For Quick Alerts
ALLOW NOTIFICATIONS  
For Daily Alerts

ಮನೆಯ ಕುಟುಂಬದ ಸುಖ, ಶಾಂತಿ-ನೆಮ್ಮದಿಗೆ ಲಕ್ಷ್ಮೀ ದೇವಿ ಮಂತ್ರ

|

ಸಂಪತ್ತಿನ ಅದಿಧೇವತೆ ಲಕ್ಷ್ಮೀ ಮಾತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯ ನೆಲೆಯಾಗುತ್ತದೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಮಾತಾಗಿದೆ. ಧನ ಕನಕವನ್ನು ನೀಡುವ ಲಕ್ಷ್ಮೀ ಮಾತೆಯು ಮನೆಯಲ್ಲಿ ಸಕಲ ಐಶ್ವರ್ಯವನ್ನು ನೀಡುವಾಕೆಯಾಗಿದ್ದು ಸರಳ ಪೂಜೆಗೆ ಒಲಿದು ಬೇಡಿದ್ದನ್ನು ನೀಡುವ ಅಭಯದಾಕೆಯಾಗಿದ್ದಾರೆ. ಯಥೇಚ್ಛವಾದ ಹಣ ಮತ್ತು ಸಂಪತ್ತನ್ನು ಸಂಪಾದಿಸುವ ಆಲೋಚನೆ ಯಾರಿಗೆ ತಾನೇ ಹಿಡಿಸುವುದಿಲ್ಲ? ಬಹುತೇಕ ನಾವೆಲ್ಲರು ಅದನ್ನೆ ನಿತ್ಯ ಜಪ ಮಾಡುತ್ತಿರುತ್ತೇವೆ.

ದಿನ ನಿತ್ಯ ಈ ಗುರಿಯನ್ನು ಈಡೇರಿಸಿಕೊಳ್ಳಲು ನಾವು ನಾನಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ನಮ್ಮ ಬದುಕಿಗೆ ಅಗತ್ಯವಾದ ಹಣವನ್ನು ಸಂಪಾದಿಸಲು ಸಿಕ್ಕಾ ಪಟ್ಟೆ ಕಷ್ಟವನ್ನು ಪಡುತ್ತೇವೆ. ಹಣ ಸಂಪಾದಿಸುವುದು ಕಡು ಕಷ್ಟದ ಕೆಲಸ ಆದರೆ ಸಂಪಾದಿಸಿದ ಹಣವನ್ನು ಉಳಿಸಿಕೊಳ್ಳುವುದು ಮತ್ತೂ ಕಷ್ಟ. ಹಿಂದೂಗಳು ತಮ್ಮ ಹಣ ಮತ್ತು ಐಶ್ವರ್ಯವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಲಕ್ಷ್ಮೀ ದೇವಿಯನ್ನು ಆರಾಧಿಸುತ್ತಾರೆ. ಆಕೆಯ ಆಶೀರ್ವಾದ ಲಭಿಸಿದರೆ ಸಾಕು ಅಷ್ಟೈಶ್ವರ್ಯಗಳು ನಮ್ಮ ಮನೆಯಲ್ಲಿಯೇ ನೆಲೆಸುತ್ತದೆ ಎಂಬ ನಂಬಿಕೆ ಮನೆ ಮಾಡಿದೆ.

ಲಕ್ಷ್ಮೀ ದೇವಿಯು ಹಣ ಮತ್ತು ಸಂಪತ್ತಿನ ಅಧಿ ದೇವತೆ ಎಂದು ಪರಿಗಣಿಸಲ್ಪಟ್ಟಿದ್ದಾಳೆ. ಲಕ್ಷ್ಮೀ ದೇವಿ ನೆಲೆಸಿರುವ ಮನೆಯಲ್ಲಿ ಅಷ್ಟೈಶ್ವರ್ಯಗಳು ನೆಲೆಸಿರುತ್ತವೆ ಎಂಬ ನಂಬಿಕೆ ನಮ್ಮ ಪುರಾಣಗಳಲ್ಲಿ ವ್ಯಕ್ತವಾಗಿದೆ. ಆದರೆ ಲಕ್ಷ್ಮೀ ಚಂಚಲೆ, ನಿಂತಲ್ಲಿ ನಿಲ್ಲಲಾರಳು. ತನ್ನನ್ನು ಆರಾಧಿಸುವ ಸ್ಥಳ ಮತ್ತು ವ್ಯಕ್ತಿಗಳನ್ನು ಆಕೆ ಹುಡುಕಿಕೊಂಡು ಹೋಗುತ್ತಾ ಇರುತ್ತಾಳೆ ಎಂಬ ಮಾತಿದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಲಕ್ಷ್ಮೀಯನ್ನು ಪೂಜಿಸುವ ಮತ್ತು ಅವರನ್ನು ಹೊಗಳುವ ಮಂತ್ರವನ್ನು ನೀಡಿದ್ದು ಇದನ್ನು 1008 ಬಾರಿ ಜಪಿಸಬೇಕು ಇಲ್ಲದಿದ್ದರೆ 108 ಬಾರಿ ಜಪಿಸಿದರೂ ಸಾಕು...

 ಲಕ್ಷ್ಮೀ ಮಂತ್ರ

ಲಕ್ಷ್ಮೀ ಮಂತ್ರ

ಪದ್ಮ ಪ್ರಿಯೆ ಪದ್ಮಿನಿ ಪದ್ಮ ಹಸ್ತೆ ಪದ್ಮಾಲಯೆ ಪದ್ಮ ದಲ್ಯದಾಕ್ಷಿ

ವಿಶ್ವ ಪ್ರಿಯೆ ವಿಷ್ಣು ಮನೋನುಕುಲೆ ತ್ವತ್‌ಪಾದ ಪದ್ಮಮಮ್ ಮಯೀ ಸನ್ನಿದಾಸ್ತವಾ

ಸರಸಿಜ ನಿಲಯೆ ಸರೋಜ ಹಸ್ತೆ ದವಳ ದಮಮ್‌ಶುಕ ಗಂಧ ಮಲ್ಯ ಶೋಭೆ

ಭಗವತಿ ಹರಿ ವಲ್ಲಭೆ ಮನೋಗ್ನೆ ತ್ರಿಭುವನ ಭುತಿಕರಿ ಪ್ರಸೀದಾ ಮಧ್ಯಮ್

ಅನುವಾದ

ಅನುವಾದ

ಓ ಲಕ್ಷ್ಮೀ ಮಾತೆಯೇ ಪದ್ಮಿನಿ (ತಾವರೆಯಿಂದ ವಿಭಜನೆಗೊಂಡಿರುವ ಆಕೆಯ ಹೆಸರು) ನಿಮಗೆ ತಾವರೆಯೆಂದರೆ ಇಷ್ಟ, ತಾವರೆಯನ್ನೇ ನೀವು ಮನೆಯನ್ನಾಗಿಸಿಕೊಂಡಿದ್ದೀರಿ, ನಿಮ್ಮ ಕೈಯಲ್ಲಿ ತಾವರೆ ಹೂವನ್ನು ನೀವು ಹಿಡಿದುಕೊಂಡಿದ್ದೀರಿ, ತಾವರೆ ಎಸಳಿನಂತೆ ನಿಮ್ಮ ಕಣ್ಣುಗಳು ಸುಂದರವಾಗಿವೆ ಇಡಿಯ ವಿಶ್ವವೇ ನಿಮ್ಮನ್ನು ಮೆಚ್ಚುತ್ತದೆ, ವಿಷ್ಣುವಿನ ಮನರದರಸಿ ನೀವು ನಿಮ್ಮ ಪಾದಗಳಿಗೆ ನಮ್ಮ ಪ್ರಣಾಮಗಳು

ತಾವರೆಯಲ್ಲಿಯೇ ನೀವು ಸ್ಥಾಪಿತರಾಗಿದ್ದೀರಿ, ಕೈಗಳಲ್ಲಿ ತಾವರೆಯನ್ನು ಹಿಡಿದುಕೊಂಡಿದ್ದೀರಿ ಅತ್ಯದ್ಭುತವಾದ ಹೂವಿನ ಮಾಲೆ ನಿಮ್ಮ ಕೊರಳಿನಲ್ಲಿದೆ

ದಯಾಳುವಾಗಿರುವ ದೇವಿ ನೀವಾಗಿದ್ದೀರಿ ಮತ್ತು ವರಗಳನ್ನು ನೀಡುವ ತಾಯಿಯಾಗಿದ್ದೀರಿ. ವಿಷ್ಣುವಿನ ಪತ್ನಿಯಾಗಿರುವಿರಿ. ಮೂರು ಲೋಕಗಳಿಗೂ ಧನವನ್ನು ಸಂಪತ್ತನ್ನು ನೀಡುವವರು ನೀವು.

1008 ಬಾರಿ ಇಲ್ಲವೇ 108 ಬಾರಿ ಈ ಮಂತ್ರವನ್ನು ಪಠಿಸಿ

1008 ಬಾರಿ ಇಲ್ಲವೇ 108 ಬಾರಿ ಈ ಮಂತ್ರವನ್ನು ಪಠಿಸಿ

ನೀವು ಈ ಮಂತ್ರದ ಪಠನೆಯನ್ನು 1008 ಬಾರಿ ಇಲ್ಲವೇ 108 ಬಾರಿ ಮಾಡುತ್ತಾ ಲಕ್ಷಗಳವರೆಗೆ ಜಪಿಸುತ್ತಾ ಹೋದರೆ ನೀವು ಸಕಲ ಐಶ್ವರ್ಯವನ್ನು ಪಡೆಯಬಹುದು ಮತ್ತು ಹೆಚ್ಚಿನ ಪ್ರಯೋಜನಗಳನ್ನು ದೇವಿಯ ಅನುಗ್ರಹವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ

ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ

ನಿಮ್ಮ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿ ಸೌಖ್ಯ ಈ ಮಂತ್ರದಿಂದ ಲಭಿಸುತ್ತದೆ. ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾರೆ ಎಂದು ಹೇಳಿರುವುದರಿಂದ ಪ್ರತೀ ದಿನ ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಮನೆಯಲ್ಲಿ ಶಾಂತಿ ತುಂಬಿರಲಿ ಇದರಿಂದ ಲಕ್ಷ್ಮೀಯ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ.

English summary

Lakshmi Mantra for Wealth and Prosperity

Venerated as Mahalakshmi, Lakshmi Devi is the consort of Lord Vishnu. While Lord Vishnu is the protector of the universe, Devi Mahalakshmi nurtures all the worlds with all the wealth. There are eight divine manifestations of Lakshmi including Adi Lakshmi, Gaja Lakshmi, Dhairya Lakshmi, Santana Lakshmi, Dhana Lakshmi, Dhanya Lakshmi, Vidya Lakshmi, and Vijaya Lakshmi. The import of all these manifestations is that Lakshmi is the giver of all forms of wealth needed for humans to live on this earth.
X
Desktop Bottom Promotion