For Quick Alerts
ALLOW NOTIFICATIONS  
For Daily Alerts

ಭಗವಾನ್ ಬುದ್ಧ ಮತ್ತು ಚಿಕ್ಕ ಹುಡುಗಿಯ ನಡುವಿನ ಇಂಟರೆಸ್ಟಿಂಗ್ ಸ್ಟೋರಿ

|

ಭಕ್ತಿ ಮತ್ತು ಗೌರವ ಎನ್ನುವ ವಿಚಾರಕ್ಕೆ ಹಾಗೂ ಶಬ್ದಗಳಿಗೆ ಹಿಂದೂ ಧರ್ಮದಲ್ಲಿ ಮಹತ್ತರವಾದ ಸ್ಥಾನವಿದೆ. ತನ್ನ ವಯಸ್ಸಿಗಿಂತ ಹಿರಿಯ ವ್ಯಕ್ತಿಗಳಿಗೆ, ವೃದ್ಧರಿಗೆ, ಪಾಲಕರಿಗೆ, ಗುರು ಹಿರಿಯರಿಗೆ ಹಾಗೂ ಸಹಪಾಠಿಗಳಿಗೆ ಸೂಕ್ತ ಗೌರವ ಮತ್ತು ಮಾನ್ಯತೆಯನ್ನು ನೀಡಬೇಕು. ಯಾವಾಗ ದೇವರಲ್ಲಿ ಭಕ್ತಿ ಭಾವ ಹೆಚ್ಚಾಗಿರುತ್ತದೆಯೋ ಆಗ ವ್ಯಕ್ತಿ ತಾನಾಗಿಯೇ ತನ್ನ ಸುತ್ತಲಿನ ಪರಿಸರ ಹಾಗೂ ವ್ಯಕ್ತಿಗಳಿಗೆ ಮಾನ್ಯತೆ ಮತ್ತು ಗೌರವ ನೀಡುತ್ತಾನೆ. ಅಗೋಚರವಾಗಿರುವ ಭಗವಂತನ ದಿವ್ಯ ಶಕ್ತಿಯು ವ್ಯಕ್ತಿಯ ಜೀವನದಲ್ಲಿ ಬೆಳಕು ಹಾಗೂ ಮಾರ್ಗದರ್ಶನವನ್ನು ನೀಡುವುದು. ಜೊತೆಗೆ ಬದುಕಿನುದ್ದಕ್ಕೂ ಸುಖ-ದುಃಖಗಳನ್ನು ನೀಡುತ್ತಾ ಸಮತೋಲನದ ಜೀವನ ನಡೆಸಲು ಅನುವು ಮಾಡಿಕೊಡುತ್ತಾನೆ.

ನಮ್ಮ ಸಮಾಜದಲ್ಲಿ ವ್ಯಕ್ತಿ ಸನ್ನಡತೆಯಿಂದ ನಡೆಯಲು ಹಾಗೂ ಜೀವನದಲ್ಲಿ ಸದ್ಗತಿಯನ್ನು ಪಡೆದುಕೊಳ್ಳಲು ಅನೇಕ ಧರ್ಮಗಳು ಹಾಗೂ ಆಚರಣೆಗಳು ಇವೆ. ಹಲವಾರು ಧರ್ಮಗಳು, ಧರ್ಮ ನಾಯಕರು ಇದ್ದರೂ ಸಹ ಎಲ್ಲ ಧರ್ಮದ ಸಾರವು ಒಂದೇ ಅರ್ಥವನ್ನು ನೀಡುತ್ತದೆ. ಭಕ್ತಿ ಭಾವವು ವ್ಯಕ್ತಿಗೆ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ತಂದುಕೊಡುತ್ತದೆ. ಧನಾತ್ಮಕ ಬದಲಾವಣೆಯು ವ್ಯಕ್ತಿಯನ್ನು ಸದ್ಗತಿಯ ಹಾದಿಯಲ್ಲಿ ನಡೆಯುತ್ತಾನೆ. ಸಮಾಜದ ಸುಧಾರಣೆ ಹಾಗೂ ವ್ಯಕ್ತಿಗೆ ಜೀವನೋದ್ಧಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಿಡುವ ಧರ್ಮಗಳಲ್ಲಿ ಬೌದ್ಧ ಧರ್ಮವೂ ಒಂದು.

ರಾಜ ವೈಭವವನ್ನು ತೊರೆದು, ಆಳವಾದ ಧ್ಯಾನದಲ್ಲಿ ಮಗ್ನನಾದನು

ರಾಜ ವೈಭವವನ್ನು ತೊರೆದು, ಆಳವಾದ ಧ್ಯಾನದಲ್ಲಿ ಮಗ್ನನಾದನು

ಸಮಾಜದಲ್ಲಿ ಕೆಲವು ವರ್ಗದವರು ತುಳಿತಕ್ಕೆ ಒಳಗಾಗುತ್ತಿದ್ದರು. ಜೊತೆಗೆ ಅನುಚಿತವಾದ ಮೇಲ್ವರ್ಗದವರ ವರ್ತನೆ ಹಾಗೂ ಆಚಾರ-ವಿಚಾರಗಳು ಕೆಳವರ್ಗದವರನ್ನು ತುಳಿಯುತ್ತಿತ್ತು. ಅದು ಕೆಳವರ್ಗದ ಜನರಲ್ಲೂ ಸಾಕಷ್ಟು ಬೇಸರ ಹಾಗೂ ಜೀವನದಲ್ಲಿ ಆಸಕ್ತಿಯನ್ನು ಕುಂದುವಂತೆ ಮಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ರಾಜ ವಂಶದಲ್ಲಿ ಜನಿಸಿದ ಬುದ್ಧನು. ವಿಹಾರಕ್ಕೆ ತೆರಳಿದಾಗ ನಾಲ್ಕು ಘಟನೆಯನ್ನು ವೀಕ್ಷಿಸಿದನು. ಆ ಘಟನೆಯು ಆತನಿಗೆ ಆಳವಾದ ಚಿಂತನೆಯಲ್ಲಿ ಮುಳುಗುವಂತೆ ಮಾಡಿತು. ಜೊತೆಗೆ ಜನರ ದುಃಖಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಈ ಚಿಂತನೆಗಳಿಗಾಗಿಯೇ ಸಂಸಾರ ಹಾಗೂ ರಾಜ ವೈಭವವನ್ನು ತೊರೆದು, ಆಳವಾದ ಧ್ಯಾನದಲ್ಲಿ ಮಗ್ನನಾದನು. ಅವರ ಧ್ಯಾನ ಹಾಗೂ ಏಕಾಗ್ರತೆಯ ಪರಿಣಾಮವಾಗಿ ಜ್ಞಾನೋದಯವನ್ನು ಪಡೆದುಕೊಂಡನು. ತಾನು ಪಡೆದ ಜ್ಞಾನವನ್ನು ಜನತೆಗೆ ನೀಡುವುದರ ಮೂಲಕ ಅವರ ಜೀವನವನ್ನು ಸಾಕ್ಷಾತ್ಕಾರ ಗೊಳಿಸಬೇಕು. ಬದುಕಿನ ಅರ್ಥವನ್ನು ಪರಿಚಯಿಸಬೇಕೆ ಎಂದು ಸಂಕಲ್ಪ ಮಾಡಿಕೊಂಡನು.

ಬೌದ್ಧ ಧರ್ಮ

ಬೌದ್ಧ ಧರ್ಮ

ಇವುಗಳ ಪ್ರಭಾವದಿಂದಲೇ ಬೌದ್ಧ ಧರ್ಮ ಹುಟ್ಟಿಕೊಂಡಿತು. ಬುದ್ಧ ದೇವನು ಬೌದ್ಧ ಧರ್ಮದ ಸಂಸ್ಥಾಪಕನಾದನು. ಸರಳ ತತ್ವ ಹಾಗೂ ನೀತಿಯಿಂದ ಕೂಡಿದ್ದ ಬೌದ್ಧ ಧರ್ಮಕ್ಕೆ ಸಾಕಷ್ಟು ಜನರು ಪರಿವರ್ತನೆಗೊಂಡರು. ಬೌದ್ಧ ಧರ್ಮದ ಅನುಯಾಯಿಗಳಾದರು. ಭಗವಾನ್ ಬುದ್ಧನು ಅನೇಕ ಸ್ಥಳಗಳನ್ನು ಭೇಟಿ ನೀಡುವುದರ ಮೂಲಕ ಧರ್ಮಗಳ ಪ್ರಚಾರ ಹಾಗೂ ಮಂದಿಗಳ ನಡುವೆ ಪ್ರೀತಿ, ವಿಶ್ವಾಸ, ಜೀವನದ ಅರ್ಥ, ಸತ್ಯ-ಧರ್ಮಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ನೀಡುತ್ತಿದ್ದರು. ಜೊತೆಗೆ ಅಧರ್ಮದ ಹಾದಿಯಲ್ಲಿ ನಡೆಯುವವರಿಗೆ ಸನ್ನಡತೆಯ ಮಾರ್ಗವನ್ನು ತೋರುವುದರ ಮೂಲಕ ಅವರ ಜೀವನವನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದರು. ಉತ್ತಮ ಕಲ್ಪನೆ ಹಾಗೂ ಪ್ರಭಾವದಿಂದಾಗಿ ಇಂದು ಬೌದ್ಧ ಧರ್ಮವು ಸಾಕಷ್ಟು ಪ್ರಚಾರ ಹಾಗೂ ಪ್ರತಿಷ್ಠೆಯನ್ನು ಪಡೆದುಕೊಂಡಿದೆ.

most read: ದೇವ ದೇವತೆಗಳಲ್ಲಿಯೇ ಹನುಮಂತ ದೇವರು ತುಂಬಾ ಬಲಿಷ್ಠರಂತೆ! ಇದರ ಹಿಂದಿನ ಕಾರಣವೇನು ಗೊತ್ತೇ?

ಚಿಕ್ಕ ಹುಡುಗಿಯ ಕಥೆ

ಚಿಕ್ಕ ಹುಡುಗಿಯ ಕಥೆ

ಭಗವಾನ್ ಬುದ್ಧನು ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ನಂತರ ಅಲ್ಲಿ ಧರ್ಮೋಪದೇಶ ಹಾಗೂ ವ್ಯಕ್ತಿಯಲ್ಲಿ ಜ್ಞಾನದ ಅರಿವನ್ನು ಮೂಡಿಸುವ ಪ್ರಯತ್ನ ಪಾಡುತ್ತಿದ್ದರು. ಹೀಗೆ ತನ್ನದೇ ಆದ ಉತ್ತಮ ನಿಲುವಿನೊಂದಿಗೆ ವಿವಿಧ ಪ್ರಧೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಒಂದು ಚಿಕ್ಕ ಹುಡುಗಿಯ ಪರಿಚಯವಾಯಿತು. ಅವರ ನಡುವೆ ಗುರು ಶಿಷ್ಯರ ಬಾಂಧವ್ಯ ಮೂಡಿತು. ಈ ಗುರು ಶಿಷ್ಯರ ನಡುವೆ ನಡೆದ ಧನಾತ್ಮಕ ಚಿಂತನೆಯು ಧಾರ್ಮಿಕವಾಗಿ ಸಾಕಷ್ಟು ಸಂಗತಿಯನ್ನು ನೀಡುತ್ತದೆ. ಹಾಗಾದರೆ ಆ ಸಂಗತಿಗಳು ಏನು ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಭಗವಾನ್ ಬುದ್ಧನು ಹಾದಿಯಲ್ಲಿ ಒಬ್ಬ ಹುಡುಗಿಯನ್ನು ಭೇಟಿ ಆದನು

ಭಗವಾನ್ ಬುದ್ಧನು ಹಾದಿಯಲ್ಲಿ ಒಬ್ಬ ಹುಡುಗಿಯನ್ನು ಭೇಟಿ ಆದನು

ಧರ್ಮ ಪ್ರಚಾರ ಹಾಗೂ ಜ್ಞಾನದ ಅರಿವನ್ನು ಮೂಡಿಸುವ ಉದ್ದೇಶದಿಂದ ಕೈಗೊಂಡ ಯಾತ್ರೆಯಲ್ಲಿ ಒಮ್ಮೆ ಭಗವಾನ್ ಬುದ್ಧನು ಒಬ್ಬ ಪುಟ್ಟ ಹುಡುಗಿಯನ್ನು ಭೇಟಿಯಾದನು. ಆಗ ಆ ಹುಡುಗಿ ಸಾಕಷ್ಟು ಅವಸರದಲ್ಲಿ ಇದ್ದಳು. ಅವಳು ಭಗವಾನ್ ಬುದ್ಧನಲ್ಲಿ ಇಲ್ಲಿಯೇ ನಿಂತಿರಿ, ನಾನು ಹಿಂದಿರುಗಿ ಬರುವ ತನಕ ಎಲ್ಲಿಯೂ ಹೋಗದಿರಿ ಎಂದು ಹೇಳಿದಳು. ಅವಳು ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಊಟವನ್ನು ನೀಡಿ ಬರುವ ಅವಸರದಲ್ಲಿ ಇದ್ದಳು. ಹಾಗಾಗಿ ಊಟವನ್ನು ನೀಡಿ ಹಿಂದಿರುಗುತ್ತೇನೆ ಎಂದು ಹೇಳಿದಳು. ನಾನು ಹಿಂದಿರುಗಿ ಬರುವವರೆಗೂ ಧರ್ಮ ಭೋದನೆಯನ್ನು ಪ್ರಾರಂಭಿಸಬಾರದು ಎಂದು ವಿನಂತಿಸಿಕೊಂಡು ಹೋದಳು.

ಭಗವಾನ್ ಬುದ್ಧನು ಜನ ಸಮೂಹವನ್ನು ಭೇಟಿಯಾದನು

ಭಗವಾನ್ ಬುದ್ಧನು ಜನ ಸಮೂಹವನ್ನು ಭೇಟಿಯಾದನು

ಭಗವಾನ್ ಬುದ್ಧನು ತಾನು ಊರಿನ ಯಾವ ಸ್ಥಳಕ್ಕೆ ಹೋಗಬೇಕಿತ್ತೋ ಅಲ್ಲಿಗೆ ಹೋಗಿ ತಲುಪಿದನು. ಅಲ್ಲಿ ಅವರ ಭೋಧನೆಯನ್ನು ಕೇಳಲು ಸಾಕಷ್ಟು ಜನ ಸಮೂಹ ನೆರೆದಿತ್ತು. ಜನರು ಸಹ ಸಾಕಷ್ಟು ಗೌರವ ಹಾಗೂ ಪೂಜ್ಯ ಭಾವನೆಯಿಂದ ಬುದ್ಧನನ್ನು ಸ್ವಾಗತಿಸಿದರು. ಆದರೆ ಭಗವಾನ್ ಬುದ್ಧನು ಧರ್ಮದ ಬಗ್ಗೆ ಏನನ್ನೂ ಮಾತನಾಡಲು ಪ್ರಾರಂಭಿಸಿರಲಿಲ್ಲ. ಆಗ ಜನ ಸಂದಣಿಯಲ್ಲಿದ್ದ ಒಬ್ಬ ವ್ಯಕ್ತಿಯು ನನ್ನ ದೇವನೆ ನೀವು ಎಂದು ಮಾತನ್ನು ಪ್ರಾರಂಭಿಸುವಿರಿ? ಎಂದು ಕೇಳಿದನು. ಆಗ ಬುದ್ಧನು ತಾನು ಒಬ್ಬ ವ್ಯಕ್ತಿಯ ಆಗಮನಕ್ಕಾಗಿ ಕಾಯುತ್ತಿದ್ದೇನೆ. ಶೀಘ್ರದಲ್ಲಿಯೇ ಅವರು ಇಲ್ಲಿಗೆ ಬರುವರು. ಆಗ ಪ್ರಾರಂಭಿಸುತ್ತೇನೆ ಎಂದು ಹೇಳಿದನು.

ಭಗವಾನ್ ಬುದ್ಧನು ಪುಟ್ಟ ಹುಡುಗಿಗಾಗಿ ಕಾಯುತ್ತಿದ್ದನು

ಭಗವಾನ್ ಬುದ್ಧನು ಪುಟ್ಟ ಹುಡುಗಿಗಾಗಿ ಕಾಯುತ್ತಿದ್ದನು

ಭಗವಾನ್ ಬುದ್ಧನು ಬರುವಾಗ ದಾರಿಯಲ್ಲಿ ಸಿಕ್ಕಿದ್ದ ಪುಟ್ಟ ಹುಡುಗಿಗಾಗಿ ಕಾಯುತ್ತಿದ್ದನು. ಎಲ್ಲರೂ ಆಶ್ಚರ್ಯ ಹಾಗೂ ಕುತೂಹಲದಿಂದ ಬುದ್ಧನು ಯಾರಿಗಾಗಿ ಕಾಯುತ್ತಿದ್ದಾರೆ ಎಂದು ಚಿಂತಿಸುತ್ತಿದ್ದರು. ಅಷ್ಟರಲ್ಲಿ ಆ ಪುಟ್ಟ ಹುಡುಗಿ ಬಂದಳು. ನಂತರ "ನನ್ನನ್ನು ಕ್ಷಮಿಸಿ, ಸ್ವಲ್ಪ ತಡವಾಯಿತು, ನನಗಾಗಿ ಕಾದಿದ್ದಕ್ಕೆ ಧನ್ಯವಾದಗಳು ನನ್ನ ದೇವ."ಎಂದು ಹೇಳಿದಳು. ನಾನು ಬಹಳ ವರ್ಷದಿಂದ ಭಗವಾನ್ ಬುದ್ಧರನ್ನು ನೋಡಲು ಕಾಯುತ್ತಿದ್ದೆ. ನಾನು ನಾಲ್ಕು ವರ್ಷದಲ್ಲಿರುವಾಗ ಮೊದಲ ಬಾರಿಗೆ ನಿಮ್ಮ ಹೆಸರನ್ನು ಕೇಳಿದ್ದೆ ಎಂದಳು. ಬುದ್ಧ ಎನ್ನುವ ಭಗವಂತಹ ಹೆಸರು ನನ್ನ ಹೃದಯದಲ್ಲಿ ಪ್ರೀತಿ ಮತ್ತು ಭಕ್ತಿಯ ಭಾವವನ್ನು ತುಂಬಿತ್ತು. ಆ ದಿನದಿಂದ ಇಲ್ಲಿಯವರೆಗೆ ಹತ್ತು ವರ್ಷಗಳು ಕಳೆದವು. ಆ ದಿನದಿಂದಲೇ ಬುದ್ಧ ದೇವರನ್ನು ಭೇಟಿಯಾಗಲು ಬಯಸುತ್ತಿದ್ದೆ ಎಂದಳು.

most read: ಧ್ಯಾನದಿಂದ ಜ್ಞಾನ ಪಡೆಯುವುದೇ ದಾರಿ

ಬುದ್ಧನು ಆ ಹುಡುಗಿಯ ಭಕ್ತಿಯಿಂದಲೇ ಅಲ್ಲಿಗೆ ಬಂದಿದ್ದರು

ಬುದ್ಧನು ಆ ಹುಡುಗಿಯ ಭಕ್ತಿಯಿಂದಲೇ ಅಲ್ಲಿಗೆ ಬಂದಿದ್ದರು

ಆ ಪುಟ್ಟ ಹುಡುಗಿಯ ಮಾತನ್ನು ಕೇಳಿದ ಬುದ್ಧ ದೇವನು"ನಿನ್ನ ನಿರೀಕ್ಷೆಯು ವ್ಯರ್ಥವಾಗಲಿಲ್ಲ" ಎಂದರು. ಭಗವಾನ್ ಬುದ್ಧನು ದೂರದ ಊರಿನಿಂದ ಪ್ರಯಾಣಿಸಿ ಬಂದಿರುವ ಕಾರಣವೇ ಆಪುಟ್ಟ ಹುಡುಗಿಯಾಗಿದ್ದಳು. ಈ ಸಂಭಾಷಣೆಯ ನಂತರ ಧರ್ಮೊಪದೇಶ ಪ್ರಾರಂಭವಾಯಿತು. ಜನರು ಸಹ ಭಕ್ತಿ ಭಾವದಿಂದ ಕೇಳಲು ಪ್ರಾರಂಭಿಸಿದರು.

ಹುಡುಗಿಯು ಧ್ಯಾನದಲ್ಲಿ ತೊಡಗಲು ಬಯಸುತ್ತಿದ್ದಳು

ಹುಡುಗಿಯು ಧ್ಯಾನದಲ್ಲಿ ತೊಡಗಲು ಬಯಸುತ್ತಿದ್ದಳು

ಧರ್ಮೋಪದೇಶದ ನಂತರ ಆ ಹುಡುಗಿಯು ಭಗವಾನ್ ಬುದ್ಧನ ಬಳಿ ಬಂದು ತಾನು ಧ್ಯಾನವನ್ನು ಮಾಡಬೇಕು. ಅದಕ್ಕೆ ಸೂಕ್ತ ಮಾರ್ಗ ಹಾಗೂ ಸೂಚನೆಯನ್ನು ಕೊಡಬೇಕೆಂದು ಕೇಳಿಕೊಂಡಳು. ಜೊತೆಗೆ ಆ ಪುಟ್ಟ ಹುಡುಗಿ ಬುದ್ಧ ದೇವರ ಶಿಷ್ಯಳಾಗಿ ಇರಲು ಬಯಸಿದಳು. ಭಗವಾನ್ ಬುದ್ಧ ದೇವನು ಅವಳ ಕೋರಿಕೆಗೆ ಸಮ್ಮತಿಯನ್ನು ಸೂಚಿಸಿದನು. ಉಪನ್ಯಾಸ ಅಥವಾ ಧರ್ಮೋಪದೇಶವನ್ನು ಮುಗಿಸಿದ ಬಳಿಕ, ಗ್ರಾಮದಲ್ಲಿ ಧರ್ಮೋಪದೇಶಕ್ಕೆ ಪ್ರಭಾವಿತಳಾದ ಏಕೈಕ ಪುಟ್ಟ ಹುಡುಗಿ ಅವಳಾಗಿದ್ದಳು ಎಂದರು.

ಆನಂದನು ಉತ್ತರವನ್ನು ಪಡೆದುಕೊಳ್ಳಲು ಬಯಸಿದನು

ಆನಂದನು ಉತ್ತರವನ್ನು ಪಡೆದುಕೊಳ್ಳಲು ಬಯಸಿದನು

ಆನಂದ ಎನ್ನುವವನು ಭಗವಾನ್ ಬುದ್ಧನ ಪ್ರಮುಖ ಹಾಗೂ ಮುಖ್ಯ ಶಿಷ್ಯನಾಗಿದ್ದನು. ಆ ದಿನ ರಾತ್ರಿ ಆಶ್ರಮದಲ್ಲಿ ಪ್ರತಿಯೊಬ್ಬರು ಮಲಗಲು ಸಿದ್ಧರಾಗುತ್ತಿದ್ದರು. ಆಗ ಶಿಷ್ಯನು ಬುದ್ಧ ದೇವರಲ್ಲಿ ಬಂದು ಕೇಳಿದನು, ಹೇಗೆ ನೀವು ಒಂದು ಕಾಂತೀಯ ಶಕ್ತಿಯನ್ನು ಪಡೆದುಕೊಳ್ಳುವಿರಿ? ಅದರಿಂದಲೇ ಮರುದಿನ ಇಂತಹ ಸ್ಥಳಕ್ಕೆ ಹೋಗಬೇಕು ಎಂದು ನಿರ್ಧರಿಸುವಿರಿ ಎನ್ನುವ ಪ್ರಶ್ನೆಯನ್ನು ಕೇಳುವ ಮೂಲಕ ತನ್ನ ಗುರುವಿನಿಂದ ಉತ್ತರವನ್ನು ಪಡೆದುಕೊಳ್ಳಲು ಬಯಸಿದನು.

ಗುರು ಶಿಷ್ಯರ ಭೇಟಿಗೆ ಹೃದಯಗಳ ಬಾಂಧವ್ಯ ಬೆಸೆಯುವುದು

ಗುರು ಶಿಷ್ಯರ ಭೇಟಿಗೆ ಹೃದಯಗಳ ಬಾಂಧವ್ಯ ಬೆಸೆಯುವುದು

ಶಿಷ್ಯನ ಮಾತುಗಳನ್ನು ಬುದ್ಧ ದೇವನು ಒಪ್ಪಿಕೊಂಡನು. ಜನರಿಗೆ ಬೇಕಾದ ಅಗತ್ಯತೆಗಳೇನು ಎನ್ನುವುದು ಅರಿತಾಗ, ಅದರ ಭಾವನೆಗಳನ್ನು ತಿಳಿದಾಗ ನನ್ನ ಮುಂದಿನ ಪ್ರಯಾಣ ನಿರ್ಧಾರವಾಗುವುದು. ಗುರುವು ಸದಾ ತನ್ನ ಶಿಷ್ಯರೆಲ್ಲಿ ಇರುತ್ತಾರೆಯೋ ಅಲ್ಲಿಯ ಕಾಂತೀಯ ಶಕ್ತಿಯು ಗುರುವನ್ನು ಆಕರ್ಷಿಸುವುದು ಅಥವಾ ಸೆಳೆದುಕೊಳ್ಳುವುದು. ಆಕರ್ಷಿತರಾಗುವುದು ಅಥವಾ ಸೆಳೆದುಕೊಳ್ಳುವುದು ಗುರು ಶಿಷ್ಯರ ನಡುವೆ ಇರುವ ಮನಸ್ಸುಗಳಿಂದಲ್ಲ. ಅದು ಹೃದಯಗಳಿಂದ. ಹೃದಯಗಳು ಪರಸ್ಪರ ಭೇಟಿಯಾಗಲು ಬಯಸಿದಾಗ ಅದು ಸಂಭವಿಸುತ್ತದೆ. ಗುರು ಶಿಷ್ಯರ ನಡುವಿನ ಭಾಂದವ್ಯವು ಹೃದಯಗಳಿಂದ ಕೂಡಿರುತ್ತದೆ. ಅದರ ಮೂಲಕವೇ ಶಿಷ್ಯರಾಗಿ ಭೇಟಿಯಾಗಲು ಬದ್ಧರಾಗುತ್ತಾರೆ ಎಂದು ಬುದ್ಧದೇವನು ಉತ್ತರಿಸಿದನು.

English summary

Lord Buddha And The Little Girl

Lord Buddha once met a girl who asked him to wait for her return before starting his sermon. When Lord Buddha reached his destination, he was welcomed by a big crowd. While the crowd waited for him to start, Lord Buddha was waiting for the little girl, and started only when she had come. Later, he told that a master knows where his disciples need him in life.
Story first published: Tuesday, March 26, 2019, 15:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more