For Quick Alerts
ALLOW NOTIFICATIONS  
For Daily Alerts

ನೀವು ತಿಳಿದಿರಲೇಬೇಕಾದ ಕೃಷ್ಣ ಪರಮಾತ್ಮನ ಒಲಿಸಿಕೊಳ್ಳಲು ಕೆಲವು ಮಂತ್ರಗಳು

|

ಕೃಷ್ಣನೆಂದರೆ ಕೇವಲ ದೇವರು ಮಾತ್ರವಲ್ಲ, ಆತನೊಬ್ಬ ಸ್ನೇಹಿತ, ಬಂಧು ಹೀಗೆ ಯಾವ ರೂಪದಲ್ಲಿ ಬೇಕಾದರೂ ನೀವು ಕೃಷ್ಣನನ್ನು ಕಾಣಬಹುದು. ಕೃಷ್ಣ ಪರಮಾತ್ಮನ ಮಹಿಮೆಯೇ ಹಾಗೆ. ವಿಷ್ಣುವಿನ ಅವತಾರವಾಗಿರುವ ಕೃಷ್ಣ ಹೆಚ್ಚು ಜನಪ್ರಿಯ. ಹಿಂದೂಗಳು ತಮ್ಮ ಧರ್ಮಗ್ರಂಥ ಎಂದು ಪರಿಗಣಿಸಿರುವ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ಧರ್ಮಕ್ಕಾಗಿ ಏನು ಮಾಡಬೇಕು, ಧರ್ಮ ಮಾರ್ಗದಲ್ಲಿ ನಡೆಯುವುದು ಹೇಗೆ ಮತ್ತು ಧರ್ಮವನ್ನು ರಕ್ಷಿಸುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇದನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ಜೀವನದಲ್ಲಿ ಮುಕ್ತಿ ಸಿಗುವುದು. ಕೃಷ್ಣನ ಭಕ್ತರು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬೇರೆ ಧರ್ಮದಲ್ಲೂ ಇದ್ದಾರೆ.

ದ್ವಾಪರ ಯುಗದಲ್ಲಿ ಹುಟ್ಟಿರುವ ಕೃಷ್ಣ ಪರಮಾತ್ಮನು ತನ್ನನ್ನು ನಿಜವಾಗಿಯೂ ಪ್ರೀತಿಸುವ ಭಕ್ತರಿಗೆ ಒಲಿಯುವನು. ಕೃಷ್ಣನು ತನ್ನ ಭಕ್ತರಿಗೆ ತುಂಬಾ ಸಂಕಷ್ಟದ ಸಮಯದಲ್ಲಿ ನೆರವಾಗುವನು. ಸಾಮಾನ್ಯ ಮನುಷ್ಯನಂತೆ ಬಂದು ನಿಮ್ಮ ಜತೆಗೆ ಇರುವನು. ತನ್ನ ಕಿರು ಬೆರಳಿನಿಂದ ಗೋವರ್ಧನ ಪರ್ವತ ಎತ್ತಿರುವುದು ಮತ್ತು ದ್ರೌಪದಿಯ ಮಾನಹರಣವನ್ನು ರಕ್ಷಿಸುವುದು ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ. ಇಂದು ಕೂಡ ಕೃಷ್ಣ ಪರಮಾತ್ಮನು ಜೀವಂತವಾಗಿದ್ದಾರೆ ಎಂದು ಹೇಳಲಾಗುತ್ತದೆ....

ಪ್ರತೀ ಮಂತ್ರವನ್ನು 108 ಸಲ ಪಠಿಸಬೇಕು

ಪ್ರತೀ ಮಂತ್ರವನ್ನು 108 ಸಲ ಪಠಿಸಬೇಕು

ಭಕ್ತರು ಕೃಷ್ಣ ಪರಮಾತ್ಮನಿಗೆ ತಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಮತ್ತು ಅವರ ಸಂಕಷ್ಟದಲ್ಲಿ ಕೈ ಹಿಡಿಯುವುದು ಕೃಷ್ಣ ಪರಮಾತ್ಮನ ಮಹಿಮೆಯಾಗಿದೆ. ಕೃಷ್ಣ ಪರಮಾತ್ಮನನ್ನು ಯಾವ ರೀತಿ ಒಲಿಸಿಕೊಳ್ಳಬಹುದು ಎನ್ನುವುದಕ್ಕೆ ಕೆಲವೊಂದು ಮಂತ್ರಗಳನ್ನು ಇಲ್ಲಿ ನಿಮಗೆ ನೀಡಲಾಗಿದೆ. ಬ್ರಹ್ಮ ಮೂಹೂರ್ತ ವಾಗಿರುವಂತಹ ಮುಂಜಾನೆಯ 4 ಗಂಟೆಯಿಂದ 6 ಗಂಟೆಯ ತನಕ ಸ್ನಾನ ಮಾಡಿದ ಬಳಿಕ ಕೃಷ್ಣ ಪರಮಾತ್ಮನ ಮೂರ್ತಿಯ ಮುಂದೆ ನಿಂತು ಮಂತ್ರವನ್ನು ಪಠಿಸಬೇಕು. ಪ್ರತೀ ಮಂತ್ರವನ್ನು 108 ಸಲ ಪಠಿಸಬೇಕು ಅಥವಾ ಅದರ ಎರಡು ಪಟ್ಟು ಹೆಚ್ಚು.

ಓಂ ದೇವಕಿ ನಂದಾಯ ವಿದ್ಮಯೇ ವಾಸುದೇವಾಯ ಧಿಮಹಿ ತನ್ನೋ ಕೃಷ್ಣ ಪ್ರಚೋದಯಾತ್

ಓಂ ದೇವಕಿ ನಂದಾಯ ವಿದ್ಮಯೇ ವಾಸುದೇವಾಯ ಧಿಮಹಿ ತನ್ನೋ ಕೃಷ್ಣ ಪ್ರಚೋದಯಾತ್

ಈ ಮಂತ್ರದ ಅರ್ಥವೆಂದರೆ ದೇವಕಿ ಪುತ್ರ, ಎಲ್ಲರಿಗೂ ತಿಳಿದಿರುವಾತ, ಅಂಧಕಾರದಿಂದ ನಮ್ಮನ್ನು ಬೆಳಕಿನ ಸ್ವಾತಂತ್ರ್ಯದೆಡೆಗೆ ಮುನ್ನಡೆಸು. ಕೃಷ್ಣ ಪರಮಾತ್ಮನಲ್ಲಿ ನಾವು ಪ್ರಾರ್ಥಿಸುವುದು ಏನೆಂದರೆ ನಮ್ಮ ಕ್ರಮಗಳಲ್ಲಿ ಪ್ರತಿ ಫಲಿಸುವಂತಹ ಜಾಣ್ಮೆಯನ್ನು ಕರುಣಿಸು. ಅಂತಹ ಅದ್ಭುತ ಶಕ್ತಿ ನೀಡು. ಈ ಮಂತ್ರವನ್ನು ಪಠಿಸಿದರೆ ಆಗ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ದೂರವಾಗುವುದು.

Most Read:ಜನವರಿ 2019: ಈ ತಿಂಗಳ ಹುಣ್ಣಿಮೆಯಿಂದ 5 ರಾಶಿಚಕ್ರಗಳ ಮೇಲೆ ಆಗುವ ಪರಿಣಾಮಗಳು

ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ…

ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ…

ಇದರ ಅರ್ಥವೆಂದರೆ ಕೃಷ್ಣ ಪರಮಾತ್ಮನು ತಮ್ಮ ಭಕ್ತರ ಜೀವನದಲ್ಲಿ ಇರುವಂತಹ ಎಲ್ಲಾ ನೋವನ್ನು ನಿವಾರಣೆ ಮಾಡುವರು. ಅದೇ ರೀತಿಯಲ್ಲಿ ರಾಮ ದೇವರು ಕೂಡ ಭಕ್ತರ ಜೀವನದಲ್ಲಿ ಇರುವಂತಹ ಎಲ್ಲಾ ನೋವು ಹಾಗೂ ಸಂಕಷ್ಟಗಳನ್ನು ದೂರ ಮಾಡುವರು. ಇದು ದೈವಿಕವಾಗಿ ಹೊಗಲುವಿಕೆಯ ಮಂತ್ರವಾಗಿದೆ. ಈ ಮಂತ್ರವು ತುಂಬಾ ಜನಪ್ರಿಯವಾಗಿರುವಂತಹ ಮಂತ್ರವಾಗಿದೆ ಮತ್ತು ಕಾಳಿ ಸಂತಾನಣ್ ಉಪನಿಷತ್ ನಲ್ಲಿ ಇದು ಮೊದಲಿಗೆ ಕಾಣಿಸಿಕೊಂಡಿದೆ. ಕೃಷ್ಣ ದೇವರ ಹೆಚ್ಚಿನ ಮಂದಿರಗಳಲ್ಲಿ ಇದನ್ನು ಪಠಿಸಲಾಗುತ್ತದೆ. ಈ ಮಂತ್ರದಿಂದ ಕೃಷ್ಣ ಪರಮಾತ್ಮನೊಂದಿಗೆ ಭಕ್ತರಿಗೆ ಆಧ್ಯಾತ್ಮಿಕವಾಗಿ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

ಜಯ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಅದ್ವೈತ ಗದಧರ್ ಶ್ರೀವಾಸದಿ ಗೌರ್ ಭಕ್ತ ವೃಂದಾ

ಜಯ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಅದ್ವೈತ ಗದಧರ್ ಶ್ರೀವಾಸದಿ ಗೌರ್ ಭಕ್ತ ವೃಂದಾ

ಇದೆಲ್ಲವೂ ಶ್ರೀ ಕೃಷ್ಣ ಪರಮಾತ್ಮನ ಶ್ರೇಷ್ಠ ಭಕ್ತರ ಹೆಸರುಗಳಾಗಿವೆ. ಈ ಹೆಸರುಗಳನ್ನು ಪಠಿಸುವ ಕಾರಣದಿಂದ ಆ ಭಕ್ತರು ಅವರೆಲ್ಲರನ್ನು ಆಹ್ವಾನಿಸುವರು ಮತ್ತು ಈ ಮಂತ್ರದಿಂದಾಗಿ ಅವರೆಲ್ಲರ ಆಶೀರ್ವಾದವನ್ನು ಪಡೆದುಕೊಳ್ಳುವರು.

ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ ನಾರಾಯಣ ವಾಸುದೇವ

ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ ನಾರಾಯಣ ವಾಸುದೇವ

ಈ ಮಂತ್ರದಲ್ಲಿ ಕೃಷ್ಣ ಪರಮಾತ್ಮನ ಹಲವು ಹೆಸರುಗಳಿವೆ. ಇದರ ಉದ್ದೇಶವೆಂದರೆ ಅವರನ್ನು ಆಹ್ವಾನಿಸುವ ಮೂಲಕ ಅವರಿಂದ ಆಶೀರ್ವಾದ ಪಡೆಯುವುದು. ಶ್ರೀ ಕೃಷ್ಣ, ಗೋವಿಂದ, ಮುರಾರಿ, ನಾಥ, ನಾರಾಯಣ, ವಾಸುದೇವ ಎನ್ನುವುದು ಶ್ರೀ ಕೃಷ್ಣ ಪರಮಾತ್ಮನ ಜನಪ್ರಿಯ ಹೆಸರುಗಳಾಗಿವೆ.

ಓಂ ಕ್ಲೀಂ ಕೃಷ್ಣಾಯ ನಮಃ

ಓಂ ಕ್ಲೀಂ ಕೃಷ್ಣಾಯ ನಮಃ

ಈ ಮಂತ್ರವು ತುಂಬಾ ಪ್ರಭಾವಶಾಲಿಯಾಗಿದೆ. ಆದರೆ ಈ ಮಂತ್ರವನ್ನು ಪಠಿಸುವ ವೇಳೆ ಕೆಲವೊಂದು ಇತರ ನಿಯಮಗಳನ್ನು ಕೂಡ ಪಾಲಿಸಿಕೊಂಡು ಹೋಗಬೇಕು. ಭಕ್ತನು ಶ್ರೀಕೃಷ್ಣ ಪರಮಾತ್ಮನಿಗೆ ನಮಿಸುವನು.

Most Read:ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೃಶ್ಯಗಳು!!

ಓಂ ಶ್ರೀ ಕೃಷ್ಣಂ ಶರಣಂ ಮಮ್

ಓಂ ಶ್ರೀ ಕೃಷ್ಣಂ ಶರಣಂ ಮಮ್

ಈ ಮಂತ್ರದಲ್ಲಿ ಭಕ್ತನು ಹೇಳುವುದು ಏನೆಂದರೆ, ಓ ಪ್ರೀತಿಯ ಕೃಷ್ಣ ಪರಮಾತ್ಮ, ನಾನು ನಿನ್ನ ಪವಿತ್ರ ಪಾದದಲ್ಲಿ ನೆಲೆಸಲು ಬಯಸಿದ್ದೇನೆ. ಈ ಮಂತ್ರದಲ್ಲಿ ಭಕ್ತನು ಕೃಷ್ಣ ಪರಮಾತ್ಮನ ಬಗ್ಗೆ ತನಗೆ ಇರುವಂತಹ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ ಮತ್ತು ಕೃಷ್ಣ ಪರಮಾತ್ಮನ ಪಾದದಲ್ಲಿ ನೆಲೆಸಲು ಬಯಸುವನು. ಕೃಷ್ಣ ಪರಮಾತ್ಮನ ಹೃದಯದಲ್ಲಿ ಸ್ಥಾನ ನೀಡು ಎನ್ನುವುದು ಈ ಮಂತ್ರದ ಉದ್ದೇಶವಾಗಿದೆ.

 ಓಂ ಕೃಷ್ಣಾಯ ನಮಃ

ಓಂ ಕೃಷ್ಣಾಯ ನಮಃ

ಇದು ಕೃಷ್ಣ ಪರಮಾತ್ಮನ ಅತ್ಯಂತ ಜನಪ್ರಿಯ ಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರದಲ್ಲಿ ಭಕ್ತನು ತನ್ನ ವಂದನೆಗಳನ್ನು ಸ್ವೀಕರಿಸುವಂತೆ ಕೃಷ್ಣ ಪರಮಾತ್ಮನಲ್ಲಿ ಕೇಳಿಕೊಳ್ಳುವನು. ನಾನು ಕೃಷ್ಣ ಪರಮಾತ್ಮನಿಗೆ ನಮಸ್ಕಾರ ಸಲ್ಲಿಸುತ್ತೇನೆ ಎಂದು ಭಕ್ತನು ಹೇಳುತ್ತಾನೆ. ಈ ಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಸುಲಭ ಮತ್ತು ಇದನ್ನು ಪ್ರತಿನಿತ್ಯವ ಪಠಿಸಬಹುದು.

English summary

Lord Krishna Mantras You Must Know

Lord Krishna's devotees include not only the people from the Hindu tradition but those from other religions as well as regions. Born in the Dwapar Yuga, not everybody knew that he was the incarnation of Lord Vishnu. While some could see it through their true love for the almighty, others only came to know about it when he helped them at times of need, that he was not an ordinary human being.
X
Desktop Bottom Promotion