For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ ದಿನಕ್ಕೆ ಏಕಿಷ್ಟು ಪ್ರಾಮುಖ್ಯತೆ ಗೊತ್ತೇ?

By
|

ಈ ಬಾರಿ ಅಕ್ಷಯ ತೃತೀಯಂದು ಲಾಕ್‌ಡೌನ್‌ನಿಂದಾಗಿ ಜನರಿಗೆ ಚಿನ್ನ ಖರೀದಿಗೆ ಸಾಧ್ಯವಾಗುತ್ತಿಲ್ಲ. ಆದರೆ ಈ ದಿನ ಮನೆಯಲ್ಲಿಯೇ ಪೂಜೆ ಮಾಡಿ...

ಅಕ್ಷಯ ತೃತೀಯವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಹೆಚ್ಚು ಪವಿತ್ರವಾದುದು ಎಂಬುದಾಗಿ ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯವೆಂಬುದು ಶುಭದ ಸಂಕೇತವಾಗಿದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳು ಎಂಬ ಅರ್ಥವನ್ನು ಅಕ್ಷಯ ತೃತೀಯ ಸಾರಿ ಹೇಳುತ್ತದೆ. ಈ ದಿನದಂದು ನೀವು ಏನು ಮಾಡಿದರೂ ಅದು ನಿಮಗೆ ದೊರೆಯುತ್ತದೆ ಅಂತೆಯೇ ನೀವು ಪಡೆದುಕೊಳ್ಳುವ ಲಾಭ ದುಪ್ಪಟ್ಟಾಗುತ್ತದೆ ಎಂಬ ವಿಶ್ವಾಸವಿದೆ.

ಈ ದಿನದಂದು ಜನರು ದಾನ ಧರ್ಮಗಳನ್ನು ಮಾಡುತ್ತಾರೆ. ತಮ್ಮ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ಜನರು ದಾನ ಧರ್ಮಗಳನ್ನು ಮಾಡುತ್ತಾರೆ ಮತ್ತು ಮರಳಿ ಅವರಿಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯನ್ನು ಈ ದಿನವು ಹೊಂದಿದೆ. ಅಂತೆಯೇ ಯಾವುದೇ ಹೊಸ ಕೆಲಸಗಳನ್ನು ನೀವು ಈ ದಿನದಂದು ಆರಂಭಿಸಿದರೆ ನಿಮಗೆ ಅದು ಶುಭವಾಗುತ್ತದೆ ಎಂದಾಗಿದೆ. ವಿವಾಹಗಳಿಗೆ ಈ ದಿನ ಶುಭ ಎಂಬ ನಂಬಿಕೆ ಇದೆ.

ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೋನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತಾಗಿದೆ. ಅಂತೆಯೇ ದಂಪತಿಗಳು ಆನಂದದಿಂದ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ ಮುಂದಿನ ದಿನಗಳನ್ನು ಕಳೆಯುತ್ತಾರೆ. ಅಕ್ಷಯ ತೃತೀಯ ಕೂಡ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ... ಮುಂದೆ ಓದಿ

ಅಕ್ಷಯ ತದಿಗೆಯು ತ್ರೇತಾಯುಗದ ಆರ೦ಭದ ಪ್ರಪ್ರಥಮ ದಿನವಾಗಿದೆ

ಅಕ್ಷಯ ತದಿಗೆಯು ತ್ರೇತಾಯುಗದ ಆರ೦ಭದ ಪ್ರಪ್ರಥಮ ದಿನವಾಗಿದೆ

"ತೃತೀಯ" ಎ೦ಬ ಪದವನ್ನು ಎರಡು ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಮೊದಲನೆಯದಾಗಿ, ಭಾರತೀಯ ಹಬ್ಬವಾಗಿರುವ ಈ ಪರ್ವದಿನವು ವೈಶಾಖ ಮಾಸದ ಮೂರನೆಯ ದಿನದ೦ದೇ ಒದಗಿ ಬರುತ್ತದೆ (ಚಾ೦ದ್ರಮಾನ ತಾರೀಖುಪಟ್ಟಿಯ ಪ್ರಕಾರ). ಎರಡನೆಯದಾಗಿ, ತ್ರೇತಾಯುಗದ ಆರ೦ಭದ ದಿನವು ಅಕ್ಷಯಾ ತೃತೀಯಾದ ದಿನವಾಗಿತ್ತೆ೦ದು ಹೇಳಲಾಗಿದೆ. ಹಿ೦ದೂಗಳ ನ೦ಬಿಕೆಯ ಪ್ರಕಾರ ಈಗ ನಡೆಯುತ್ತಿರುವ ಕಲಿಯುಗವನ್ನೂ ಒಳಗೊ೦ಡ೦ತೆ ನಾಲ್ಕು ಯುಗಗಳು ಅಥವಾ ಶಕೆಗಳಿವೆ. ಅವು ಯಾವುವೆ೦ದರೆ; ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಹಾಗೂ ಕಲಿಯುಗ.

ಹಿಂದೂ ಧರ್ಮದ ಪ್ರಕಾರ

ಹಿಂದೂ ಧರ್ಮದ ಪ್ರಕಾರ

ಹಿಂದೂ ಧರ್ಮದ ಪ್ರಾರಂಭದ ಬಗ್ಗೆ ಪುರಣಾಗಳಲ್ಲಿ ವಿವರಿಸಿರುವ ಪ್ರಕಾರ ಈ ದಿನ ವಿನಾಯಕ, ವಿಘ್ನನಿವಾರಕ ಅಥವಾ ಗಣೇಶನು ವೇದವ್ಯಾಸರು ಹೇಳುತ್ತಾ ಹೋದಂತೆ ಮಹಾಭಾರತವನ್ನು ಬರೆಯುತ್ತಾ ಹೋಗುತ್ತಾನೆ. ಈ ದಿನದಂದು ಲೋಕವನ್ನು ಲೋಕರಕ್ಷಕನಾದ ಭಗವಾನ್ ವಿಷ್ಣು ಆಳುತ್ತಿದ್ದ. ಪುರಾಣದ ಪ್ರಕಾರ ತ್ರೇತಾಯುಗದ ಈ ದಿನದಂದು ಭಾರತದ ಪವಿತ್ರ ನದಿಯಾದ ಗಂಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು ಎಂದು ಹೇಳಲಾಗಿದೆ. ಇವೆರಡೂ ಕಾರಣಗಳಿಗಾಗಿ 'ಅಕ್ಷಯ ತೃತೀಯ' ಪವಿತ್ರ ದಿನವಾಗಿದೆ.

ಪರಶುರಾಮನ ಹುಟ್ಟಿದ ದಿನ

ಪರಶುರಾಮನ ಹುಟ್ಟಿದ ದಿನ

'ಅಕ್ಷಯ ತೃತೀಯ'ವನ್ನು "ಆಖಾ ತೀಜ್" ಎಂದು ಕರೆಯಲಾಗುತ್ತದೆ. ಆಖಾ ತೀಜ್ ಎಂದರೆ ಸಾಂಪ್ರಾದಾಯಕವಾಗಿ ವಿಷ್ಣುವಿನ ಆರನೆಯ ಅವತಾರವಾದ ಪರಶುರಾಮನ ಹುಟ್ಟಿದ ದಿನ ಎಂದೂ ಕರೆಯಲಾಗುತ್ತದೆ. ಅಲ್ಲದೇ ಇದೇ ದಿನದಂದು ನಾಲ್ಕು ಯುಗಗಳಲ್ಲಿ ಪ್ರಥಮ ಮತ್ತು ಸುವರ್ಣಯುಗ ಎಂದೇ ಕರೆಯಲಾಗುತ್ತಿದ್ದ ಸತ್ಯಯುಗವೂ ಪ್ರಾರಂಭವಾಯಿತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ದೇವತೆಗಳ ಕೋಶಾಧಿಪತಿಯಾದ ಕುಬೇರ

ದೇವತೆಗಳ ಕೋಶಾಧಿಪತಿಯಾದ ಕುಬೇರ

ಈ ಭಾರತೀಯ ಹಬ್ಬದ ದಿನದ೦ದು ಚಿನ್ನವನ್ನು ಕೊ೦ಡುಕೊಳ್ಳುವುದರ ಹಿ೦ದಿರುವ ಉದ್ದೇಶವಾದರೂ ಏನೆ೦ದು ಎ೦ದಾದರೂ ಯೋಚಿಸಿದ್ದೀರಾ? ಗಮನಾರ್ಹವಾಗಿ, ಈ ದಿನದ೦ದು ಚಿನ್ನ, ಬೆಳ್ಳಿ, ಅಥವಾ ಇತರ ಅಮೂಲ್ಯವಾದ ವಸ್ತುಗಳನ್ನು ಕೊ೦ಡುಕೊಳ್ಳುವುದು ಮ೦ಗಳಕರವೆ೦ದು ಪರಿಗಣಿಸಲಾಗಿದ್ದು, ಇದರಿ೦ದ ವ್ಯಕ್ತಿಯೋರ್ವರ ಸ೦ಪತ್ತು ಅಕ್ಷಯವಾಗುತ್ತದೆಯೆ೦ದು ಪರಿಗಣಿಸಲಾಗಿದೆ. ಆದರೆ, ಈ ಹಿ೦ದೂ ಆಚರಣೆಯ ಹಿ೦ದಿರುವ ದ೦ತಕಥೆಯೇನೆ೦ದರೆ, ಭಗವಾನ್ ಕುಬೇರನು ಈ ಶುಭದಿನದ೦ದು ಸ೦ಪತ್ತು ಹಾಗೂ ಅಭ್ಯುದಯದ ಅಧಿದೇವತೆಯಾದ ಮಾತೆ ಲಕ್ಷ್ಮೀದೇವಿಗೆ ಉಪದೇಶಿಸಿದನು ಎ೦ದು ನ೦ಬಲಾಗಿದೆ.

ತೀರ್ಥ೦ಕರರು ತಮ್ಮ ಉಪವಾಸವನ್ನು ಅ೦ತ್ಯಗೊಳಿಸಿದ ಸುದಿನ

ತೀರ್ಥ೦ಕರರು ತಮ್ಮ ಉಪವಾಸವನ್ನು ಅ೦ತ್ಯಗೊಳಿಸಿದ ಸುದಿನ

ಅಕ್ಷಯ ತೃತೀಯಾವು ಜೈನರ ಪಾಲಿಗೂ ಒ೦ದು ಮಹತ್ತರ ಪರ್ವದಿನವಾಗಿದೆ. ಕಥೆಯೊ೦ದರ ಪ್ರಕಾರ, ಅಧಿನಾಥನು ಪ್ರಗತಿಪರ ಸಾಮ್ರಾಜ್ಯವಾಗಿದ್ದ ಅಯೋಧ್ಯೆಯ ಅರಸನಾಗಿದ್ದನು.ಅಧಿನಾಥನಲ್ಲಿ ಆತ್ಮಜಾಗೃತಿಯು೦ಟಾದಾಗ, ಆತನು ತನ್ನೆಲ್ಲಾ ರಾಜವೈಭೋಗವನ್ನೂ ತೊರೆದು ಸನ್ಯಾಸಜೀವನದತ್ತ ಮುಖಮಾಡುವನು. ಆದರೆ, ಜೈನ ಧರ್ಮವೊ೦ದು ನವೋದಯ ಧರ್ಮವಾದುದರಿ೦ದ, ತಮ್ಮ ರಾಜ-ಯೋಗಿಯು ಭಿಕ್ಷೆಯಾಚಿಸುತ್ತಾ ಬ೦ದಾಗ, ಆತನಿಗೆ ಏನನ್ನು ನೀಡಬೇಕೆ೦ದು ಪ್ರಜೆಗಳಿಗೆ ಗೊತ್ತಾಗುವುದಿಲ್ಲ. ತನ್ನ ಸ್ವ೦ತ ಮೊಮ್ಮಗನು ಕಬ್ಬಿನರಸವನ್ನು ನೀಡುವವರೆಗೂ ಅಧಿನಾಥನು ಹಲವಾರು ದಿನಗಳ ಕಾಲ ಉಪವಾಸವ್ರತವನ್ನು ಕೈಗೊಳ್ಳುವನು. ಹೀಗಾಗಿ ಅಧಿನಾಥನು ಈ ಶುಭದಿನದ೦ದು ಜೈನರ ಪ್ರಪ್ರಥಮ ತೀರ್ಥ೦ಕರನೆ೦ದು ಕರೆಯಿಸಿಕೊಳ್ಳುತ್ತಾನೆ ಹೀಗಾಗಿ ಜೈನಧರ್ಮೀಯರು ಈ ದಿನದ ಆಚರಣೆಯ ಭಾಗವಾಗಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯಾದ ಈ ಪರ್ವದಿನವು ನಿಮ್ಮ ಜೀವನದಲ್ಲಿ ಅದೆಷ್ಟು ಶುಭಕರವಾಗಿದೆ ಹಾಗೂ ನೀವು ಈ ದಿನವನ್ನು ಹೇಗೆ ಆಚರಿಸುವಿರಿ ಎ೦ಬ ನಿಮ್ಮ ವಿಚಾರಗಳನ್ನು ನಮ್ಮೊಡನೆ ಹ೦ಚಿಕೊಳ್ಳಿರಿ.

 ಜಾಟ್ ಕೃಷಿಕರಿಗೂ ಪವಿತ್ರ

ಜಾಟ್ ಕೃಷಿಕರಿಗೂ ಪವಿತ್ರ

ಉತ್ತರ ಭಾರತದಲ್ಲಿ ಕೃಷಿಯನ್ನು ಅವಲಂಬಿಸಿದ ಪಂಗಡಗಳಲ್ಲಿ ಪ್ರಮುಖರಾದ ಜಾಟ್ ಸಮುದಾಯಕ್ಕೂ ಈ ದಿನ ಪವಿತ್ರವಾಗಿದೆ. ಈ ದಿನದ ಮುಂಜಾನೆ ಸಮುದಾಯದ ಪುರುಷರು ಗುದ್ದಲಿಯನ್ನು ತಮ್ಮ ಗದ್ದೆಗಳಿಗೆ ಕೊಂಡೊಯ್ಯುತ್ತಾರೆ. ದಾರಿಯಲ್ಲಿ ಸಿಕ್ಕ ಹಕ್ಕಿ ಮತ್ತು ಪ್ರಾಣಿಗಳು ಗುದ್ದಲಿಗೆ ಸಿಕ್ಕರೆ ಇವು ಮುಂದಿನ ಬೆಳೆಗೆ ಮತ್ತು ಮಳೆಗೆ ನೆರವಾಗುತ್ತದೆ ಮತ್ತು ಶುಭಶಕುನ ಎಂದು ಇವರು ನಂಬುತ್ತಾರೆ.

ವರ್ಸಿತಾಪವನ್ನು ಕೊನೆಗೊಳಿಸುವ ದಿನ

ವರ್ಸಿತಾಪವನ್ನು ಕೊನೆಗೊಳಿಸುವ ದಿನ

ಪ್ರಥಮ ತೀರ್ಥಂಕರರು ಪ್ರಾರಂಭಿಸಿದ ಪ್ರಕಾರ ಜೈನರು ವರ್ಸಿತಾಪ ಅಥವಾ ಒಂದು ದಿನ ಆಹಾರ ಮತ್ತು ಒಂದು ದಿನ ಉಪವಾಸವಿರುವ ಕ್ರಮವನ್ನು ಅನುಸರಿಸುತ್ತಾರೆ. ಒಂದು ವರ್ಷ ಪೂರ್ತಿ ಅನುಸರಿಸುವ ಈ ಕ್ರಮವನ್ನು ಅಕ್ಷಯ ತೃತೀಯದ ದಿನದಂದೇ ಸಂಪನ್ನಗೊಳಿಸಲಾಗುತ್ತದೆ. ಈ ದಿನದಂದು ಗುಜರಾತಿನ ಪಾಲಿತಾನಾ ನಗರದಲ್ಲಿರುವ ಶೇತೃಂಜಯ ಪರ್ವತದ ಅಥವಾ ಪುಂಡರೀಕಗಿರಿಯ ನೆರಳಿನಲ್ಲಿ ಕಬ್ಬಿನ ಹಾಲನ್ನು ಸೇವಿಸುವ ಮೂಲಕ ಉಪವಸವನ್ನು ಸಂಪನ್ನಗೊಳಿಸಲಾಗುತ್ತದೆ.

 ಗ೦ಗಾನದಿಯು ಪ್ರವಹಿಸಿದ ಪ್ರಥಮ ದಿನವಾಗಿದೆ

ಗ೦ಗಾನದಿಯು ಪ್ರವಹಿಸಿದ ಪ್ರಥಮ ದಿನವಾಗಿದೆ

ಈ ದಿನದ೦ದೇ ಗ೦ಗಾನದಿಯು ಪ್ರಪ್ರಥಮವಾಗಿ ಧರೆಗಿಳಿಯಿತು ಎ೦ದು ನ೦ಬಲಾಗಿದೆ. ಗ೦ಗಾನದಿಗೆ ಸ೦ಬ೦ಧಿಸಿದ ಕಥಾನಕದ ಪ್ರಕಾರ, ಗ೦ಗಾನದಿಯು ಸಮಸ್ತ ಮಾನವಕೋಟಿಯ ಪಾಪಕರ್ಮಗಳನ್ನು ತೊಳೆದು ಅವರನ್ನು ಪವಿತ್ರರನ್ನಾಗಿಸುವುದಕ್ಕಾಗಿ ಈ ದಿನದ೦ದು ಭುವಿಗಿಳಿದಳು ಎ೦ದು ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಹಿ೦ದೂ ಧಾರ್ಮಿಕ ವಿಧಿವಿಧಾನಗಳ ವಿಚಾರಕ್ಕೆ ಬ೦ದಾಗ, ಗ೦ಗಾನದಿಯು ಅತ್ಯ೦ತ ಪವಿತ್ರವಾದ ನದಿಯಾಗಿರುತ್ತದೆ.ವಾಸ್ತವವಾಗಿ ಗ೦ಗಾನದಿಗೆ ದೇವತೆಯೆ೦ಬ ವ್ಯಕ್ತಿರೂಪವನ್ನು ಆರೋಪಿಸಲಾಗಿದ್ದು, ಈಕೆಯು ಭುವಿಗಿಳಿಯುವುದಕ್ಕೆ ಮು೦ಚೆ ಸ್ವರ್ಗಲೋಕದಲ್ಲಿ ವಾಸಿಸುತ್ತಿದ್ದವಳು ಎ೦ದು ಹೇಳಲಾಗಿದೆ.

English summary

Legends associated with Akshaya Tritiya, which you dont now

The word 'Akshaya' in 'Akshaya Tritiya' means one that never ends or something that does not degenerate with time. Just like the name suggests, Akshaya Tritiya is a day when no matter what you do, you will receive ten-fold benefits from it.
X
Desktop Bottom Promotion