು ಬಳಸಲಾಗುವುದು

ಬಿಲ್ವೆ ಪತ್ರೆ- ಶಿವ
ಅಶೋಕ ಎಲೆಗಳು - ದೇವಿ ಶೋಕ
ಭತ್ತ - ಲಕ್ಷ್ಮಿ ದೇವತೆ
ಬಾಳೆ ಗಿಡ - ದೇವತೆ ಬ್ರಹ್ಮಣಿ
ಸೀತಾ ಅಶೋಕ ಗಿಡ (Arum Lily) - ಚಾಮುಂಡಾದೇವಿ
ಅರಿಶಿನ ಸಸ್ಯ - ದುರ್ಗಾದೇವಿ
ದಾಳಿಂಬೆ ಎಲೆಗಳು - ರಕ್ತದಂತಿಕ ದೇವತೆ
ಜಯಂತಿ ಸಸ್ಯ - ಕಾರ್ತಿಕೀ ದೇವತೆ
ಕೆಸದ ಎಲೆ - ದೇವತೆ ಕಾಳಿಕಾ

English summary

Maha Saptami 2021 Date, Puja Vidhi, Timing, Story And Significance in Kannada

Maha Saptami 2021 Date: Know Date, Puja Vidhi, Shubh Muhurat, Story and Significance of Day 2 of Durga Puja. Read on.
Story first published: Tuesday, October 12, 2021, 11:03 [IST]
X
Desktop Bottom Promotion