For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯದಂದು ತಪ್ಪದೇ ಪಠಿಸಿ 'ಮಹಾಲಕ್ಷ್ಮೀ' ಸ್ತೋತ್ರ

ಅಕ್ಷಯ ತೃತೀಯದಂದು ಲಕ್ಷ್ಮೀ ಮಾತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಐಶ್ವರ್ಯದ ಅದಿಧೇವತೆ ಎಂದೆನಿಸಿರುವ ಲಕ್ಷ್ಮೀಯನ್ನು ಈ ದಿನ ಪೂಜಿಸುವುದರಿಂದ ಸಿರಿತನ ಶಾಶ್ವತವಾಗಿ ಇರುತ್ತದೆ ಎಂಬ ನಂಬಿಕೆ ಇದೆ.

By Jaya subramanya
|

ನಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಸಮೀಪದಲ್ಲಿಯೇ ಇದೆ. ವೈಶಾಖ ಮಾಸದ ಶುಕ್ಲ ಪಕ್ಷ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ಗಳಲ್ಲಿ ಈ ದಿನಕ್ಕೆ ವಿಶೇಷವಾದ ಮಹತ್ವವಿದ್ದು ಸಿರಿ ನಮ್ಮನ್ನು ಅರಸಿ ಬರುತ್ತದೆ ಎಂಬ ಮಾತೊಂದಿದೆ.

ನಮ್ಮ ದೇಶದಲ್ಲಿರುವ ಸಾಧಾರಣ ನಂಬಿಕೆ ಎಂದರೆ ಆರಂಭ ಶುಭವಾಗಿದ್ದರೆ ಅಂತ್ಯವೂ ಶುಭವಾಗುತ್ತದೆ ಎಂದಾಗಿದೆ. ಇದನ್ನು ಭಾರತದಲ್ಲಿರುವ ಎಲ್ಲಾ ಹಿಂದೂಗಳೂ ನಂಬುತ್ತಾರೆ. ಆದ್ದರಿಂದಲೇ ಹೊಸ ವರ್ಷವನ್ನು ಹೆಚ್ಚು ಅಸ್ಥೆಯಿಂದ ನಾವುಗಳು ಆಚರಿಸುತ್ತೇವೆ.ಇದರಂತೆಯೇ ಅಕ್ಷಯ ತೃತೀಯವನ್ನು ಹೆಚ್ಚು ಪವಿತ್ರ ಮತ್ತು ಪೂಜನೀಯ ದಿನವೆಂದು ನಂಬುತ್ತಾರೆ. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಈ ದಿನಂದು ಮಾಡುವ ಯಾವುದೇ ಕಾರ್ಯಗಳಲ್ಲಿ ಶುಭ ಶತಸಿದ್ಧವಾಗಿರುತ್ತದೆ. ಹೊಸ ವ್ಯಾಪಾರ, ಉತ್ತಮ ಕೆಲಸ ಕಾರ್ಯಗಳು ಮೊದಲಾದವನ್ನು ಜನರು ಈ ದಿನದಂದೇ ಮಾಡುತ್ತಾರೆ.ಈ ದಿನದಂದು ಮಾಡುವ ಪುಣ್ಯ ಮತ್ತು ಪಾಪ ಕ್ರಿಯೆಗಳು ದುಪ್ಪಟ್ಟು ಲಾಭವಾಗಿ ಮುಂದಿನ ದಿನಗಳಲ್ಲಿ ಲಭಿಸುತ್ತವೆ ಎಂಬ ಮಾತಿದೆ. ಪೂಜೆ, ಹವನಗಳನ್ನು ಮಾಡಲು ಈ ದಿನವು ಹೆಚ್ಚು ಸೂಕ್ತ ಮತ್ತು ಪೂಜನೀಯ ಎಂದೆನಿಸಿದ್ದು ಇದರ ಮಹತ್ವ ದೀರ್ಘಕಾಲದವರೆಗೆ ಇರುತ್ತದೆ. ಅಕ್ಷಯ ತೃತೀಯ ದಿನದ ಮಹತ್ವ ಮತ್ತು ಪ್ರಾಮುಖ್ಯತೆ ಏನು?

ಅಕ್ಷಯ ತೃತೀಯದಂದು ಲಕ್ಷ್ಮೀ ಮಾತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಐಶ್ವರ್ಯದ ಅದಿಧೇವತೆ ಎಂದೆನಿಸಿರುವ ಲಕ್ಷ್ಮೀಯನ್ನು ಈ ದಿನ ಪೂಜಿಸುವುದರಿಂದ ಸಿರಿತನ ಶಾಶ್ವತವಾಗಿ ಇರುತ್ತದೆ ಎಂಬ ನಂಬಿಕೆ ಇದೆ. ಕಷ್ಟ ಕಾರ್ಪಣ್ಯಗಳು ದೂರವಾಗಿ ಸುಖ ಶಾಂತಿ ನೆಮ್ಮದಿ ನೆಲೆಯಾಗಿರುತ್ತದೆ ಎಂಬುದು ಐತಿಹ್ಯವಾಗಿದೆ.ಇಂದಿನ ಲೇಖನದಲ್ಲಿ ಈ ಶುಭದಿನದಂದು ಲಕ್ಷ್ಮೀಯನ್ನು ಪೂಜಿಸುವ ಮಂತ್ರವನ್ನು ನಾವು ನೀಡಿದ್ದು ಇದನ್ನು ಪಠಿಸಿ ಉತ್ತಮ ಫಲಗಳನ್ನು ಕಂಡುಕೊಳ್ಳಿ....

#1

#1

"ನಮಸ್ತೇಸ್ತು ಮಹಾಮಾಯೇ

ಶ್ರೀಪೀಠೆ ಸುರಪೂಜಿತೇ

ಶಂಖ ಚಕ್ರ ಗದಾ ಹಸ್ತೆ

ಮಹಾಲಕ್ಷ್ಮೀ ನಮೋಸ್ತುತೇ

ಓಂ ಮಹಾಲಕ್ಷ್ಮೀಯೇ ಮಹಾಮಾಯಾ ಎಂದಾಗಿ ಕೂಡ ನಿಮ್ಮನ್ನು ಕರೆಯುತ್ತಾರೆ. ನಿಮಗೆ ನನ್ನ ವಂದನೆಗಳು. ಭಕ್ತರ ಬೇಡಿಕೆಯನ್ನು ಈಡೇರಿಸುವ ತಾಯಿ ನೀವಾಗಿದ್ದೀರಿ. ಶಂಖ, ಚಕ್ರ, ಗಧೆ ನಿಮ್ಮ ಕೈಗಳಲ್ಲಿವೆ. ನಾನು ನಿಮ್ಮನ್ನು ಎಂದಿಗೂ ಪೂಜಿಸುತ್ತೇನೆ.

#2

#2

"ನಮಸ್ತೇ ಗರುಢಾರೂಢೇ

ಕೋಲಾಸರು ಭಯಂಕರಿ

ಸರ್ವ ಪಾಪ ಹರೇ ದೇವಿ

ಮಹಾಲಕ್ಷ್ಮೀ ನಮೋಸ್ತುತೇ

ಗರುಡನನ್ನೇರಿ ಸವಾರಿ ಮಾಡುವವರೇ ಕೋಲಾಸರು ಅಸುರನನ್ನು ವಧಿಸಿದ ಮಹಾತಾಯಿಯೇ ನಿಮಗಿದೋ ನನ್ನ ವಂದನೆಗಳು. ತನ್ನ ಭಕ್ತರ ಪಾಪಗಳನ್ನು ಪೊರೆದು ಅವರನ್ನು ಹರಿಸುವ ತಾಯಿ ನೀವಾಗಿದ್ದೀರಿ. ನಿಮ್ಮನ್ನು ನಾನು ಎಂದೆಂದಿಗೂ ಪೂಜಿಸುತ್ತೇನೆ.

#3

#3

ಸರ್ವಾಜ್ಞೆ ಸರ್ವ ವರದೇ

ಸರ್ವ ದುಷ್ಟ ಭಯಂಕರಿ

ಸರ್ವ ದುಃಖ ಹರೇ ದೇವಿ

ಮಹಾಲಕ್ಷ್ಮೀ ನಮೋ ಸ್ತುತೇ

ವರಗಳನ್ನು ಪ್ರಸಾಧಿಸುವ ಮಾತೆ ನೀವಾಗಿರುವಿರಿ. ಎಲ್ಲಾ ದುಃಖಗಳನ್ನು ನೀಗಿಸುವ ಜಗನ್ಮಾತೆ ನಿಮ್ಮನ್ನು ಎಂದಿಗೂ ನಾನು ಪೂಜಿಸುವೆ.

#4

#4

ಸಿದ್ಧಿ ಬುದ್ಧಿ ಪ್ರದೇ ದೇವಿ

ಭುಕ್ತಿ ಮುಕ್ತಿ ಪ್ರದಾಯಿನಿ

ಮಂತ್ರ ಮೂರ್ತೆ ಸದಾ ದೇವಿ

ಮಹಾಲಕ್ಷ್ಮೀ ನಮೋ ಸ್ತುತೇ

ನೀವು ಬುದ್ಧಿ ಮತ್ತು ಜ್ಞಾನದ ಸಾಕಾರ ಮೂರ್ತಿಯಾಗಿದ್ದೀರಿ. ನೀವು ಭಕ್ತರಿಗೆ ವರನ್ನು ಸುಖ ಶಾಂತಿ ಸಮೃದ್ಧಿಯನ್ನು ನೀಡುತ್ತೀರಿ. ಎಲ್ಲಾ ಕಡೆಯೂ ನೀವೇ ಇದ್ದೀರಿ. ನಿಮ್ಮನ್ನು ಎಂದೆಂದಿಗೂ ನಾನು ಪೂಜಿಸುತ್ತೇನೆ ತಾಯಿ.

#5

#5

ಆದ್ಯಂತ ರಹಿತೇ ದೇವಿ

ಆದಿಶಕ್ತಿ ಮಹೇಶ್ವರಿ

ಯೋಗಾಜೇ ಯೋಗ ಸಂಭೂತೇ

ಮಹಾಲಕ್ಷ್ಮೀ ನಮೋಸ್ತುತೇ

ನೀವು ಆರಂಭ ಮತ್ತು ಕೊನೆಯಾಗಿದ್ದೀರಿ. ಭೂಮಂಡಲದಲ್ಲಿ ಮೊದಲು ಜನನ ತಾಳಿದವರು ನೀವಾಗಿದ್ದೀರಿ. ನೀವು ಸಂಪೂರ್ಣ ಶಕ್ತಿ ಮೂಲವಾಗಿದ್ದೀರಿ ನಿಮ್ಮನ್ನು ಸದಾಕಾಲವೂ ನಾನು ಪೂಜಿಸುತ್ತೇನೆ ನನ್ನನ್ನು ಅನುಗ್ರಹಿಸಿ.

#6

#6

ಸ್ಥೂಲ ಸೂಕ್ಷ್ಮ ಮಹಾರೌದ್ರೇ

ಮಹಾಶಕ್ತಿ ಮಹೋದರೇ

ಮಹಾಪಾ ಹರೇ ದೇವಿ

ಮಹಾಲಕ್ಷ್ಮೀ ನಮೋಸ್ತುತೇ

ದೇವಿ, ಸಣ್ಣ ಜೀವಗಳಲ್ಲೂ ಸಂಚರಿಸುವ ಶಕ್ತಿ ನೀವಾಗಿದ್ದೀರಿ. ನೀವು ಹೆಚ್ಚು ಶಕ್ತಿವಂತರಾಗಿದ್ದು ಸಂತೋಷ ಮತ್ತು ಶಾಂತಿಗೆ ಕಾರಣರಾಗಿರುವಿರಿ. ಮಹಾಪಾಪಗಳನ್ನು ನೀಗಿಸುವ ಮಹಾಮಾತೆ ನಿಮಗಿದೋ ವಂದನೆ.

#7

#7

ಪದ್ಮಾಸನಾ ಸ್ಥಿತೇ ದೇವಿ

ಪರಬ್ರಹ್ಮ ಸ್ವರೂಪಿಣಿ

ಪರಮೇಶಿ ಜಗನ್ಮಾತರ್

ಮಹಾಲಕ್ಷ್ಮೀ ನಮೋಸ್ತುತೇ

ಕಮಲದ ಮೇಲೆ ವಿರಾಜಮಾನರಾದವರೇ, ನೀವು ಪರಬ್ರಹ್ಮ ಸ್ವರೂಪಿಯಾಗಿದ್ದೀರಿ. ನೀವು ಮೂಲ ಶಕ್ತಿಯಾಗಿದ್ದು ವಿಶ್ವಕ್ಕೆ ತಾಯಿಯಾಗಿದ್ದಿರಿ. ನಿಮ್ಮನ್ನು ಎಂದಿಗೂ ನಾನು ಪೂಜಿಸುವೆ.

#8

#8

ಶ್ವೇತಂಭರೇ ಧರೇ ದೇವಿ

ನಾನಾಲಂಕಾರ ಭೂಷಿತೇ

ಜಗತ್ ಸ್ಥಿತೇ ಜಗನ್ ಮಾತರ್

ಮಹಾಲಕ್ಷ್ಮೀ ನಮೋ ಸ್ತುತೇ

ಬಿಳಿಯ ದಿರಿಸುಗಳನ್ನು ಧರಿಸಿದವರೇ, ಮತ್ತು ಆಭರಣಗಳಿಂದ ಅಲಂಕೃತರಾದವರೇ. ನೀವು ವಿಶ್ವದಲ್ಲಿ ಎಂದಿಗೂ ಪ್ರಸ್ತುತರಾಗಿರುವಿರಿ. ಓಹ್ ವಿಶ್ವಮಾತೆಯೇ ನಿಮ್ಮನ್ನು ನಾನು ಎಂದಿಗೂ ಪೂಜಿಸುತ್ತೇನೆ.

#9

#9

ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರಂ

ಯತ್ ಪತೇದ್ ಭಕ್ತಿಮಾನ್ ನರಃ

ಸರ್ವ ಸಿದ್ಧಿಂ ಅವಾಪ್ನೋತಿ

ರಾಜ್ಯಂ ಪ್ರಾಪ್ನೋತಿ ಸರ್ವಧಾ

ಯಾರು ಆ ದೇವಿಯನ್ನು ಭಕ್ತಿಭಾವಗಳಿಂದ ಪೂಜಿಸುತ್ತಾರೋ ಅವರು ಎಲ್ಲಾ ರೀತಿಯ ಕೌಶಲ್ಯಗಳನ್ನು ಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ. ಸಕಲ ಸೌಭಾಗಗಳನ್ನು ಪಡೆದುಕೊಂಡು ಅವರು ಸುಖವನ್ನು ಹೊಂದುತ್ತಾರೆ.

#10

#10

ಏಕಕಾಲೇ ಪಠೇ ನಿತ್ಯಂ

ಮಹಾಪಾಪ ವಿನಾಶನಂ

ದ್ವಿ ಕಾಲಂ ಯ ಪಠೇತ್ ನಿತ್ಯಂ

ಧನ ಧಾನ್ಯಂ ಸಮನ್ವಿತಃ

ತ್ರಿ ಕಾಲಂ ಯ ಪಠೇತ್ ನಿತ್ಯಂ

ಮಹಾಶತ್ರು ವಿನಾಶನಂ, ಮಹಾಲಕ್ಷ್ಮೀಮಿರ್ ಭವೇನ್ ನಿತ್ಯಂ

ಪ್ರಸನ್ನ ವರದ ಶುಭ

#11

#11

ಈ ಸ್ತ್ರೋತ್ರವನ್ನು ಪಠಿಸುವವರ ಮಹಾಪರಾಧಗಳನ್ನು ದೇವಿ ಮನ್ನಿಸುತ್ತಾರೆ. ಇದನ್ನು ಎರಡು ಬಾರಿ ಪಠಿಸುವವರಿಗೆ ದೇವಿ ಸಕಲ ಸಂಪತ್ತನ್ನು ಅನುಗ್ರಹಿಸುತ್ತಾರೆ. ಇದನ್ನು ಮೂರು ಬಾರಿ ಪಠಿಸುವವರ ವೈರಿಗಳು ನಾಶವಾಗುತ್ತಾರೆ ಮತ್ತು ಮಹಾಲಕ್ಷ್ಮೀಯ ಅನುಗ್ರಹ ಇವರ ಮೇಲೆ ಸದಾ ಕಾಲವೂ ಇರುತ್ತದೆ.

English summary

Lakshmi Stotram For Akshaya Tritiya

Goddess Lakshmi is commonly prayed to on the day of Akshaya Tritiya. As the Goddess of wealth, Goddess Lakshmi bestows prosperity and wealth upon her devotees. It is especially beneficial to worship Goddess Lakshmi on the Akshaya Tritiya day. It is said that Lord Kubera, the treasurer of the Heavens, received this position only by worshipping Goddess Lakshmi on the Akshaya Tritiya day. The Goddess also blessed him, with everlasting and infinite wealth.
X
Desktop Bottom Promotion